Monday, June 24, 2019

ಗ್ರಾಮ ಪಂಚಾಯಿತಿಗಳಲ್ಲಿ ಶೇಕಡಾ ಐದರಷ್ಟು ಹಣವನ್ನು ಅಂಗವಿಕಲರಿಗೆ ನೀಡುವ ಬಗ್ಗೆ

Page number 1
ಕರ್ನಾಟಕ ಸರ್ಕಾರ
ಸಂಖ್ಯೆ : ಗ್ರಾಅಪ 75 ಗ್ರಾಪಸ 2015
ಕರ್ನಾಟಕ ಸರ್ಕಾರದ ಸಚಿವಾಲಯ ,
ಬಹುಮಹಡಿ ಕಟ್ಟಡ , ಬೆಂಗಳೂರು , ದಿನಾಂಕ : 17 - 06 - 2019 ,
ಸುತ್ತೋಲೆ
ವಿಷಯ : ವಿಕಲಚೇತನರಿಗೆ ಕೇಂದ್ರ ಹಾಗೂ ರಾಜ್ಯ ಹಣಕಾಸು ಆಯೋಗ ಅನುದಾನವನ್ನು
ಒಳಗೊಂಡಂತೆ ಜಿಲ್ಲಾ , ತಾಲ್ಲೂಕು ಹಾಗೂ ಗ್ರಾಮ ಪಂಚಾಯತಿಗಳಿಗೆ ಬಿಡುಗಡೆಯಾಗುವ ವಿವಿಧ ಯೋಜನೆಗಳಲ್ಲಿ ಶೇ . 5ರಷ್ಟು ಅನುದಾನವನ್ನು
ಮೀಸಲಿರಿಸುವ ಕುರಿತು , ಉಲ್ಲೇಖ : 1 . ಸರ್ಕಾರದ ಆದೇಶ ಸಂಖ್ಯೆ : ಗ್ರಾಅಪ 75 ಜಿಪಸ 2013 , ದಿನಾಂಕ :
17 - 07 - 2013 , 2 . ಸರ್ಕಾರದ ಆದೇಶ ಸಂಖ್ಯೆ : ಗ್ರಾಅಪ 76 ಜಿಪಸ 2013 , ದಿನಾಂಕ : - 17 - 07 - 2013 , 3 , ಸರ್ಕಾರದ ಆದೇಶ ಸಂಖ್ಯೆ : ಗ್ರಾಅಪ 21 ಗ್ರಾಪಸ 2013 , ದಿನಾಂಕ :
27 - 06 - 2013 , 4 , ಸರ್ಕಾರದ ಸೇರ್ಪಡೆ ಆದೇಶ ಸಂಖ್ಯೆ : ಗ್ರಾಅಪ 21 ಗ್ರಾಪಸ 2013 , ದಿನಾಂಕ : - 24 - 02 - 2014 , 5 , ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ
ನಾಗರೀಕರ ಸಬಲೀಕರಣ ಇಲಾಖೆಯವರ ಅ . ಸ . ಪತ್ರ ಸಂಖ್ಯೆ : ಮಮಇ 188 ಪಿಹೆಚ್‌ಪಿ 2018 ( ಭಾಗ - 4 ) , ದಿನಾಂಕ : 07 - 01 - 2019 ,
ವಿಕಲಚೇತನರ ಅಭಿವೃದ್ದಿಗಾಗಿ ಹಾಗೂ ಅವರ ಕಲ್ಯಾಣ ಕಾರ್ಯಕ್ರಮಗಳಿಗಾಗಿ ಜಿಲ್ಲಾ , ತಾಲ್ಲೂಕು ಹಾಗೂ ಗ್ರಾಮ ಪಂಚಾಯತಿಗಳು ಅನುಷ್ಠಾನಗೊಳಿಸುವ ವಿವಿಧ ಅಭಿವೃದ್ಧಿ ಯೋಜನೆಗಳಲ್ಲಿ ಶೇ . 3ರಷ್ಟರ ಮೊತ್ತವನ್ನು ಕಾಯ್ದಿರಿಸಲು ಹಾಗೂ ಅದನ್ನು ವಿನಿಯೋಗಿಸಿಕೊಳ್ಳಲು ಕ್ರಿಯಾಯೋಜನೆಯನ್ನು ಸಿದ್ಧಪಡಿಸಿಕೊಳ್ಳುವಂತೆ ಈಗಾಗಲೇ ಉಲ್ಲೇಖ ( 1 ) , ( 2 ) , ( 3 ) ರ ಆದೇಶಗಳಲ್ಲಿ ಹಾಗೂ ( 4 ) ರ ಸೇರ್ಪಡೆ ಆದೇಶದಲ್ಲಿ ಸೂಚಿಸಲಾಗಿತ್ತು .
* ಆದರೆ , 2018 - 19ನೇ ಸಾಲಿನಲ್ಲಿ ಮಾನ್ಯ ಮುಖ್ಯಮಂತ್ರಿಯವರು ವಿಕಲಚೇತನರ ಅಭಿವೃದ್ಧಿ ಹಾಗೂ ಕಲ್ಯಾಣ ಕಾರ್ಯಕ್ರಮಗಳಿಗಾಗಿ ವಿವಿಧ ಯೋಜನೆಗಳನ್ನು ಘೋಷಿಸಿರುತ್ತಾರೆ . ಇದರನ್ವಯ ಗ್ರಾಮೀಣಾಭಿವೃದ್ಧಿ . ಮತ್ತು ಪಂ . ರಾಜ್ ಇಲಾಖೆಯು ಅನುಷ್ಠಾನಗೊಳಿಸುತ್ತಿರುವ ವಿವಿಧ ಯೋಜನೆಗಳಲ್ಲಿ ಕೇಂದ್ರ ಹಾಗೂ ರಾಜ್ಯ ಹಣಕಾಸು ಆಯೋಗ ಅನುದಾನವನ್ನು ಒಳಗೊಂಡಂತೆ ಜಿಲ್ಲಾ , ತಾಲ್ಲೂಕು ಹಾಗೂ ಗ್ರಾಮ ಪಂಚಾಯತಿಗಳಿಗೆ ಬಿಡುಗಡೆಯಾಗುವ ಅನುದಾನದಲ್ಲಿ ವಿಕಲಚೇತನರ ಅಭಿವೃದ್ಧಿ ಯೋಜನೆಯನ್ನು ತಯಾರಿಸುವಾಗ ಶೇ . 5ರಷ್ಟನ್ನು ಕಡ್ಡಾಯವಾಗಿ , ಕಾಯ್ದಿರಿಸಿ , ಕಾರ್ಯಕ್ರಮವನ್ನು ರೂಪಿಸಬೇಕಾಗಿರುತ್ತದೆ ಹಾಗೂ ಈ ಅನುದಾನವನ್ನು ಆರ್ಹ ವಿಕಲಚೇತನರ ಅಭಿವೃದ್ಧಿ ಮತ್ತು

No comments:

Post a Comment

ಅನಿಸಿಕೆ ತಿಳಿಸಿ

ಹೆಚ್ಚು ಓದಿದವು