Saturday, July 14, 2018

RSGE ::: ನಡೆದು ಬಂದ ಹಾದಿ

ನನಗೆ  ಸರ್ಕಾರಿ ಸುತ್ತೋಲೆ ಒಂದು ಬೇಕಿದೆ, ಹುಡುಕುವ ಬಗೆ ಹೇಗೆ?
ಕರ್ನಾಟಕ ಸೇವಾ ನಿಯಮಗಳಿಗೆ ಸಂಬಂದಿಸಿದ ಕೆಲವು ಮಾಹಿತಿಗಳು ಬೇಕಾಗಿದೆ, ಯಾರಲ್ಲಿ ಪಡೆದುಕೊಳ್ಳುವುದು?
ಕಾರ್ಯ ಸ್ಥಳದಲ್ಲಿ   ಕೆಲವು ಅನಾನುಕೂಲ ಉಂಟಾಗಿದೆ, ಯಾರ ಬಳಿ ಚರ್ಚಿಸುವುದು?
ಹೀಗೆ ಹತ್ತು ಹಲವು ಸವಾಲುಗಳನ್ನು ಎದುರಿಸುತ್ತಿದ್ದ ರಾಜ್ಯ ಸರ್ಕಾರಿ ಅಂಧ ನೌಕರರಿಗೆ ಅವುಗಳನ್ನು ಮೆಟ್ಟಿ ನಿಲ್ಲುವ ಮಾರ್ಗೋಪಾಯವನ್ನು ಕಂಡುಕೊಳ್ಳುವ ಅಗತ್ಯವಿತ್ತು. ಕಾರ್ಯಸ್ಥಳಗಳಲ್ಲಿ ತಾವು ಅನುಭವಿಸುತ್ತಿದ್ದ ಸಮಸ್ಯೆಗಳನ್ನು ಹಂಚಿಕೊಳ್ಳಲು ಮತ್ತು ಅವುಗಳನ್ನು ಪರಿಹರಿಸಿಕೊಳ್ಳಲು ವೇದಿಕೆಯೊಂದನ್ನು ಕಲ್ಪಿಸಿಕೊಳ್ಳುವ ಅವಶ್ಯಕತೆಯಿತ್ತು. ಈ ನಿಟ್ಟಿನಲ್ಲಿ ಧೃಡ ನಿರ್ದಾರ ಕೈಗೊಂಡ ಕೆಲವು ಸಮಾನ ಮನಸ್ಕ ಗೆಳೆಯರು, ವಾಟ್ಸ್ಯಾಪ್ ಗುಂಪೊಂದನ್ನು ರಚಿಸಿಕೊಳ್ಳುವ ಮೂಲಕ ಸ್ವಸಹಾಯ ಪದ್ದತಿಗೆ ನಾಂದಿ ಹಾಡಿದರು. ಹೀಗೆ ರಚಿತವಾದ ವಾಟ್ಸ್ಯಾಪ್  ಗುಂಪು ಜವಬ್ದಾರಿಯುತ ರಾಜ್ಯ ಸರ್ಕಾರಿ ನೌಕರರ ಗುಂಪು.
ಮಾಹಿತಿ ಮೂಲಕ ಸಬಲೀಕರಣ ಎಂಬ ಧ್ಯೇಯ ವಾಕ್ಯದೊಂದಿಗೆ ಪಯಣ ಆರಂಬಿಸಿ ಮಾಹಿತಿಗಳನ್ನು ಪರಸ್ಪರ ಹಂಚಿಕೊಳ್ಳುತ್ತಾ, ಅನುಮಾನಗಳನ್ನು ಪರಿಹರಿಸಿಕೊಂಡು ಚರ್ಚೆಗಳಲ್ಲಿ ನಿರುತರಾಗಿ ಸಾಗುತಿದ್ದ ಹಾದಿಯಲ್ಲಿ ತಿರುವೊಂದು ಬಂದೊದಗಿತು. 29 ಜನವರಿ 2017, ರಾಜ್ಯ ಸರ್ಕಾರವು ತನ್ನ ನೌಕರರ ವೇತನ ಪರಿಷ್ಕರಣೆ ಗಾಗಿ ವೇತನ ಆಯೋಗ ರಚಿಸುವ ಸುಳಿವು ನೀಡುತಿದ್ದಂತೆಯೆ ನಮ್ಮ ಆರ್ ಎಸ್ ಜಿ ಯಲ್ಲಿ ಅಂಧ ನೌಕರರು ವೇತನ ಆಯೋಗದಿಂದ  ಪಡೆಯಬಹುದಾದ ಪ್ರಯೋಜನಗಳ ಕುರಿತು ಮೂರುದಿನಗಳ ಅಭಿಪ್ರಾಯ ಅಭಿಯಾನ ಆರಂಬಿಸಿತು. ನಂತರ, ಹತ್ತು ಅಂಶಗಳನ್ನೊಳಗೊಂಡ ಪಟ್ಟಿಯನ್ನು ತಯಾರಿಸಿಕೊಂಡಿತು. ಆದರೆ, ಈ ನಮ್ಮ ಬೇಡಿಕೆಗಳನ್ನು ಆಯೋಗದ ಮುಂದೆ ಮಂಡಿಸುವ ಬಗೆ ಹೇಗೆ? ವಾಟ್ಸ್ಯಾಪ್ ಗಷ್ಟೆ  ಸೀಮಿತಗೊಂಡಿರುವ ತಂಡ ಒಂದಕ್ಕೆ ತನ್ನ ಅಭಿಪ್ರಾಯ ಮಂಡಿಸಲು ಆಯೋಗ ಅವಕಾಶ ನೀಡುವುದೇ ಹೀಗೆ ಹಲವಾರು ಪ್ರಶ್ನೆಗಳನ್ನು ಗುಂಪಿನ ಸದಸ್ಯರ ಮುಂದಿಟ್ಟಾಗ, ಅಂಧ ಸರ್ಕಾರಿ ನೌಕರರಿಗಾಗಿ ಪ್ರತ್ಯೇಕ ಸಂಘಟನೆಯನ್ನು ರಚಿಸಿಕೊಳ್ಳಬೇಕಾಗಿದೆ ಎಂಬ ಆಶಯವನ್ನು ಗುಂಪಿನ ನಿರ್ವಾಹಕ ತಂಡದ ಮುಂದಿಟ್ಟರು. ಹೀಗೆ, ರಾಜ್ಯ ಮಟ್ಟದ ಸಂಗಟನೆಯೊಂದನ್ನು ರಚಿಸುವ ಹೊಣೆ ಆರ್ ಎಸ್ ಜಿ ಹೆಗಲೇರಿತು. 12 ಮಾರ್ಚ್ 2017 ರಂದು ಮೈಸೂರಿನಲ್ಲಿ ಸಮಾವೇಶ ಆಯೋಜಿಸಿ, ಅದರಲ್ಲಿ ಪಾಲ್ಗೊಂಡಿದ್ದ ಅಂಧ ನೌಕರರ ಅಬಿಪ್ರಾಯ ಆಧರಿಸಿ, ಸಂಘಟನೆಯ ತಾತ್ಕಾಲಿಕ ಸಮಿತಿ ರಚಿಸಿತು. ಅಲ್ಲದೆ, ಸದಸ್ಯತ್ವ ಅಬಿಯಾನದಲ್ಲಿ ಪ್ರಮುಖ ಪಾತ್ರ ವಹಿಸುವ ಮೂಲಕ ತನ್ನ ಜವಬ್ದಾರಿಯನ್ನು ಪೂರೈಸಿತು. ಮುಂದೆ, 12 ಅಕ್ಟೋಬರ್ 2017 ರಂದು ರಾಜ್ಯ ಸರ್ಕಾರಿ ಅಂಧ ನೌಕರ ಸಂಘಟನೆಯೊಡಗೂಡಿ ಆರನೆ ರಾಜ್ಯ ವೇತನ ಆಯೋಗದೆದುರು ನೌಕರರ ಬೇಡಿಕೆಗಳನ್ನು ಅತ್ಯುತ್ತಮವಾಗಿ ಪ್ರಸ್ತುತಪಡಿಸಿತು.
ನವ ಋತುವಿನ ಸ್ವಾಗತಕ್ಕೆ  ವಿಬಿನ್ನ ಮತ್ತು ವಿಶಿಷ್ಟ ಸಂಭ್ರಮಾಚರಣೆ
ಸಭಾಂಗಣ ಗಳಲ್ಲಿ, ತೆರೆದ ಸ್ಥಳಗಳಲ್ಲಿ ಸಾರ್ವಜನಿಕ ವೇದಿಕೆಯನ್ನೊಮ್ಮೆ ಊಹಿಸಿಕೊಳ್ಳಿ? ಕಿಕ್ಕಿರಿದು ಧಾವಿಸುವ ಜನಸಾಗರ, ವೇದಿಕೆಯನ್ನು ಅಲಂಕರಿಸುವ ಆಹ್ವಾನಿತ ರು, ಭಾಷಣ, ಚರ್ಚೆ ಸಾಂಸ್ಕ್ರತಿಕ ಚಟುವಟಿಕೆಗಳು ಇವೆಲ್ಲ ಸಾಮಾನ್ಯವಾಗಿ ನೆರವೇರುತ್ತವೆ. ಇಂತಹುದ್ದೆ ಒಂದು ವೇದಿಕೆ ವಾಟ್ಸ್ಯಾಪ್ ಗುಂಪಿನಲ್ಲಿ ಸೃಷ್ಟಿಸಿದರೆ ಹೌದು, ಇಂತಹದೊಂದು ಹೊಸ ಆಯಾಮಕ್ಕೆ ನಿಮ್ಮ ಜವಬ್ದಾರಿಯುತ ರಾಜ್ಯ ಸರ್ಕಾರಿ ನೌಕರರ ಗುಂಪು ಮುನ್ನುಡಿ ಬರೆಯಿತು. ಬ್ರೇಲ್ ಪಿತಾಮಹ ಲೂಯಿರವರ ಜನ್ಮದಿನವನ್ನು ಅಂದರ ಪಾಲಿನ ಹೊಸಾ ವರ್ಷ ಎಂಬ ಘೋಷಣೆಯೊಂದಿಗೆ ಲೂಯೀ ಬ್ರೇಲ್ರವರ 209 ನೆ ಜಯಂತಿಯನ್ನು ಆಯೋಜಿಸಿ ಸಂಭ್ರಮಿಸಿತು. ಈ ಕಾರ್ಯಕ್ರಮವು ಲೂಯೀರವರ ಜನ್ಮದಿನವಾದ ದಿನಾಂಕ 04/01/2018 ರಂದು  ಆರಂಭಗೊಂಡು, ಅವರು ಚಿರನಿದ್ರೆಗೆ ಜಾರಿದ ದಿನವಾದ ದಿನಾಂಕ 06/01/2018 ರಂದು ಸಮಾರೋಪಗೊಂಡಿತು. ಚರ್ಚಾ ಸ್ಪರ್ದೆ, , ಭಾಷಣಗಳೊಡನೆ ಸಾಂಸ್ಕ್ರತಿಕ ಕಾರ್ಯಕ್ರಮಗಳು ಗಮನ ಸೆಳೆದವು. ಅಲ್ಲದೆ, ವೇದಿಕೆಯೊಂದರ ಕ್ರಮಬದ್ದ ಚಟುವಟಿಕೆಗಳು, ಸಮಯಪಾಲನೆ, ಉದ್ಘಾಟನೆ ಸಮಾರೋಪ ಸಮಾರಂಭದ ವರೆಗೆ ನೆರವೇರಿದ್ದು ಈ ಸಮಾರಂಬದ ವೈಶಿಷ್ಟ್ಯ

ಆಪ್ಲೈನ್ ಕಾರ್ಯಗಾರಗಳು:
ಕೇವಲ ವಾಟ್ಸ್ಯಾಪಿಗಷ್ಟೇ ಸೀಮಿತಗೊಳ್ಳದೆ, ತನ್ನ ಮುಖ್ಯ ದ್ಯೇಯ “”ಮಾಹಿತಿ ಮೂಲಕ ಸಬಲೀಕರಣ”” ಇದನ್ನು ಪೂರೈಸಿಕೊಳ್ಳಲು ಆಫ್ಲೈನ್ನಲ್ಲಿಯೂ ಸಹ ಕಾರ್ಯಗಾರಗಳನ್ನು ಏರ್ಪಡಿಸಿಕೊಂಡು ಬಂದಿದೆ. ಎನ್.ೆಪ್.ಬಿ ಮೈಸೂರು ಇವರ ಸಹಬಾಗಿತ್ವದಲ್ಲಿ ಅ್ಯಂಡ್ರೋಯಿಡ್ ಫೋನ್ ಬಳಕೆಯ ಕಾರ್ಯಗಾರ ಮತ್ತು ಐಟೀ ರಿಟರ್ನ್ಸ್ ಕಾರ್ಯಗಾರಗಳು ಇದಕ್ಕೆ ಸಾಕ್ಷಿಯಾಗಿವೆ.
ವಿಶೇಷ ದಿನಗಳಂದು ವಿಶಿಷ್ಟ ಆಚರಣೆಗಳು.
ಕೇವಲ ಮಾಹಿತಿ ವಿನಿಮಯ ಚರ್ಚೆಗಳಿಗಷ್ಟೆ ಸೀಮಿತಗೊಳ್ಳದೆ ಸಾಮಾಜಿಕ ಜಾಲತಾಣದಲ್ಲಿ ಹೊಸ ಆಯಾಮ ಒಂದಂನು ಆರಂಬಿಸುವ ನಿಟ್ಟಿನಲ್ಲಿ ಕೆಲವು ವಿಶೇಷ ದಿನಗಳಾದ, ವಿಶ್ವ ಮಹಿಳಾದಿನ, ಅಂತಹ ದಿನವನ್ನು ವಿಶಿಷ್ಟವಾಗಿ ಆಚರಿಸಿತು, 27 ಜುಲೈ ಅಂದು ಹೆಲೆನ್ ಕಲರ್ ರವರನ್ನು ಸ್ಮರಿಸುವ ಮೂಲಕ ಸ್ಪೂರ್ತಿಯ ಗಣಿಗೆ ನಮನಸಲ್ಲಿಸಿತು.
ಆರ್.ಎಸ್.ಜಿ.ಇ. ಯಾಪ್ ಈಗ ಪ್ಲೇಸ್ಸ್ಟೋರ್ನಲ್ಲಿ ಲಭ್ಯ
ವಾಟ್ಸ್ಯಾಪ್ ಗುಂಪಿನಲ್ಲಿ ಸದಸ್ಯತ್ವವು ನಿರ್ದಿಷ್ಟ  ಸಂಖ್ಯೆಯ ಮಿತಿಗೆ ಒಳಪಡುತ್ತದೆ. ಅಲ್ಲದೆ, ಪ್ರತಿಯೊಬ್ಬ ಸದಸ್ಯನು ಹೊಸದಾಗಿ ಸದಸ್ಯತ್ವ ಪಡೆದುಕೊಳ್ಳಲು ಈಗಾಗಲೆ ಸದಸ್ಯತ್ವ ಪಡೆದುಕೊಂಡಿರುವ ಸದಸ್ಯರ ಮೂಲಕ ಅಡ್ಮಿನ್ಗಳಿಗೆ ಮನವಿ ಸಲ್ಲಿಸಬೇಕಾಗುತ್ತದೆ. ಇದನ್ನು ತಪ್ಪಿಸಲು ಆರ್.ಎಸ್.ಜಿ. ಅ್ಯಪ್ ರಚಿಸಿದ್ದು, ಆಸಕ್ತರು ಇದನ್ನು ಪ್ಲೇ ಸ್ಟೋರ್‌ನಿಂದ ಪಡೆದುಕೊಳ್ಳಬಹುದಾಗಿದೆ.
ಗುಡಿಯೊಂದು ನಿರ್ಮಿಸಲು ಹಲವರ ಶ್ರಮ ಬೇಕು, ಅಂತೆಯೆ ವಾಟ್ಸ್ಯಾಪ್ ಗುಂಪೊಂದು ಸಾದನೆಯ ಶಿಖರವೇರಲು ಅದರ ಪ್ರತಿಒಬ್ಬ ಸದಸ್ಯನ ಕೊಡುಗೆ ಬೇಕು. ಆರ್.ಎಸ್.ಜಿಯ ಪ್ರತಿಯೊಬ್ಬ ಸದಸ್ಯರಿಗು ತಮ್ಮ ಭಾಗವಹಿಸುವಿಕೆಗಾಗಿ ಅಡ್ಮಿನ್ ತಂಡವು ವಂದಿಸುತ್ತದೆ.  ಎರಡು ವಸಂತಗಳನ್ನು ಪೂರೈಸಿರುವ ನಿಮ್ಮ ಆರ್ ಎಸ್ ಜಿ ಗುಂಪು ರಾಜ್ಯ ಸರ್ಕಾರಿ ನೌಕರರ ಅನುಕೂಲ, ಅಗತ್ಯತೆಗೆ ಅನುಗುಣವಾಗಿ, ಇನ್ನು ಹೆಚ್ಚಿನ ಶ್ರಮ ವಹಿಸಲು ನಿಮ್ಮೆಲ್ಲರ ಬೆಂಬಲ ಅತ್ಯಗತ್ಯ.

Wednesday, July 11, 2018

**RSGE**::: ವಾರ‍್ಶಿಕೋತ್ಸವ ಆಚರಿಸಲು ಸಲಹೆ ಕೋರಿ ಹೊರಡಿಸಿದ ಪ್ರಖಟಣೆ

ಆರ್. ಎಸ್. ಜಿ. ಇ. ವಿಶೇಷ ಪ್ರಕಟಣೆ:
ವಿಷಯ: ಗುಂಪಿನ ಎರಡನೆ ವಾರ್ಶಿಕೋತ್ಸವದ ಆಚರಣೆಯ ಕುರಿತು:
ಆತ್ಮೀಯ ಗುಂಪಿನ ಒಡನಾಡಿಗಳಿಗೆ ಅಡ್ಮಿನ್ ತಂಡದ ನಮಸ್ಕಾರಗಳು.
ಪ್ರಿಯ ಸ್ನೇಹಿತರೆ, ತಾವೆಲ್ಲರು ಕೂಡಿ ಬೆಳೆಸಿಕೊಂಡು ಬಂದಿರುವ ಈ ನಿಮ್ಮ ಗುಂಪು ಬರುವ ಜೂನ್ 12 ಗೆ ಎರಡನೆ ವರ್ಷವನ್ನು ಪರಿಣಾಮಕಾರಿಯಾಗಿ ಹಾಗೂ ಎಷಸ್ವಿಯಾಗಿ ಪೂರೈಸುತ್ತಿದೆ ಎಂದು ತಿಳಿಸಲು ನಿರ್ವಾಹಕ ತಂಡವು ಹರ್ಷಿಸುತ್ತದೆ.
ಈವರೆಗಿನ ಎಲ್ಲಾ ಕಾರ್ಯಕ್ರಮಗಳನ್ನು ಹಾಗೂ ಚಟುವಟಿಕೆಗಳನ್ನು  ತಮ್ಮ ಸಕ್ರೀಯ ಹಾಗೂ ಮನಃಪೂರ್ವಕ ಪಾಲ್ಗೊಳ್ಳುವಿಕೆಯ ಮೂಲಕ ಅವಿಸ್ಮರಣೀಯಗೊಳಿಸಿರುವ  ತಾವೂ, ಈ ಎರಡನೆ ವಾರ್ಷಿಕೋತ್ಸವದ ಸಂದರ್ಭವನ್ನು   ನೆನಪಿನ ಅಂಗಳದಲ್ಲಿ, ಜೀವನ ಗಟ್ಟದಲ್ಲಿ  ಚಿರಸ್ಥಾಯಿಗೊಳ್ಳುವಂತೆ ಆಚರಿಸಲು ಅಮೂಲ್ಯ ಸಲಹೆಗಳನ್ನು/ಅಭಿಪ್ರಾಯಗಳನ್ನು  ನೀಡಬೇಕೆಂದು ಈ ಮೂಲಕ ಆತ್ಮೀಯವಾಗಿ ಕೋರಲಾಗಿದೆ.
ಸ್ನೇಹಿತರೆ, ದಿನಾಂಕ 12-06-2016 ಕ್ಕು ಮುಂಚೆ, ಅಂದರೆ, ಈ ಗುಂಪಿನ ಆರಂಭದ ಪೂರ್ವ ದಿನಗಳಿಗೆ ಹೋಲಿಸಿದರೆ,
ಇಂದು ನಾವೆಲ್ಲರು ಮಾನಸಿಕವಾಗಿ/ಭಾವನಾತ್ಮಕವಾಗಿ ಬಹಳಷ್ಟು ಸಮೀಪಕ್ಕೆ ಬಂದಿದ್ದೇವೆ ಎಂಬುದು ಅಕ್ಷರ ಸಹ ವೇಧ್ಯವಾಗಿರುವ ಸಂಗತಿ.
ಯಾವ ಪ್ರಾಥಮಿಕ ಉದ್ದೇಷವನ್ನು ಇಟ್ಟುಕೊಂಡು ಸದರಿ ಗುಂಪು ಪ್ರಾರಂಬವಾಯಿತೋ, ಆ ಉದ್ದೇಷ ಬಹುಮಟ್ಟಿಗೆ ಇಂದು ಈಡೇರಿದೆ.
ಆದರೆ, ಗುಂಪಿನ ಪ್ರಧಾನ ಉದ್ದೇಷವಾದ ಸಭಲೀಕರಣದ ದಿಷೆಯಲ್ಲಿ  ನಾವೆಲ್ಲರು ಕ್ರಮಿಸಬೇಕಾಗಿರುವ ದಾರಿ ಬಹು ದೂರವು, ಅನಿರೀಕ್ಷಿತವು   ಹಾಗೂ ಸವಾಲುದಾಯಕವು ಾಗಿರಲಿದೆ.
ಈ ನಿಟ್ಟಿನಲ್ಲಿ ಒಗ್ಗೂಡಿ ಸಾಗುತ್ತಿರುವ ಪ್ರಯತ್ನಕ್ಕೆ ಮತ್ತಷ್ಟು ಭಲ ತುಂಬುವ, ಪರಸ್ಪರ ಮುಕ್ತ ಘ್ರಹಿಕೆಯ ಮೂಲಕ ನಮ್ಮೆಲ್ಲರ ನಡುವಿನ ಸಾಮಿಪ್ಯತೆಯನ್ನು ಹಾಗೂ ವಿಷ್ವಾಸವನ್ನು ಮತ್ತಷ್ಟು ವೃದ್ಧಿಗೊಳಿಸುವ ಹಾಗೂ ?ನಾವು? ಎಂಬ ಭಾವನೆಗೆ ಮತ್ತಷ್ಟು ಖಸಿವು ತುಂಬುವ ಕಾರ್ಯಕ್ಕೆ ಈ ಎರಡನೆ ವರ್ಷದ ಆಚರಣೆ ಸಾಕ್ಷಿಯಾಗಲಿ ಎಂಬುದು ನಮ್ಮ ಆಷಯ.
ಈ ಆಷಯಕ್ಕೆ ಪೂರಕವಾಗಿ, ಗುಂಪಿನ ಎರಡನೆ ವರ್ಷದ ವಾರ್ಷಿಕೋತ್ಸವದ ಆಚರಣೆಯ ವಿಧಾನ, ಸ್ವರೂಪದ ಕುರಿತು ಗುಂಪಿನ ಸರ್ವ ಸದಸ್ಯರು ದಿನಾಂಕ 29/04/2018 ರಿಂದ 01/05/2018 ರವರೆಗೆ ತಮ್ಮ ಅಮೂಲ್ಯ ಅಬಿಪ್ರಾಯಗಳನ್ನು ಹಂಚಿಕೊಳ್ಳಬೇಕಾಗಿ ಈ ಮೂಲಕ ಕೋರಲಾಗಿದೆ.
ಉದಾಹರಣೆಗೆ: ಕಾರ್ಯಕ್ರಮದ ಮಾದರಿ ಹೇಗಿರಬೇಕು? ಯಾವೆಲ್ಲ ಚಟುವಟಿಕೆಗಳನ್ನು ಕೈಗೊಂಡರೆ ಆತ್ಮೀಯತೆ ಹಾಗೂ ಸಮುಧಾಯಿಕ ಭಾವನೆಗಳನ್ನು ವೃದ್ಧಿಸಲು ಸಾಧ್ಯ? ಇತ್ಯಾದಿ.
ಗಮನಿಸಿ: ಮೇಲಿನ ಉದಾಹರಣೆಗಳು ಉದಾಹರಣೆಗಳೇ ವಿನಹ, ತಮ್ಮ ಸಲಹೆಗಳು ಅಷ್ಟಕ್ಕೆ ಸೀಮಿತವಾಗಬೇಕಿಲ್ಲ.
ತಮ್ಮೆಲ್ಲರ ಅಭಿಪ್ರಾಯಗಳ ಆಧಾರದ ಮೇಲೆ ಸಮಯ ಮತ್ತು ಸಂಪನ್ಮೂಲಗಳ ಲಭ್ಯತೆಯನ್ನು ಆಧರಿಸಿ ವಾರ್ಷಿಕೋತ್ಸವ ಕಾರ್ಯಕ್ರಮದ ರೂಪೂರೇಷೆಗಳನ್ನು ಸಿದ್ದಪಡಿಸಲು ನಿರ್ವಾಹಕ ತಂಡವು ಯತ್ನಿಸುತ್ತದೆ.
ಗಮನಿಸಬೇಕಾದ ಅಂಷಗಳು:
ಗುಂಪಿನ ಸದಸ್ಯರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವಾಗ ಗಮನಿಸಬೇಕಾದ ಅಂಶಗಳೆಂದರೆ:
1. ಸದರಿ ವಿಷಯಕ್ಕೆ ಸಂಬಂದಿಸಿದಂತೆ ಸಂದೇಷವನ್ನು ಕಳುಹಿಸುವಾಗ "ಗುಂಪಿನ ಎರಡನೆ ವಾರ್ಷಿಕೋತ್ಸವದ ಕುರಿತು" ಎಂದು ಉಲ್ಲೇಖಿಸುವುದು/ಹೇಳುವುದುಅವಷ್ಯ.
2. ಎಂದಿನಂತೆ ಸಮಾಲೋಚನೆಯು ವಿಷಯಾಧರಿತವಾಗಿರಬೇಕೆ ವಿನಹ ವ್ಯಕ್ತಿಗತವಾಗಿರುವಂತಿಲ್ಲ.
3. 3 ನಿಮಿಷಕ್ಕಿನ್ನ ಹೆಚ್ಚಿನ ಅವಧಿಯ ಧ್ವನಿ ಸಂದೇಷಕ್ಕೆ ನಂತರ ಕಿರು ಪಠ್ಯ ವಿವರಣೆ ನೀಡುವುದು ಅವಷ್ಯ.
4. ತಮ್ಮ ಸಲಹೆಗಳು/ಅಭಿಪ್ರಾಯಗಳೂ  ಸಾಧ್ಯವಾದಷ್ಟು ಪರಿಪೂರ್ಣತೆಯಿಂದ ಕೂಡಿರುವುದು ಅಪೇಕ್ಷಣೀಯ.
ತಮ್ಮೆಲ್ಲರ ಸಕ್ರೀಯ ಪಾಲ್ಗೊಳ್ಳುವಿಕೆಯ ನಿರೀಕ್ಷೆಯಲ್ಲಿ:
ಆರ್. ಎಸ್. ಜಿ. ಈ. ನಿರ್ವಾಹಕ ತಂಡ.

**RSGE**::: ಹೆಲ್ಲನ್ ಕೆಲ್ಲರ‍್ ಜೀವನದ ಕುರಿತ ವಿಡಿಯೋಗಳು ಮತ್ತು ಅಂದಿನ ನೋಟಿಫಿಕೇಶನ್



!ಆರ‍್ ಎಸ್ ಜಿ ಇ  ವಿಶೇಷ ಪ್ರಖಟಣೆ!
ಗುಂಪಿನ ಎಲ್ಲ ಸದಸ್ಯರಿಗು ಅಡ್ಮಿನ್ ತಂಡದ ನಮಸ್ಕಾರಗಳು.
ಪ್ರಿಯ ಸದಸ್ಯರೇ!
ಇಂದು ನಮ್ಮ ನಿಮ್ಮೆಲ್ಲರಿಗೂ  ಸ್ಪೂರ‍್ತಿದಾಯಕ ಆದರ‍್ಷ ಮಹಿಳೆ ಹೆಲನ್ ಕೆಲ್ಲರ‍್ ಅವರ 138 ನೆ ಜನ್ಮದಿನ.
ಈ ಶುಭ ಸಂಧರ‍್ಬದಲ್ಲಿ ಅವರನ್ನು ನೆನೆಯುತ್ತಾ,
ಜಗತ್ತಿನಲ್ಲಿ ಅಂಧರೂ ಸಹ ಗೌರವಕ್ಕೆ ಯೋಗ್ಯರು ಎಂದು ಪ್ರತಿಪಾದಿಸಿದ,
ಅಂದರಿಗೆ ಸದಾ ಚೈತನ್ಯದ ಚಿಲುಮೆಯಾಗಿದ್ದ ಹಾಗೂ ಇಂದು ಆಗಿರುವ ಹೆಲ್ಲನ್ ಕೆಲ್ಲರ‍್ ಅವರಿಗೆ ಆರ‍್ ಎಸ್ ಜಿ ಇ ತಂಡದ ಎಲ್ಲ ಸದಸ್ಯರ ಪರವಾಗಿ ಜನ್ಮದಿನದ ಶುಭಾಷಯಗಳು.
ಇವರು ಧೃಷ್ಟಿ ಮತ್ತು ಶ್ರವಣ ದೋಷ ಅಂಗವಿಖಲತೆಯಿಂದ ಬಳಲುತ್ತಿದ್ದರೂ ಸಹ ಅವರ ಜೀವನ ಮತ್ತು ಸಾಧನೆ, ನಮಗೆಲ್ಲ ದಾರಿದೀಪ.
ಅವರು ಜಗತ್ತಿನಲ್ಲಿ ಲಕ್ಷಾಂತರ ಅಂಧರ ಬಾಳಿಗೆ ಸ್ಪೂರ‍್ತಿಯ ಚಿಲುಮೆಯಾಗಿ  ಅವರಲ್ಲಿ ಧೈರ‍್ಯ ಹಾಗು ಸಾಧಿಸುವ ಛಲ ಮೂಡಿಸಿದ್ದಾರೆ.
ಇಂದು ನಾವೆಲ್ಲರೂ ಸಹ ನಮ್ಮ ದೈನಂದಿನ ಜೀವನದಲ್ಲಿ ಹಾಗೂ ಕಾರ‍್ಯಕ್ಷೇತ್ರದಲ್ಲಿ ಹಲವು ತೊಂದರೆ ಅಡತಡೆಗಳನ್ನು ಎದುರಿಸುತ್ತಿದ್ದೇವೆ.
ಆದರೇ ಇಂತಹ ಅಡೆತಡೆಗಳು ನಮಗೆ ಏನೇನು ಅಲ್ಲ.
ಏಕೆಂದರೆ ಅಂದಿನ ಕಾಲದಲ್ಲಿ ಧೃಷ್ಟಿ ಸವಾಲುಳ್ಳ ಹಾಗೂ ಷ್ರವಣದೋಷವುಳ್ಳ ವ್ಯಕ್ತಿಗಳಿಗೆ ಎಂತಹ ಸವಾಲುಗಳು ಅಡೆತಡೆಗಳಿದ್ದವೆಂಬುದು ನಮಗೆಲ್ಲ ತಿಳಿದಿರುವ ವಿಷಯವೇ ಅಲ್ಲವೇ?
ಇಂತಹ ಸಂದರ‍್ಭದಲ್ಲಿ ಹೆಲ್ಲನ್ ಕೆಲ್ಲರ‍್ ಅವರ ಜೀವನ, ಸಾಧನೆ, ಅವರು ಬದುಕಿರುವವರೆಗು ಅನುಸರಿಸಿದ  ಛಲ, ಧೃಢ ನಂಬಿಕೆ, ಸದಾಷಯಗಳು ನಮಗೆ ಸನ್ಮಾರ‍್ಗ ತೋರುವ ವಿಷಯಗಳೇ ಆಗಿವೆ.
ಹಾಗಾಗಿ ಈ ದಿನದಂದು ಅವರ ಜೀವನ, ಸಾಧನೆಯ ಬಗೆಗೆ ವಿಚಾರಗಳನ್ನು ಹಂಚಿಕೊಳ್ಳುವುದು ಸೂಕ್ತ.
ಅವರ ಕುರಿತ ಜೀವನಚರಿತ್ರೆ, ನುಡಿಗಳು, ಗೀತೆಗಳು, ಉತ್ತಮ ಬರಹಗಳು ಹಾಗೂ ನಿಮ್ಮ ಮನದಾಳದ ಮಾತುಗಳಿಗೆ ಅವಕಾಷ ಕಲ್ಪಿಸಲಾಗಿದೆ.
ವಂದನೆಗಳೊಂದಿಗೆ ಆರ‍್ ಎಸ್ ಜಿ ಇ ಅಡ್ಮಿನ್ ತಂಡ.

Monday, July 09, 2018

**RSGE**::: ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಾರ್ವತ್ರಿಕ ವರ್ಗಾವಣೆಯ ಅಂಗವಿಕಲ ಉಪನ್ಯಾಸಕರ ಆದ್ಯತಾ ಪಟ್ಟಿಗೆ ೨೦೧೩ ರಲ್ಲಿ ನೇಮಕವಾದ ಅಂಗವಿಕಲ ಉಪನ್ಯಾಸಕರನ್ನು ಪರಿಗಣಿಸುವ ಕುರಿತು



ಇವರಿಗೆ,
ಮಾನ್ಯ ಶ್ರೀ ಎನ್ ಮಹೇಶರವರು
ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರು
ವಿಧಾನ ಸೌಧ, ಕರ್ನಾಟಕ ಸರ್ಕಾರ
ಬೆಂಗಳುರು -
ಇವರಿಂದ,
ಅಂಗವಿಕಲ ಉಪನ್ಯಾಸಕರು
ಸರ್ಕಾರಿ ಪದವಿ ಪೂರ್ವ ಕಾಲೇಜುಗಳು
ರಾಜ್ಯದ ಎಲ್ಲಾ ತಾಲ್ಲೂಕು ಹಾಗೂ ಜಿಲ್ಲೆಗಳು
ಮಾನ್ಯರೇ,
ವಿಷಯ- ೨೦೧೭-೧೮ ನೇ ಸಾಲಿನ ಸರಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಾರ್ವತ್ರಿಕ
ವರ್ಗಾವಣೆಯ ಅಂಗವಿಕಲ ಉಪನ್ಯಾಸಕರ ಆದ್ಯತಾ ಪಟ್ಟಿಗೆ ೨೦೧೩ ರಲ್ಲಿ ನೇಮಕವಾದ
ಅಂಗವಿಕಲ ಉಪನ್ಯಾಸಕರನ್ನು ಪರಿಗಣಿಸುವ ಕುರಿತು ಮನವಿ.
ಉಲ್ಲೇಖ-) ಸಂಖ್ಯೆ-ಪಪೂಶಿಇ/ಆಡಳಿತ-/.ವರ್ಗ-೦೧/೨೦೧೭-೧೮ ದಿನಾಂಕ೨೪/೦೧/೨೦೧೮.
) ಸಂಖ್ಯೆ-.ರಾ..ಅಂ.ನೌ.ಸಂ ದಿನಾಂಕ-೨೨-೦೧-೨೦೧೮.
) ಸಂ: ಸಿಆಸುಇ ೧೮ ಸೆನ್ಸವ ೨೦೧೪, ಬೆಂಗಳೂರು ದಿನಾಂಕ-೦೬.೦೨.೨೦೧೪,
) ಸಂ: ಸಿಆಸುಇ ಎಸ್ ಟಿ ಆರ್ ೨೦೦೧, ಬೆಂಗಳೂರು ದಿನಾಂಕ-೨೨.೧೧.೨೦೦೧
) ಅಂಗವಿಕಲರ ವ್ಯಕ್ತಿಗಳ ಅಧಿ ನಿಯಮ ೧೯೯೫(ಅವಕಾಶ,ಹಕ್ಕು ಸಂರಕ್ಷಣೆ, ಭಾಗವಹಿಸುವಿಕೆ)
) ಅಂಗವಿಕಲರ ವ್ಯಕ್ತಿಗಳ ಹಕ್ಕು ಅಧಿನಿಯಮ ೨೦೧೬(ಅವಕಾಶ,ಹಕ್ಕು ಸಂರಕ್ಷಣೆ, ಭಾಗವಹಿಸುವಿಕೆ)
| 中中车卒中中中
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಸಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಕರ್ತವ್ಯ
ನಿರ್ವಹಿಸುತ್ತಿರುವ ಅಂಗವಿಕಲತೆ ಹೊಂದಿ ನೇಮಕವಾದ ಉಪನ್ಯಾಸಕರಾದ ನಾವು ಅರಿಕೆ
ಮಾಡಿಕೊಳ್ಳುವುದೇನೆಂದರೆ, ಉಲ್ಲೇಖ () ರಂತೆ ಮಾನ್ಯ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು
೨೦೧೭-೧೮ ನೇ ಸಾಲಿನ ಉಪನ್ಯಾಸಕರ ವರ್ಗಾವಣೆಗೆ ಅಧಿಸೂಚಿಸಿದ್ದು, ಸದರಿ ಅಧಿಸೂಚನೆಯಲ್ಲಿ ಹೊಸದಾಗಿ
ನೇಮಕಗೊಂಡ ಎಲ್ಲಾ ಉಪನ್ಯಾಸಕರಿಗೆ ವರ್ಷಗಳ ಕನಿಷ್ಟ ಸೇವೆಯನ್ನು ಕಡ್ಡಾಯಗೊಳಿಸಿದ್ದು, ಆದರೆ
ಹಿಂದಿನ ಅಧಿಸೂಚನೆಗಳಲ್ಲಿ ಖಾಯಂ ಪೂರ್ವ ಸೇವೆ ಪೂರೈಸಿದ ಅಂಗವಿಕಲ ಉಪನ್ಯಾಸಕರಿಗೆ ವರ್ಗಾವಣೆಗೆ
ಅವಕಾಶ ನೀಡುತ್ತಿದ್ದು, ಸದರಿ ಅಧಿಸೂಚನೆಯಲ್ಲಿ ಅಂಗವಿಕಲ ಉಪನ್ಯಾಸಕರಿಗೂ ವರ್ಷ ಕನಿಷ್ಟ ಸೇವೆ ಕಡ್ಡಾಯ
ಮಾಡಿ, ನಮ್ಮನ್ನು ಪರಿಗಣಿಸದೇ ಪಟ್ಟಿ ತಯಾರಿಸಲಾಗಿದೆ. ನಮಗೆ ತುಂಬಾ ಅನ್ಯಾಯವಾಗಿರುವುದರ ಜೊತೆಗೆ
ಯಾವುದೇ ಅನುಕಂಪದ ವಿನಾಯ್ತಿ ನೀಡಿರುವುದಿಲ್ಲ. ಜೊತೆಗೆ ಅಂಗವಿಕಲ ನೌಕರರ ರಾಜ್ಯಾಧ್ಯಕ್ಷರು ಉಲ್ಲೇಖ ()
ರಲ್ಲಿ ಮಾನ್ಯ ಮುಖ್ಯ ಕಾರ್ಯದರ್ಶಿಗಳು ಸಾರ್ವಜನಿಕ ಶಿಕ್ಷಣ ಇಲಾಖೆ ಇವರಿಗೆ ನಿಯಮಗಳನ್ನು ಸರಿಪಡಿಸಲು
ಅಂಗವಿಕಲ ಶಿಕ್ಷಕರು, ಉಪನ್ಯಾಸಕರಿಗೆ ವಿನಾಯ್ತಿ ನೀಡಲು ಮನವಿ ಮಾಡಿರುತ್ತಾರೆ. ಉಲ್ಲೇಖ ರಲ್ಲಿ ಅಂಗವಿಕಲ
ನೌಕರರಿಗೆ ಸಾಮಾನ್ಯ ವರ್ಗಾವಣಾ ನಿಯಮಗಳಲ್ಲಿ ಸೂಕ್ತ ವಿನಾಯ್ತಿ ನೀಡಬೇಕೆಂದು ಜೊತೆಗೆ ಉಲ್ಲೇಖ ರಲ್ಲಿ
ಬಿ ವರ್ಗದ ಸರ್ಕಾರಿ ನೌಕರರಿಗೆ ವರ್ಷ ಸೇವೆಯನ್ನು ಕಡ್ಡಾಯಗೊಳಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ
ಇಲಾಖೆ ಆದೇಶಿಸಿದೆ. ಉಲ್ಲೇಖ ಹಾಗೂ ರಲ್ಲಿ ಅಂಗವಿಕಲರ ವ್ಯಕ್ತಿಗಳ ಹಕ್ಕು ಅಧಿನಿಯಮಗಳಲ್ಲಿ (೧೯೯೫
ಹಾಗೂ ೨೦೧೬) ಅಂಗವಿಕಲ ನೌಕರರಿಗೆ ವರ್ಗಾವಣಾ ನಿಯಮ ಹಾಗೂ ನಿಯೋಜನಾ ನಿಯಮಗಳಲ್ಲಿ ಸೂಕ್ತ
ವಿನಾಯ್ತಿ ನೀಡಿ ಸಹಾನುಭೂತಿಯಿಂದ ನೋಡಬೇಕು ಹಾಗೂ ಅವರ ಇಚ್ಚೆಗೆ ಅನುಸಾರ ವರ್ಗಾಯಿಸಬೇಕು ಮತ್ತು
ಅಂಗವಿಕಲ ನೌಕರರು ಆದ್ಯತೆ ನೀಡಿದ ಸ್ಥಳಕ್ಕೆ ವರ್ಗಾವಣೆ ಮಾಡಬೇಕು ಎಂದು ಸ್ಪಷ್ಟವಾಗಿ ಸೂಚಿಸಿವೆ. ತಾವುಗಳು
ದೈಹಿಕವಾಗಿ ಮಾನಸಿಕವಾಗಿ, ಭಾವನಾತ್ಮಕವಾಗಿ, ಆರ್ಥಿಕವಾಗಿ ಸಧೃಡವಾಗಿರುವ ನಮಗಿಂತ ಕೆಳಗಿನ ವರ್ಗಾವಣಾ
ಆದ್ಯತಾ ವಲಯದವರಿಗೆ ಹೆಚ್ಚಿನ ಮಹತ್ವ ನೀಡಿ ಅವರಿಗೆ ಮಾತ್ರ ವರ್ಷಗಳ ಕಡ್ಡಾಯ ಸೇವೆಯಿಂದ ವಿನಾಯ್ತಿ
ನೀಡುತ್ತಿರುವುದು ದಿನಂಪ್ರತಿ ಪತ್ರಿಕೆಗಳಲ್ಲಿ ಪ್ರಚಾರವಾಗುತ್ತಿದೆ. ಇದನ್ನು ಗಮನಿಸಿದಾಗ ನಮಗೆ ತುಂಬಾ ನೋವಾಗಿದೆ.
ಅಂಗವಿಕಲರು ಯಾರ ಗಮನಕ್ಕೂ ಬಾರದೇ ಇರುವುದು, ಅವರಿಗೆ ಯಾರು ಸಹಾಯ ಮಾಡದಿರುವುದು, ನಮ್ಮ
ಬಗ್ಗೆ ಯಾವ ನಾಯಕರು ಧ್ವನಿ ಎತ್ತದಿರುವುದು, ಮಹತ್ವ ನೀಡದಿರುವವುದನ್ನು ಗಮನಿಸಿದರೆ ನಮಗೆಲ್ಲಾ ತುಂಬಾ
ನೋವಾಗಿದೆ. ನಮ್ಮ ಬಗ್ಗೆ ಈಗಾಲಾದರೂ ಅನುಕಂಪದಿಂದಾದರೂ ಸಹಾನೂಭೂತಿ ತೋರಿಸಿ ಕರಣಾಳುಗಳಾದ
ತಾವುಗಳು ಮೇಲಿನ ಆದೇಶಗಳನ್ನ ಪರಿಶೀಲಿಸಿ ಖಾಯಂಪೂರ್ವ ಸೇವಾ ಅವಧಿಯನ್ನು ಪೂರೈಸಿದ ಎಲ್ಲಾ
ವಿಧದ ಅಂಗವಿಕಲ ಉಪನ್ಯಾಸಕರಿಗೆ ೨೦೧೭-೧೮ ನೇ ಸಾಲಿನ ವರ್ಗಾವಣೆಯ ಆದ್ಯಾತೆಗಳಲ್ಲಿ ಒಂದಾದ
ಅಂಗವಿಕಲರ ಉಪನ್ಯಾಸಕರಿಗೆ ಪ್ರಸ್ತುತ ನಡೆಯುತ್ತಿರುವ ಸದರಿ ವರ್ಗಾವಣಾ ಕೌನ್ಸಲಿಂಗ್ ಪ್ರಕ್ರಿಯೆಯಲ್ಲಿ ಅವಕಾಶ
ಕಲ್ಲಿಸಿ ವರ್ಗಾವಣೆ ಕೊಡಬೇಕಾಗಿ ತಮ್ಮಲ್ಲಿ ವಿನಮ್ರಶೀಲ ಮನವಿ ಮಾಡಿಕೊಳ್ಳುತ್ತಿದ್ದೇವೆ. ಜೊತೆಗೆ ವರ್ಗಾವಣಾ
ನಿಯಮಗಳಲ್ಲಿ ಅಂಗವಿಕಲರಿಗೆ ಸೂಕ್ತ ವಿನಾಯ್ತಿ ನೀಡಿ ತಿದ್ದುಪಡಿ ಮಾಡಿ ಅಂಗವಿಕಲ ಉಪನ್ಯಾಸಕರ ಹಿತ
ಕಾಯುತ್ತೀರಿ ಎಂದು ನಾವೆಲ್ಲಾ ನಂಬಿದ್ದೇವೆ ಆದ್ದರಿಂದ ನಮಗೂ ವಿನಾಯ್ತಿ ನೀಡಿ ವರ್ಗಾವಣಾ ಅವಕಾಶ
ನೀಡಬೇಕೆಂದು ಮತ್ತೊಮ್ಮೆ ಬೇಡಿಕೊಳ್ಳತ್ತೇವೆ.
ಧನ್ಯವಾದಗಳೊಂದಿಗೆ
ಸ್ಥಳ- ಬೆಂಗಳೂರು
ಇಂತಿ ತಮ್ಮ ಅಂಗವಿಕಲ ಉಪನ್ಯಾಸಕ ವಿಶ್ವಾಸಿಗಳು
ದಿನಾಂಕ- ೨೩-೦೬-೨೦೧೮
ಲಗತ್ತುಗಳು-
ವರ್ಗಾವಣಾ ಅಧಿಸೂಚನೆ
ಅಂಗವಿಕಲರ ಅಧ್ಯಕ್ಷರ ಮನವಿ
ಡಿ ಪಿ ಆರ್ ವಿನಾಯ್ತಿ ಆದೇಶ
ಡಿ ಪಿ ಆರ್ ಕಡ್ಡಾಯ ಸೇವೆ ಆದೇಶ
ಹಕ್ಕು ಅಧಿನಿಯಮ ೧೯೯೫
ಹಕ್ಕು ಅಧಿನಿಯಮ ೨೦೧೬
ಸಿ
ಸಿ
ಗೌರವ ಪೂರ್ವಕವಾಗಿ-
ಮಾನ್ಯ ಮುಖ್ಯ ಮಂತ್ರಿಗಳು
ಮಾನ್ಯ ಮಹಿಳಾ ಮಕ್ಕಳ ಸಚಿವರು
ಮಾನ್ಯ ಮುಖ್ಯ ಕಾರ್ಯದರ್ಶಿಗಳು ಶಿಕ್ಷಣ ಇಲಾಖೆ
ಮಾನ್ಯ ಮುಖ್ಯ ಕಾರ್ಯದರ್ಶಿಗಳು ಅಂಗವಿಕಲರ ಇಲಾಖೆ
ನಿದೇಶಕರು ಪದವಿ ಪೂರ್ವ ಶಿಕ್ಷಣ ಇಲಾಖೆ
ಆಯುಕ್ತರು ಅಂಗವಿಕಲರ ಸಬಲೀಕರಣ ಇಲಾಖೆ
ಅಧ್ಯಕ್ಷರು ಅಂಗವಿಕಲರ ನೌಕರರ ಸಂಘ.


Wednesday, July 04, 2018

**RSGE**::: ಸರ್ಕಾರಿ ನೌಕರನ ನಾಗರಿಕ ಹುದ್ದೆ

ಲ.ರಾಘವೇಂದ್ರ ಸೇವಾ ಕಾನೂನು ತಜ್ಞರು
ಭಾರತ ಸಂವಿಧಾನವು ನಾಗರಿಕ ಹುದ್ದೆ ಎಂಬುದನ್ನು ಔಪಚಾರಿಕವಾಗಿ ಪರಿಭಾಷಿಸಿರುವುದಿಲ್ಲ. ಸಂವಿಧಾನದ ಅನುಚ್ಛೇದ 310ರಲ್ಲಿ ರಕ್ಷಣಾ ಸೇವೆಗಳು ಅಥವಾ ನಾಗರೀಕ ಸೇವೆಗಳು ಎಂಬ ಪದಗಳನ್ನು ಬಳಸಲಾಗಿದೆ. ಈ ಸಂದರ್ಭ ಗಮನದಲ್ಲಿಟ್ಟುಕೊಂಡು, ಯಾವುದು ರಕ್ಷಣಾ ಸೇವೆ ಅಲ್ಲವೊ, ಅದು ನಾಗರೀಕ ಸೇವೆ ಎಂದು ಮನಗಾಣಬೇಕು. ರಕ್ಷಣಾ ಸೇವೆಯಲ್ಲಿರುವವರು ಸಾರ್ವಜನಿಕ ಸಂಪರ್ಕಕ್ಕೆ ಬರುವುದಿಲ್ಲ. ಆದರೆ ನಾಗರೀಕ ಸೇವೆಯಲ್ಲಿರುವವರು ಸಾರ್ವಜನಿಕ ಸಂಪರ್ಕಕ್ಕೆ ಬರುತ್ತಾರೆ. ಆದುದರಿಂದ ನಾಗರೀಕ ಸೇವೆಗಳನ್ನು ಸಾಮಾನ್ಯವಾಗಿ ಸಾರ್ವಜನಿಕ ಸೇವೆಗಳು ಎಂದೂ ಕರೆಯಲಾಗುತ್ತದೆ. ಭಾರತ ಸರ್ಕಾರದ ಅಡಿ, ರಕ್ಷಣಾ ಸೇವೆಗಳು ಮತ್ತು ನಾಗರೀಕ ಸೇವೆಗಳು – ಎರಡೂ ಇರುತ್ತವೆ. ಆದರೆ ರಾಜ್ಯ ಸರ್ಕಾರಗಳಡಿ ರಕ್ಷಣಾ ಸೇವೆಗಳು ಇರುವುದಿಲ್ಲ.
ನಾಗರೀಕ ಮತ್ತು ನಾಗರಿಕ ಸೇವೆಗೂ ಇರುವ ವ್ಯತ್ಯಾಸ: ನಾಗರೀಕ ಸೇವೆಗಳು ಒಂದು ನಿರ್ದಿಷ್ಟ ಉದ್ದೇಶವಿರುವ ಸಮಗ್ರ ಸೇವೆಗಳಾಗಿರುತ್ತವೆ. ನಾಗರೀಕ ಸೇವೆಗಳಿಗೆ ಸಾಮಾನ್ಯವಾಗಿ ನಿರ್ದಿಷ್ಟ ವೃಂದ ಮತ್ತು ನೇಮಕಾತಿ ನಿಯಮಗಳು ಇರುತ್ತವೆ. ಆ ನಿಯಮಗಳಲ್ಲಿ ಆ ಸೇವೆಗಳ ಅತಿ ಉನ್ನತ ಹುದ್ದೆಯಿಂದ ಹಿಡಿದು, ಅತಿ ಕೆಳಹಂತದ ಹುದ್ದೆಯವರೆಗೆ ನೇಮಕಾತಿ ಕಾರ್ಯವಿಧಾನಗಳು, ನೇಮಕಾತಿಗಾಗಿ ಅರ್ಹತೆಗಳು ಮೊದಲಾದವುಗಳಿಗೆ ಸಂಬಂಧಿಸಿದ ಉಪಬಂಧಗಳಿರುತ್ತದೆ. ಅಂತಹ ನಿಯಮಗಳಲ್ಲಿ ನೇಮಕಾತಿ ಎಂದರೆ ನೇರ ನೇಮಕಾತಿ ಮತ್ತು ಪದೋನ್ನತಿಯಿಂದ ನೇಮಕಾತಿ ಸೇರಿರುತ್ತವೆ. ಒಂದು ಸೇವೆಯನ್ನು, ಸೇವೆ ಎಂದು ಯಾವಾಗ ಹೇಳುತ್ತೇವೆಂದರೆ, ಅದರ ಅತ್ಯುನ್ನತ ಹುದ್ದೆ ಮತ್ತು ಅತಿ ಕೆಳಹಂತದ ಹುದ್ದೆ ಒಂದು ಜಾಲದಲ್ಲಿ ಬಂದಾಗ, ಅದನ್ನು ನಾಗರೀಕ ಸೇವೆಗಳು ಎಂದು ಹೇಳುತ್ತೇವೆ. ಇಂತಹ ಜಾಲದಲ್ಲಿ ಯಾರು ನೇಮಕಾತಿ ಪ್ರಾಧಿಕಾರಿ, ಯಾರು ಶಿಸ್ತು ಪ್ರಾಧಿಕಾರಿ, ಮುಂತಾದ ಅಂಶಗಳನ್ನು ಶಾಸನಬದ್ಧ ನಿಯಮಗಳ ಮುಖಾಂತರ ನಿರ್ದಿಷ್ಟಪಡಿಸಲಾಗುತ್ತದೆ. ಉದಾಹರಣೆ: ಕರ್ನಾಟಕ ಸಿವಿಲ್ ಸೇವೆಗಳು(ವರ್ಗೀಕರಣ, ನಿಯಂತ್ರಣ ಮತ್ತು ಅಪೀಲು) ನಿಯಮಗಳು, 1957ರ ನಿಯಮ 5, ನಾಗರಿಕ ಸೇವೆಗಳನ್ನು ಸಮೂಹ ಎ,ಬಿ,ಸಿ ಮತ್ತು ಡಿ ಹುದ್ದೆಗಳಾಗಿ ವರ್ಗೀಕರಿಸಿರುತ್ತದೆ. ನಿಯಮ 6 ರಾಜ್ಯ ನಾಗರೀಕ ಸೇವೆಗಳನ್ನು ಷೆಡ್ಯೂಲ್ M, MM MMM ರಲ್ಲಿರುವ ಹುದ್ದೆಗಳಾಗಿ ವರ್ಗೀಕರಿಸಿರುತ್ತದೆ. ಅಲ್ಲದೆ, ಆಡಳಿತಾತ್ಮಕವಾಗಿ ನಿಯಂತ್ರಣ ಸರಪಳಿ ರೂಪದಲ್ಲಿ ಇಂತಹ ಸೇವೆಗಳಲ್ಲಿ ಅಧಿಕಾರ ಶ್ರೇಣಿ ಅಥವಾ ಹುದ್ದೆಗಳ ಶ್ರೇಣಿ ಜಾರಿಯಲ್ಲಿರುತ್ತವೆ. ಇದಕ್ಕೆ ವಿರುದ್ಧವಾಗಿ ಅಡ್ವಕೇಟ್ ಜನರಲ್ ಹುದ್ದೆ ಪ್ರತ್ಯೇಕ ಹುದ್ದೆ, ಸರ್ಕಾರಿ ವಕೀಲರ ಹುದ್ದೆ ಪ್ರತ್ಯೇಕ ಹುದ್ದೆ, ಆದರೆ ಕರ್ನಾಟಕ ಸಾರ್ವಜನಿಕ ಅಭಿಯೋಗಗಳ ಸೇವೆ ಒಂದು ಸಿವಿಲ್ ಸೇವೆ.
ಸಂವಿಧಾನದ ಅನುಚ್ಛೇಧ 311ರ ಉದ್ದೇಶಕ್ಕೆ ರಾಜ್ಯದಡಿ ಸೇವೆ ನಿರ್ಧಾರ: ಒಬ್ಬ ವ್ಯಕ್ತಿ ರಾಜ್ಯದಡಿ ಸೇವೆ ಸಲ್ಲಿಸುತ್ತಿದ್ದಾನೊ ಅಥವಾ ಇಲ್ಲವೊ ಎಂಬುದನ್ನು ಕೆಳಗಿನ ವಿಧಾನದಿಂದ ತಿಳಿಯಬಹುದು.
# ಪರಸ್ಪರ ಸಂಬಂಧದಲ್ಲಿ ಸೇವೆಯ ಅಂಶ ಇರಬೇಕು. ವ್ಯಕ್ತಿಯನ್ನು, ರಾಜ್ಯ ಯಾವುದಾದರೂ ನಿರ್ದಿಷ್ಟ ಸೇವೆ ಸಲ್ಲಿಸಲು ನೇಮಿಸಿರಬೇಕು. ಆ ಸೇವೆ ಪೂರ್ಣಕಾಲಿಕವಾಗಿಯಾದರೂ ಇರಬಹುದು ಅಥವಾ ಅರೆಕಾಲಿಕವಾದರೂ ಆಗಿರಬಹುದು.
# ವ್ಯಕ್ತಿ ಮತ್ತು ರಾಜ್ಯದ ನಡುವೆ ಯಜಮಾನ-ಸೇವಕನ ಸಂಬಂಧವಿರಬೇಕು. ಇಂತಹ ಸಂಬಂಧ ಇದೆಯೇ ಇಲ್ಲವೇ ಎಂಬುದನ್ನು ಕೆಳಗಿನ ಅಂಶಗಳಿಂದ ತಿಳಿದುಕೊಳ್ಳಬಹುದು.
# ಆಯ್ಕೆ ಮಾಡಲು ಮತ್ತು ನೇಮಿಸಲು ರಾಜ್ಯಕ್ಕೆ ಅಧಿಕಾರ ಇದೆಯೆ?
# ನೇಮಿಸಲ್ಪಟ್ಟ ವ್ಯಕ್ತಿಯನ್ನು ಅಮಾನತುಗೊಳಿಸುವ ಮತ್ತು ಸೇವೆಯಿಂದ ವಜಾ ಮಾಡುವ ಅಧಿಕಾರ ರಾಜ್ಯಕ್ಕೆ ಇದೆಯೆ?
# ನೇಮಿಸಲ್ಪಟ್ಟ ವ್ಯಕ್ತಿಯ ಕಾರ್ಯನಿರ್ವಹಣೆ ಮತ್ತು ಕಾರ್ಯವಿಧಾನ ರಾಜ್ಯದ ನಿಯಂತ್ರಣಕ್ಕೆ ಒಳಪಟ್ಟಿದೆಯೆ?
# ನೇಮಿಸಲ್ಪಟ್ಟ ವ್ಯಕ್ತಿಗೆ ರಾಜ್ಯ ಯಾವುದಾದರೂ ವೇತನ ಅಥವಾ ಸಂಭಾವನೆ ನಗದು ರೂಪದಲ್ಲಾಗಲಿ ಅಥವಾ ಬೇರೆ ಯಾವುದೇ ರೂಪದಲ್ಲಾಗಲಿ ಕೊಡುತ್ತಿದೆಯೆ?
ಮೇಲಿನ ಯಾವುದಾದರೂ ಪ್ರಶ್ನೆಗೆ ಹೌದು ಎಂಬ ಉತ್ತರ ಬಂದರೆ, ನೇಮಿಸಲ್ಪಟ್ಟ ವ್ಯಕ್ತಿ ರಾಜ್ಯದ ಸೇವಕನೆಂದು ನಿರ್ಣಯಿಸಬಹುದು.

**RSGE**::: *JYOTHI SANJEEVINI PLAN:*

*"ಜ್ಯೋತಿ ಸಂಜೀವಿನಿ ಯೋಜನೆ- Cashless Medical Treatment"*
HRMS ನಲ್ಲಿ ,
(೧) ಸರ್ಕಾರಿ ನೌಕರರ ಆಧಾರ್ ನಂ. & ಆತನ ಕುಟುಂಬ ಸದಸ್ಯರ ಆಧಾರ್ ನಂ. Register ಮಾಡಿಸಿ.
(೨) ಜ್ಯೋತಿ ಸಂಜೀವಿನಿ ಯೋಜನೆಯು ಕೇವಲ 7 ಮಾರಣಾಂತಿಕ ಖಾಯಿಲೆಗಳ ಚಿಕಿತ್ಸೆಗೆ ಮಾತ್ರ ಸಂಬಂಧಿಸಿದೆ
1. ಹೃದ್ರೋಗ
2. ಕ್ಯಾನ್ಸರ್
3. ನರ ರೋಗ
4. ಯುರಿನರಿ (ಕಿಡ್ನಿ)
5. ಸುಟ್ಟ ಗಾಯ
6. ಪಾಲಿಟ್ರಾಮ
7. ಶಿಶುಗಳ ಶಸ್ತ್ರಚಿಕಿತ್ಸೆ.
(೩) ಜ್ಯೋತಿ ಸಂಜೀವಿನಿ ಯೋಜನೆಗೆ ಒಳಪಡುವ ಆಸ್ಪತ್ರೆಗಳಲ್ಲಿ ಮಾತ್ರ ಚಿಕಿತ್ಸೆ ಪಡೆಯಬೇಕು.
*ಆಸ್ಪತ್ರೆಗೆ ದಾಖಲಾದ ನಂತರ ಏನು ಮಾಡಬೇಕು..?*
ಆ ಆಸ್ಪತ್ರೆಯ ADMIN ರವರನ್ನು ಭೇಟಿ ಮಾಡಿ,
(೧) ಆ ಆಸ್ಪತ್ರೆಯು 'ಜ್ಯೋತಿ ಸಂಜೀವಿನಿ ಯೋಜನೆ' ಗೆ ಒಳಪಡುತ್ತದೆಯೇ ಖಾತ್ರಿ ಪಡಿಸಿಕೊಳ್ಳಿ
(ಜ್ಯೋತಿ ಸಂಜೀವಿನಿ ಯೋಜನೆಯ ಆಸ್ಪತ್ರೆಗಳ ಪಟ್ಟಿ ಆಗಾಗ್ಗೆ ಬದಲಾಗುತ್ತಿರುತ್ತದೆ)
(೨) ನಿಮ್ಮ ಖಾಯಿಲೆಯು ಜ್ಯೋತಿ ಸಂಜೀವಿನಿ ಯೋಜನೆಯಡಿಯಲ್ಲಿ ಬರುತ್ತದೆಯೇ, ಇಲ್ಲವೇ ಎಂದು ADMIN/ ವೈದ್ಯರಿಂದ ಖಚಿತಪಡಿಸಿಕೊಳ್ಳಿ
(೩) ADMIN ರಲ್ಲಿ ನೀವು ಸರ್ಕಾರಿ ನೌಕರರೆಂದು ಪರಿಚಯಿಸಿಕೊಂಡು, ನಿಮ್ಮ ಮೊದಲ KGID ನಂ. ನೀಡಿ
(೪) ಆ ಆಸ್ಪತ್ರೆಯ E-MAIL ID ಪಡೆದು, ನಿಮ್ಮ HRMS SALARY CERTIFICATE & HRMS DETAILS ಆ ಆಸ್ಪತ್ರೆಯ E-MAIL ID ಗೆ ಇ-ಮೇಲ್ ಮಾಡಲು ನಿಮ್ಮ CLERK/ CASE WORKER ರಲ್ಲಿ ವಿನಂತಿಸಿಕೊಳ್ಳಿ.
(ಅಥವಾ ನಿಮ್ಮ HRMS SALARY SLIP & HRMS DETAILS print out ನಿಮ್ಮ ಬಳಿ ಇದ್ದಲ್ಲಿ ಆಸ್ಪತ್ರೆಗೆ ನೀಡಿ)
(೫) ರೋಗಿಯ VOTER ID ಅಥವಾ AADHAAR CARD ಅಥವಾ DL Zerox Copy ಆಸ್ಪತ್ರೆಗೆ ನೀಡಿ.
*ಸೂಚನೆ:*
ಜ್ಯೋತಿ ಸಂಜೀವಿನಿ ಯೋಜನೆಯಲ್ಲಿ ಒಂದು ರೂಪಾಯಿ ಕೂಡ ಖರ್ಚು ಆಗದು, ಇದು ಸಂಪೂರ್ಣ ಉಚಿತ..
ಇದು ರಾಜ್ಯ ಸರ್ಕಾರದ ಅದ್ಭುತವಾದ & ಅತ್ಯುತ್ತಮವಾದ ಯೋಜನೆ.
ಈ ರೀತಿಯಲ್ಲಿ *ಜ್ಯೋತಿ ಸಂಜೀವಿನಿ* ಯೋಜನೆಯ ಪ್ರಯೋಜನ ಪಡೆಯಬಹುದು
(HRMS ನಲ್ಲಿ ನಿಮ್ಮ ಕುಟುಂಬ ಸದಸ್ಯರ ಆಧಾರ್ ನಂ. ನೋಂದಣಿ ಸಾಧ್ಯವಾಗದಿದ್ದರೆ ಯೋಚಿಸುವ ಅಗತ್ಯವಿಲ್ಲ... ನಿಮ್ಮ ಆಧಾರ್ ನಂ. ನೋಂದಣಿ ಆಗಿದ್ದರೆ ಸಾಕು...)
*#ಜ್ಯೋತಿ ಸಂಜೀವಿನಿ HELP LINE: 1800-4258-330*

**RSGE**::: ಅಂಧರಾಗಿದ್ದರೆ ಆಸ್ತಿಯಲ್ಲಿ ಭಾಗ ಇಲ್ಲವೇ??

ಎಸ್. ಸುಶೀಲಾ ಚಿಂತಾಮಣಿ
# ತಂದೆ ತಾಯಿಗೆ ನಾವು ಮೂವರು ಮಕ್ಕಳು. ನಮ್ಮ ತಂದೆಗೆ ತಾತನಿಂದ ಬಂದಿದ್ದ ಆಸ್ತಿಯನ್ನು ಮೂರೂ ಮಕ್ಕಳಿಗೆ ವಿಭಾಗ ಮಾಡಿಕೊಟ್ಟಿದ್ದಾರೆ. ಆದರೆ, ನಮ್ಮ ತಂದೆ ತಾಯಿಗೆ ಅವರ ಸೊಸೆಯರ ಮತ್ತು ಮೊಮ್ಮಕ್ಕಳ ವರ್ತನೆಯಿಂದ ಬೇಸರವಾಗಿದೆ. ನಮ್ಮ ತಂದೆ ತಾಯಿಯ ಕಾಲಾನಂತರ ಈ ಆಸ್ತಿಗಳಲ್ಲಿ ಸೊಸೆಯರಿಗೆ ಮತ್ತು ಮಕ್ಕಳಿಗೆ ಭಾಗ ಹೋದರೆ ಹೇಗೆ ಎನ್ನುವ ಯೋಚನೆಯಿದೆ. ಸೊಸೆಯರಿಗೆ ಮತ್ತು ಮಕ್ಕಳಿಗೆ ಈ ಆಸ್ತಿಗಳಲ್ಲಿ ಭಾಗ ಹೋಗಲೇಬಾರದು ಎಂದು ಬರೆಸಬಹುದೇ? ಇದರಿಂದ ಏನಾದರೂ ತೊಂದರೆ ಆಗುತ್ತದೆಯೇ?
ಹೆಸರು ಊರು ಬೇಡ
ನೀವು ವೃಥಾ ಯೋಚನೆ ಮಾಡುತ್ತಿದ್ದೀರಿ. ನಿಮ್ಮ ತಂದೆಗೆ ಅವರ ತಂದೆಯಿಂದ ಬಂದ ಆಸ್ತಿ ಪ್ರತ್ಯೇಕ ಆಸ್ತಿ ಆಗುತ್ತದೆ. ಅದನ್ನು ಅವರು ತಮ್ಮ ಇಚ್ಛೆ ಬಂದಂತೆ ವಿಲೇವಾರಿ ಮಾಡಬಹುದು. ಅವರು ಈಗಾಗಲೇ ಈ ಆಸ್ತಿಯನ್ನು ಮೂರು ಮಕ್ಕಳಿಗೂ ಹಂಚಿ ವಿಭಾಗ ಮಾಡಿದ್ದಾರೆ. ಈಗ ಅದು ನಿಮ್ಮಗಳ ಪ್ರತ್ಯೇಕ ಆಸ್ತಿ ಆಗುತ್ತದೆ. ನೀವು ಆ ಆಸ್ತಿಗಳನ್ನು ನಿಮ್ಮ ತಂದೆಯ ಜೀವಿತ ಕಾಲದಲ್ಲಿಯೇ ಏನು ಬೇಕಾದರೂ ಮಾಡಬಹುದು. ನೀವು ನಿಮ್ಮ ಜೀವಿತ ಕಾಲದಲ್ಲಿ ಈ ಆಸ್ತಿಗಳನ್ನು ಪರಭಾರೆ ಮಾಡದೆ ತೀರಿಕೊಂಡರೆ ಮಾತ್ರ ಆ ಆಸ್ತಿ ನಿಮ್ಮ ಹೆಂಡತಿ ಮತ್ತು ಮಕ್ಕಳಿಗೆ ಸಮವಾಗಿ ಭಾಗ ಆಗುತ್ತದೆ. ನಿಮ್ಮ ತಂದೆ ಬದುಕಿರುವವರೆಗೆ ಅವರಿಂದ ನಿಮಗೆ ಬಂದ ಆಸ್ತಿಯಲ್ಲಿ ನಿಮ್ಮ ನಿಮ್ಮ ಹೆಂಡತಿಯರಿಗೆ ಮತ್ತು ನಿಮ್ಮ ಮಕ್ಕಳಿಗೆ ಹಕ್ಕು ಇರುವುದಿಲ್ಲ. ಆದರೆ ನಿಮ್ಮ ತಂದೆ ತೀರಿಕೊಂಡ ಬಳಿಕ ಮಕ್ಕಳಿಗೆ ನಾಲ್ಕನೇ ತಲೆಯಿಂದ ಬಂದ (ತಂದೆಯ ಅಜ್ಜನಿಂದ ಬಂದ) ಆಸ್ತಿಯಾಗುವುದರಿಂದ ಅದರಲ್ಲಿ ಹಕ್ಕು ಬರುತ್ತದೆ. ನಿಮ್ಮ ತಂದೆ ತಾಯಿಯ ಕಾಲಾನಂತರ, ಸೊಸೆಯರಿಗೆ ಮತ್ತು ಮಕ್ಕಳಿಗೆ ಈ ಆಸ್ತಿಗಳಲ್ಲಿ ಭಾಗ ಹೋಗಲೇಬಾರದು ಎಂದು ಅವರಿಂದ ಬರೆಸಲು ಆಗುವುದಿಲ್ಲ. ನೀವು ನಿಮ್ಮ ತಂದೆಯ ಆಸೆ ತೀರಿಸಬೇಕೆಂದರೆ ಈಗಲೇ ಆಸ್ತಿ ಮಾರಿ ಹಣವನ್ನು ಬ್ಯಾಂಕಿನಲ್ಲಿ ಹಾಕಿ ಇಟ್ಟುಕೊಳ್ಳಬಹುದು ಅಷ್ಟೆ.
# ನಮ್ಮ ತಂದೆಗೆ ನಾವು ಮೂವರು ಮಕ್ಕಳು. ನನಗೆ ಒಬ್ಬ ಅಕ್ಕ, ಒಬ್ಬ ತಮ್ಮ. ನನಗೆ ಕಣ್ಣು ಕಾಣಿಸುವುದಿಲ್ಲ. ಕೆಲಸದಲ್ಲಿ ಇದ್ದೇನೆ. ನಮ್ಮ ತಂದೆ ತಾಯಿ ಇಬ್ಬರೂ ಇಲ್ಲ. ನಮ್ಮ ತಂದೆ ಎರಡು ಮಹಡಿ ಇರುವ ಒಂದು ದೊಡ್ಡ ಮನೆ ಕಟ್ಟಿದ್ದರು. ಒಂದು ಸೈಟೂ ಇದೆ. ಆ ಮನೆ ಕಟ್ಟಲು ನಾನು ಮತ್ತು ಅಕ್ಕ ಹಣ ಕೊಟ್ಟಿದ್ದೆವು. ಆಮೇಲೆ ಮನೆ ಗಟ್ಟಿ ಮಾಡಲು ತಮ್ಮನಿಗೂ ಹಣ ಕೊಟ್ಟೆವು. ಈಗ ತಮ್ಮ ನನ್ನನ್ನು ಕಡೆಗಣಿಸುತ್ತಿದ್ದಾನೆ. ಅವನ ಹೆಂಡತಿಯ ಜತೆ ಸೇರಿ ಮನೆ ಬಿಟ್ಟು ಹೋಗು ಎನ್ನುತ್ತಿದ್ದಾನೆ. ನಾನು ಅಂಧಳಾಗಿರುವುದರಿಂದ ನನಗೆ ಕೋರ್ಟಿಗೆ ಹೋದರೂ ಭಾಗ ಬರುವುದಿಲ್ಲ ಎನ್ನುತ್ತಿದ್ದಾನೆ. ನಾನು ಮನೆಗೆ ಕೊಟ್ಟಿರುವ ದುಡ್ಡೂ ಕೊಡುವುದಿಲ್ಲ ಎನ್ನುತ್ತಿದ್ದಾನೆ. ನಾನೀಗ ಏನು ಮಾಡಬೇಕು? ದಯಮಾಡಿ ತಿಳಿಸಿ, ಸಹಾಯ ಮಾಡಿ.
-ರೂಪಾ ಊರು ಬೇಡ
ನೀವು ಹೆದರಬೇಕಾಗಿಲ್ಲ. ನಿಮ್ಮ ತಂದೆಯ ಆಸ್ತಿಯಲ್ಲಿ ನಿಮಗೆ, ನಿಮ್ಮ ಅಕ್ಕನಿಗೆ ಮತ್ತು ನಿಮ್ಮ ತಮ್ಮನಿಗೆ ಮೂವರಿಗೂ ಮೂರನೇ ಒಂದು ಭಾಗ ಸಮಪಾಲು ಇರುತ್ತದೆ. ನಿಮಗೆ ನಿಮ್ಮ ಭಾಗ ಬೇಕೆಂದು ಕೂಡಲೇ ನ್ಯಾಯಾಲಯದಲ್ಲಿ ವಿಭಾಗದ ಕೇಸು ಹಾಕಿ. ಮನೆಯಿಂದ ನಿಮ್ಮನ್ನು ತಮ್ಮ ಹೊರಹಾಕದಂತೆ ತಡೆ ಆಜ್ಞೆಯನ್ನೂ ನೀವು ಪಡೆಯಬಹುದು. ದೈಹಿಕ ನ್ಯೂನ್ಯತೆಯಿಂದ ಆಸ್ತಿಯಲ್ಲಿ ಭಾಗದ ಹಕ್ಕು ಹೋಗುವುದಿಲ್ಲ. ಕುರುಡರಿಗೂ ಆಸ್ತಿಯಲ್ಲಿ ಹಕ್ಕು ಇದ್ದೇ ಇರುತ್ತದೆ. ಇನ್ನು ಮನೆ ಕಟ್ಟಲು ತಂದೆಗೆ ಮತ್ತು ತಮ್ಮನಿಗೆ ನೀವು ಕೊಟ್ಟ ಹಣ ನಿಮಗೆ ಬರುವುದಿಲ್ಲ. ಅದನ್ನು ನೀವು ಅವರಿಗೆ ಸಾಲರೂಪವಾಗಿ ಕೊಟ್ಟಿದ್ದರೆ, ಸಾಲ ಕೊಟ್ಟ ಮೂರು ವರ್ಷಗಳ ಒಳಗೆ ಅದನ್ನು ವಾಪಸ್ ಪಡೆಯಲು ಕೇಸು ಹಾಕಬಹುದಿತ್ತು. ಹಾಗೆಯೇ ವಿಶ್ವಾಸದಿಂದ ಕೊಟ್ಟಿದ್ದರೆ ಏನೂ ಮಾಡಲಾಗುವುದಿಲ್ಲ.
(ಪ್ರತಿಕ್ರಿಯಿಸಿ: susheelasarathi@yahoo.co.in)
(ಲೇಖಕರು ಹೈಕೋರ್ಟ್ ವಕೀಲರು, ಹಿರಿಯ ಮಧ್ಯಸ್ಥಿಕೆಗಾರರು)
(ಸೂಚನೆ: ದಯವಿಟ್ಟು ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕಳಿಸಬೇಡಿ.)
ಪ್ರತಿ ಮಂಗಳವಾರ ಪ್ರಕಟವಾಗುವ ಈ ಅಂಕಣದಲ್ಲಿ, ಮಹಿಳೆಯರು ಕುಟುಂಬ, ದಾಂಪತ್ಯ ಇತ್ಯಾದಿಗಳಿಗೆ ಸಂಬಂಧಿಸಿದ ಕಾನೂನಾತ್ಮಕ ವಿಷಯಗಳ ಕುರಿತಾದ ಪ್ರಶ್ನೆಗಳನ್ನು ಕೇಳಬಹುದು.
ನಮ್ಮ ವಿಳಾಸ:
ಸಂಪಾದಕರು, ವಿಜಯವಾಣಿ, ನ್ಯಾಯದೇವತೆ ವಿಭಾಗ,
ನಂ. 24, ಸಾಯಿರಾಂ ಟವರ್ಸ್, ಮೊದಲನೇ ಮಹಡಿ, 5ನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು – 560 018.

ಹೆಚ್ಚು ಓದಿದವು