ಕರ್ನಾಟಕ ರಾಜ್ಯ ಅಂಧ ನೌಕರರ ಸಹಕಾರ ಸಂಘ :
"ಒಬ್ಬರು ಎಲ್ಲರಿಗಾಗಿ, ಎಲ್ಲರೂ ಒಬ್ಬರಿಗಾಗಿ, ಈ ತತ್ವ ನೆನಪಿರಲಿ, ನಮ್ಮೊಳಗೆ ಚಿರವಾಗಿ. ಸಮುದಾಯದ ಆರ್ಥಿಕ ಸುಭದ್ರತೆ, ಸಹಕಾರ ಸಂಘದ ಮೊದಲ ಆದ್ಯತೆ."
ಭಾರತದಲ್ಲಿ ಪ್ರಪ್ರಥಮ ಬಾರಿಗೆ ಅಂಧರಿಂದ ಅಂಧರಿಗಾಗಿ ಸ್ಥಾಪನೆಗೊಳ್ಳುತ್ತಿರುವ ಅಂಧ ನೌಕರರ ಸಹಕಾರ ಸಂಘಕ್ಕೆ ಎಲ್ಲರಿಗೂ ಸ್ವಾಗತ.
ರಾಜ್ಯದ ದೃಷ್ಟಿ ವಿಷೇಶ ಚೇತನರ ಬಹುದಿನದ ಕನಸು ಈಗ ನನಸಾಗುತ್ತಿದೆ. ಇದನ್ನು ನಮ್ಮೆಲ್ಲರ ಆರ್ಥಿಕ ಬದುಕಿನ ಹೊಸ ಅದ್ಯಾಯದ ಆರಂಭವೆಂದೇ ಹೇಳಬಹುದು. ಒಂದು ಶತಮಾನದ ಹಿಂದೆ ಏಷಿಯಾದಲ್ಲಿ ಮೊಟ್ಟಮೊದಲಬಾರಿಗೆ ಸಹಕಾರ ಚಳುವಳಿಗೆ ನಾಂದಿ ಹಾಡಿದ ಕೀರ್ತಿ ಕರ್ನಾಟಕಕ್ಕೆ ಸಲ್ಲುತ್ತದೆ. ಈಗಾಗಲೆ ದೇಶದಲ್ಲಿ ಮೊದಲ ಅಂಧ ನೌಕರರ ಸಂಘವನ್ನು ಸ್ಥಾಪಿಸಿದ ಹೆಮ್ಮೆ ನಮಗಿದೆ. ಹೀಗೆ ಮೊದಲ ಅಂಧ ನೌಕರರ ಸಹಕಾರ ಸಂಗ ಸ್ಥಾಪನೆಯ ಮೂಲಕ ಮತ್ತೊಂದು ಹಿರಿಮೆಗೆ ಪಾತ್ರರಾಗೋಣ. ಇದಕ್ಕೆ ತಮ್ಮೆಲ್ಲರ ಸಹಕಾರ ಅತ್ಯಗತ್ಯ. ಈ ಸಹಕಾರ ಸಂಘದ ಕುರಿತಾಗಿ ಇರುವ ಗೊಂದಲಗಳನ್ನು ಪ್ರಶ್ನೋತ್ತರಗಳ ಮೂಲಕ ಪರಿಹರಿಸಿಕೊಳ್ಳೋಣ.
ಸಹಕಾರ ಸಂಘಕ್ಕೆ ಸಂಬಂಧಿಸಿದ ಸಾಮಾನ್ಯ ಪ್ರಶ್ನೋತ್ತರಗಳು:
1. ಯಾರೆಲ್ಲ ಸಹಕಾರ ಸಂಘದ ಸದಸ್ಯತ್ವವನ್ನು ಪಡೆದುಕೊಳ್ಳಬಹುದು?
ಉ. ಕೆ.ಜಿ.ಐ.ಡಿ. ಸಂಖ್ಯೆಯನ್ನು ಹೊಂದಿರುವ ರಾಜ್ಯ ಸರ್ಕಾರಿ ಅಂಧ ನೌಕರರು, ಕರ್ನಾಟಕ ರಾಜ್ಯ ಸರ್ಕಾರದಡಿ ಕಾರ್ಯ ನಿರ್ವಹಿಸುತ್ತಿರುವ ನಿಗಮ ಮಂಡಳಿಗಳ ಹಾಗೂ ಅನುದಾನಿತ ಸಂಸ್ಥೆಗಳ ಖಾಯಂ ಅಂಧ ನೌಕರರು, ಕರ್ನಾಟಕದಲ್ಲಿ ವಾಸವಾಗಿದ್ದು ಮತ್ತು ಕರ್ನಾಟಕದಲ್ಲಿಯೇ ಕಾರ್ಯ ನಿರ್ವಹಿಸುತ್ತಿರುವ ಕೇಂದ್ರ ಸರ್ಕಾರ, ರಾಷ್ಟ್ರೀಕೃತ ಬ್ಯಾಂಕ್ಗಳ ಹಾಗೂ ಕೇಂದ್ರ ಸರ್ಕಾರದಡಿ ಕಾರ್ಯ ನಿರ್ವಹಿಸುತ್ತಿರುವ ನಿಗಮ ಮಂಡಳಿಗಳ, ಅನುದಾನಿತ ಸಂಸ್ಥೆಗಳ ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳ ಖಾಯಂ ಅಂಧ ನೌಕರರು.
2. ಸದಸ್ಯತ್ವ ಶುಲ್ಕವೆಷ್ಟು?
ಉ. ರೂ. 200 ಒಂದುಬಾರಿ ಮಾತ್ರ.
3. ಒಂದು ಷೇರಿನ ಮೊತ್ತವೆಷ್ಟು?
ಉ. ಒಂದು ಷೇರಿನ ಮೊತ್ತ 1000 ಮತ್ತು ಪ್ರತಿ ಷೇರಿಗು ಶೇ. 10 ರಷ್ಟು ಮೊತ್ತವನ್ನು ಶುಲ್ಕವಾಗಿ ಷೇರು ಮೊತ್ತದೊಂದಿಗೆ ನೀಡತಕ್ಕದ್ದು.
4. ಒಬ್ಬ ಸದಸ್ಯ ಎಷ್ಟು ಷೇರುಗಳನ್ನು ಪಡೆಯಬಹುದು?
ಉ. ಒಬ್ಬ ಸದಸ್ಯ ಕನಿಷ್ಟ 2 ಷೇರುಗಳನ್ನು ಪಡೆಯಬೇಕು ಮತ್ತು ಗರಿಷ್ಟಕ್ಕೆ ಯಾವುದೇ ಮಿತಿ ಇರುವುದಿಲ್ಲ.
5. ಷೇರುಗಳನ್ನು ಖರಿದಿಸುವುದರಿಂದ ಸದಸ್ಯರಿಗೆ ಆಗುವ ಲಾಭವೇನು?
ಉ. ಷೇರುದಾರರಿಗೆ ವಾರ್ಷಿಕವಾಗಿ ಪ್ರತಿ ಷೇರಿನ ಮೇಲೆ ನಿರ್ದೇಶಕ ಮಂಡಳಿಯು ನಿಗದಿಪಡಿಸಿದ ಡಿವಿಡೆಂಟನ್ನು (ಲಾಭಾಂಶ) ನೀಡಲಾಗುವುದು.
6. ಸಹಕಾರ ವರ್ಷ ಎಂದರೆ ಯಾವುದು?
ಉ. ಸಹಕಾರ ವರ್ಷವು ಅಕ್ಟೋಬರ್ 1 ರಂದು ಆರಂಭಗೊಂಡು ಸೆಪ್ಟಂಬರ್ 30 ರಂದು ಕೊನೆಗೊಳ್ಳುತ್ತದೆ.
7. ಒಬ್ಬ ವ್ಯಕ್ತಿ ಎಷ್ಟು ಸಹಕಾರ ಸಂಘಗಳಲ್ಲಿ ಸದಸ್ಯತ್ವವನ್ನು ಹೊಂದಬಹುದು?
ಉ. ಒಬ್ಬ ವ್ಯಕ್ತಿಯು ಒಂದಕ್ಕಿಂತ ಹೆಚ್ಚಿನ ಸಂಘಗಳಲ್ಲಿ ಸದಸ್ಯತ್ವವನ್ನು ಹೊಂದಬಹುದು, ಆದರೆ ಸಾಲ ಪಡೆಯುವ ಸಂದರ್ಭದಲ್ಲಿ ಸದಸ್ಯತ್ವವಿರುವ ಬೇರೆ ಸಂಘಗಳಿಂದ ಪಡೆದ ನಿರಾಕ್ಷೇಪಣಾ ಪತ್ರವನ್ನು ಸಲ್ಲಿಸಬೇಕು.
8. ಎಷ್ಟು ವಿಧಗಳ ಸಾಲಗಳನ್ನು ನೀಡಲಾಗುತ್ತದೆ?
ಉ. ದೀರ್ಘಾವಧಿ, ಅಲ್ಪಾವಧಿ ಮತ್ತು ನಿರ್ದೇಶಕ ಮಂಡಳಿಯು ರೂಪಿಸುವ ಇತರೆ ಸಾಲಗಳು.
9. ಸಹಕಾರ ಸಂಘಕ್ಕೆ ಎಷ್ಟು ಜನ ಸದಸ್ಯರಾಗಬಹುದು?
ಉ. ಕನಿಷ್ಟ ಒಂದು ಸಾವಿರ ಮತ್ತು ಗರಿಷ್ಟಕ್ಕೆ ಯಾವುದೇ ಮಿತಿ ಇರುವುದಿಲ್ಲ.
10. ಸ ದಸ್ಯತ್ವ ಪಡೆಯಲು ಯಾವೆಲ್ಲ ಧಾಕಲೆಗಳನ್ನು ನೀಡಬೇಕು?
ಉ. ಭರ್ತಿ ಮಾಡಿದ ಅರ್ಜಿಯೊಂದಿಗೆ ಈ ಕೆಳಕಂಡ ಧಾಕಲೆಗಳ ಪ್ರತಿಗಳನ್ನು ಸಲ್ಲಿಸತಕ್ಕದ್ದು:
(A) ನೂತನ ಸಂಬಳದ ಚೀಟಿ ಮತ್ತು ಖಚೇರಿಯ ಗುರುತಿನ ಕಾರ್ಡ್ ಇದ್ದಲ್ಲಿ ಸಲ್ಲಿಸತಕ್ಕದ್ದು.
(B) ಅಂಧತ್ವ ಪ್ರಮಾಣ ಪತ್ರ.
(C) ಆಧಾರ್ ಗುರುತಿನ ಚೀಟಿ.
(D) ರದ್ದುಗೊಳಿಸಿದ ಬ್ಯಾಂಕ್ ಚಕ್ ಅಥವಾ ಖಾತೆಯ ವಿವರವಿರುವ ಪಾಸ್ಬುಕ್ನ ಪ್ರತಿ.
(E) ಪಾನ್ ಕಾರ್ಡ್.
(F) ಮೂರು ಪಾಸ್ಪೋಟ್ ಅಳತೆಯ ಮತ್ತು ಒಂದು ಸ್ಟ್ಯಾಂಪ್ ಅಳತೆಯ ಭಾವ ಚಿತ್ರಗಳು.
ಒಬ್ಬರು ಎಲ್ಲರಿಗೆ ಮತ್ತು ಎಲ್ಲರು ಒಬ್ಬರಿಗೆ ಸಹಕರಿಸುವುದೇ ಸಹಕಾರ ಸಂಘದ ಮೂಲ ಆಶಯ. ಹೀಗೆ ಒಬ್ಬರು ಇನ್ನೊಬ್ಬರಿಗೆ ಸಹಕರಿಸುವುದರಲ್ಲಿ ಅಪರಿಮಿತ ಆನಂದವಿರುತ್ತದೆ.
ನಮ್ಮ ಈ ಸಹಕಾರ ಸಂಘವು ಅಂಧ ವ್ಯಕ್ತಿಗಳ ಆರ್ಥಿಕ ಬದುಕಿನಲ್ಲಿ ಹೊಸ ಪರ್ವವನ್ನು ಾರಂಬಿಸಲಿದೆ. ಹಣಕಾಸಿನ ಸುಭದ್ರತೆಯೊಂದಿಗೆ ಅಂಧರ ಸರ್ವತೋಮುಖ ಅಭಿವೃಧ್ದಿಯೇ ಸಂಘದ ಮುಖ್ಯ ಗುರಿ.
ಬನ್ನಿ ಎಲ್ಲರು ಕೈ ಜೋಡಿಸೋಣ ಹೊಸ ಇತಿಹಾಸಕ್ಕೆ ಸಾಕ್ಷಿಯಗೋಣ.
No comments:
Post a Comment
ಅನಿಸಿಕೆ ತಿಳಿಸಿ