Monday, September 24, 2018

**RSGE**::: ಚೆಸ್ ಒಲಿಂಪಿಯಾಡ್​ಗೆ ಭಾರತದ ಅಂಧ ಸ್ಪರ್ಧಿ!,

ಭಾರತದ ಅಂಧ ಚೆಸ್ ಆಟಗಾರ್ತಿ ವೈಶಾಲಿ ನರೇಂದ್ರ ಸಲಾವ್​ಕರ್, ವಿಶ್ವ ಚೆಸ್ ಒಲಿಂಪಿಯಾಡ್​ನಲ್ಲಿ ಸ್ಪರ್ಧಿಸಲಿರುವ ಭಾರತದ ಮೊದಲ ದೃಷ್ಟಿಹೀನ ಸ್ಪರ್ಧಿ ಎನಿಸಲಿದ್ದಾರೆ. ಜಾರ್ಜಿಯಾದ ಬಟುಮಿಯಲ್ಲಿ ಭಾನುವಾರ ಆರಂಭವಾಗಲಿರುವ 43ನೇ ಆವೃತ್ತಿಯ ಒಲಿಂಪಿಯಾಡ್​ನಲ್ಲಿ, ಇಂಟರ್​ನ್ಯಾಷನಲ್ ಬ್ರೖೆಲಿ ಚೆಸ್ ಸಂಸ್ಥೆ (ಐಬಿಸಿಎ) ತಂಡದ ಭಾಗವಾಗಿ ವೈಶಾಲಿ ಸ್ಪರ್ಧೆ ಮಾಡಲಿದ್ದಾರೆ. ಫಿಡೆ ಮಾನ್ಯತೆ ಹೊಂದಿರುವ ಐಬಿಸಿಎ, ಒಲಿಂಪಿಯಾಡ್​ನ ಮುಕ್ತ ಹಾಗೂ ಮಹಿಳಾ ವಿಭಾಗಕ್ಕೆ ತಂಡವನ್ನು ಕಳುಹಿಸಿಕೊಟ್ಟಿದೆ. ‘ಮಹಾರಾಷ್ಟ್ರದ 45 ವರ್ಷದ ವೈಶಾಲಿ, ಕಳೆದ 20-25 ವರ್ಷಗಳಿಂದ ಚೆಸ್ ಆಡುತ್ತಿದ್ದು, ಎಂಟು ಬಾರಿ ರಾಷ್ಟ್ರೀಯ ಚಾಂಪಿಯನ್ ಕೂಡ ಆಗಿದ್ದಾರೆ. ಈ ಸಾಧನೆಗೆ ಅವರು ಅರ್ಹರಾಗಿದ್ದಾರೆ’ ಎಂದು ಐಬಿಸಿಎ ಜತೆ, ಅಖಿಲ ಭಾರತ ಅಂಧರ ಚೆಸ್ ಸಂಸ್ಥೆ (ಎಐಸಿಎಫ್​ಬಿ) ಅಧ್ಯಕ್ಷರೂ ಆಗಿರುವ ಜಾಧವ್ ಚಾರುದತ್ತ ಸಂಭ್ರಮ ವ್ಯಕ್ತಪಡಿಸಿದ್ದಾರೆ. ಸ್ಪೇನ್​ನ ಇಬ್ಬರು ಚೆಸ್ ಆಟಗಾರ್ತಿಯರಿಗೆ ಟೂರ್ನಿಯಲ್ಲಿ ಭಾಗವಹಿಸಲು ಸಾಧ್ಯವಾಗದ ಕಾರಣ ವೈಶಾಲಿಗೆ ಈ ಅದೃಷ್ಟ ಒಲಿದಿದೆ. ಒಲಿಂಪಿಯಾಡ್ ಅಧಿಕೃತ ವೆಬ್​ಸೈಟ್ ಪ್ರಕಾರ, ಅಂತಾರಾಷ್ಟ್ರೀಯ ಕಿವುಡರ ಚೆಸ್ ಸಮಿತಿ ತಂಡದ ಭಾಗವಾಹಿ ಭಾರತದ ಮಲಿಕಾ ಹಂಡಾ ಸ್ಪರ್ಧೆ ಮಾಡಲಿದ್ದಾರೆ.

**RSGE**:::

ಸರ್ಕಾರಿ ಶಾಲೆಗಳ ಶಿಕ್ಷಕರು ವಾರ್ಷಿಕ ಶೈಕ್ಷಣಿಕ ಅವಧಿಯಲ್ಲಿ ಕೇವಲ ಶೇ.19.1 ಸಮಯವನ್ನು ವಿದ್ಯಾರ್ಥಿಗಳ ಕಲಿಕೆಗೆ ಮೀಸಲಿಡುತ್ತಿದ್ದಾರೆ. ಉಳಿದ ಶೇ.81 ಅವಧಿ ಸರ್ಕಾರದ ವಿವಿಧ ಕೆಲಸದಲ್ಲೇ ಕಳೆದುಹೋಗುತ್ತಿದೆ ಎಂಬ ಆತಂಕಕಾರಿ ವಿಷಯವನ್ನು ಶೈಕ್ಷಣಿಕ ಯೋಜನೆ ಹಾಗೂ ಆಡಳಿತದ ರಾಷ್ಟ್ರೀಯ ಸಂಸ್ಥೆ(ಎನ್​ಐಇಪಿಎ)ಸಮೀಕ್ಷಾ ವರದಿ ಹೊರಗೆಡವಿದೆ.
ಪಾಠ ಮಾಡಲೇ ಬಿಡುವುದಿಲ್ಲ!
ಶೈಕ್ಷಣಿಕ ವರ್ಷ ಆರಂಭದಿಂದ ಸೆಪ್ಟೆಂಬರ್​ವರೆಗೆ ಪಠ್ಯಪುಸ್ತಕ, ಸಮವಸ್ತ್ರ, ಸೈಕಲ್ ವಿತರಣೆ ಹಾಗೂ ಇತರ ಸರ್ಕಾರಿ ಕೆಲಸಗಳಲ್ಲಿಯೇ ಶಿಕ್ಷಕರು ಹೈರಾಣಾಗಿ ಹೋಗುತ್ತಾರೆ. ಉಳಿದ ದಿನಗಳಲ್ಲಿಯೂ ಸರ್ಕಾರ ಹೇಳಿದ ಇತರ ಕೆಲಸಗಳನ್ನು ಮಾಡಬೇಕಾಗುತ್ತದೆ. ಸರ್ಕಾರದ ವಿವಿಧ ಕೆಲಸಗಳನ್ನು ಮಾಡುವುದು ಹೇಗೆಂದು ಹೇಳಿಕೊಡುತ್ತಾರೆ. ಆದರೆ ಪಠ್ಯದ ಗುಣಮಟ್ಟ ಏರಿಕೆಗೆ ಯಾವುದೇ ಮಾರ್ಗಸೂಚಿಗಳು ಬರುವುದಿಲ್ಲ. ಇದರಿಂದ ಸರ್ಕಾರಿ ಶಾಲೆಗಳ ಗುಣಮಟ್ಟ ಕುಸಿಯುತ್ತಿದೆ ಎಂಬ ಶಿಕ್ಷಕರ ಅಭಿಪ್ರಾಯವೂ ವರದಿಯಲ್ಲಿ ಉಲ್ಲೇಖವಾಗಿದೆ.
ಏನೇನು ಶಿಕ್ಷಣೇತರ ಕೆಲಸ?
# ಚುನಾವಣೆ ಅಧಿಕಾರಿ, ಮತಚೀಟಿ ನೋಂದಣಿಗೆ ಸಹಕಾರ
# ಬಿಸಿಯೂಟ ಹಾಗೂ ಕ್ಷೀರಭಾಗ್ಯ ಉಸ್ತುವಾರಿ
# ಆದಾಯ ಹಾಗೂ ಜಾತಿ ಪತ್ರದ ನೋಂದಣಿ
# ಶಿಕ್ಷಣ ಇಲಾಖೆಯ ಇತರ ಕೆಲಸಗಳು
# ಜನಗಣತಿ
# ಶಾಲೆಯಲ್ಲಿ ಗುಮಾಸ್ತ ಹಾಗೂ ಪರಿಚಾರಕರು ಮಾಡುವ ಎಲ್ಲ ಕೆಲಸ
# ಬಯಲು ಬಹಿರ್ದೆಸೆ ಮುಕ್ತ ಸಮಾಜ ಸೇರಿ ಇತರ ಸರ್ಕಾರಿ ಯೋಜನೆಗಳ ಕುರಿತು ಸಮೀಕ್ಷೆ
# ಪಲ್ಸ್ ಪೋಲಿಯೊ ಲಸಿಕೆ ಕಾರ್ಯಕ್ರಮ
ನೆಪಮಾತ್ರದ ಅನುಪಾತ
ಶಿಕ್ಷಣ ಹಕ್ಕು ಕಾಯ್ದೆ ಪ್ರಕಾರ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಅನುಪಾತ 30:1 ಇರಬೇಕು. ಆದರೆ ಕರ್ನಾಟಕ ಸೇರಿ ಯಾವುದೇ ರಾಜ್ಯಗಳಲ್ಲಿ ಈ ಅನುಪಾತ ಅನುಷ್ಠಾನಕ್ಕೆ ಬಂದಿಲ್ಲ. ವರದಿಯಲ್ಲಿ ಮಹಾರಾಷ್ಟ್ರದ ಒಂದು ಶಾಲೆಯ ಉದಾಹರಣೆ ನೀಡಲಾಗಿದ್ದು, ಆ ಶಾಲೆಯಲ್ಲಿ 8 ಶಿಕ್ಷಕರಿದ್ದರೆ, ಐವರು ಶಿಕ್ಷಣೇತರ ಚಟುವಟಿಕೆಯಲ್ಲಿ ನಿರತರಾಗಿರುತ್ತಾರೆ. ಉಳಿದ ಮೂವರು ಶಿಕ್ಷಕರು 555 ವಿದ್ಯಾರ್ಥಿಗಳನ್ನು ನಿಭಾಯಿಸಬೇಕಿದೆ. ಶೇ.15 ಶಿಕ್ಷಕರು ಪಾಠ ಮಾಡುವುದು ಬಿಟ್ಟು ಕಾಯಂ ಆಗಿ ಸರ್ಕಾರಿ ಚಾಕರಿಯಲ್ಲಿ ನಿರತರಾಗಿದ್ದಾರೆ.
> ದೇಶದಲ್ಲಿರುವ ಶಾಲೆಗಳು: 14.67 ಲಕ್ಷ
> ಸರ್ಕಾರಿ ಶಾಲೆಗಳು: 10.7 ಲಕ್ಷ
> ಸರ್ಕಾರಿ ಶಾಲೆ ವಿದ್ಯಾರ್ಥಿಗಳು: 11 ಕೋಟಿ
> ಒಟ್ಟು ಶಿಕ್ಷಕರು: 80.7 ಲಕ್ಷ
> ಸರ್ಕಾರಿ ಶಾಲೆ ಶಿಕ್ಷಕರು: 47.3 ಲಕ್ಷ
ಶಿಫಾರಸುಗಳೇನು?
# ಶಿಕ್ಷಣ ಹಕ್ಕು ಕಾಯ್ದೆಯಲ್ಲಿ ಉಲ್ಲೇಖವಾಗಿರುವಂತೆ ಶಿಕ್ಷಣೇತರ ಚಟುವಟಿಕೆಗಳಿಗೆ ಶಿಕ್ಷಕರನ್ನು ಬಳಸಿಕೊಳ್ಳಬಾರದು.
# ಶಿಕ್ಷಣ ಹಾಗೂ ಶಿಕ್ಷಣೇತರ ಚಟುವಟಿಕೆಗಳ ವ್ಯಾಖ್ಯಾನವನ್ನು ಶಿಕ್ಷಣ ಇಲಾಖೆ ಮಾಡಬೇಕು.
# ಶಿಕ್ಷಕರನ್ನು ಆಡಳಿತದ ಕೆಲಸಕ್ಕೆ ಬಳಸಿಕೊಳ್ಳುವುದನ್ನು ನಿರ್ಬಂಧಿಸಬೇಕು.
# ಒಂದು ದೇಶ, ಒಂದು ಚುನಾವಣೆ ವ್ಯವಸ್ಥೆಯಿಂದ ಪದೇಪದೆ ಶಿಕ್ಷಕರ ಮೇಲಿನ ಚುನಾವಣೆ ಕೆಲಸದ ಒತ್ತಡ ತಪ್ಪಲಿದೆ.
ನಿಯಮ ಹೇಳುವುದೇನು?
# ಕಾಯ್ದೆ ಪ್ರಕಾರ ಕಿರಿಯ ಪ್ರಾಥಮಿಕ ಶಾಲೆಗೆ ವಾರ್ಷಿಕ 200 ಕೆಲಸದ ದಿನ
# ಹಿರಿಯ ಪ್ರಾಥಮಿಕ ಶಾಲೆಗೆ 220 ಕೆಲಸದ ದಿನ
# ಆದರೆ ಕೇವಲ 42 ದಿನಗಳು ಕಲಿಕೆಗೆ ಮೀಸಲು

**RSGE**::: ಪಿಡಿಒಗಳಿಗೆ ಮುಂಬಡ್ತಿ,

ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ(ಪಿಡಿಒ) ಗ್ರಾಮೀಣಾಭಿವೃದ್ಧಿ ಮತ್ತು ಪಂಚಾ ಯತ್​ರಾಜ್ ಇಲಾಖೆ ಸಹಾಯಕ ನಿರ್ದೇಶಕರ ಹುದ್ದೆಗೆ ಬಡ್ತಿ ನೀಡಲು ಸರ್ಕಾರ ಮುಂದಾಗಿದೆ. ಈ ಸಂಬಂಧ ಎಲ್ಲ ಜಿಲ್ಲ್ಲಾ ಪಂಚಾಯಿತಿ ಸಿಇಒಗಳಿಗೆ ಗ್ರಾಮೀಣಾಭಿವೃದ್ಧಿ ಇಲಾಖೆ ಪತ್ರ ಬರೆದಿದೆ. ಪಿಡಿಒ ವೃಂದದ ಹಳೆಯ ಮತ್ತು ಹೊಸ ಜ್ಯೇಷ್ಠತಾ ಕ್ರ.ಸಂ. 420/1223 ರಿಂದ 500/1329ರವರೆಗಿನ ಅಧಿಕಾರಿಗಳಿಗೆ ಮುಂಬಡ್ತಿ ಅವಕಾಶವಿದೆ. ಈ ಕ್ರಮ ಸಂಖ್ಯೆಯಲ್ಲಿ ತಮ್ಮ ಕಚೇರಿ ವ್ಯಾಪ್ತಿಯಲ್ಲಿ ಕಾರ್ಯ ನಿರ್ವ ಹಿಸುತ್ತಿರುವ ಅಧಿಕಾರಿಗಳ ವಿವರ ಸಹಿತ ಪ್ರಸ್ತಾವನೆ ಸಲ್ಲಿಸಬೇಕು. ಪ್ರತಿ ಅಧಿ ಕಾರಿಯ 2017-18ನೇ ಸಾಲಿನ ಮೂಲ ಕಾರ್ಯನಿರ್ವಹಣಾ ವರದಿ ಜತೆ ಸದರಿ ನೌಕರರ ವಿರುದ್ಧ ನಡೆಯುತ್ತಿರುವ, ನಡೆಸಲು ಉದ್ದೇಶಿಸಲಾಗಿರುವ ಅಥವಾ ಮುಕ್ತಾಯ ಗೊಂಡಿರುವ ಇಲಾಖಾ ವಿಚಾರಣೆ ಮಾಹಿತಿ ಹಾಗೂ ಆದೇಶದ ಪ್ರತಿ ನೀಡಬೇಕು. ಈ ನೌಕರರ ವಿರುದ್ಧ ಲೋಕಾಯುಕ್ತ ಪ್ರಕರಣ ಬಾಕಿಯಿದ್ದರೆ ವಿವರ ನೀಡಬೇಕೆಂದು ಸಿಇಒಗಳಿಗೆ ತಿಳಿಸಲಾಗಿದೆ.

Monday, August 27, 2018

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಕುಂದು ಕೊರತೆ ನಿವಾರಣಾ ಪ್ರಾಧಿಕಾರಗಳ ನೇಮಕಾತಿ ವಿಧಾನ) ನಿಯಮಗಳು, 2018:

 ಸದರಿ ನಿಯಮದ ಮೂಲ ಕಡತಕ್ಕಾಗಿ ಈ ಕೆಳಗಿನ ಕೊಂಡಿಯನ್ನು ಕ್ಲಿಕ್‌ಇಸಿ:

http://rdpr.kar.nic.in/document/not_753_07_08_18.PDF

ಯೂನಿಕೋಡ್ ಅಥವ ಅಕ್ಸೆಸಿಬಲ್ ಆವೃತ್ತಿಗಾಗಿ ಈ ಕೆಳಗಿನ ಕೊಂಡಿಗೆ ಭೇಟಿ ನೀಡಿ:

https://drive.google.com/open?id=1keSzZDrQ1I9X6Q2QJKiv2tJfbB-jD7r_
ಆರ್. ಎಸ್. ಜಿ. ಇ. ತಂಡ.

Thursday, August 23, 2018

ಅಧಿಕೃತ ಸಭೆಗಳಲ್ಲಿ ನೀಡುವ ಟೀ/ಕಾಫೀ/ಅಲ್ಪೋಪಹಾರದ ಸಲುವಾಗಿ ಮಾಡುವ ವೆಚ್ಚವನ್ನು ಸೆಳೆಯುವ ಕುರಿತು.

ಓದುಗರ ಗಮನಕ್ಕೆ:
ಸದರಿ ಮಾಹಿತಿಯನ್ನು ರಾಜ್ಯ ಸರಕಾರಿ ಅಂಧ ನೌಕರರು  ಸ್ಕ್ರೀನ್ ರೀಡರ್ಗಳೊಂದಿಗೆ ಓದಲು ಅನುವಾಗುವಂತೆ ಯೂನಿಕೋಡ್ಗೆ ಪರಿವರ್ತಿಸಿ ಒದಗಿಸಲಾಗಿದ್ದು, ಅಧೀಕೃತ ವ್ಯವಹಾರಗಳಿಗೆ ಮೂಲ ಕಡತವನ್ನು ಪರಿಗಣಿಸತಕ್ಕದ್ದು.

ಕರ್ನಾಟಕ ಸರ್ಕಾರ
ಸಂಖ್ಯೆ: ಆಇ ೦೧ ಟಿಸಿಇ ೨೦೧೮ ಕರ್ನಾಟಕ ಸರ್ಕಾರದ ಸಚಿವಾಲಯ
ವಿಧಾನ ಸೌಧ
ಬೆಂಗಳೂರು, ದಿನಾಂಕ:೨೮.೦೭.೨೦೧೮
ಸುತ್ತೋಲೆ
ವಿಷಯ:
ಅಧಿಕೃತ ಸಭೆಗಳಲ್ಲಿ ನೀಡುವ ಟೀ/ಕಾಫೀ/ಅಲ್ಪೋಪಹಾರದ ಸಲುವಾಗಿ ಮಾಡುವ ವೆಚ್ಚವನ್ನು ಸೆಳೆಯುವ ಕುರಿತು.
********

ಸಾಧಿಲ್ವಾರು ವೆಚ್ಚ ಕೈಪಿಡಿ ೧೯೫೮ರ ನಿಯಮ ೫೫ (೫೧)ರಲ್ಲಿ ಅಧಿಕೃತ ಸಭೆಗಳಲ್ಲಿ ನೀಡುವ ಟೀ/ಕಾಫೀ/ಅಲ್ಪೋಪಹಾರದ ಸಲುವಾಗಿ ವೆಚ್ಚವನ್ನು ಭರಿಸಲು ಅವಕಾಶ ಕಲ್ಪಿಸಲಾಗಿದೆ. ಈ ವೆಚ್ಚಗಳನ್ನು ಸಚಿವಾಲಯದ ಅಧಿಕಾರಿಗಳು ಲೆಕ್ಕಪತ್ರ ಶಾಖೆಯಲ್ಲಿನ ಇಂಪ್ರೆಸ್ಟ್/ಸಬ್‌ಇಂಪ್ರೆಸ್ಟ್ ಮೊತ್ತಗಳಲ್ಲಿ ಭರಿಸಬೇಕಾಗುತ್ತದೆ. ಇಲಾಖಾ ಮುಖ್ಯಸ್ಥರು ಹಾಗೂ ಇತರೆ ಅಧಿಕಾರಿಗಳು ತಮಗೆ ಈಗಾಗಲೇ ಮಂಜೂರಾಗಿರುವ ಖಾಯಂ ಮುಂಗಡದಿಂದ ಭರಿಸಬೇಕಾಗುತ್ತದೆ.

೨. ಖಾಯಂ ಮುಂಗಡದಿಂದ ಭರಿಸಿರುವ ವೆಚ್ಚಗಳನ್ನು ಮರುತುಂಬಿಸಿಕೊಳ್ಳುವ ವಿಧಾನವನ್ನು ಸಾ.ವೆ.ಕೈ. ನಿಯಮ ೨೩, ೨೪ ರಲ್ಲಿ ವಿವರಿಸಲಾಗಿದೆ. ಅದರಂತೆ, ಖಾಯಂ ಮುಂಗಡದಿಂದ ಭರಿಸಿರುವ ವೆಚ್ಚಗಳನ್ನು, ಸಾದಿಲ್ವಾರು ಬಿಲ್ಲುಗಳನ್ನು ಹಾಜರು ಪಡಿಸುವ ಮೂಲಕ ಮರು ತುಂಬಿಸಿ ಕೊಳ್ಳಬೇಕಾಗಿರುತ್ತದೆ. ರೂ.೧೦೦೦/-ಕ್ಕೆ ಒಳಪಟ್ಟ ಉಪ ವೋಚರ್‌ಗಳನ್ನು ಡಿಡಿಓ ರವರ ಕಚೇರಿಯಲ್ಲಿ ನಿರ್ವಹಿಸಬೇಕಾಗಿರುತ್ತದೆ. ಕರ್ನಾಟಕ ಆರ್ಥಿಕ ಸಂಹಿತೆ ಅನುಚ್ಛೇದ ೫೮(ಎ)(ಬಿ) ಮತ್ತು ಸಾದಿಲ್ವಾರು ವೆಚ್ಚ ಕೈಪಿಡಿ ನಿಯಮ ೪೧ರ ಪ್ರಕಾರ ರೂ.೧೦೦೦/-ಕ್ಕೆ ಮೀರಿದ ಉಪ ವೋಚರ್ ಗಳನ್ನು ಸೂಕ್ತವಾಗಿ ರದ್ದುಪಡಿಸಿ ಸಾದಿಲ್ವಾರು ಬಿಲ್ಲಿನೊಂದಿಗೆ ಲಗತ್ತಿಸಿ ಖಜಾನೆಗೆ ಸಲ್ಲಿಸಬೇಕಾಗಿರುತ್ತದೆ.

೩. ಸರ್ಕಾರದ ಆದೇಶ ಸಂಖ್ಯೆ ಆಇ ೨ ಟಿಸಿಇ ೨೦೧೨, ಬೆಂಗಳೂರು ದಿನಾಂಕ: ೧೫.೧೨.೨೦೧೨ ರಲ್ಲಿ ಸಾದಿಲ್ವಾರು ವೆಚ್ಚ ಕೈಪಿಡಿ ೧೯೫೮ರ ನಿಯಮ ೫೫(೫೧)ರ ಪ್ರಕಾರ ವಿವಿಧ ಅಧಿಕಾರಿಗಳಿಗೆ ಹಾಗೂ ರಾಜ್ಯ ಮಟ್ಟದ ಮತ್ತು ಜಿಲ್ಲಾ ಮಟ್ಟದ ಸಮಿತಿಗಳು ಅಧಿಕೃತ ಸಭೆಗಳಲ್ಲಿ ನೀಡುವ ಟೀ/ಕಾಫೀ/ಅಲ್ಪೋಪಹಾರದ ಸಲುವಾಗಿ ಮಾಡುವ ವೆಚ್ಚದ ಆರ್ಥಿಕ ಮಿತಿಯನ್ನು ಪರಿಷ್ಕರಿಸಿ ಆದೇಶಿಸಿದೆ. ಈ ಆರ್ಥಿಕ ಮಿತಿಯನ್ನು ಒಂದು ವμದ ಅವಧಿಗೆ ಮಾತ್ರ ನಿಗದಿಗೊಳಿಸಲಾಗಿದೆ.
 ೪. ಆದರೆ, ಕೆಲವೊಂದು ಅಧಿಕಾರಿಗಳು ಮೇಲ್ಕಂಡ ಆದೇಶದಲ್ಲಿ ನಿಗದಿ ಪಡಿಸಿರುವ ವಾರ್ಷಿಕ ವೆಚ್ಚದ ಮೊತ್ತವನ್ನು ಒಮ್ಮೆಗೆ ಒಟ್ಟಿಗೆ (ಟumಠಿsum) ಸ್ವೀಕರ್ತನ ರಸೀದಿ ಅಥವಾ ಸಾದಿಲ್ವಾರು ಬಿಲ್ಲಿನ ಮೂಲಕ ಸೆಳೆಯುವಾಗ ವೆಚ್ಚದ ಉಪ ವೋಚರ್‌ಗಳನ್ನು ಲಗತ್ತಿಸದೆ ಮುಂಗಡ ರಸೀದಿ (Pಡಿe-ಖeಛಿeiಠಿಣ) ಲಗತ್ತಿಸಿ ಸೆಳೆಯಲಾಗುತ್ತಿರುವುದನ್ನು ಖಜಾನೆ ಅಧಿಕಾರಿಗಳು ಸರ್ಕಾರದ ಗಮನಕ್ಕೆ ತಂದಿರುತ್ತಾರೆ. ಇದು ತಪ್ಪು ಪ್ರಕ್ರಿಯೆಯಾಗಿದ್ದು, ಕರ್ನಾಟಕ ಆರ್ಥಿಕ ಸಂಹಿತೆ ಮತ್ತು ಸಾದಿಲ್ವಾರು ವೆಚ್ಚ ಕೈಪಿಡಿ ನಿಯಮಗಳಿಗೆ ವಿರುದ್ಧವಾಗಿರುತ್ತದೆ. ಆದ್ದರಿಂದ ಪ್ರತಿ ಬಾರಿ ವೆಚ್ಚವನ್ನು ಭರಿಸಿದ ನಂತರ ಭರಿಸಿದ ವೆಚ್ಚವನ್ನು ಮಾತ್ರ ಉಪ ವೋಚರ್‌ಗಳೊಂದಿಗೆ ಸಾದಿಲ್ವಾರು ಬಿಲ್ಲಿನ (ಆ.ಅ) ಮೂಲಕ ಸೆಳೆಯಬೇಕಾಗಿರುತ್ತದೆ.
 ೫. ಒಂದು ವೇಳೆ ಅಧಿಕಾರಿಗಳು ವರ್ಗಾವಣೆ ನಿವೃತ್ತಿ ಮುಂತಾದ ಕಾರಣಗಳಿಂದ ಹುದ್ದೆಯನ್ನು ತೆರವುಗೊಳಿಸಿದ್ದಲ್ಲಿ ಹೊಸದಾಗಿ ಸದರಿ ಹುದ್ದೆಗೆ ನಿಯೋಜನೆಗೊಂಡ ಅಧಿಕಾರಿಗಳು ಪುನಃ ಸದರಿ ಮೊತ್ತವನ್ನು ಸೆಳೆಯುತ್ತಿರುವುದು ಸಹ ಗಮನಕ್ಕೆ ಬಂದಿರುತ್ತದೆ. ಇದು ಸಹ ನಿಯಮಗಳಿಗೆ ವಿರುದ್ಧವಾಗಿದ್ದು ನಿಗದಿಪಡಿಸಿರುವ ವಾರ್ಷಿಕ ಮಿತಿಯು ವೈಯಕ್ತಿಕವಾಗಿ ಪ್ರತಿಯೊಬ್ಬ ಅಧಿಕಾರಿಗಳ ಬದಲಿಗೆ ಆ ಹುದ್ದೆಯ ಕಚೇರಿಗೆ ಅನ್ವಯವಾಗುತ್ತದೆ. ಸದರಿ ಕಚೇರಿಯಲ್ಲಿ ಯಾವುದೇ ಕಾರಣಕ್ಕೂ ವಾರ್ಷಿಕ ಮಿತಿಯನ್ನು ಮೀರುವಂತಿಲ್ಲ.
೬. ಆದುದರಿಂದ ಅಧಿಕೃತ ಸಭೆಗಳಲ್ಲಿ ನೀಡುವ ಟೀ/ಕಾಫೀ/ಅಲ್ಪೋಪಹಾರಗಳ ವೆಚ್ಚಗಳನ್ನು ಒಮ್ಮೆಗೆ ಸೆಳೆಯದೆ ವೆಚ್ಚ ಭರಿಸಿದ ನಂತರ ಭರಿಸಿದ ವೆಚ್ಚವನ್ನು ಸಾದಿಲ್ವಾರು ಬಿಲ್ಲುಗಳ ಮೂಲಕ ಮಾತ್ರ ಸೆಳೆಯಲು ಸೂಚಿಸಲಾಗಿದೆ.
೭. ಈ ಕುರಿತು ಖಜಾನೆಗಳಲ್ಲಿ ಪರಿಶೀಲಿಸಲು ಅನುಕೂಲವಾಗುವಂತೆ ಸಂಬಂಧಿಸಿದ ಹಣ ಸೆಳೆಯುವ ಮತ್ತು ಬಟವಾಡೆ ಮಾಡುವ ಅಧಿಕಾರಿಯು ಈ ಸಂಬಂಧದ ಸಾದಿಲ್ವಾರು ಬಿಲ್ಲುಗಳಲ್ಲಿ ಈ ಕೆಳಕಂಡಂತೆ ಪ್ರಮಾಣ ಪತ್ರವನ್ನು ದಾಖಲಿಸಿ ದೃಢೀಕರಿಸಲು ಸಹ ಸೂಚಿಸಿದೆ.

ಅಧಿಕೃತ ಸಭೆಗಳಲ್ಲಿ ನೀಡುವ ಟೀ/ಕಾಫೀ/ಅಲ್ಪೋಪಹಾರಗಳ ಸಲುವಾಗಿ ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಮಾಡಿರುವ ಒಟ್ಟು ವೆಚ್ಚವು ಈ ಬಿಲ್ಲಿನಲ್ಲಿ ಸೆಳೆದಿರುವ ಮೊತ್ತವು ಸೇರಿದಂತೆ ___________ ರೂ. ಆಗಿದ್ದು, ಮಂಜೂರು ಮಾಡಿರುವ ವಾರ್ಷಿಕ ಆರ್ಥಿಕ ಮಿತಿಯೊಳಗೆ ಇರುತ್ತದೆ ಎಂದು ಪ್ರಮಾಣೀಕರಿಸಿದೆ.

(ಪವನ್‌ಕುಮಾರ್ ಮಾಲಪಾಟಿ)
ಸರ್ಕಾರದ ಉಪ ಕಾರ್ಯದರ್ಶಿ (ಆ ಮತ್ತು ಸಂ)
ಆರ್ಥಿಕ ಇಲಾಖೆ.
ಇವರಿಗೆ:-
೧. ನಿರ್ದೇಶಕರು, ಕರ್ನಾಟಕ ರಾಜ್ಯ ಪತ್ರ ಬೆಂಗಳೂರು ಇವರಿಗೆ ಮುಂದಿನ ಸಂಚಿಕೆಯಲ್ಲಿ ಪ್ರಕಟಿಸಲು ಕೋರಲಾಗಿದೆ.
೨. ಪ್ರಧಾನ ಮಹಾಲೇಖಪಾಲರು, ಲೆಕ್ಕಪತ್ರಗಳು ಮತ್ತು ಹಕ್ಕುಗಳು, ಕರ್ನಾಟಕ, ರೆಸಿಡೆನ್ಸಿ ರಸ್ತೆ, ಅಂಚೆ ಪೆಟ್ಟಿಗೆ ೫೩೨೬/೫೩೬೯. ಬೆಂಗಳೂರು.
೩. ಪ್ರಧಾನ ಮಹಾಲೇಖಪಾಲರು, (ಲೆಕ್ಕ ತನಿಖೆ-೧), ರೆಸಿಡೆನ್ಸಿ ರಸ್ತೆ, ಅಂಚೆ ಪೆಟ್ಟಿಗೆ ೫೩೨೯/೫೩೬೯, ಕರ್ನಾಟಕ ಬೆಂಗಳೂರು.
೪. ಪ್ರಧಾನ ಮಹಾಲೇಖಪಾಲರು, (ಲೆಕ್ಕ ತನಿಖೆ-೨), ರೆಸಿಡೆನ್ಸಿ ರಸ್ತೆ, ಅಂಚೆ ಪೆಟ್ಟಿಗೆ ೫೩೨೯/೫೩೬೯, ಕರ್ನಾಟಕ ಬೆಂಗಳೂರು.
೫. ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು /ಪ್ರಧಾನ ಕಾರ್ಯದರ್ಶಿಗಳು/ಕಾರ್ಯದರ್ಶಿಗಳು.
೬. ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, (ಖಜಾನೆ-೨) ಮತ್ತು ಪದನಿಮಿತ್ತ ಖಜಾನೆ ಆಯುಕ್ತರು, ಆರ್ಥಿಕ ಇಲಾಖೆ ವಾಣಿಜ್ಯ ತೆರಿಗೆ ಕಟ್ಟಡ, ಗಾಂಧಿ ನಗರ ಬೆಂಗಳೂರು-೯.
೭. ಎಲ್ಲಾ ಇಲಾಖಾ ಮುಖ್ಯಸ್ಥರುಗಳು.
೮. ನಿರ್ದೇಶಕರು, ಖಜಾನೆ ಇಲಾಖೆ, ಬೆಂಗಳೂರು.
೯. ಎಲ್ಲಾ ಜಿಲ್ಲಾಧಿಕಾರಿಗಳು.
೧೦. ಎಲ್ಲಾ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ.
೧೧. ಆರ್ಥಿಕ ಇಲಾಖೆಯ ಸರ್ಕಾರದ ಜಂಟಿ ಕಾರ್ಯದರ್ಶಿಗಳು/ಉಪ ಕಾರ್ಯದರ್ಶಿಗಳು/ಅಧೀನ ಕಾರ್ಯದರ್ಶಿಗಳು/ ಶಾಖಾಧಿಕಾರಿಗಳು.
೧೨. ಎಲ್ಲಾ ಜಿಲ್ಲಾ ಖಜಾನೆಗಳಾಧಿಕಾರಿಗಳು.
೧೩. ಶಾಖಾ ರಕ್ಷಾ ಕಡತ/ಹೆಚ್ಚುವರಿ ಪತ್ರಿಗಳು.
























ಹೆಚ್ಚು ಓದಿದವು