Showing posts with label k c s r. Show all posts
Showing posts with label k c s r. Show all posts

Wednesday, March 27, 2019

ದಿನಕ್ಕೊಂದು ಸುದ್ದಿ *ಪರೀಕ್ಷಾ ರಜೆ ಪ್ರಸೂತಿ ರಜೆ*

ಪರೀಕ್ಷಾ ರಜೆ (Examination Leave): ನಿಗದಿಪಡಿಸಿದ ಇಲಾಖಾ ಪರೀಕ್ಷೆಯ ಸಂಬಂಧದಲ್ಲಿ ಪರೀಕ್ಷೆಗೆ ಹಾಜರಾಗಲು ಆತನ ಸೇವಾವಧಿಯಲ್ಲಿ 2 ಬಾರಿ ಮಾತ್ರ ಅನುಮತಿ ನೀಡಲಾಗುವುದು ಆದರೆ ರಾಜ್ಯ ಲೆಕ್ಕಪತ್ರ ಇಲಾಖೆಯ ಎಸ್ಎಎಸ್ ಹಾಗೂ ಖಜಾನೆ ಇಲಾಖೆಯ ಟ್ರೆಝುರಿ ಹೆಡ್ ಅಕೌಂಟಂಟ್ ಪರೀಕ್ಷೆಗೆ ಹಾಜರಾಗಲು 3 ಬಾರಿ ಅನುಮತಿ ನೀಡಲಾಗುವುದು. ಈ ಸಂದರ್ಭಗಳಲ್ಲಿ ಪರೀಕ್ಷೆ ದಿನ ಮತ್ತು ಪ್ರಯಾಣದ ದಿನಗಳಿಗೆ ರಜೆ ನೀಡಲಾಗುವುದು.
ಪ್ರಸೂತಿ ರಜೆ (Maternity Leave): ಎರಡು ಅಥವಾ ಹೆಚ್ಚು ಜೀವಂತ ಮಕ್ಕಳನ್ನು ಹೊಂದಿರದ ವಿವಾಹಿತ ಸರ್ಕಾರಿ ನೌಕರಳಿಗೆ ಪ್ರಸೂತಿ ರಜೆಯನ್ನು ಅದರ ಆರಂಭದ ದಿನಾಂಕದಿಂದ 180 ದಿನಗಳು ನೀಡಬಹುದು. ಈ ಅವಧಿಯಲ್ಲಿ ಅವಳು ರಜೆಯ ಮೇಲೆ ಹೋಗುವ ನಿಕಟಪೂರ್ವದಲ್ಲಿ ಆಕೆ ಪಡೆಯುತ್ತಿದ್ದ ವೇತನಕ್ಕೆ ಸಮನಾದ ರಜಾವೇತನವನ್ನು ನೀಡಲಾಗುವುಗು. (ಕ.ಸ.ಸೇ.ನಿ. 135(1).
ಇದನ್ನು ವೊಕೆಷನ್ ರಜೆ ಅಥವಾ ಇನ್ನಾವುದೇ ರೀತಿಯ ರಜೆಯೊಂದಿಗೆ ಸೇರಿಸಬಹುದು. ವೈದ್ಯಕೀಯ ಪ್ರಮಾಣಪತ್ರವನ್ನು ಹಾಜರುಪಡಿಸದೆ ಇದ್ದರೂ 60 ದಿನಗಳಿಗೆ ಮೀರದಂತೆ ರಜೆಯನ್ನು ಮಂಜೂರು ಮಾಡಬಹುದು (ಕ.ಸ.ಸೇ.ವಿ. 135 (4ಎ) ಪ್ರಸೂತಿ ರಜೆಯನ್ನು ಯಾವುದೇ ರಜೆಯ ಲೆಕ್ಕದಿಂದ ಕಳೆಯತಕ್ಕದ್ದಲ್ಲ. (ಕ.ಸ.ಸೇ.ವಿ. 135 (4ಬಿ).
ಗರ್ಭಸ್ರಾವ ಅಥವಾ ಗರ್ಭಪಾತ ರಜೆ (Medical Termination Leave): ವೈದ್ಯಕೀಯ ಪರ್ಯವಸಾನ ಅಧಿನಿಯಮ 71ರ ಮೇರೆಗೆ ಪ್ರೇರಣೆಯಿಂದ ಮಾಡಿಸಿಕೊಂಡ ಗರ್ಭಪಾತವು ಸೇರಿದಂತೆ ಗರ್ಭಸ್ರಾವ ಅಥವಾ ಗರ್ಭಪಾತವಾದಾಗ ವೈದ್ಯಕೀಯ ಪ್ರಮಾಣ ಪತ್ರದ ಆಧಾರದಿಂದ 2 ಅಥವಾ ಹೆಚ್ಚು ಜೀವಂತ ಮಕ್ಕಳನ್ನು ಹೊಂದಿರದ ವಿವಾಹಿತ ಸರ್ಕಾರಿ ನೌಕರಳಿಗೆ 6 ವಾರಗಳಿಗೆ ಮೀರದಂತೆ ಮಂಜೂರು ಮಾಡಬಹುದು. (ಕ.ಸ.ಸೇ.ವಿ. 135 (2ಎ, ಬಿ, 3)
ಮಗುವನ್ನು ದತ್ತು ತೆಗೆದುಕೊಂಡಾಗ ಮಹಿಳಾ ಸರ್ಕಾರಿ ನೌಕರಳಿಗೆ ರಜೆ Leave to female Govt. Servant on adoption of child): ಎರಡು ಜೀವಂತ ಮಕ್ಕಳನ್ನು ಹೊಂದಿರದ ಮಹಿಳಾ ಸರ್ಕಾರಿ ನೌಕರಳು ಮಗುವೊಂದನ್ನು ದತ್ತು ತೆಗೆದುಕೊಂಡಾಗ ಒಂದು ವರ್ಷದ ಅಥವಾ ದತ್ತಕ ಮಗುವಿಗೆ ಒಂದು ವರ್ಷ ವಯಸ್ಸಾಗುವವರೆಗೆ ಇವುಗಳಲ್ಲಿ ಯಾವುದು ಕಡಿಮೆಯೊ ಆವರೆಗೆ ದೊರೆಯಬಹುದಾದ ಮತ್ತು ಅನುಮತಿಸಬಹುದಾದ ರಜೆಯನ್ನು (60 ದಿನಗಳನ್ನು ಮೀರದಂತೆ, ವೈದ್ಯಕೀಯ ಪ್ರಮಾಣಪತ್ರವನ್ನು ಹಾಜರುಪಡಿಸದೆ ಪರಿವರ್ತಿತ ರಜೆ ಮತ್ತು ಗಳಿಸದ ರಜೆ ಸೇರಿದಂತೆ) ಮಂಜೂರು ಮಾಡಬಹುದು. (ಕ.ಸ.ಸೇ.ವಿ. 135ಎ).
ಪಿತೃತ್ವ ರಜೆ (Paternity Leave): ಎರಡು ಅಥವಾ ಹೆಚ್ಚಿಗೆ ಜೀವಂತ ಮಕ್ಕಳಿಲ್ಲದ ಸರ್ಕಾರಿ ನೌಕರನ ಪತ್ನಿಯ ಹೆರಿಗೆ ಸಂದರ್ಭದಲ್ಲಿ ಹೆರಿಗೆ ದಿನಾಂಕದಿಂದ ಪ್ರಾರಂಭವಾಗುವಂತೆ 15 ದಿನಗಳ ಮೆಟರ್ನಿಟಿ ರಜೆಯನ್ನು ಮಂಜೂರು ಮಾಡಬಹುದು. ಇದನ್ನು ಯಾವುದೇ ರಜಾ ಲೆಕ್ಕದಿಂದ ಕಳೆಯತಕ್ಕದ್ದಲ್ಲ ಹಾಗೂ ಸಾಂರ್ದಭಿಕ ರಜೆ ಹೊರತು ಉಳಿದ ಯಾವುದೇ ರಜೆಯೊಂದಿಗೆ ಸಂಯೋಜಿಸಿಕೊಳ್ಳಬಹುದು. ಈ ರಜೆ ಅವಧಿಯಲ್ಲಿ ರಜೆಗೆ ಹೋಗುವ ನಿಕಟ ಪೂರ್ವದಲ್ಲಿದ್ದಂತೆ ವೇತನವು ಪ್ರಾಪ್ತವಾಗುತ್ತದೆ. ಈ ರಜೆಯನ್ನು ನಗದೀಕರಿಸಿಕೊಳ್ಳಲು ಅಥವಾ ಗಳಿಕೆ ರಜೆಯೊಂದಿಗೆ ಸೇರಿಸಿಕೊಳ್ಳಲು ಆಗುವುದಿಲ್ಲ. ಸಾಮಾನ್ಯವಾಗಿ ಈ ರಜೆಯನ್ನು ನಿರಾಕರಿಸುವಂತಿಲ್ಲ (ಕ.ಸ.ಸೇ.ವಿ. 135 (ಬಿ
ಸರ್ಕಾರಿ ನೌಕರ ತನ್ನ ಕಚೇರಿ ಕೆಲಸದ ನಿರ್ವಹಣೆ ವೇಳೆ ಅಂಗವಿಕಲನಾದರೆ(ಕಾಯಂ ಅಥವಾ ತಾತ್ಕಾಲಿಕ ನೌಕರ)ಅಂಗವೈಕಲ್ಯ ವಿಶೇಷ ರಜೆ ಮಂಜೂರು ಮಾಡಬಹುದು. ವೈಕಲ್ಯ ಸಂಭವಿಸಲು ಕಾರಣವಾದ ಘಟನೆ ನಡೆದ ಮೂರು ತಿಂಗಳ ತರುವಾಯ ವೈಕಲ್ಯ ಕಾಣಿಸಿಕೊಂಡಾಗ ಇದರ ಕಾರಣವು ಸರ್ಕಾರಕ್ಕೆ ಮನದಟ್ಟಾದರೆ ರಜೆಗೆ ಅನುಮತಿ ನೀಡಬಹುದು. ಅಧಿಕೃತ ಮೆಡಿಕಲ್ ಅಟೆಂಡರ್ಗಳು ಅಗತ್ಯವೆಂದು ಪ್ರಮಾಣೀಕರಿಸಿದ ಅವಧಿಗೆ ರಜೆ ಮಂಜೂರು ಮಾಡಬಹುದು. ಆದರೆ ಇದು 24 ತಿಂಗಳನ್ನು ಮೀರತಕ್ಕದ್ದಲ್ಲ. ಇದನ್ನು ಯಾವುದೇ ಇತರ ರಜೆಯೊಂದಿಗೆ ಸೇರಿಸಬಹುದು. ಈ ರಜೆಯನ್ನು ನಿವೃತ್ತಿಗೆ ಸಂಬಂಧಪಟ್ಟಂತೆ ಕರ್ತವ್ಯದ ದಿನಗಳೆಂದು ಪರಿಗಣಿಸಲಾಗುವುದು. ಈ ರಜೆಯ ಯಾವುದೇ ಅವಧಿಯ ಮೊದಲ 120 ದಿನಗಳಿಗೆ ಗಳಿಕೆ ರಜೆಯಲ್ಲಿದ್ದಾಗ ಪಡೆಯುವ ರಜಾವೇತನಕ್ಕೆ ಸಮನಾದ ವೇತನ ದೊರೆಯುವುದು.
ವಿಶೇಷ ರಜೆ: ಪಶು ವೈದ್ಯಕೀಯ ಇಲಾಖೆಯ ಲೈವ್ಸ್ಟಾಕ್ ಫಾರ್ಮ್ಗಳ ತಾತ್ಕಾಲಿಕ ನೌಕರರು ಕರ್ತವ್ಯ ನಿರ್ವಹಿಸುವಾಗ ಗಾಯಗಳಾಗಿ ಕೆಲಸ ಮಾಡಲು ಅಸಮರ್ಥರಾದರೆ (ನಿರ್ಲಕ್ಷತೆಯಿಂದಲ್ಲದೆ) ಕರ್ನಾಟಕ ಪಶು ಸಂಗೋಪನ ನಿರ್ದೇಶಕರು, ಜಿಲ್ಲಾ ವೈದ್ಯಾಧಿಕಾರಿ ಪ್ರಮಾಣಪತ್ರದ ಆಧಾರದ ಮೇಲೆ ಭತ್ಯೆ ಸಹಿತ ರಜೆಯನ್ನು 30 ದಿನಗಳವರೆಗೆ ವಿಶೇಷ ರಜೆ ನೀಡಬಹುದು. ಸ.ಸೇ.ವಿ. 138.
ವೈದ್ಯ ಇಲಾಖೆಯಲ್ಲಿ ರೇಡಿಯಂ ಸಂಪರ್ಕವಿರುವ ಸರ್ಕಾರಿ ನೌಕರನಿಗೆ ಪ್ರತಿ 6 ತಿಂಗಳಿಗೊಮ್ಮೆ 15 ದಿನಗಳಿಗೆ ಮೀರದಂತ ರಜೆ ಮಂಜೂರು ಮಾಡಬಹುದು. ಈ ಅವಧಿಯು ಅರ್ಧ ವೇತನದ ರಜೆಗೆ ಗಣನೆಗೆ ಬರುವುದು. ಆದರೆ ಗಳಿಕೆ ರಜೆಗೆ ಗಣನೆಗೆ ಬರುವುದಿಲ್ಲ. ಈ ರಜೆಯ ಅವಧಿಯಲ್ಲಿ ಗಳಿಕೆ ರಜೆಯ ಕಾಲದಲ್ಲಿ ದೊರೆಯುವಂತೆ ರಜಾ ಭತ್ಯೆಗಳು ದೊರೆಯುವುದು. (ಕ.ಸ.ಸೇ.ವಿ. 139).
ಅರಣ್ಯ ಇಲಾಖೆಯ ಕೆಲವು ಆಯ್ದ ರೇಂಜುಗಳಲ್ಲಿ ಕೆಲಸ ಮಾಡುತ್ತಿರುವ ರೇಂಜರ್, ಫಾರೆಸ್ಟರ್, ಅರಣ್ಯ ರಕ್ಷಕ ಮತ್ತು ಗುಮಾಸ್ತರಿಗೆ ಗಳಿಕೆ ರಜೆ ಜತೆಗೆ ಆರೋಗ್ಯ ಸುಧಾರಣೆಗೆ ಸ್ಥಳ ಬದಲಾಯಿಸಲು ಪ್ರತಿ ವರ್ಷವು ಒಂದು ತಿಂಗಳು ಪೂರ್ಣ ವೇತನ ಸಹಿತ ವಿಶೇಷ ಸ್ಥಳದ ರಜೆ ನೀಡಬಹುದು.
ಅನಧಿಕೃತ ಗೈರು ಹಾಜರಿ: ಸರ್ಕಾರಿ ನೌಕರನು ಸಕ್ಷಮ ಪ್ರಾಧಿಕಾರಿಯ ಮಂಜೂರಾತಿಯಿಲ್ಲದೆ ಕರ್ತವ್ಯಕ್ಕೆ ಗೈರಾಗುವಂತಿಲ್ಲ, ಆದರೆ ನೌಕರನು ತನ್ನ ನಿಯಂತ್ರಣಕ್ಕೆ ಮೀರಿದ ಕಾರಣದಿಂದ ಸಕ್ಷಮ ಪ್ರಾಧಿಕಾರದ ಮಂಜೂರಾತಿಯಿಲ್ಲದೆ ಗೈರಾದ ಬಗ್ಗೆ ತಿಳಿಸಿದಾಗ ಅದನ್ನು ಪರಿಶೀಲಿಸಿ ತೃಪ್ತಿಕರವಾಗಿದೆ ಎಂದು ಪರಿಗಣಿಸಿ ಗೈರು ಅವಧಿಯನ್ನು ನೌಕರನ ಹಕ್ಕಿನಲ್ಲಿರುವ ಯಾವುದಾದರೂ ರಜೆಯನ್ನಾಗಿ ಪರಿವರ್ತಿಸಬಹುದು. ಸಕ್ಷಮ ಪ್ರಾಧಿಕಾರಿಯು ನೌಕರನ ಗೈರಿನ ಕಾರಣ ಒಪ್ಪಿಕೊಳ್ಳದಿದ್ದಲ್ಲಿ ಗೈರು ಅವಧಿಯನ್ನು ಅನಧಿಕೃತ ಗೈರು  ಹಾಜರಿ ಎಂದು ಆದೇಶಿಸಬಹುದು. ಇಂತಹ ಅವಧಿಯಲ್ಲಿ ನೌಕರನಿಗೆ ಯಾವುದೇ ವೇತನ ಭತ್ಯೆಗಳು ಲಭ್ಯವಾಗುವುದಿಲ್ಲ.
ಸರ್ಕಾರಿ ನೌಕರನು ಸಕ್ಷಮ ಪ್ರಾಧಿಕಾರದ ಅನುಮತಿ ಪಡೆದು ರಜೆ ಬಳಸಿಕೊಂಡು, ರಜಾ ಅವಧಿ ಮುಗಿದ ನಂತರ ಕೂಡಲೆ ಕರ್ತವ್ಯಕ್ಕೆ ಹಾಜರಾಗಿದ್ದಾಗಲೂ ಅವಧಿ ಮೀರಿದ ಗೈರು ಹಾಜರಿ ಪ್ರಕರಣ ಉಂಟಾಗುತ್ತದೆ. ಇಂತಹ ಸಂದರ್ಭದಲ್ಲೂ ಈ ಮೇಲಿನಂತೆಯೇ ಕ್ರಮ ತೆಗೆದುಕೊಳ್ಳಬಹುದು.
ಕಚೇರಿ ವೇಳೆಯನ್ನು ಎರಡು ಬಾಗಗಳಾಗಿ ವಿಂಗಡಿಸಿರುವಾಗ ಯಾವುದೇ ಒಂದು ಭಾಗದ ಅನಧಿಕೃತ ಗೈರಿಗೆ ಅರ್ಧ ದಿನದ ವೇತನ ಭತ್ಯೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ಕಚೇರಿ ಪ್ರಾರಂಭದ ವೇಳೆಯೊಳಗೆ ಹಾಜರಾಗಬೇಕು, ಹತ್ತು ನಿಮಿಷ ತಡವಾದರೆ ಮಾತ್ರ ಸಾಂರ್ದಭಿಕ ವಿನಾಯಿತಿ ಇರುತ್ತದೆ. ಹತ್ತು ನಿಮಿಷಗಳ ನಂತರ ಮಧ್ಯಾಹ್ನ 2 ಗಂಟೆ ಒಳಗೆ ಕಚೇರಿಗೆ ಹಾಜರಾದಾಗ ನೌಕರನು 1/2 ದಿನದ ಸಾಂರ್ದಭಿಕ ರಜೆ ಕಳೆದುಕೊಳ್ಳುತ್ತಾನೆ. ನೌಕರನ ಹಕ್ಕಿನಲ್ಲಿ ಸಾಂರ್ದಭಿಕ ರಜೆ ಇಲ್ಲದಿದ್ದರೆ ಹಕ್ಕಿನಲ್ಲಿರುವ ಒಂದು ದಿನದ ಗಳಿಕೆ ರಜೆ ಅಥವಾ ಇತರೆ ರಜೆ ಕಳೆದುಕೊಳ್ಳಬೇಕಾಗುತ್ತದೆ. (ಕ.ಸ.ಸೇ.ನಿ. 106ಎ)
ಮುಷ್ಕರದ ಕಾರಣದಿಂದ ಕರ್ತವ್ಯಕ್ಕೆ ಗೈರಾದ ಸರ್ಕಾರಿ ನೌಕರನು ಯಾವುದೇ ರಜೆಗೆ ಹಕ್ಕು ಹೊಂದಿರುವುದಿಲ್ಲ, ಹಾಗೂ ತನ್ನ ಲೆಕ್ಕದಲ್ಲಿರುವ ಎಲ್ಲಾ ಬಗೆಯ ರಜೆ ಕಳೆದುಕೊಳ್ಳುತ್ತಾನೆ.(ಕ.ಸ.ಸೇ.ನಿ. 106,  ಬಿ

Thursday, October 25, 2018

**RSGE**::: ಸರ್ಕಾರಿ ಕಾರ್ನರ್​

ಭೂಮಾಪನ ಇಲಾಖೆಯಲ್ಲಿ ಭೂಮಾಪಕರಾಗಿದ್ದ ನನ್ನ ತಂದೆ 2018ರ ಆ.18ರಂದು ಆಕಸ್ಮಿಕವಾಗಿ ನಿಧನರಾದರು. ನಾನು ಸ್ನಾತಕೋತ್ತರ ಪದವೀಧರನಾಗಿದ್ದು, ಪ್ರಥಮ ದರ್ಜೆ ಸಹಾಯಕ ಹುದ್ದೆ ನೀಡಲು ಕೋರಿದಾಗ ಸಕ್ಷಮ ಅಧಿಕಾರಿಯು ದ್ವಿತೀಯ ದರ್ಜೆ ಸಹಾಯಕ ಹುದ್ದೆ ಅಂಗೀಕರಿಸಿದ್ದಾರೆ. ಸದ್ಯ ದ್ವಿತೀಯ ದರ್ಜೆ ಸಹಾಯಕನಾಗಿರುವ ನಾನು ಪ್ರಥಮದರ್ಜೆ ಸಹಾಯಕ ಹುದ್ದೆಗೆ ನಿಯೋಜಿಸುವಂತೆ ಮತ್ತೆ ಮನವಿ ಸಲ್ಲಿಸಬಹುದೇ? ಇಲಾಖೆ ಕೈಗೊಂಡ ನಿರ್ಧಾರ ಕ್ರಮಬದ್ಧವಾಗಿದೆಯೇ?
| ಬಿ.ಕೆ. ಕುಲಕರ್ಣಿ ವಿಜಯಪುರ
ಕರ್ನಾಟಕ ಸರ್ಕಾರಿ ಸೇವಾ (ಅನುಕಂಪದ ಮೇರೆಗೆ ನೇಮಕ) ನಿಯಮಾವಳಿ 1996ರ ನಿಯಮ 3ರ ಪ್ರಕಾರ ಅನುಕಂಪದ ಮೇರೆಗೆ ನೇಮಕವಾಗಲು ನಿಗದಿತ ವಿದ್ಯಾರ್ಹತೆ ಹೊಂದಿದ್ದರೆ ಅರ್ಹರಾಗುತ್ತಾರೆ. 2017ರ ಅ.27ರ ಸರ್ಕಾರಿ ಸುತ್ತೋಲೆ ಸಂಖ್ಯೆ ಸಿಆಸುಇ 105, ಸೇಅನೇ 2017ರ ಪ್ರಕಾರ ಅನುಕಂಪದ ಆಧಾರದ ಮೇಲೆ ನೇಮಕಾತಿ ಸಂದರ್ಭ ಅರ್ಜಿದಾರರ ಅರ್ಜಿ ಪರಿಗಣಿಸುವಾಗ ಆತನ ವಿದ್ಯಾರ್ಹತೆಗೆ ಅನುಸಾರವಾಗಿಯೇ ಗ್ರೂಪ್ ಸಿ ಅಥವಾ ಡಿ ಹುದ್ದೆಗೆ ನೇಮಕಾತಿ ಆದೇಶ ಹೊರಡಿಸಬೇಕೆಂದು ಸೂಚಿಸಲಾಗಿರುತ್ತದೆ. ಹಾಗಾಗಿ ನೀವು ಮತ್ತೆ ನೇಮಕಾತಿ ಪ್ರಾಧಿಕಾರಕ್ಕೆ ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ಮರು ನೇಮಕ ಮಾಡಿಕೊಳ್ಳುವಂತೆ ಮನವಿ ಸಲ್ಲಿಸಬಹುದು. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ‘ಕರ್ನಾಟಕ ಸರ್ಕಾರಿ ಸೇವಾ ಕಾನೂನು ಕೈಪಿಡಿ’ ಪುಸ್ತಕ ನೋಡಬಹುದು.

**RSGE**::: ಕರ್ತವ್ಯವಲ್ಲದ ಅವಧಿ ಯಾವುದು ?, | ಲ.ರಾಘವೇಂದ್ರ, ಸೇವಾ ಕಾನೂನು ತಜ್ಞರು

ಸರ್ಕಾರಿ ನೌಕರರು ಕಚೇರಿ ಕೆಲಸ ಕಾರ್ಯಗಳಿಗೆ ಹಾಜರಾಗುವ ಎಲ್ಲಾ ದಿನಗಳನ್ನು ಕರ್ತವ್ಯ ದಿನಗಳೆಂದು ಪರಿಗಣಿಸಲಾಗುತ್ತದೆ. ಅದೇ ರೀತಿಯಾಗಿ ಸರ್ಕಾರಿ ನೌಕರನು ಗಳಿಕೆ ರಜೆ, ಪರಿವರ್ತಿತ ರಜೆ, ಸಾಂರ್ದಭಿಕ ರಜೆ, ವಿಶೇಷ ಸಾಂರ್ದಭಿಕ ರಜೆ, ಅನ್ಯ ಕಾರ್ಯನಿಮಿತ್ತ (ಒಒಡಿ) ಸಾರ್ವತ್ರಿಕ ರಜೆ ದಿನಗಳಂದು ಅವನು ಕಚೇರಿಗೆ ಹಾಜರಾಗಿ ಕರ್ತವ್ಯ ನಿರ್ವಹಿಸದಿದ್ದರೂ ಅದನ್ನು ಕರ್ತವ್ಯವೆಂದೇ ಪರಿಗಣಿಸಲಾಗುತ್ತದೆ.
‘ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿ’ಯ ನಿಯಮ 8(15)ರಂತೆ ‘ಕರ್ತವ್ಯ’ ಎಂಬುದರಲ್ಲಿ ಸರ್ಕಾರಿ ನೌಕರನು ಪ್ರೊಬೇಷನರ್ ಆಗಿ 1977ರ ‘ಕರ್ನಾಟಕ ಸರ್ಕಾರಿ ಸೇವಾ (ಪ್ರೊಬೇಷನ್) ನಿಯಮ’ಗಳ ಉಪಬಂಧಕ್ಕೆ ಒಳಪಟ್ಟು ಸಲ್ಲಿಸಿದ ಸೇವೆಯನ್ನು ಕರ್ತವ್ಯವೆಂದು ಪರಿಗಣಿಸಲಾಗುತ್ತದೆ. ಅವನು ಸ್ಥಳೀಯ ಅಭ್ಯರ್ಥಿಯಾಗಿ ಸಲ್ಲಿಸಿದ ಸೇವೆಯನ್ನು ವಾರ್ಷಿಕ ವೇತನ ಬಡ್ತಿ, ರಜೆ, ನಿವೃತ್ತಿ ವೇತನ ಇತ್ಯಾದಿಗಳ ಉದ್ದೇಶಕ್ಕಾಗಿ ಸ್ಥಾನಪನ್ನ ಅಥವಾ ಹಂಗಾಮಿ ಸೇವೆಯನ್ನು ಪರಿಗಣಿಸಲಾಗುತ್ತದೆ. ಆದರೆ ಸರ್ಕಾರಿ ನೌಕರನು ಕೆಲವೊಂದು ಸಂದರ್ಭಗಳಲ್ಲಿ ಅವನ ಸೇವೆಯನ್ನು ಕರ್ತವ್ಯವಲ್ಲದ ಸೇವೆಯೆಂದು ಪರಿಗಣಿಸಲಾಗುತ್ತದೆ. ‘ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿ’ಯ ನಿಯಮ 8(14ಎ)ರೀತ್ಯ ಕರ್ತವ್ಯರಹಿತ ಅವಧಿ ಅಥವಾ ಕರ್ತವ್ಯದಲ್ಲಿ ಕಳೆಯದ ಅವಧಿಯನ್ನು ‘ಲೆಕ್ಕಕ್ಕಿಲ್ಲದ ಅವಧಿ’ಯೆಂದು ಪರಿಭಾಷಿಸಿದೆ. ಈ ‘ಲೆಕ್ಕಕ್ಕಿಲ್ಲದ ಅವಧಿ’ ಎಂದು ಪರಿಗಣಿಸಿದ ಅವಧಿಯನ್ನು ಸೇವೆಯೆಂದು ತೆಗೆದುಕೊಳ್ಳಲಾಗುವುದಿಲ್ಲ. ಆದರೆ ಈ ಅವಧಿಯನ್ನು ‘ಸೇವಾಭಂಗ’ ಎಂದು ಭಾವಿಸಲಾಗುವುದಿಲ್ಲವೆಂದು ಸ್ಪಷ್ಟಪಡಿಸಲಾಗಿದೆ. ಈ ಕರ್ತವ್ಯವಲ್ಲದ ಅವಧಿಯಲ್ಲಿ ರಜೆ, ವಾರ್ಷಿಕವೇತನ ಬಡ್ತಿ ಮತ್ತು ಪಿಂಚಣಿಗೆ ಅರ್ಹತಾದಾಯಕ ಸೇವೆಯೆಂದು ಪರಿಗಣಿಸಲಾಗುವುದಿಲ್ಲ. ‘ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ’ 220ರ ರೀತ್ಯ 18 ವರ್ಷಗಳು ಆಗುವ ಮುನ್ನ ಸರ್ಕಾರಿ ಸೇವೆಗೆ ಸೇರಿದರೆ ಅದನ್ನೂ ‘ಕರ್ತವ್ಯವಲ್ಲದ ಅವಧಿ’ಯೆಂದು (ಬಾಯ್್ಸ ಸರ್ವೀಸ್) ಎಂದು ಪರಿಗಣಿಸಲಾಗುತ್ತದೆ. ಅಲ್ಲದೆ ಸರ್ಕಾರಿ ನೌಕರನು ಮೂರು ವರ್ಷಕ್ಕಿಂತ ಹೆಚ್ಚು ಅಸಾಧಾರಣ ರಜೆ ಅಥವಾ ವೇತನರಹಿತ ರಜೆಯನ್ನು ಬಳಸಿಕೊಂಡಲ್ಲಿ ಅದನ್ನೂ ಕರ್ತವ್ಯವಲ್ಲದ ಅವಧಿಯೆಂದು ಪರಿಗಣಿಸಲಾಗುತ್ತದೆ ಹಾಗೂ ಒಟ್ಟು ಅರ್ಹತಾದಾಯಕ ಸೇವೆಯಿಂದ ಕಳೆಯಲಾಗುತ್ತದೆ.
ಛತ್ತೀಸ್​ಗಡ ಹೈಕೋರ್ಟ್​ನಲ್ಲಿ ಮಕ್ಕಳ ಕಲ್ಯಾಣ ಅಧಿಕಾರಿಯೊಬ್ಬರು 200ಕ್ಕೂ ಹೆಚ್ಚು ದಿನಗಳ ಕಾಲ ಗೈರು ಹಾಜರಾಗಿದ್ದಕ್ಕೆ ಅದನ್ನು ಅವನ ವೆುೕಲಧಿಕಾರಿಗಳು ‘ಕರ್ತವ್ಯವಲ್ಲದ ಅವಧಿ’ಯೆಂದು ಪರಿಗಣಿಸಿರುವುದನ್ನು ಎತ್ತಿ ಹಿಡಿದಿದೆ. ಈ ಪ್ರಕರಣದಲ್ಲಿ ಮೇಲಧಿಕಾರಿಯವರು ತಮ್ಮ ಅಹವಾಲನ್ನು ಪರಿಗಣಿಸದೆ ಕರ್ತವ್ಯವಲ್ಲದ ಅವಧಿಯೆಂದು (ಡೈಸ್​ನಾನ್) ಪರಿಗಣಿಸಿರುವುದು ಸ್ವಾಭಾವಿಕ ನ್ಯಾಯಕ್ಕೆ ವ್ಯತಿರಿಕ್ತವಾಗಿದೆಯೆಂದು ಕೋರಿ ಆ ಅಧಿಕಾರಿಯು ರಿಟ್ ಅರ್ಜಿಯನ್ನು ಸಲ್ಲಿಸುತ್ತಾರೆ. (ರಿಟ್ ಅರ್ಜಿ ಸಂಖ್ಯೆ 101-2006) ಆದರೆ ನ್ಯಾಯಾಲಯವು ಅವರ ಮೇಲಧಿಕಾರಿಯವರು ಕೈಗೊಂಡ ಕ್ರಮವನ್ನು ಎತ್ತಿ ಹಿಡಿದು ಅವರ ಅರ್ಜಿಯನ್ನು ಅಂತ್ಯಗೊಳಿಸಿರುತ್ತದೆ. ಈ ಪ್ರಕರಣದಲ್ಲಿ ಈ ಅವಧಿಯು ರಜೆ, ವಾರ್ಷಿಕ ವೇತನ ಬಡ್ತಿ ಅದು ನಿವೃತ್ತಿಗೆ ಪರಿಗಣಿತವಾಗುವುದಿಲ್ಲವಾದ್ದರಿಂದ ಇದೊಂದು ರೀತಿಯ ದಂಡನೆಯಾಗಿರುತ್ತದೆ. ಸಂದರ್ಭ ಹೀಗಿರುವಾಗ ಸೇವಾ ನಿಯಮಗಳಡಿಯಲ್ಲಿ ಶಿಸ್ತು ಕ್ರಮವನ್ನು ಅನುಸರಿಸಿ ತೀರ್ವನವನ್ನು ತೆಗೆದುಕ್ಳೊಲಾಗುತ್ತದೆ ಎಂದು ನ್ಯಾಯಾಲಯ ಸೂಚಿಸಿ ಪ್ರಕರಣವನ್ನು ಮುಕ್ತಾಯಗೊಳಿಸುತ್ತದೆ.
ಸರ್ಕಾರಿ ನೌಕರನು ಯಾವುದೇ ಸಂದರ್ಭದಲ್ಲಿ ಗೈರು ಹಾಜರಾದರೆ ಮೇಲಧಿಕಾರಿಗೆ ಅವನ ವಿರುದ್ಧ ಕ್ರಮ ಕೈಗೊಳ್ಳಲು ಎರಡು ಅವಕಾಶಗಳಿರುತ್ತವೆ. ಮೊದಲನೆಯದಾಗಿ ನೌಕರನ ಗೈರು ಹಾಜರಿಗೆ ಸಮಂಜಸವಾದ ಕಾರಣವಿದ್ದರೆ ಅವನ ಅನಧಿಕೃತ ಗೈರು ಹಾಜರಿಯನ್ನು ಸಕ್ರಮಗೊಳಿಸಿ ರಜೆ ಮಂಜೂರು ಮಾಡಬಹುದು. ಎರಡನೆಯದಾಗಿ ನೌಕರರ ಗೈರು ಹಾಜರಿಗೆ ಸಮಂಜಸವಾದ ಕಾರಣಗಳಿಲ್ಲದೆ ಸಿಸಿಎ ನಿಯಮಾನುಸಾರ ಕ್ರಮ ಜರುಗಿಸಿ ದಂಡನೆಯನ್ನು ವಿಧಿಸಬಹುದಾಗಿರುತ್ತದೆ. ನಿಯಮ 108ರ ಪ್ರಕಾರ ನಾಲ್ಕು ತಿಂಗಳಿಗಿಂತ ಹೆಚ್ಚಿಗೆ ಅನಧಿಕೃತವಾಗಿ ಗೈರು ಹಾಜರಾದರೆ ಸೇವೆಯಿಂದ ಶಿಸ್ತು ಕ್ರಮ ಕೈಗೊಂಡು ವಜಾಗೊಳಿಸಬಹುದು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಾಥಮಿಕ ಶಾಲಾ ಶಿಕ್ಷಕರು ಬಿ.ಎಡ್., ಪದವಿಯನ್ನು ಪಡೆಯಲು ಅವಕಾಶವನ್ನು ಕಲ್ಪಿಸಿದ್ದು ದಿನಾಂಕ 2.9.2006ರ ಸುತ್ತೋಲೆ ಸಂಖ್ಯೆ ಸಿ 3(2) ಪ್ರಾಶಿ/ಉವ್ಯಾ /ಅನು/07/2006-2007ರಂತೆ ಕನಿಷ್ಠ 5 ವರ್ಷಗಳ ಸೇವಾ ಅವಧಿ ಸಲ್ಲಿಸಿ ಕಾಯಂಪೂರ್ವ ಸೇವಾವಧಿಯನ್ನು (ಪ್ರೊಬೇಷನ್) ಘೊಷಿಸಿದ್ದರೆ ಅಂತಹ ಶಿಕ್ಷಕನು ಛಾಪಾ ಕಾಗದದ ಮೇಲೆ ಮುಚ್ಚಳಿಕೆಯನ್ನು ಬರೆದುಕೊಡಬೇಕು. ಈ ಮುಚ್ಚಳಿಕೆಯಲ್ಲಿ ‘ನಾನು ಉನ್ನತ ವ್ಯಾಸಂಗದ ಅವಧಿಯನ್ನು ಲೆಕ್ಕಕ್ಕಿಲ್ಲದ ಅವಧಿಯೆಂದು ಪರಿಗಣಿಸಲು ಸ್ವ ಇಚ್ಛೆಯಿಂದ ಒಪ್ಪಿಕೊಂಡಿರುತ್ತೇನೆ. ಈ ಉನ್ನತ ವ್ಯಾಸಂಗದ ಅವಧಿಯಲ್ಲಿ ವೇತನ ಬಡ್ತಿ, ನಿವೃತ್ತಿ ವೇತನ, ರಜೆ ಸೌಲಭ್ಯ ಮತ್ತು ಯಾವುದೇ ಆರ್ಥಿಕ ಸೌಲಭ್ಯಗಳನ್ನು ಅರ್ಹತಾದಾಯಕ ಸೇವೆಗೆ ಪರಿಗಣಿಸದಿರುವಂತೆ ಈ ಮೂಲಕ ಸ್ವ ಇಚ್ಛೆಯಿಂದ ಒಪ್ಪಿಕೊಂಡು ಬರೆದುಕೊಟ್ಟಿರುತ್ತೇನೆ ಎಂದು ಇರಬೇಕು. ಆದ್ದರಿಂದ ಈ ಅವಧಿಯು ಕರ್ತವ್ಯವಲ್ಲದ ಅವಧಿಯೆಂದು ಪರಿಗಣಿತವಾಗುತ್ತದೆ.
ಅಲ್ಲದೆ ಸರ್ಕಾರಿ ನೌಕರನು ಸ್ವ ಮನವಿಯ ಮೇರೆಗೆ ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ವರ್ಗಾವಣೆ ಮಾಡಿಸಿಕೊಂಡಾಗ ಈ ನಿಯಮದ ಪ್ರಕಾರ ಸೇರಿಕೆ ಕಾಲ ಲಭ್ಯವಾಗುವುದಿಲ್ಲ. ಅವನು ಕಾರಣಾಂತರಗಳಿಂದ ಸಕಾಲಿಕವಾಗಿ ಕರ್ತವ್ಯಕ್ಕೆ ಹಾಜರಾಗಲು ಸಾಧ್ಯವಾಗುವುದಿಲ್ಲ. ಆಗ ಅವನು ಪ್ರಯಾಣಕ್ಕಾಗಿ ತೆಗೆದುಕೊಂಡ ವಾಸ್ತವ ಅವಧಿಯನ್ನು ಕರ್ತವ್ಯವಲ್ಲದ ದಿನವೆಂದು ನಿಯಮ 76 (3)ರ ಮೇರೆಗೆ ಪರಿಗಣಿಸಬೇಕು ಮತ್ತು ಅದನ್ನು ವಾರ್ಷಿಕ ವೇತನ ಬಡ್ತಿ ಮತ್ತು ನಿವೃತ್ತಿ ವೇತನಕ್ಕೆ ಪರಿಗಣಿಸಲಾಗುವುದಿಲ್ಲ. ಆದರೆ ಇಂತಹ ಅವಧಿಗೆ ವರ್ಗಾವಣೆ ದಿನಾಂಕದಂದು ಅವನ ಲೆಕ್ಕದಲ್ಲಿರುವ ಮತ್ತು ಪಡೆಯಲು ಅರ್ಹವಾದ ರಜೆಯನ್ನು  ಸಾರ್ವಜನಿಕ ಹಿತದೃಷ್ಟಿಯಿಂದ ವರ್ಗಾವಣೆಯಾಗಿದ್ದಲ್ಲಿ ಲಭ್ಯವಿರುವ ಸೇರುವ ಕಾಲದ ಅವಧಿಗೆ ಮೀರದಂತೆ ರಜೆಯನ್ನು ಮಂಜೂರು ಮಾಡಬಹುದೆಂದು 1990ರ ಸರ್ಕಾರಿ ಜ್ಞಾಪನ (ಸಂಖ್ಯೆ ಎಫ್​ಡಿ 22, ಎಸ್​ಆರ್​ಎಸ್ 90) ತಿಳಿಸಿದೆ.

**RSGE**::: ಸರ್ಕಾರಿ ಕಾರ್ನರ್​

ನಾನು 3 ವರ್ಷದಿಂದ ಬಳ್ಳಾರಿ ನ್ಯಾಯಾಂಗ ಇಲಾಖೆಯಲ್ಲಿ ಬೆರಳಚ್ಚು ನಕಲುಗಾರನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಈಗ ಕೆಪಿಎಸ್​ಸಿ ನಡೆಸಿದ ಪರೀಕ್ಷೆಯಲ್ಲಿ ಬೆರೆಳಚ್ಚುಗಾರ ಹುದ್ದೆಗೆ ಆಯ್ಕೆ ಆಗಿದ್ದು, ಒಂದು ವೇಳೆ ಕಾರಣಾಂತರದಿಂದ ಈ ಹುದ್ದೆ ರದ್ದುಪಡಿಸಿದರೆ ನಾನು ನ್ಯಾಯಾಂಗ ಇಲಾಖೆಗೆ ಮರಳಿ ಕರ್ತವ್ಯಕ್ಕೆ ಹಾಜರಾಗಬಹುದೇ? ಎಷ್ಟು ವರ್ಷಗಳ ಒಳಗೆ ನ್ಯಾಯಾಂಗ ಇಲಾಖೆಗೆ ಮರಳಲು ಅವಕಾಶವಿರುತ್ತದೆ?
| ಎಚ್. ಆನಂದ್ ಗಂಗಾವತಿ, ಕೊಪ್ಪಳ
ಕರ್ನಾಟಕ ಸರ್ಕಾರಿ ಸೇವಾ (ನೇರ ನೇಮಕಾತಿ) ನಿಯಮಾ ವಳಿಯ 1977ರ ನಿಯಮ 11ರ ಮೇರೆಗೆ ನೀವು ಅನುಮತಿ ಪಡೆದು ಅರ್ಜಿ ಸಲ್ಲಿಸಿ ಬೆರಳಚ್ಚುಗಾರ ಹುದ್ದೆಗೆ ಆಯ್ಕೆಯಾದರೆ ಈ ಹುದ್ದೆಯ ಆದೇಶ ಪಡೆದ ಮೇಲೆ ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 252ಬಿ ರಂತೆ ಕರ್ತವ್ಯ ದಿಂದ ಬಿಡುಗಡೆ ಹೊಂದಬೇಕಾಗುತ್ತದೆ. ಹೀಗೆ ಬಿಡುಗಡೆ ಹೊಂದುವ ಮೊದಲು ನೀವು ನಿಮ್ಮನೇಮಕಾತಿ ಪ್ರಾಧಿಕಾರಕ್ಕೆ ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 2ರ ಮೇರೆಗೆ ನಿಮ್ಮ ಹುದ್ದೆಯ ಹಕ್ಕನ್ನು (ಲೀನ್) 2 ವರ್ಷದ ವರೆಗೆ ಕಾಯ್ದಿರಿಸಬೇಕೆಂದು ವಿನಂತಿಸಬೇಕು. ಆಕಸ್ಮಿಕವಾಗಿ ಕೆಪಿಎಸ್​ಸಿಯ ಬೆರಳಚ್ಚುಗಾರರ ಹುದ್ದೆ ರದ್ದಾದಲ್ಲಿ 2 ವರ್ಷದ ಒಳಗೆ ನೀವು ಪುನಃ ನ್ಯಾಯಾಂಗ ಇಲಾಖೆಗೆ ಮರಳಿ ಕರ್ತವ್ಯಕ್ಕೆ ಹಾಜರಾಗಬಹುದು. ವಿವರಗಳಿಗೆ ಇದೇ ಲೇಖಕರ ‘ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು’ ಪುಸ್ತಕ ನೋಡಬಹುದು.

Monday, August 13, 2018

**RSGE**::: *👇🏽👇🏽ಸರ್ಕಾರಿ ನೌಕರ ತಿಳಿದಿರಬೇಕಾದ ಪ್ರಮುಖ ಅಂಶಗಳು*

[[ಶಿವು ಯಾದವಾಡ]]
👉🏽👉🏽ಇಲಾಖೆ ವಿಚಾರಣೆ ನಡೆಸುವಾಗ ಮನಬಂದಂತೆ ವಿಚಾರಣಾಧಿಕಾರಿಗಳು ವಿಚಾರಣೆ ನಡೆಸುವ ಹಾಗಿಲ್ಲ...
AIR 1973 SC 2701
👉🏽👉🏽ಮಾಹಿತಿ ಹಕ್ಕು ಅಡಿ ಸರಕಾರೀ ನೌಕರರ ಮೇಲಿನ ಶಿಸ್ತು ಪ್ರಕರಣಗಳ ಮಾಹಿತಿಯನ್ನು ನೀಡಲು SC SLP [CIVIL] NO 27734 /2012 3/10/2012 ಅವಕಾಶವಿಲ್ಲ
👉🏽👉🏽ಬೇನಾಮಿ ಅಥವಾ ಮೂಕರ್ಜಿ ಆಧಾರದ ಮೇಲೆ ನೌಕರರಿಗೆ ನೋಟಿಸ್ ನೀಡುವಂತಿಲ್ಲ ವಿಚಾರಣೆ ಮಾಡುವಂತಿಲ್ಲ.
AIR 1964 SC 364 ಸುಪ್ರೀಂಕೋರ್ಟ್
👉🏽👉🏽ಮಾಹಿತಿ ಹಕ್ಕು ಕಲಂ ೮[೧]ಜೆ ಪ್ರಕಾರ ಅರ್ಜಿದಾರರ ಅರ್ಜಿ ಸಾರ್ವಜನಿಕ ಹಿತಾಸಕ್ತಿಯಿಂದ  ಕೂಡಿದೆ ಅಥವಾ ಇಲ್ಲಾ ಎಂದು ನಿರ್ಧರಿಸುವ ಅಧಿಕಾರ ಸಾ ಮಾ ಅ ಅವರಿಗಿದೆ.
👉🏽👉🏽ನೌಕರರ ವಯಕ್ತಿಕ ಮಾಹಿತಿ ಬಹುಮೊತ್ತದ ಸಾರ್ವಜನಿಕ ಹಿತದ ಹೊರತು ಕೊಡಲು ಬರುವುದಿಲ್ಲ.. SC/2007/30796/_2007 DATED 31-08-2017 CIVIL APPEAL 22 /2009
👉🏽👉🏽ಕರ್ನಾಟಕ ಹೈ ಕೋರ್ಟ್ W.P.NO 10663/2006 [GM/RES] 0/07/2008 ಪ್ರಕಾರ ವಯಕ್ತಿಕ ಮಾಹಿತಿ ಬಹು ವಿಸ್ತರಿತ ಸಾರ್ವಜನಿಕ ಹಿತವಿಲ್ಲದ ಧಾಖಲೆ ನೀಡುವಂತಿಲ್ಲ.
👉🏽👉🏽ಆರೋಪಿತ ನೌಕರ ಆರೋಪ ಒಪ್ಪುವ ಅಥವಾ ನಿರಾಕರಿಸುವ ರಕ್ಷಣಾ ಹೇಳಿಕೆ ನೀಡದ ಹೊರತು ವಿಚಾರಣಾಧಿಕಾರಿ ನೇಮಕ ಮಾಡುವಂತಿಲ್ಲ. 1992 [1] SLR 769 KAR HC
👉🏽👉🏽HC ಕರ್ನಾಟಕ W.P.NO 4133/2012 [ [GM-RES] 27/05/2013 ತೀರ್ಪು ಪ್ರಕಾರ ಕಡತಗಳಲ್ಲಿ ಲಭ್ಯವಿರುವ ಮಾಹಿತಿ ಮಾತ್ರ ಮಾಹಿತಿ ಹಕ್ಕಿನಲ್ಲಿ ಪಡೆಯಬಹುದು.
👉🏽👉🏽ಮಾಹಿತಿ ಹಕ್ಕು ಅಡಿ ಒಂದು ವಿಷಯಕ್ಕೆ ಸಂಬಂಧಿಸಿ ಒಂದು ಅರ್ಜಿಯಲ್ಲಿ  ಮಾಹಿತಿ ಕೇಳಬಹುದು.. 
DPAR/14/RTI/2008-- 17/03/2008
👉🏽👉🏽 ಇಲಾಖೆ ವಿಚಾರಣೆ ನಡೆಸುವಾಗ ಮನಬಂದಂತೆ ವಿಚಾರಣಾಧಿಕಾರಿಗಳು ವಿಚಾರಣೆ ನಡೆಸುವ ಹಾಗಿಲ್ಲ...
AIR 1973 SC 2701
👉🏽👉🏽ಮಾಹಿತಿ ಹಕ್ಕು ಅಡಿ ಸರಕಾರೀ ನೌಕರರ ಮೇಲಿನ ಶಿಸ್ತು ಪ್ರಕರಣಗಳ ಮಾಹಿತಿಯನ್ನು ನೀಡಲು SC SLP [CIVIL] NO 27734 /2012 3/10/2012 ಅವಕಾಶವಿಲ್ಲ
👉🏽👉🏽ಬೇನಾಮಿ ಅಥವಾ ಮೂಕರ್ಜಿ ಆಧಾರದ ಮೇಲೆ ನೌಕರರಿಗೆ ನೋಟಿಸ್ ನೀಡುವಂತಿಲ್ಲ ವಿಚಾರಣೆ ಮಾಡುವಂತಿಲ್ಲ.
AIR 1964 SC 364 ಸುಪ್ರೀಂಕೋರ್ಟ್
👉🏽👉🏽ಮಾಹಿತಿ ಹಕ್ಕು ಕಲಂ ೮[೧]ಜೆ ಪ್ರಕಾರ ಅರ್ಜಿದಾರರ ಅರ್ಜಿ ಸಾರ್ವಜನಿಕ ಹಿತಾಸಕ್ತಿಯಿಂದ  ಕೂಡಿದೆ ಅಥವಾ ಇಲ್ಲಾ ಎಂದು ನಿರ್ಧರಿಸುವ ಅಧಿಕಾರ ಸಾ ಮಾ ಅ ಅವರಿಗಿದೆ.
👉🏽👉🏽 ನೌಕರರ ವಯಕ್ತಿಕ ಮಾಹಿತಿ ಬಹುಮೊತ್ತದ ಸಾರ್ವಜನಿಕ ಹಿತದ ಹೊರತು ಕೊಡಲು ಬರುವುದಿಲ್ಲ.. SC/2007/30796/_2007 DATED 31-08-2017 CIVIL APPEAL 22 /2009
👉🏽👉🏽 ಕರ್ನಾಟಕ ಹೈ ಕೋರ್ಟ್ W.P.NO 10663/2006 [GM/RES] 0/07/2008 ಪ್ರಕಾರ ವಯಕ್ತಿಕ ಮಾಹಿತಿ ಬಹು ವಿಸ್ತರಿತ ಸಾರ್ವಜನಿಕ ಹಿತವಿಲ್ಲದ ಧಾಖಲೆ ನೀಡುವಂತಿಲ್ಲ.
👉🏽👉🏽ಆರೋಪಿತ ನೌಕರ ಆರೋಪ ಒಪ್ಪುವ ಅಥವಾ ನಿರಾಕರಿಸುವ ರಕ್ಷಣಾ ಹೇಳಿಕೆ ನೀಡದ ಹೊರತು ವಿಚಾರಣಾಧಿಕಾರಿ ನೇಮಕ ಮಾಡುವಂತಿಲ್ಲ. 1992 [1] SLR 769 KAR HC
👉🏽👉🏽 HC ಕರ್ನಾಟಕ W.P.NO 4133/2012 [ [GM-RES] 27/05/2013 ತೀರ್ಪು ಪ್ರಕಾರ ಕಡತಗಳಲ್ಲಿ ಲಭ್ಯವಿರುವ ಮಾಹಿತಿ ಮಾತ್ರ ಮಾಹಿತಿ ಹಕ್ಕಿನಲ್ಲಿ ಪಡೆಯಬಹುದು.
👉🏽👉🏽ಮಾಹಿತಿ ಹಕ್ಕು ಅಡಿ ಒಂದು ವಿಷಯಕ್ಕೆ ಸಂಬಂಧಿಸಿ ಒಂದು ಅರ್ಜಿಯಲ್ಲಿ  ಮಾಹಿತಿ ಕೇಳಬಹುದು.. 
DPAR/14/RTI/2008-- 17/03/2008
👉🏽👉🏽ಸರಕಾರೀ ನೌಕರರ ಸೇವಾ ವಿವರಗಳನ್ನು ಮತ್ತು ಕುಟುಂಬ ಸದಸ್ಯರ ವಿವರಗಳನ್ನು ಮಾಹಿತಿ ಹಕ್ಕು ಕಲಂ ೮[೧]ಜೆ  ಪ್ರಕಾರ ಕೇಳಲು ಬರುವುದಿಲ್ಲ. KIC 66 APL 2006
👉🏽👉🏽 ಪತ್ರಿಕೆ ವರದಿ ಆಧರಿಸಿ ವಿಚಾರಣೆ ಅಧಿಕಾರಿಗಳು ಆಪಾದಿತ ನೌಕರನ ಮೇಲಿನ ಆರೋಪದ ಬಗ್ಗೆ ತೀರ್ಪು  ಬರೆಯುವ ಹಾಗಿಲ್ಲ 
AIR 1999 SC 3571 suprem court
👉🏽👉🏽ಸರಕಾರಿ ನೌಕರರ ಸೇವಾ ಪುಸ್ತಕವನ್ನು ಮಾಹಿತಿ ಹಕ್ಕು ಅರ್ಜಿಗೆ  ಬಹಿರಂಗ ಮಾಡುವಂತಿಲ್ಲ.KIC/13045/PTN/
2010--9/8/2010
{{ಉಪಯುಕ್ತ ಮಾಹಿತಿ ಶೇರ್ ಮಾಡಿ ಶಿವು ಯಾದವಾಡ}}

**RSGE**::: ಸರ್ಕಾರಿ ಕಾರ್ನರ್​, ದಿನದ ಪ್ರಶ್ನೆ

ನಾನು ಪ್ರಾಥಮಿಕ ಶಾಲಾ ಶಿಕ್ಷಕನಾಗಿದ್ದು, 20 ವರ್ಷ ಪೂರ್ಣಗೊಂಡಿದೆ. ವೈಯಕ್ತಿಕ ಕಾರಣಕ್ಕಾಗಿ ರಾಜೀನಾಮೆ ನೀಡಲು ಬಯಸಿದ್ದೇನೆ. ಈ ರಾಜೀನಾಮೆ ಸಲ್ಲಿಸುವುದು ಹೇಗೆ? ದಯವಿಟ್ಟು ತಿಳಿಸಿ.
| ತೀರ್ಥಪ್ಪ ತೋಟಗಾರ್ ರಾಯಚೂರು
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 285(2)ರ ಮೇರೆಗೆ ಸದರಿ ಹುದ್ದೆಗೆ ಸ್ವಯಂನಿವೃತ್ತಿ ಮೂಲಕ ರಾಜೀನಾಮೆ ನೀಡಲು ಮೂರು ತಿಂಗಳು ಮುಂಚಿತವಾಗಿ ನಿಮ್ಮ ಪತ್ರವನ್ನು ಸಲ್ಲಿಸಬೇಕಾಗುತ್ತದೆ. ಆಗ ನಿಮಗೆ ಪಿಂಚಣಿ ಸೌಲಭ್ಯಗಳು ಲಭ್ಯವಾಗುತ್ತವೆ. ಆದರೆ ನೀವು ಇಂತಹ ಯಾವುದೇ ಆರ್ಥಿಕ ಮತ್ತು ಸೇವಾ ಸೌಲಭ್ಯಗಳ ಬಗ್ಗೆ ಅಪೇಕ್ಷಿಸದಿದ್ದರೆ ಒಂದು ತಿಂಗಳ ಮುಂಚಿತವಾಗಿ ನಿಮ್ಮ ನೇಮಕಾತಿ ಪ್ರಾಧಿಕಾರಕ್ಕೆ ಖುದ್ದಾಗಿ ರಾಜೀನಾಮೆ ಪತ್ರ ಸಲ್ಲಿಸಿ ಅದರ ಅಂಗೀಕಾರವಾದ ನಂತರ ಕರ್ತವ್ಯದಿಂದ ಬಿಡುಗಡೆ ಹೊಂದಬೇಕಾಗುತ್ತದೆ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ‘ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು’ ಪುಸ್ತಕವನ್ನು ನೋಡಬಹುದು.
ಪ್ರಶ್ನೆ ಕೇಳಿ ಪರಿಹಾರ ಪಡೆಯಿರಿ
ನಿಮ್ಮ ಪ್ರಶ್ನೆಗಳನ್ನು ನಮಗೆ ಕಳುಹಿಸಿ. ವಿಳಾಸ: ವಿಜಯವಾಣಿ ನಂ. 24, ಶ್ರೀ ಸಾಯಿರಾಂ ಟವರ್ಸ್, ಮೊದಲ ಮಹಡಿ, 5ನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು-18, ದೂ: 8884432666, ಫ್ಯಾಕ್ಸ್: 080-26257464

**RSGE**::: ಸರ್ಕಾರಿ ಕಾರ್ನರ್​, ದಿನದ ಪ್ರಶ್ನೆ

ನಾನು 2018ರ ಜೂನ್ 6ರಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಲ್ಲಿ ಕಿರಿಯ ಸಹಾಯಕನಾಗಿ ಕೆಲಸಕ್ಕೆ ಹಾಜರಾದೆ. ಈಗ ಏಳು ತಿಂಗಳು ಗರ್ಭಾವಸ್ಥೆಯಲ್ಲಿರುವ ನನಗೆ ಎಷ್ಟು ದಿನ ಹೆರಿಗೆರಜೆ ಲಭ್ಯವಾಗುತ್ತದೆ? ಈ ರಜೆಯನ್ನು ಸೇವೆಗೆ ಪರಿಗಣಿಸಲಾಗುತ್ತದೆಯೆ? ಈ ಅವಧಿಯಲ್ಲಿ ವೇತನ ನೀಡಲಾಗುತ್ತದೆಯೆ?
| ಹೆಚ್.ಬಿ. ಅಶ್ವಿನಿ ಚಾಮರಾಜನಗರ
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 135ರಂತೆ ಮಹಿಳಾ ಸರ್ಕಾರಿ ನೌಕರರು ಎರಡು ಜೀವಂತ ಮಕ್ಕಳನ್ನು ಪಡೆಯುವವರೆಗೆ ಪ್ರತಿ ಬಾರಿ 180 ದಿನಗಳ ಕಾಲ ಹೆರಿಗೆ ರಜೆಯನ್ನು ಪಡೆದುಕೊಳ್ಳಬಹುದು. ಈ ಅವಧಿಯಲ್ಲಿ ವೇತನ ನೀಡಲಾಗುತ್ತಿದ್ದು, ಸೇವಾವಧಿಯನ್ನು ಪರಿಗಣಿಸಲಾಗುತ್ತದೆ. ನೀವು ಪೂರ್ವಭಾವಿಯಾಗಿ ರಜೆ ಮಂಜೂರಾತಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿ ಈ ಪ್ರಸೂತಿ ರಜೆ ಬಳಸಿಕೊಳ್ಳಬಹುದು. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ‘ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು’ ಪುಸ್ತಕವನ್ನು ನೋಡಿ.
ಪ್ರಶ್ನೆ ಕೇಳಿ ಪರಿಹಾರ ಪಡೆಯಿರಿ
ನಿಮ್ಮ ಪ್ರಶ್ನೆಗಳನ್ನು ನಮಗೆ ಕಳುಹಿಸಿ. ವಿಳಾಸ: ವಿಜಯವಾಣಿ ನಂ. 24, ಶ್ರೀ ಸಾಯಿರಾಂ ಟವರ್ಸ್, ಮೊದಲ ಮಹಡಿ, 5ನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು-18, ದೂ: 8884432666, ಫ್ಯಾಕ್ಸ್: 080-26257464,

**RSGE**::: ಸರ್ಕಾರಿ ಕಾರ್ನರ್​ ದಿನದ ಪ್ರಶ್ನೆ

ನಾನು 2013ರಲ್ಲಿ ಸರ್ಕಾರಿ ಸೇವೆಗೆ ಸೇರಿದೆ. ಎರಡು ಮಕ್ಕಳಾದ ಮೇಲೆ 2005ರಲ್ಲಿ ಸಂತಾನಶಕ್ತಿಹರಣ ಚಿಕಿತ್ಸೆಗೆ ಒಳಗಾಗಿದ್ದು ನಾನು ಈ ಕುಟುಂಬಯೋಜನೆಯ ವಿಶೇಷ ಭತ್ಯೆಯ ಸೌಲಭ್ಯ ಪಡೆಯಬಹುದೇ? ದಯವಿಟ್ಟು ತಿಳಿಸಿ.
| ಸುನಂದಾ ಹೊಕ್ರಾಣಿ ಹಾವೇರಿ
1.10.1985ರ ಸರ್ಕಾರಿ ಆದೇಶ ಸಂಖ್ಯೆ ಎಫ್​ಡಿ 27, ಎಸ್​ಆರ್​ಎಸ್ 85ರಂತೆ ಕುಟುಂಬಯೋಜನೆ ಅನುಸರಿಸುವ ಸರ್ಕಾರಿ ನೌಕರರನ್ನು ಉತ್ತೇಜಿಸಲು ಎರಡು ಜೀವಂತ ಮಕ್ಕಳನ್ನು ಹೊಂದಿರುವ ಸರ್ಕಾರಿ ನೌಕರನು ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡರೆ ವೈಯಕ್ತಿಕ ವೇತನರೂಪದಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಮುಂದಿನ ವೇತನ ಬಡ್ತಿಗೆ ಅನುಗುಣವಾಗಿ ವೈಯಕ್ತಿಕ ವೇತನರೂಪದಲ್ಲಿ ವಿಶೇಷ ವೇತನ ಬಡ್ತಿಯನ್ನು ನೀಡಲು ಸೂಚಿಸಲಾಗಿದೆ. ಆದರೆ ನೀವು ಸರ್ಕಾರಿ ಸೇವೆಗೆ ಸೇರುವ ಮೊದಲೇ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿರುವುದರಿಂದ
ಈ ವಿಶೇಷ ಭತ್ಯೆ ಲಭ್ಯವಾಗುವುದಿಲ್ಲ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ‘ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು’ ಪುಸ್ತಕವನ್ನು ನೋಡಬಹುದು.
ಪ್ರಶ್ನೆ ಕೇಳಿ ಪರಿಹಾರ ಪಡೆಯಿರಿ
ನಿಮ್ಮ ಪ್ರಶ್ನೆಗಳನ್ನು ನಮಗೆ ಕಳುಹಿಸಿ. ವಿಳಾಸ: ವಿಜಯವಾಣಿ ನಂ. 24, ಶ್ರೀ ಸಾಯಿರಾಂ ಟವರ್ಸ್, ಮೊದಲ ಮಹಡಿ, 5ನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು-18, ದೂ: 8884432666, ಫ್ಯಾಕ್ಸ್: 080-26257464

Thursday, August 09, 2018

**RSGE**::: ಸರ್ಕಾರಿ ಕಾರ್ನರ್ ದಿನದ ಪ್ರಶ್ನೆ

ನಾನು ಸರ್ಕಾರಿ ಸೇವೆಯಲ್ಲಿ ಒಟ್ಟು 244 ದಿನ ಗೈರುಹಾಜರಾಗಿ ಇಲಾಖಾ ಮುಖ್ಯಸ್ಥರಿಂದ ವಜಾಗೊಂಡಿದ್ದೇನೆ. 14 ವರ್ಷ 8 ತಿಂಗಳು ಸೇವೆ ಸಲ್ಲಿಸಿದ್ದು, ಸೇವೆಯಲ್ಲಿದ್ದಾಗ ಸ್ವಯಂನಿವೃತ್ತಿ ಹೊಂದಲು ಸಾಧ್ಯವಾಗಲಿಲ್ಲ. ಇಲಾಖಾ ಮುಖ್ಯಸ್ಥರಾಗಲೀ, ಅವರಿಗೂ ಮೇಲ್ಪಟ್ಟ ಅಧಿಕಾರಿಗಳಾಗಲೀ ನನ್ನನ್ನು ಕಡ್ಡಾಯ ನಿವೃತ್ತಿ ಮಾಡಬಹುದೆ?
| ಕೆ.ಸಿ. ಮಂಜುನಾಥ ಶಿವಮೊಗ್ಗ
ಕರ್ನಾಟಕ ಸರ್ಕಾರಿ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 108ರ ಪ್ರಕಾರ ಸರ್ಕಾರಿ ನೌಕರನು ನಾಲ್ಕು ತಿಂಗಳು ಅಥವಾ ಅದಕ್ಕೂ ಹೆಚ್ಚು ಅವಧಿಯವರೆಗೆ ಕರ್ತವ್ಯದಿಂದ ಗೈರುಹಾಜರಾದರೆ ಕರ್ನಾಟಕ ಸರ್ಕಾರಿ ಸೇವಾ (ಸಿಸಿಎ) ನಿಯಮಾವಳಿ 1957ರಲ್ಲಿ ವಿಧಿಸಲಾದ ಕಾರ್ಯವಿಧಾನವನ್ನು ಅನುಸರಿಸಿದ ನಂತರ ವಜಾ ಮಾಡಬಹುದು. ಆದರೆ ನೀವು 15 ವರ್ಷಕ್ಕಿಂತ ಕಡಿಮೆ ಸೇವೆ ಸಲ್ಲಿಸಿದ್ದು, ನಿಯಮ 285(2)ರ ಮೇರೆಗೆ ಸ್ವಯಂನಿವೃತ್ತಿ ಹೊಂದಲು ಅರ್ಹರಲ್ಲ. ಅಲ್ಲದೆ ನೀವು ನಿಯಮ 285ರ ಮೇರೆಗೆ ಕಡ್ಡಾಯ ನಿವೃತ್ತಿಗೊಳಿಸಲೂ ಅರ್ಹರಲ್ಲ. ಆದರೆ ವೈದ್ಯಕೀಯ ಆಧಾರದ ಮೇಲೆ ಗೈರುಹಾಜರಾಗಿದ್ದರೆ ಮೇಲ್ಮನವಿ ಪ್ರಾಧಿಕಾರಕ್ಕೆ ಮೂರು ತಿಂಗಳೊಳಗಾಗಿ ಮೇಲ್ಮನವಿ ಸಲ್ಲಿಸಬೇಕು.
ಪ್ರಶ್ನೆ ಕೇಳಿ ಪರಿಹಾರ ಪಡೆಯಿರಿ
ನಿಮ್ಮ ಪ್ರಶ್ನೆಗಳನ್ನು ನಮಗೆ ಕಳುಹಿಸಿ. ವಿಳಾಸ: ವಿಜಯವಾಣಿ ನಂ. 24, ಶ್ರೀ ಸಾಯಿರಾಂ ಟವರ್ಸ್, ಮೊದಲ ಮಹಡಿ, 5ನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು-18, ದೂ: 8884432666, ಫ್ಯಾಕ್ಸ್: 080-26257464, ಇಮೇಲ್: sarakaricorner@gmail.com

**RSGE**::: ಸರ್ಕಾರಿ ಕಾರ್ನರ್ ದಿನದ ಪ್ರಶ್ನೆ

ನಾನು ಅನುಕಂಪದ ಮೇರೆಗೆ 2016ರಲ್ಲಿ ಕೃಷ್ಣ ಜಲಭಾಗ್ಯ ನಿಗಮಕ್ಕೆ ಪ್ರಥಮ ದರ್ಜೆ ಸಹಾಯಕನಾಗಿ ನೇಮಕಾತಿ ಹೊಂದಿದ್ದೇನೆ. ಪ್ರಥಮದರ್ಜೆ ಸಹಾಯಕ ಹುದ್ದೆಯಿಂದ ಕನ್ನಡ ಉಪನ್ಯಾಸಕ ಹುದ್ದೆಗೆ ಶಿಕ್ಷಣ ಇಲಾಖೆಯಲ್ಲಿ ನೇಮಕಾತಿ ಹೊಂದಲು ಅವಕಾಶವಿದೆಯೇ? ಸೂಕ್ತ ಪರಿಹಾರ ತಿಳಿಸಿ.
| ಶರಣಪ್ಪ ಶಹಾಪುರ, ಯಾದಗಿರಿ
ಪದವಿಪೂರ್ವ ಶಿಕ್ಷಣ ಇಲಾಖೆಯ ಕನ್ನಡ ಉಪನ್ಯಾಸಕ ಹುದ್ದೆಗೆ ನೇರ ನೇಮಕಾತಿ ಹಾಗೂ ಪ್ರೌಢಶಾಲಾ ಸಹಶಿಕ್ಷಕರ ಹುದ್ದೆಯಿಂದ ಪದೋನ್ನತಿಯ ಮೂಲಕ ನೇಮಕಾತಿ ಹೊಂದಲು ಅವಕಾಶವಿದೆ. ಆದರೆ ಪ್ರಥಮದರ್ಜೆ ಸಹಾಯಕ ಹುದ್ದೆಯಿಂದ ಉಪನ್ಯಾಸಕ ಹುದ್ದೆಗೆ ನೇಮಕಾತಿ ಹೊಂದಲು ಅವಕಾಶವಿಲ್ಲ. ಆದುದರಿಂದ ನೀವು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಕನ್ನಡ ಉಪನ್ಯಾಸಕ ಹುದ್ದೆಯ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಆಯ್ಕೆಯಾಗಿ ನೇಮಕಾತಿ ಹೊಂದಬಹುದು.
ಪ್ರಶ್ನೆ ಕೇಳಿ ಪರಿಹಾರ ಪಡೆಯಿರಿ
ನಿಮ್ಮ ಪ್ರಶ್ನೆಗಳನ್ನು ನಮಗೆ ಕಳುಹಿಸಿ. ವಿಳಾಸ: ವಿಜಯವಾಣಿ ನಂ. 24, ಶ್ರೀ ಸಾಯಿರಾಂ ಟವರ್ಸ್, ಮೊದಲ ಮಹಡಿ, 5ನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು-18, ದೂ: 8884432666, ಫ್ಯಾಕ್ಸ್: 080-26257464,

**RSGE**::: ಸರ್ಕಾರಿ ಕಾರ್ನರ್ ದಿನದ ಪ್ರಶ್ನೆ

ಸರ್ಕಾರಿ ಪ್ರೌಢಶಾಲಾ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿರುವ ನನ್ನ ಅತ್ತಿಗೆ 2017ರ ಮೇ 21ಕ್ಕೆ 10 ವರ್ಷ ಪೂರ್ಣಗೊಳಿಸಿದ್ದಾರೆ. ಈ 10 ವರ್ಷದ ಕಾಲಮಿತಿ ಬಡ್ತಿಗೆ ಇಲಾಖಾ ಪರೀಕ್ಷೆ ಕಡ್ಡಾಯವೇ? ಒಂದುವೇಳೆ ಇಲಾಖಾ ಪರೀಕ್ಷೆ ತೇರ್ಗಡೆಗೊಂಡರೆ ಯಾವಾಗ ದೊರಕುತ್ತದೆ?
-ಪವನ್ ದೇಸಾಯಿ ಮಸ್ಕಿ ರಾಯಚೂರು
ಕರ್ನಾಟಕ ಸರ್ಕಾರಿ ಸೇವಾ (ಕನ್ನಡ ಭಾಷೆ ಮತ್ತು ಸೇವಾ ಪರೀಕ್ಷೆಗಳು) ನಿಯಮಾವಳಿಯ 1974ರ ನಿಯಮ 3ರ ಮೇರೆಗೆ ಪ್ರತಿಯೊಬ್ಬ ಸರ್ಕಾರಿ ನೌಕರನು ಮೇಲಿನ ಹುದ್ದೆಗೆ ಪದೋನ್ನತಿ ಪಡೆಯಲು ಇಲಾಖಾ ಪರೀಕ್ಷೆ ತೇರ್ಗಡೆಯಾಗುವುದು ಕಡ್ಡಾಯ. ಅದೇ ರೀತಿ ಕರ್ನಾಟಕ ಸರ್ಕಾರಿ ಸೇವಾ (ಕಾಲಮಿತಿ ಬಡ್ತಿ) ನಿಯಮಗಳು 1983ರ ನಿಯಮ 3ರ ಮೇರೆಗೆ ಈ ಕಾಲಮಿತಿ ಬಡ್ತಿ ಪಡೆಯಲು ಪದೋನ್ನತಿಗೆ ಅರ್ಹತಾದಾಯಕವಾದ ಇಲಾಖಾ ಪರೀಕ್ಷೆಗಳಲ್ಲಿ ತೇರ್ಗಡೆಯಾಗುವುದು ಕಡ್ಡಾಯ. ಆದುದರಿಂದ ನಿಮ್ಮ ಅತ್ತಿಗೆಗೆ ಅವರ ಇಲಾಖಾ ಪರೀಕ್ಷೆ ನಡೆದ ದಿನಾಂಕದಿಂದ 10 ವರ್ಷದ ಕಾಲಮಿತಿ ಬಡ್ತಿ ಲಭ್ಯವಾಗುತ್ತದೆ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ‘ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು’ ಪುಸ್ತಕವನ್ನು ನೋಡಬಹುದು.

Thursday, August 02, 2018

**RSGE**::: ಸರ್ಕಾರಿ ನೌಕರನು ತಿಳಿದಿರಬೇಕಾದ ಸೇವಾ ನಿಯಮಾವಳಿಗಳು





ಸರ್ಕಾರಿ ನೌಕರನು ತಿಳಿದಿರಬೇಕಾದ
, ಸೇವಾ ನಿಯಮಾವಳಿಗಳು |
ಸಾಂದರ್ಭಿಕ ರಜೆ: 15 ದಿನಗಳು
(ಜನವರಿಯಿಂದ ಡಿಸೆಂಬರ್ ವರೆಗಿನ ಕ್ಯಾಲೆಂಡರ್ ವರ್ಷಗಳಲ್ಲಿ)
2. ಪರಿಮಿತ ರಜೆ : 2 ದಿನಗಳು
3. ವಿಶೇಷ ಸಾಂದರ್ಭಿಕ ರಜೆ:
1, ಕುಟುಂಬ ಯೋಜನಾ ಶಸ್ತ್ರಚಿಕಿತ್ಸೆಗಾಗಿ 7 ದಿನ
2, ವಂಕಿ ಅಳವಡಿಸಿಕೊಳ್ಳುವುದಕ್ಕೆ 1 ದಿನ
3. ಸರ್ಕಾರಿ ಜೀವ ವಿಮೆ ಮಾಡಿಸಲು 1 ದಿನ
4, ಇಲಾಖಾ ಪರೀಕ್ಷೆಗಾಗಿ ಅನುಮತಿ ರಜೆ
5. ನಾಸ್ ಪೆರಿಫೆರಲ್ಚಿಕಿತ್ಸೆಗಾಗಿ, ನಾಯಿ ಕಚ್ಚಿದ ಸಂದರ್ಭಕ್ಕಾಗಿ 14 ದಿನಗಳು
ರಾಷ್ಟ್ರೀಯ ಮತ್ತು ರಾಜ್ಯಮಟ್ಟದ ಕ್ರೀಡೆಯ ಕ್ರೀಡಾಪಟುವಿನ
ಭಾಗವಹಿಸುವಿಕೆಗೆ 20 ದಿನ ರಜೆ
4. ಪ್ರಸವ ಕಾಲದ ರಜೆ:
1 180 ದಿನ (6 ತಿಂಗಳು) 2 ಮಕ್ಕಳಿಗೆ ಮಾತ್ರ.
ಮಹಿಳಾ ಉದ್ಯೋಗಿಗೆ ಹೆರಿಗೆ ಮತ್ತು ತಾಯಿ ಮಗುವಿನ ಆರೋಗ್ಯ ಆರೈಕೆಗಾಗಿ.
2, ಪೆಟರ್‌ನಟಿ ರಜೆ 15 ದಿನಗಳು
(1ನೇ ಮತ್ತು 2ನೇ ಮಗುವಿನ ಹೆರಿಗೆ ಸಮಯದಲ್ಲಿ ಪುರುಷರಿಗಾಗಿ)
5. ಗಳಿಕೆ ರಜೆ: 30 ದಿನ
1. ಒಂದು ಕ್ಯಾಲೆಂಡರ್ ವರ್ಷದಲ್ಲಿ ಜನವರಿ ಮತ್ತು ಜುಲೈ ಮಾಹೆಯಲ್ಲಿ ಕ್ರಮವಾಗಿ 15-15 ದಿನಗಳಂತೆ
ವರ್ಷಕ್ಕೊಮ್ಮೆ 30 ದಿನಗಳ ಗಳಿಕೆ ರಜೆ ಪಡೆಯಲು, ಸರ್ಕಾರಕ್ಕೆ ಒಪ್ಪಿಸಿ 1 ತಿಂಗಳ ಸಂಬಳ ಪಡೆಯಬಹುದು.
ಒಂದು ಬಾರಿಗೆ ಗರಿಷ್ಠ 120 ದಿನಗಳ ಗಳಿಕೆ ರಜೆಯನ್ನು ಉಪಯೋಗಿಸಬಹುದು.
4, ನಿವೃತ್ತಿ ಸಮಯದವರೆಗೆ ಗರಿಷ್ಠ 300 ದಿನಗಳ ಗಳಿಕೆ ರಜೆ ಕಾಯ್ದಿರಿಸಿ 300 ದಿನಗಳ ಸಂಬಳ ಪಡೆಯಬಹುದು.
6. ಅರ್ಧ ಸಂಬಳೆ ರಜೆ: 200 ದಿನ
(ಒಂದು ಕ್ಯಾಲೆಂಡರ್ ವರ್ಷದಲ್ಲಿ 20 ಅರ್ಧ ಸಂಬಳದ ರಜೆ)ಇದ್ದು
ಅದನ್ನು 10ದಿನದ ಪೂರ್ತಿ ರಜೆಯಾಗಿ ಬಳಸಬಹುದು.
7, ಶಿಶುಪಾಲನಾ ರಜೆ: 730 ದಿನಗಳು
(ಮಹಿಳಾ ಸರ್ಕಾರಿ ನೌಕರಳ ಅಂಗವಿಕಲ/ಬುದ್ಧಿಮಾಂದ್ಯ ಮಗುವು 18 ವರ್ಷಗಳಾಗುವ ತನಕ
ವರ್ಷದಲ್ಲಿ 15 ದಿನಗಳಂತೆ ಅವಧಿಯೊಳಗೆ ವೈಧ್ಯಕೀಯ ವೆಚ್ಛದ  ಬಿಲ್ಲುಗಳನ್ನು
ಬಳಸಬಹುದು,
10.  ವೇತನ ಜಾರಿ: # ೫)
1 ಏಪ್ರಿಲ್  ೨೦೧೨ ರೀಂದ ನೌಕರರಿಗೆ ಪದೊನ್ನತಿ ದೊರೆಯದಿದ್ದಲ್ಲಿ 10, 15, 20, 25 ಮತ್ತು 30 ವರ್ಶಗಳಿಗೆ ತೈಮ್ಬಾಂಡ್ ಪಡೆಯಬಹುದು.

12. ಕನ್ನಡ ಭಾಷಾ ಪರೀಕ್ಷೆ ಪಾರಾಗಿದ್ದಕ್ಕಾಗಿ ಒಂದು ಹೆಚ್ಚುವರಿ ವೇತನ ಬಡ್ತಿ:
11-01-1974ರಿಂದ 12.09.1987ರೊಳಗೆ ನೌಕರಿಯಲ್ಲಿ ಇದ್ದವರಿಗೆ ಮಾತ್ರಅ ಭ್ಯವಿದೆ,
13, ಹಿರಿಯ ನೌಕರರಿಗಿಂತ ಕಿರಿಯ ನೌಕರನ ವೇತನ ಹೆಚ್ಚಾಗಿದ್ದರೆ, ನೌಕರನ
ವೇತನ ಎತ್ತರಿಸಲಾಗುವುದು.
:
14, ಸೇವಾ ಪುಸ್ತಕ
- 1, ಸೇವಾ ಪುಸ್ತಕವನ್ನು ಸರ್ಕಾರಿ ವೆಚ್ಚದಲ್ಲಿ ದ್ವಿಪ್ರತಿಯಲ್ಲಿ ನಿರ್ವಹಿಸಿ ಒಂದು ಪ್ರತಿಯನ್ನು ಉಚಿತವಾಗಿ ನೌಕರರಿಗೆ ಒದಗಿಸಬೇಕು.(
ಸರ್ಕಾರಿ ಆದೇಶ ಸಂ. ಸಿಆಸುಇ/27/ ಆಸು 2012 ದಿನಾಂಕ
16.03.2012) (37ನೇ ಪುಟಕ್ಕೆ...)
- ನವೆಂಬರ್ 2017 35 |
3 ಬಾರಿ ಸೇವಾ ಅವಧಿಯಲ್ಲಿ 730 ದಿನ ಮೀರದಂತೆ ಉಪಯೋಗಿಸಬಹುದು.
8. ವೃತ್ತಿ ತೆರಿಗೆಯಿಂದ ವಿನಾಯಿತಿ:
1, ಒಂದು ಮಗು ಇರುವವರು, ಕುಟುಂಬ ಕಲ್ಯಾಣ ಶಸ್ತ್ರಚಿಕಿತ್ಸೆ ಮಾಡಿಕೊಂಡರೆ ವೃತ್ತಿ ತೆರಿಗೆಯಿಂದ ವಿನಾಯ್ತಿ ಬಯಸಬಹುದು.
ಅಂಗವಿಕಲ ನೌಕರರಿಗೂ ವಿನಾಯ್ತಿ ಇದೆ.

ಹೆಚ್ಚು ಓದಿದವು