ಕರ್ನಾಟಕ ಸರ್ಕಾರ ಸಂಖ್ಯೆ : ಸಿಆಸುಇ 4 ಸೇಣವಿ 99 - ಕರ್ನಾಟಕ ಸರ್ಕಾರದ ಸಚಿವಾಲಯ ,
ಎಧಾನಸೌಧ , ಬೆಂಗಳೂರು , ದಿನಾಂಕ : 31 - 1 - 1989
ಅಧಿಕೃತ ಜ್ಞಾಪನ ವಿಷಯ : ಅನಧಿಕೃತವಾಗಿ ಗೈರು ಹಾಜರಾಗಿರುವ ಸರ್ಕಾರಿ ನೌಕರರನ್ನು ಕೆಲಸಕ್ಕೆ ವಾಪಸು
ತೆಗೆದುಕೊಳ್ಳುವ ಬಗ್ಗೆ - ಸ್ಪಷ್ಟನೆಗಳು ಉಲ್ಲೇಖ : ಸುತ್ತೋಲೆ ಸಂಖ್ಯೆ ಡಿಪಿಎಆರ್ 30 ಎಸ್ ಎಸ್ ಆರ್ 79 ದಿನಾಂಕ 17 - 4 - 79 1 . ಅನಧಿಕೃತವಾಗಿ ಗೈರು ಹಾಜರಾಗಿರುವ ಸರ್ಕಾರಿ ನೌಕರರ ಮೇಲೆ ಇಲಾಖಾ
ವಿಚಾರಣೆಯನ್ನು ನಡೆಸಿ ಅಂತಹವರನ್ನು ಕೆಲಸದಿಂದ ತೆಗೆದುಹಾಕುವ ಅಥವಾ ವಜಾ ಮಾಡುವ ಬಗ್ಗೆ ಕ್ರಮ ತೆಗೆದುಕೊಳ್ಳುವ ವಿಷಯದಲ್ಲಿ ಅನುಸರಿಸಬೇಕಾದ ಕ್ರಮವನ್ನು ಉಲ್ಲೇಖಿತ ಸುತ್ತೋಲೆಯಲ್ಲಿ ನಮೂದಿಸಲಾಗಿದೆ . ಅನಧಿಕೃತವಾಗಿ ಗೈರು ಹಾಜರಾಗಿರುವ ಸರ್ಕಾರಿ ನೌಕರನ ವಿರುದ್ಧ ಇಲಾಖಾ ವಿಚಾರಣೆಯನ್ನು ಹೂಡುವ ಮೊದಲೇ ಅಥವಾ ಹೂಡಿದ ನಂತರ ಇಲಾಖಾ ವಿಚಾರಣೆ ಮುಗಿಯುವುದರೊಳಗೆ ಆಂತಹ ನೌಕರನು ಕೆಲಸಕ್ಕೆ ಹಾಜರಾಗಲು ಮುಂದೆ ಬಂದರೆ ಅಂತಹವರ ಪ್ರಕರಣದಲ್ಲಿ ತೆಗೆದುಕೊಳ್ಳಬೇಕಾದ ಕ್ರಮದ ಬಗ್ಗೆ ಕೆಳಕಂಡ ಸೂಚನೆಗಳನ್ನು ನೀಡಲಾಗಿದೆ . ಉಲ್ಲೇಖಿತ ಸುತ್ತೋಲೆಯಲ್ಲಿ ಈಗಾಗಲೇ ನಮೂದಿಸಿರುವಂತೆ ಅನಧಿಕೃತ ಗೈರು ಹಾಜರಾಗಿರುವ ಸರ್ಕಾರಿ ನೌಕರನು ಎನು ಅನಧಿಕೃತ ಗೈರು ಹಾಜರಾದ ಕಾರಣ ಮೊದಲು ಹೋಂದಿದ ಹುದ್ದೆಯನ್ನು ಕಳೆದುಕೊಳ್ಳುವುದಿಲ್ಲ . ಆದುದರಿಂದ ಅನಧಿ ಕೃತ ಗೈರು ಹಾಜರಿಯ ಸಮಯದಲ್ಲಿ ಅಂತಹವನ ವಿರುದ್ಧ ಇಲಾಖಾ ವಿಚಾರಣೆಯನ್ನು ನಡೆಸಿ ಕೆಲಸದಿಂದ ತೆಗೆದುಹಾಕದ ಇದ್ದ ಪಕ್ಷದಲ್ಲಿ ಅಂತಹ ಗರು ಹಾಜರಿ ಅವಧಿಯು ಎಷ್ಟೇ ಆಗಿರಲಿ ಅವನು ವಾಪಸು ಬಂದರೆ ಅಂತಹವನನು ಕೆಲಸಕ್ಕೆ ತೆಗೆದುಕೊಳ್ಳಬೇಕಾಗುತ್ತದೆ . ಹೀಗೆ ಕೆಲಸಕ್ಕೆ ತೆಗೆದುಕೊಂಡ ನಂತರ ಅವಶ್ಯವೆನಿಸಿದಲ್ಲಿ ಅಧಿಕೃತ ಜ್ಞಾಪನ ಸಂಖ್ಯೆ ಡಿಪಿಎಆರ್ 13 ಎಸ್ ಡಿಇ 85 ದಿನಾಂಕ 3 - 7 - 85ರಲ್ಲಿರುವ ಸೂಚನಗಳ ಪ್ರಕಾರ ಅಂತಹ ನೌಕರರನ್ನು ಅಮಾನತಿನಲ್ಲಿಟ್ಟು ಇಲಾಖಾ ವಿಚಾರಣೆಯನ್ನು ನಡೆಸಬಹುದು ಅಥವಾ ಅಮಾನತಿನಲ್ಲಿಡದೇ ಇಲಾಖಾ ವಿಚಾರಣೆಯನ್ನು ನಡೆಸಿ ಸೂಕ್ತ ದಂಡನೆಯನ್ನು ವಿಧಿಸಬಹುದು . ಸರ್ಕಾರದ ಕಾರ್ಯದರ್ಶಿಗಳು ಮತ್ತು ಇಲಾಖಾ ಮುಖ್ಯಸ್ಥರುಗಳು ಈ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಮತ್ತು ಈ ಸೂಚನೆಗಳನ್ನು ತಮ್ಮ ಅಧಿ ನದಲ್ಲಿ ಕೆಲಸ ಮಾಡುವ ಎಲ್ಲಾ ನೇಮಕಾತಿ ಪ್ರಾಧಿಕಾರಿಗಳ ಗಮನಕ್ಕೆ ತರಲು ಸೂಚಿಸಿದೆ .
ಸಹಿ /
ಜಿ . ಎನ್ . ನಾಯಕ್ ಸರ್ಕಾರದ ಆದೀನ ಸ್ಮರ್ಯತ್ರ : ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ
( ಸೇವಾ ನಿಯಮಗಳು )
( ದಕ್ಷ
ವಿಭಾಗ
ಸರ್ ಇತ್ತೀಚಿನ ಸಿಸಿಎ ಹಾಕಿ (ಕನ್ನಡ )
ReplyDeleteಸರ್ ಈ ರೀತಿಯ ಅನಧಿಕೃತ ಗೈರು ಆಗಿ ಮತ್ತೆ ಕರ್ತವ್ಯ ಕ್ಕೆ ಮರಳಿದಾಗ ಶಿಸ್ತು ಪ್ರಾಧಿಕಾರ ಅನುಸರಿಸುವ ಕ್ರಮಗಳನ್ನು ತಿಳಿಸಿ.
ReplyDeleteಸರ್ ಅನಧಿಕೃತ ಗೈರು ಹಾಜರಾಗಿ ಮತ್ತೆ ಕರ್ತವ್ಯಕ್ಕೆ ಮರಳಿದಾಗ ಶಿಸ್ತು ಪ್ರಾಧಿಕಾರ ಅನುಸರಿಸುವ ಕ್ರಮಗಳನ್ನು ತಿಳಿಸಿ
ReplyDelete