Thursday, August 09, 2018

**RSGE**::: ಸರ್ಕಾರಿ ಕಾರ್ನರ್ ದಿನದ ಪ್ರಶ್ನೆ

ಸರ್ಕಾರಿ ಪ್ರೌಢಶಾಲಾ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿರುವ ನನ್ನ ಅತ್ತಿಗೆ 2017ರ ಮೇ 21ಕ್ಕೆ 10 ವರ್ಷ ಪೂರ್ಣಗೊಳಿಸಿದ್ದಾರೆ. ಈ 10 ವರ್ಷದ ಕಾಲಮಿತಿ ಬಡ್ತಿಗೆ ಇಲಾಖಾ ಪರೀಕ್ಷೆ ಕಡ್ಡಾಯವೇ? ಒಂದುವೇಳೆ ಇಲಾಖಾ ಪರೀಕ್ಷೆ ತೇರ್ಗಡೆಗೊಂಡರೆ ಯಾವಾಗ ದೊರಕುತ್ತದೆ?
-ಪವನ್ ದೇಸಾಯಿ ಮಸ್ಕಿ ರಾಯಚೂರು
ಕರ್ನಾಟಕ ಸರ್ಕಾರಿ ಸೇವಾ (ಕನ್ನಡ ಭಾಷೆ ಮತ್ತು ಸೇವಾ ಪರೀಕ್ಷೆಗಳು) ನಿಯಮಾವಳಿಯ 1974ರ ನಿಯಮ 3ರ ಮೇರೆಗೆ ಪ್ರತಿಯೊಬ್ಬ ಸರ್ಕಾರಿ ನೌಕರನು ಮೇಲಿನ ಹುದ್ದೆಗೆ ಪದೋನ್ನತಿ ಪಡೆಯಲು ಇಲಾಖಾ ಪರೀಕ್ಷೆ ತೇರ್ಗಡೆಯಾಗುವುದು ಕಡ್ಡಾಯ. ಅದೇ ರೀತಿ ಕರ್ನಾಟಕ ಸರ್ಕಾರಿ ಸೇವಾ (ಕಾಲಮಿತಿ ಬಡ್ತಿ) ನಿಯಮಗಳು 1983ರ ನಿಯಮ 3ರ ಮೇರೆಗೆ ಈ ಕಾಲಮಿತಿ ಬಡ್ತಿ ಪಡೆಯಲು ಪದೋನ್ನತಿಗೆ ಅರ್ಹತಾದಾಯಕವಾದ ಇಲಾಖಾ ಪರೀಕ್ಷೆಗಳಲ್ಲಿ ತೇರ್ಗಡೆಯಾಗುವುದು ಕಡ್ಡಾಯ. ಆದುದರಿಂದ ನಿಮ್ಮ ಅತ್ತಿಗೆಗೆ ಅವರ ಇಲಾಖಾ ಪರೀಕ್ಷೆ ನಡೆದ ದಿನಾಂಕದಿಂದ 10 ವರ್ಷದ ಕಾಲಮಿತಿ ಬಡ್ತಿ ಲಭ್ಯವಾಗುತ್ತದೆ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ‘ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು’ ಪುಸ್ತಕವನ್ನು ನೋಡಬಹುದು.

Tuesday, August 07, 2018

**RSGE**::: ಸರ್ಕಾರಿ ಕಾರ್ನರ್ ದಿನದ ಪ್ರಶ್ನೆ

ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿದ್ದ ನನ್ನ ಮಗಳು 2007ರಲ್ಲಿ ನಿಧನಳಾಗಿದ್ದು, ಅವಳ ಪತಿಗೆ ಕುಟುಂಬಪಿಂಚಣಿ ಲಭ್ಯವಾಗುತ್ತಿತ್ತು. 2010ರಲ್ಲಿ ಅವರೂ ಮರಣ ಹೊಂದಿರುವುದರಿಂದ ಅವರ ಎರಡೂ ಮಕ್ಕಳನ್ನು ನಾನೇ ನೋಡಿಕೊಳ್ಳುತ್ತಿದ್ದೇನೆ. ಅವರಲ್ಲಿ ಗಂಡು ಪ್ರಾಪ್ತವಯಸ್ಕನಾದ ಮೇಲೆ ಹೆಣ್ಣುಮಗುವಿಗೆ ಪಿಂಚಣಿ ನೀಡಲಾಗುತ್ತಿತ್ತು. ಹೆಣ್ಣುಮಗು ಪ್ರಾಪ್ತವಯಸ್ಕಳಾದ ಮೇಲೆ ಈ ಕುಟುಂಬಪಿಂಚಣಿ ರದ್ದುಗೊಂಡಿದೆ. ಇಂತಹ ಪ್ರಕರಣಗಳಿಗೆ ಪಿಂಚಣಿ ವಿಸ್ತರಿಸಿ ಮಂಜೂರಾತಿ ನೀಡಲು ನಿಯಮಗಳಿವೆಯ? ಸಲಹೆ ನೀಡಿ.
-ಸಿ. ಯಮುನಪ್ಪ ಬಳ್ಳಾರಿ
ಕರ್ನಾಟಕ ಸರ್ಕಾರಿ ನೌಕರರ (ಕುಟುಂಬ ನಿವೃತ್ತಿವೇತನ ) ನಿಯಮಾವಳಿ 2002ರ ನಿಯಮ 9ಡಿ(ಜಿ)ರ ಪ್ರಕಾರ ಅಪ್ರಾಪ್ತ ವಯಸ್ಸಿನ ಗಂಡುಮಗು 18 ವರ್ಷ ಹಾಗೂ ಹೆಣ್ಣುಮಗು 21 ವರ್ಷ ಆಗುವವರೆಗೆ ಈ ಕುಟುಂಬಪಿಂಚಣಿಯನ್ನು ಮಂಜೂರು ಮಾಡಲು ನಿಯಮಾವಳಿಯಲ್ಲಿ ಅವಕಾಶವಿದೆ. ಹೀಗಾಗಿ ನೀವು ಹೆಣ್ಣುಮಗುವಿಗೆ ಮತ್ತೆ ಮೂರು ವರ್ಷ ಕುಟುಂಬಪಿಂಚಣಿಯನ್ನು ವಿಸ್ತರಿಸಲು ಕೋರಿ ಅರ್ಜಿ ಸಲ್ಲಿಸಿ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ‘ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು’ ಪುಸ್ತಕ ನೋಡಿ.

**RSGE**::: 2018-19ನೇ ಸಾಲಿನಲ್ಲಿ ಮಾಡುವ ಸರ್ಕಾರಿ ನೌಕರರ ವರ್ಗಾವಣೆಗಳ ಬಗ್ಗೆ

ಕರ್ನಾಟಕ ಸರ್ಕಾರದ ನಡವಳಿಗಳು
ವಿಷಯ: 2018-19ನೇ ಸಾಲಿನಲ್ಲಿ ಮಾಡುವ ಸರ್ಕಾರಿ ನೌಕರರ ವರ್ಗಾವಣೆಗಳ ಬಗ್ಗೆ
ಮಾರ್ಗಸೂಚಿಗಳು.
ಓದಲಾಗಿದೆ:-
1. ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ 22 ಸೇನೌವ 2013, ಬೆಂಗಳೂರು ದಿನಾಂಕ: 07.06.2013.
2, ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ 22 ಸೇನೌವ 2013, ಬೆಂಗಳೂರು ದಿನಾಂಕ: 14.06.2013,
3, ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ 18 ಸೇನದ 2014, ಬೆಂಗಳೂರು ದಿನಾಂಕ: 05,02.2014
- 4 ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ 17 ಸೇಘವ 2015, ಬೆಂಗಳೂರು ದಿನಾಂಕ: 27.04.2015,
5, ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ 63 ಸೇನೌವ 2015, ಬೆಂಗಳೂರು ದಿನಾಂಕ: 01.10.2015,
6, ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ 25 ಸೇಘವ 2015, ಬೆಂಗಳೂರು ದಿನಾಂಕ: 14.10.2015,
7 ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ 2 ಸೇನೌವ 2017, ಬೆಂಗಳೂರು ದಿನಾಂಕ: 27.03.2017
8, ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ 18 ಸೇನೌವ 2018, ಬೆಂಗಳೂರು ದಿನಾಂಕ: 23.06.2018,
ಪ್ರಸ್ತಾವನೆ:-
ಮೇಲೆ (1) ರಲ್ಲಿ ಓದಲಾದ ಸರ್ಕಾರದ ಆದೇಶದಲ್ಲಿ ಸರ್ಕಾರಿ ನೌಕರರ ವರ್ಗಾವಣೆ ಕುರಿತಂತೆ
ವಿಸ್ತ್ರತವಾದ ಮಾರ್ಗಸೂಚಿಗಳನ್ನು ನೀಡಲಾಗಿದೆ. ಈ ಮಾರ್ಗಸೂಚನೆಗಳಲ್ಲಿನ ಷರತ್ತುಗಳಿಗೊಳಪಟ್ಟು
- 2018-19ನೇ ಸಾಲಿನಲ್ಲಿ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆಗಳನ್ನು ಸಂಬಂಧಿತ ವೃಂದದ
ಕಾರ್ಯನಿರತ ವೃಂದಬಲದ ( Working StrerIgth) ಶೇಕಡಾ 4ರಷಕ್ಕೆ ಸೀಮಿತಗೊಳE
ದಿನಾಂಕ: 31.07.2018 ರವರೆಗೆ ಮಾಡಬಹುದೆಂದು ಮೇಲೆ (8)ರಲ್ಲಿ ಓದಲಾದ ದಿನಾಂಕ: 23.06, 2018ರ
ಸರ್ಕಾರಿ ಆದೇಶದಲ್ಲಿ ಆದೇಶಿಸಲಾಗಿದೆ. ಪ್ರಸ್ತುತ ವರ್ಗಾವಣೆ ಅವಧಿಯನ್ನು ಮತ್ತೆ ವಿಸ್ತರಿಸುವುದು
- ಅವಶ್ಯವೆಂದು ಸರ್ಕಾರವು ಪರಿಗಣಿಸಿ ಈ ಕೆಳಕಂಡಂತೆ ಆದೇಶಿಸಿರುತ್ತದೆ.
ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ 18 ಸೇನೌವ 2018 ಬೆಂಗಳೂರು, ದಿನಾಂಕ: 31.07.2018
ಪ್ರಸ್ತಾವನೆಯಲ್ಲಿ ವಿವರಿಸಿದ ಅಂಶಗಳ ಹಿನ್ನೆಲೆಯಲ್ಲಿ ಮೇಲೆ (1) ರಿಂದ (8)ರವರೆಗೆ ಓದಲಾದ
ಸರ್ಕಾರಿ ಆದೇಶಗಳಲ್ಲಿ ನಮೂದಿಸಿರುವ ಷರತ್ತುಗಳೊಂದಿಗೆ 2018-19ನೇ ಸಾಲಿನ ಸರ್ಕಾರಿ ನೌಕರರ
ಸಾರ್ವತ್ರಿಕ ವರ್ಗಾವಣೆ ಅವಧಿಯನ್ನು ದಿನಾಂಕ: 10.08.2018 ರವರೆಗೆ ವಿಸ್ತರಿಸಿ ಆದೇಶಿಸಿದೆ.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ
ಮತ್ತು ಅವರ ಹೆಸರಿನಲ್ಲಿ
64 4.
2 - 02 FE
(ಗಾಯತ್ರಿ, ಎಂ.ಆರ್.)
ಸರ್ಕಾರದ ಅಧೀನ ಕಾರ್ಯದರ್ಶಿ
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ
- (ಸೇವಾ ನಿಯಮಗಳು-1)
LALSAB DODMANI STATE VP KSG (NPS) EA
ಇವರಿಗೆ:
ಪ್ರಕಟಿಸಿ ಅದರ
1962ನಕಾರರು, ಕರ್ನಾಟಕ ರಾಜಪತ ಇವರಿಗೆ - ಅದಮ, ರಾಜನತ್ರದಲ್ಲಿ
200 ಪ್ರತಿಗಳನ್ನು ಸರ್ಕಾರದ ಅಧೀನ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ,

Monday, August 06, 2018

**RSGE**::: ನೌಕರರ ಕೆಜಿಐಡಿ ಮೊತ್ತ ತಿದ್ದುಪಡಿ

ನೌಕರರ ಕೆಜಿಐಡಿ ಮೊತ್ತ ತಿದ್ದುಪಡಿ
ಬೆಂಗಳೂರು: ಆರನೇ ರಾಜ್ಯ ವೇತನ ಆಯೋಗದ ಶಿಫಾರಸಿನ
ಅನುಷ್ಠಾನದ ಅನ್ವಯ ಏ.1ರಿಂದ ಜಾರಿಯಾಗುವ ಪರಿಷ್ಕೃತ
ವೇತನ ಶ್ರೇಣಿಗೆ ಅನುಗುಣವಾಗಿ ಸರ್ಕಾರಿ ನೌಕರರ ಮಾಸಿಕ
ವಿಮಾ ಕಂತಿನ ಕನಿಷ್ಠ ದರವನ್ನು ತಿದ್ದುಪಡಿ ಮಾಡಿ ಆರ್ಥಿಕ
ಇಲಾಖೆ ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರಿ ನೌಕರರ ಅತಿ
ಕನಿಷ್ಠ ವೇತನ ಶ್ರೇಣಿಯಾದ 17,000-28,950 ರೂ.ಗೆ
1,440 ರೂ.ಗಳ ಕನಿಷ್ಠ ಮಾಸಿಕ ವಿಮಾನ ಕಂತಿನ ಮೊಬಲಗು
ನಿರ್ದಿಷ್ಟಪಡಿಸಿದ್ದರೆ, ಅತಿ ಗರಿಷ್ಠ ವೇತನ ಶ್ರೇಣಿಯಾದ
1,04,600-1,50,600 ರೂ.ಗಳಿಗೆ ಕನಿಷ್ಠ ಮೊಬಲಗು 7,980
ರೂ. ಗೊತ್ತುಪಡಿಸಿ ಸರ್ಕಾರ ಅಧಿಸೂಚನೆ ಹೊರಡಿಸಿದೆ.

Thursday, August 02, 2018

**RSGE**::: ಸರ್ಕಾರಿ ನೌಕರನು ತಿಳಿದಿರಬೇಕಾದ ಸೇವಾ ನಿಯಮಾವಳಿಗಳು





ಸರ್ಕಾರಿ ನೌಕರನು ತಿಳಿದಿರಬೇಕಾದ
, ಸೇವಾ ನಿಯಮಾವಳಿಗಳು |
ಸಾಂದರ್ಭಿಕ ರಜೆ: 15 ದಿನಗಳು
(ಜನವರಿಯಿಂದ ಡಿಸೆಂಬರ್ ವರೆಗಿನ ಕ್ಯಾಲೆಂಡರ್ ವರ್ಷಗಳಲ್ಲಿ)
2. ಪರಿಮಿತ ರಜೆ : 2 ದಿನಗಳು
3. ವಿಶೇಷ ಸಾಂದರ್ಭಿಕ ರಜೆ:
1, ಕುಟುಂಬ ಯೋಜನಾ ಶಸ್ತ್ರಚಿಕಿತ್ಸೆಗಾಗಿ 7 ದಿನ
2, ವಂಕಿ ಅಳವಡಿಸಿಕೊಳ್ಳುವುದಕ್ಕೆ 1 ದಿನ
3. ಸರ್ಕಾರಿ ಜೀವ ವಿಮೆ ಮಾಡಿಸಲು 1 ದಿನ
4, ಇಲಾಖಾ ಪರೀಕ್ಷೆಗಾಗಿ ಅನುಮತಿ ರಜೆ
5. ನಾಸ್ ಪೆರಿಫೆರಲ್ಚಿಕಿತ್ಸೆಗಾಗಿ, ನಾಯಿ ಕಚ್ಚಿದ ಸಂದರ್ಭಕ್ಕಾಗಿ 14 ದಿನಗಳು
ರಾಷ್ಟ್ರೀಯ ಮತ್ತು ರಾಜ್ಯಮಟ್ಟದ ಕ್ರೀಡೆಯ ಕ್ರೀಡಾಪಟುವಿನ
ಭಾಗವಹಿಸುವಿಕೆಗೆ 20 ದಿನ ರಜೆ
4. ಪ್ರಸವ ಕಾಲದ ರಜೆ:
1 180 ದಿನ (6 ತಿಂಗಳು) 2 ಮಕ್ಕಳಿಗೆ ಮಾತ್ರ.
ಮಹಿಳಾ ಉದ್ಯೋಗಿಗೆ ಹೆರಿಗೆ ಮತ್ತು ತಾಯಿ ಮಗುವಿನ ಆರೋಗ್ಯ ಆರೈಕೆಗಾಗಿ.
2, ಪೆಟರ್‌ನಟಿ ರಜೆ 15 ದಿನಗಳು
(1ನೇ ಮತ್ತು 2ನೇ ಮಗುವಿನ ಹೆರಿಗೆ ಸಮಯದಲ್ಲಿ ಪುರುಷರಿಗಾಗಿ)
5. ಗಳಿಕೆ ರಜೆ: 30 ದಿನ
1. ಒಂದು ಕ್ಯಾಲೆಂಡರ್ ವರ್ಷದಲ್ಲಿ ಜನವರಿ ಮತ್ತು ಜುಲೈ ಮಾಹೆಯಲ್ಲಿ ಕ್ರಮವಾಗಿ 15-15 ದಿನಗಳಂತೆ
ವರ್ಷಕ್ಕೊಮ್ಮೆ 30 ದಿನಗಳ ಗಳಿಕೆ ರಜೆ ಪಡೆಯಲು, ಸರ್ಕಾರಕ್ಕೆ ಒಪ್ಪಿಸಿ 1 ತಿಂಗಳ ಸಂಬಳ ಪಡೆಯಬಹುದು.
ಒಂದು ಬಾರಿಗೆ ಗರಿಷ್ಠ 120 ದಿನಗಳ ಗಳಿಕೆ ರಜೆಯನ್ನು ಉಪಯೋಗಿಸಬಹುದು.
4, ನಿವೃತ್ತಿ ಸಮಯದವರೆಗೆ ಗರಿಷ್ಠ 300 ದಿನಗಳ ಗಳಿಕೆ ರಜೆ ಕಾಯ್ದಿರಿಸಿ 300 ದಿನಗಳ ಸಂಬಳ ಪಡೆಯಬಹುದು.
6. ಅರ್ಧ ಸಂಬಳೆ ರಜೆ: 200 ದಿನ
(ಒಂದು ಕ್ಯಾಲೆಂಡರ್ ವರ್ಷದಲ್ಲಿ 20 ಅರ್ಧ ಸಂಬಳದ ರಜೆ)ಇದ್ದು
ಅದನ್ನು 10ದಿನದ ಪೂರ್ತಿ ರಜೆಯಾಗಿ ಬಳಸಬಹುದು.
7, ಶಿಶುಪಾಲನಾ ರಜೆ: 730 ದಿನಗಳು
(ಮಹಿಳಾ ಸರ್ಕಾರಿ ನೌಕರಳ ಅಂಗವಿಕಲ/ಬುದ್ಧಿಮಾಂದ್ಯ ಮಗುವು 18 ವರ್ಷಗಳಾಗುವ ತನಕ
ವರ್ಷದಲ್ಲಿ 15 ದಿನಗಳಂತೆ ಅವಧಿಯೊಳಗೆ ವೈಧ್ಯಕೀಯ ವೆಚ್ಛದ  ಬಿಲ್ಲುಗಳನ್ನು
ಬಳಸಬಹುದು,
10.  ವೇತನ ಜಾರಿ: # ೫)
1 ಏಪ್ರಿಲ್  ೨೦೧೨ ರೀಂದ ನೌಕರರಿಗೆ ಪದೊನ್ನತಿ ದೊರೆಯದಿದ್ದಲ್ಲಿ 10, 15, 20, 25 ಮತ್ತು 30 ವರ್ಶಗಳಿಗೆ ತೈಮ್ಬಾಂಡ್ ಪಡೆಯಬಹುದು.

12. ಕನ್ನಡ ಭಾಷಾ ಪರೀಕ್ಷೆ ಪಾರಾಗಿದ್ದಕ್ಕಾಗಿ ಒಂದು ಹೆಚ್ಚುವರಿ ವೇತನ ಬಡ್ತಿ:
11-01-1974ರಿಂದ 12.09.1987ರೊಳಗೆ ನೌಕರಿಯಲ್ಲಿ ಇದ್ದವರಿಗೆ ಮಾತ್ರಅ ಭ್ಯವಿದೆ,
13, ಹಿರಿಯ ನೌಕರರಿಗಿಂತ ಕಿರಿಯ ನೌಕರನ ವೇತನ ಹೆಚ್ಚಾಗಿದ್ದರೆ, ನೌಕರನ
ವೇತನ ಎತ್ತರಿಸಲಾಗುವುದು.
:
14, ಸೇವಾ ಪುಸ್ತಕ
- 1, ಸೇವಾ ಪುಸ್ತಕವನ್ನು ಸರ್ಕಾರಿ ವೆಚ್ಚದಲ್ಲಿ ದ್ವಿಪ್ರತಿಯಲ್ಲಿ ನಿರ್ವಹಿಸಿ ಒಂದು ಪ್ರತಿಯನ್ನು ಉಚಿತವಾಗಿ ನೌಕರರಿಗೆ ಒದಗಿಸಬೇಕು.(
ಸರ್ಕಾರಿ ಆದೇಶ ಸಂ. ಸಿಆಸುಇ/27/ ಆಸು 2012 ದಿನಾಂಕ
16.03.2012) (37ನೇ ಪುಟಕ್ಕೆ...)
- ನವೆಂಬರ್ 2017 35 |
3 ಬಾರಿ ಸೇವಾ ಅವಧಿಯಲ್ಲಿ 730 ದಿನ ಮೀರದಂತೆ ಉಪಯೋಗಿಸಬಹುದು.
8. ವೃತ್ತಿ ತೆರಿಗೆಯಿಂದ ವಿನಾಯಿತಿ:
1, ಒಂದು ಮಗು ಇರುವವರು, ಕುಟುಂಬ ಕಲ್ಯಾಣ ಶಸ್ತ್ರಚಿಕಿತ್ಸೆ ಮಾಡಿಕೊಂಡರೆ ವೃತ್ತಿ ತೆರಿಗೆಯಿಂದ ವಿನಾಯ್ತಿ ಬಯಸಬಹುದು.
ಅಂಗವಿಕಲ ನೌಕರರಿಗೂ ವಿನಾಯ್ತಿ ಇದೆ.

ಹೆಚ್ಚು ಓದಿದವು