Thursday, May 24, 2018

**RSGE**::: profession tax and excemptions

KARNATAKA PROFESSION TAX
1. Profession tax is levied under the Karnataka Tax on Professions,
Trades, Callings and Employments Act, 1976:
Profession Tax shall be paid by every person exercising any
Profession or calling or is engaged in any trade or holds any appointment,
public or private as specified in the Schedule to the Act.
[However no tax is payable by persons who have attained age of sixty
five years. Also no tax is payable for holding any Profession for less than
120 days in that year.]
2. A person is defined under the Act to mean, any person who is engaged
in any Profession, trade, callings or employment in the State of Karnataka
and includes :-
· Hindu undivided family (HUF)
· Firm
· Company
· Corporations
· Other Corporate bodies
· Any Society
· Any Club or Association.
[Every branch of a firm, company, corporation or other corporate body, any
society, club or association is treated as separate person for the purpose of
tax liability.]
3. REGISTRATION:
In case of salary or wage earners whose salary or wage for a month is
not less than Rs.10,000/-, the employer is liable to deduct Profession Tax
payable under this Act. It is the responsibility of the employer to deduct tax
and pay on behalf of all such employees within 20 days of expiry of the
month. If the amount of tax deducted in a month is less than Rs.5,000/-, the
employer could opt for payment of such tax within 20 days of expiry of a
Quarter. [Quarter means period ending 31st May, 31st August, 30th
November and 28thor 29th February ].
All such employers other than Government shall obtain a Certificate
of Registration from the Profession Tax Officer of the jurisdiction.
4. ENROLLMENT:
Class of persons enumerated in Sl. No.2 to 74 of the Schedule
(Annexure 1) shall obtain a Certificate of Enrollment from the Profession
Tax Officer of the jurisdiction. Such persons with Enrollment Certificate
shall pay tax every year before 30th of April at the rates specified in Column
3 of the Schedule.
5 EXEMPTION:
The following class of persons are exempted from payment of
Profession Tax.
a. All charitable and philanthropic hospitals or nursing homes
situated in places below the taluk level in all districts of the State
except Bangalore and Bangalore Rural District.
b. Directors of Companies registered in Karnataka and nominated by
the financing agencies owned or controlled by the State
Government or by other statutory bodies.
c. Foreign technicians employed in the State provided their
appointments are approved by the Government of India for the
purpose of exemption from payment of income tax for the said
period( exemption is for a period of 2 years from the date of their
joining duty).
d. Combatant and civilian non combatant members of the Armed
Forces who are governed by the Army Act, the Navy Act and the
Air Force Act.
e. Salaried or wage earning blind persons.
f. Salaried or wage earning deaf and dumb persons
g. Holders of permits of single taxi or single three wheeler goods
vehicle.
h. Institutes teaching Kannada or English Shorthand or Typewriting.
i. A Physically handicapped person not less than 40% of permanent
disability (subject to production of certificate from the HOD of
Government Civil Hospital).
j. An ex-serviceman not falling under Sl No.1 of the Schedule.
k. A person having single child and who has undergone sterilization
operation, subject to production of a certificate from the District
Surgeon, Government Civil Hospital, for having undergone such
operation.
l. Central Para Military Force (CPMF) Personnel.
m. Persons running educational institutions in respect of their
branches teaching classes upto twelfth standard or pre-University
Education.
6. PENALTIES UNDER PROFESSION TAX ACT, 1976.
i) Penalty for non-registration in case of employer – Rs.1,000/-
In case of other persons Rs.500/-.
ii) Penalty for non filing of Returns for an employer Rs.250/-.
iii) Penalty for non-payment of tax by enrolled person and
registered employer with interest at rate of 1.25% per month
and Penalty not exceeding 50% of the tax amount due.
ANNEXURE 1
Schedule to KTPTCE Act 1976.
(Separate attachment enclosed in file named SCHEDULE)
From 01-04-2011 provision has been made for the Registration /
Enrollment, payment and filing of Returns under Profession Tax Act
online through website www.http:\\..................................

**rsge**:: khajane 2 sutragalu 1 to 50



ದಿನಕೊಂದು ಸೂತ್ರ
(೧)

"ತಪ್ಪು ಬಿಲ್ಲು – ಕ್ಲೈಂ ವಿಧದ ಬಿಲ್ಲುಗಳನ್ನು ಆಕ್ಷೇಪಿಸಬೇಕು"

೧) ಡಿ.ಡಿ.ಓ ಗಳು ಖಜಾನೆ-೨ ರಲ್ಲಿ ಸಲ್ಲಿಸುವ ಎಲ್ಲಾ ಬಿಲ್ಲುಗಳು ಹಾಗೂ ಎಲ್ಲ ವಿಧದ ಕ್ಲೇಮುಗಳ ಬಗ್ಗೆ ಜ್ಞಾನ ಇರತಕ್ಕದ್ದು.

೨) ಡಿ.ಡಿ.ಓ ಖಜಾನೆ-೨ ರಡಿ  ಸಿದ್ದಪಡಿಸುವಾಗ  ಯಾವ ಬಿಲ್ಲುಗೆ  ಯಾವ ಕ್ಲೇಮು ಎಂಬ ಸ್ಷಷ್ಟತೆ ಇರಬೇಕು?

೩) ಡಿ.ಡಿ.ಓ ತಪ್ಪಾದ ಕ್ಲೇಮು ‌ಆಯ್ಕೆ ಮಾಡಿ ಬಿಲ್ಲು ಸಲ್ಲಿಸಿದಲ್ಲಿ ಅದನ್ನು ಅನುಮೋದಿಸಬಾರದು.
ಉದಾಹರಣೆ: ಸಾಮಗ್ರಿಗಳ ವೆಚ್ಚ (stationary expd claim) ಕ್ಕೆ
 ಡಿ.ಡಿ.ಓ
 ಡಿ.ಸಿ.ಬಿಲ್ಲು ಹಾಗೂ ಡಿ.ಸಿ ಬಿಲ್ಲು (ಕ್ಲೇಮು) ಎಂದು  ಬಿಲ್ಲುನ್ನು ಸಲ್ಲಿಸಿದಲ್ಲಿ ಅದನ್ನು ಆಕ್ಷೇಪಿಸಬೇಕು

ಕಾರಣ:ಡಿ.ಸಿ ಬಿಲ್ಲು (ಕ್ಲೇಮು) ಹಾಗೂ stationary
ಕ್ಲೇಮುಗಳಿಗೆ ಖಜಾನೆ-೨ ರಲ್ಲಿ Validations ಬೇರೆ ಇರುತ್ತವೆ

(ನಿರೂಪಣೆ ಡಾ| ಪಾಷಾ)


ದಿನಕ್ಕೊಂದು ಪ್ರಕ್ರಿಯೆ
(೧)

ಇ-ಪಾವತಿ ಸಮನ್ವಯ ಏಕೆ 
ಮಾಡಬೇಕು?(Why it is?)

ಇ-ಪಾವತಿ 
ಸಮನ್ವಯಮಾಡುವುದರಿಂದ ಈ ಕೆಳಕಂಡಂತೆ ಪ್ರಯೋಜನೆಗಳು ಇರುತ್ತವೆ.

1.         ವಿಫಲವಾದ ಪಾವತಿಗಳ (Failed e-payments) ಸಂಖ್ಯೆ ಹಾಗೂ ಮೊತ್ತ ಕಂಡುಹಿಡಿಯಬಹುದು.

   2. ವಿಫಲವಾದ ಪಾವತಿಗಳ  (Failed e-payments) 
ಸ್ಕ್ರೋಲ್‍ಗಳನ್ನು(RN/CN)
 ಅನುಮೋದಿಸಿದಲ್ಲಿ ಸಂಬಂದಿಸಿದ ಡಿ.ಡಿ.ಓ ಗಳು 
ವಿಫಲತೆ ಕಾರಣ ಕಂಡುಕೊಳ್ಳಬಹುದು.ಹಾಗೂ  ಮರುಪಾವತಿಗೆ 
ಕ್ರಮಕೈಗೊಳ್ಳುತ್ತಾರೆ.

3. ಪಲಾನುಭವಿಗೆ (recipient)ಖಜಾನೆ-2 ದಿಂದ ತನಗೆ ಸಿಗಬೇಕಾದಮೊತ್ತ ಸಮಯಕ್ಕೆ ಸರಿಯಾಗಿ ಸಿಗದಿದ್ದಲ್ಲಿ ಅದಕ್ಕೆ ಕಾರಣ ಹಾಗೂ ಪರಿಹಾರ ಕಂಡುಕೊಳ್ಳಬಹುದು.

   4. ಖಜಾನೆ-2 (database) ಇಂದ ಆಗೂವ ಲೋಪಗಳನ್ನು ಕಂಡುಹಿಡಿಯಬಹುದು.

  5.  ಮಹಾಲೇಖಪಾಲರ ಪರಿವೀಕ್ಷಣೆಯಲ್ಲಿ ಲೆಕ್ಕಗಳಸಮನ್ವಯಯಾಗಿರುವುದೇ ಎಂಬ ಪ್ರಶ್ನೆಗಳಿಗೆ  
ಉತ್ತರಕಂಡುಕೊಳ್ಳಬಹುದು.

  6.  ನಿಮ್ಮ ವಿವೇಚನೆಯಿಂದ ತಂತ್ರಾಶದ ತಪ್ಪುಗಳನ್ನು/ ವಿಳಂಬವನ್ನು ತಪ್ಪಿಸಬಹುದು

(ನಿರೂಪಣೆ: ಅಮರೆ ಗೌಡ ಮಾಲಿ)

 ದಿನಕೊಂದು ಸೂತ್ರ(2)

2.ದಾಖಲೆಗಳು ಇಲ್ಲದಿದ್ದಾಗ ಅಥವಾ ಡಿಡಿಓರವರ ಸಹಿ ಬಿಟ್ಟು ಹೋಗಿದ್ದಾಗ ಬಿಲ್ಲುಗಳನ್ನು ಆಕ್ಷೇಪಿಸದೆ ತಡೆಹಿಡಿಯುವ (Bills on Hold) ಪ್ರಕ್ರಿಯೆನ್ನು ಪಾಲಿಸುವುದು.

ಖಜಾನೆ-2ರಲ್ಲಿ ಬಿಓಎ, ಹೆಚ್.ಎ, ಹಾಗೂ ಬಿಎಓ ಮೂರು ಪಾತ್ರಗಳಲ್ಲಿ(roles) ಬಿಲ್ಲನ್ನು ತಡೆಹಿಡಿಯುವ ಆಯ್ಕೆಯು ಲಭ್ಯವಿರುತ್ತದೆ. ಯಾವುದೇ ಒಂದು ಬಿಲ್ಲನ್ನು ಪರಿಶೀಲಿಸುವಾಗ ಕ್ಲೈಂಗಳು ನಿಯಮಾನುಸಾರವಿಲ್ಲದಿದ್ದಲ್ಲಿ ಸಿಸ್ಟಂನಲ್ಲಿ ಸಂಬಂಧಿಸಿದ ನಿಯಮಗಳನ್ನು ಉಲ್ಲೇಖಿಸಿ ಆಕ್ಷೇಪಿಸಬೇಕು. ಇಂತಹ ಆಕ್ಷೇಪಿತ ಬಿಲ್ಲುಗಳನ್ನು Return Memo ನೊಂದಿಗೆ ಸಂಬಂಧಿಸಿದ ಡಿಡಿಓಗಳಿಗೆ ಹಿಂತಿರುಗಿಸಬೇಕು.
ಒಂದು ವೇಳೆ ಬಿಲ್ಲು ನಿಯಮಾನುಸಾರವಿದ್ದು, ಸಣ್ಣ ಪುಟ್ಟ ವ್ಯತ್ಯಯಗಳು ಅಂದರೆ, ಸಹಿ ಬಿಟ್ಟುಹೋಗಿರುವುದು, ಲಗತ್ತನ್ನು ಲಗತ್ತಿಸದಿರುವುದು, ಮುಂತಾದ ಕಾರಣಗಳಿದ್ದಲ್ಲಿ, ಅಂತಹ ಬಿಲ್ಲುಗಳನ್ನು ಆಕ್ಷೇಪಿಸದೇ ಬಿಲ್ಲನ್ನು ತಡೆಹಿಡಿದು ಅವಶ್ಯಕತೆಗಳು ಪೂರ್ಣಗೊಂಡ ನಂತರ ತೀರ್ಣಗೊಳಿಸುವ ಪ್ರಕ್ರಿಯೆಯನ್ನು ಕೈಗೊಳ್ಳುವುದು.


ದಿನಕೊಂದು ಸೂತ್ರ(3)
ಅವಶ್ಯಕತೆಗಳ ಸಂಬಂಧ ತಾಳೆಪಟ್ಟಿಯಲ್ಲಿ (Check list) ಐಟಂವಾರು ಪರಿಶೀಲಿಸಬೇಕು. ಹಾಗೂ ಯಾವುದೇ ನ್ಯೂನ್ಯತೆಗಳಿಗಾಗಿ ಸಿಸ್ಟಂನಲ್ಲಿ ಆಕ್ಷೇಪಿಸಬೇಕ


ಮುಖ್ಯ ಲೆಕ್ಕಿಗರು ಬಿಲ್ಲುಗಳಿಗೆ ಸಂಬಂಧಿಸಿದಂತೆ, ಅವಶ್ಯಕತೆಗಳನ್ನು (Requirements as per bill type and claim type) ತಾಳೆಪಟ್ಟಿಯಲ್ಲಿ (chicklist) ಐಟಂವಾರು ಪರಿಶೀಲಿಸಬೇಕು. ಯಾವುದೇ ನ್ಯೂನ್ಯತೆಗಳಿದ್ದಲ್ಲಿ ಸಿಸ್ಟಂನಲ್ಲಿ ಆಕ್ಷೇಪಿಸಬೇಕು.
ಮುಖ್ಯ ಲೆಕ್ಕಿಗರು ಬಿಲ್ಲನ್ನು ತೀರ್ಣಗೊಳಿಸಲು ಪರಿಶೀಲಿಸುವಾಗ ಮುದ್ರಿತ ಬಿಲ್ಲಿನ ಪ್ರತಿಯನ್ನು ಹಾಗೂ ಅದರ ಲಗತ್ತುಗಳನ್ನು ಐಟಂವಾರು ಪರಿಶೀಲಿಸಬೇಕು. ಈ ರೀತಿ ಪರಿಶೀಲಿಸುವಾಗ ಅವಶ್ಯಕ ದಾಖಲಾತಿಗಳಿದ್ದಲ್ಲಿ, ಉದಾ: ಮಂಜೂರಾತಿ ಆದೇಶ, ದಾಸ್ತಾನು, ಪ್ರಮಾಣಪತ್ರ, ಎಂ.ಸಿ.ಇ-7, ಕಡಿತಗಳಿಗೆ ಸಂಬಂಧಿಸಿದಂತೆ ಷೆಡ್ಯೂಲ್/ಚಲನ್ ಇತ್ಯಾದಿ ಇವುಗಳು ಇರುವ ಕುರಿತು ತಾಳೆಪಟ್ಟಿಯಲ್ಲಿನ ಸಂಬಂಧಿಸಿದ ಚೆಕ್ ಬಾಕ್ಸ್ ನಲ್ಲಿ ಟಿಕ್ ಮಾಡುವ ಮೂಲಕ ಖಚಿತಪಡಿಸಬೇಕು. ಈ ರೀತಿ ಟಿಕ್ ಮಾಡದೇ ಖಾಲಿ ಬಿಟ್ಟಲ್ಲಿ ಬಿಲ್ಲು ಸದರಿ ದಾಖಲಾತಿ ಇರುವುದಿಲ್ಲವೆಂದು ಆಕ್ಷೇಪಿಸುತ್ತದೆ.

ದಿನಕ್ಕೊಂದು ಸೂತ್ರ

ಖಜಾನೆ-೨ ರ ಬಿಲ್ಲುಗಳನ್ನು ಡಿ.ಎಸ್.ಸಿ.ಬಳಸಿ ಅನುಮೋದಿಸಿದ ಅಧಿಕಾರಿಗಳು , ಆ ಬಿಲ್ಲಿನ (Physical copy) ಮೇಲೆ ಅದೇ ಅಧಿಕಾರಿಗಳು ಸಹಿ ಮಾಡತಕ್ಕದ್ದು.


ಸಾಮಾನ್ಯವಾಗಿ  ಜಿಲ್ಲಾ ಖಜಾನೆಗಳಲ್ಲಿ ಸಹಾಯಕ ಖಜಾನೆ ಅಧಿಕಾರಿ ಹಾಗೂ ಉಪ ನಿರ್ದೇಶಕರು/ಜಿಲ್ಲಾ ಖಜಾನೆ ಅಧಿಕಾರಿಗಳ ಇರುವರು,

ಇಲ್ಲಿ ಒಬ್ಬ ಅಧಿಕಾರಿ ತಂತ್ರಾಶದಲ್ಲಿ ಅನುಮೋದಿಸಿದ ಬಿಲ್ಲುಗಳಿಗೆ ಇನ್ನೊಬ್ಬ ಅದಿಕಾರಿ ಬಿಲ್ಲಿನ  (Physical copy) ಮೇಲೆ ಸಹಿ ಮಾಡಿರುವುದುಂಟು.

 ಇನ್ನೂ ಮುಂದೆ ಡಿ.ಎಸ್.ಸಿ.ಬಳಸಿ ಅನುಮೋದಿಸಿದ ಅಧಿಕಾರಿಗಳು , ಆ ಬಿಲ್ಲಿನ (Physical copy) ಮೇಲೆ ಅದೇ ಅಧಿಕಾರಿಗಳು ಸಹಿ ಮಾಡಬೇಕು.


ಮುಂದುವರಿದ ಭಾಗ..
ಉಪ-ಖಜಾನೆಗಳಲ್ಲಿ ಹಾಗೂ ಜಿಲ್ಲಾ ಖಜಾನೆಗಳಲ್ಲಿ  KII ಬಿಲ್ಲುಗಳನ್ನು Process ಮಾಡುವ BOA, HA ಹಾಗೂ BAO  ಪಾತ್ರಗಳನ್ನು ನಿರ್ವಹಿಸುತ್ತಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ಬಿಲ್ಲಿಗೆ (Physical copy of KII BILLS) ಸಹಿ ಹಾಕದೇ ಇರುವುದು KII Mentor's  ಖಜಾನೆಗಳಿಗೆ ಪರವೀಕ್ಷಣೆ ಸಂದರ್ಭದಲ್ಲಿ  ಕಂಡುಬಂದಿರುತ್ತದೆ.

ಅಲ್ಲದೇ ಖಜಾನೆಗಳಿಂದ  ಸಲ್ಲಿಸಲಾಗುವ
ಮಾಸಿಕ‌ ಲೆಕ್ಕಗಳಲ್ಲಿ ಈ ರೀತಿ ಸಹಿಯಾಗಿರದೇ ಖಜಾನೆ-೨ ಬಿಲ್ಲುಗಳನ್ನು  ಸಲ್ಲಿಸಿರುವುದನ್ನು ಮಾನ್ಯ ಮಹಾಲೇಖಪಾಲರು ಗಮನಿಸಿರುವುದನ್ನು ಹಾಗೂ ಆಪೇಕ್ಷಿಸಿರುವುದು ತಮ್ಮೇಲ್ಲರಿಗೂ ತಿಳಿದಿರುವ ವಿಚಾರ...

ಅದ್ದರಿಂದ ಇನ್ನೂ ಮುಂದೆ ಎಲ್ಲಾ ಖಜಾನೆ-೨ ಬಿಲ್ಲುಗಳಿಗೆ BOA, HA ಹಾಗೂ BAO ಕೆಲಸ ನಿರ್ವಹಿಸುತ್ತಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತಪ್ಪದೇ ಸಹಿ ಹಾಕುವುದು.


ದಿನಕೊಂದು ಸೂತ್ರ(4)
4.ಎಲ್ಲಾ ಹಂತಗಳಲ್ಲೂ ಮುದ್ರಿತ ಬಿಲ್ಲಿನ ಪ್ರತಿಯನ್ನು ಸ್ವೀಕರಿಸಿದನಂತರವೇ ಸಂಸ್ಕರಿಸಬೇಕು

ಮುದ್ರಿತ ಬಿಲ್ಲು ಸ್ವೀಕರಿಸಿದ ನಂತರವೇ ಖಜಾನೆ-2ರ ಸಿಸ್ಟಂನಲ್ಲಿ ಬಿಲ್ಲನ್ನು ಅಂಗೀಕರಿಸಬೇಕು. ಅಲ್ಲಿಯವರೆಗೆ “ಬಿಲ್ಲು ನಿರೀಕ್ಷಣ ಕಾರ್ಯಪಟ್ಟಿಯಲ್ಲಿ” (Awaiting Bill Work list) ಬಿಲ್ಲು ಇರುತ್ತದೆ. ಒಂದು ವೇಲೆ ಆನ್ ಲೈನ್ ಬಿಲ್ಲು, “ಅಂಗೀಕರಿಸಿದ ಬಿಲ್ಲುಗಳ ಕಾರ್ಯಪಟ್ಟಿ” ಯಲ್ಲಿದ್ದಲ್ಲಿ (Accepted Bill Work list) ಮುದ್ರಿತ ಪ್ರತಿಯು ತಮ್ಮ ಬಳಿ ಇರುವುದನ್ನು ಸೂಚಿಸುತ್ತದೆ. ಮುದ್ರಿತ ಪ್ರತಿಯನ್ನು ಸ್ವೀಕರಿಸದೇ ಆನ್ ಲೈನ್ ಬಿಲ್ಲನ್ನು ನೀವು ಅಂಗೀಕರಿಸಿದ್ದಲ್ಲಿ ಹಾಗೂ ಒಂದು ವೇಳೆ ಹಿಂದಿನ ಬಳಕೆದಾರರು ಬಿಲ್ಲನ್ನು ಗೈರು ವಿಲೆ ಮಾಡಿದ್ದಲ್ಲಿ, ಯಾರ ಸಿಸ್ಟಂನಲ್ಲಿನ ಲಾಗಿನ್ ನಲ್ಲಿ ಅಂಗೀಕರಿಸಿದ ಬಿಲ್ಲುಗಳ ಪಟ್ಟಿಯಲ್ಲಿ ಬಿಲ್ಲು ಇರುವುದೋ ಅವರನ್ನೆ ಬಿಲ್ಲಿನ ಸುಪರ್ದುದಾರ (Custodian) ಎಂದು ಪರಿಗಣಿಸಲಾಗುವುದು.  (ನಿರೂಪಣೆ:ಡಾ||ಪಾಷ)

ದಿನಾಕೂಂದು ಸೂತ್ರ(5)
ದಿನಾಂತ್ಯದಲ್ಲಿ ಎಫ್.ಓ.ಎ ರವರು ಆಕ್ಷೇಪಿತ ಬಿಲ್ಲುಗಳಕಾರ್ಯಪಟ್ಟಿಯನ್ನು ಪರಿಶೀಲಿಸಿ ಪ್ರತಿಯೊಂದು ಬಿಲ್ಲಿಗೆ ಆಕ್ಷೇಪಣೆಜ್ಞಾಪನವನ್ನು ತಯಾರಿಸಬೇಕು

ಫ್ರಂಟ್ ಆಫೀಸ್ ಸಹಾಯಕರು ಡಿಡಿಓರವರಿಗೆ ಆಕ್ಷೇಪಿತ ಬಿಲ್ಲುಗಳ ಮುದ್ರಿತ ಪ್ರತಿಯನ್ನು ಹಿಂದಿರುಗಿಸುವ ಮೊದಲು “ಹಿಂದಿರುಗಿಸುವ ಜ್ಞಾಪನ”  (Return Memo) ವನ್ನು ಖಜಾನೆ-2ರಲ್ಲಿ ಮುದ್ರಿಸಬೇಕು. ಹಾಗೂ ಹಿಂದಿರುಗಿಸು ಬಟನ್ಅನ್ನು ಕ್ಲಿಕ್ ಮಾಡಬೇಕು. ಫ್ರಂಟ್ ಆಫೀಸ್ ಸಹಾಯಕರು ಹಿಂದಿರುಗಿಸುವ ಜ್ಞಾಪನವನ್ನು ಮುದ್ರಿಸದೇ ಹಾಗೂ ಹಿಂದಿರುಗಿಸು ಬಟನ್ಅನ್ನು ಕ್ಲಿಕ್ ಮಾಡದೇ ಬಿಲ್ಲನ್ನು ಹಿಂದಿರುಗಿಸಿದ್ದಲ್ಲಿ ಅನುದಾನವು ವಾಪಸ್ಸಾಗದಿರುವುದರಿಂದ ಡಿಡಿಓರವರಿಗೆ ಮುಂದಿನ ಬಿಲ್ಲುಗಳನ್ನು ಸೃಜಿಸಲು ಅನುದಾನವು ಲಭ್ಯವಾಗುವುದಿಲ್ಲ. ಪ್ರತಿ ದಿನಾಂತ್ಯದಲ್ಲಿ“ಎಫ್.ಓ.ಎ ಆಕ್ಷೇಪಿತ ಬಿಲ್ಲು ಕಾರ್ಯಪಟ್ಟಿ” ಯಲ್ಲಿ ಯಾವುದೇ ಬಿಲ್ಲು ಇಲ್ಲದಿರುವುದನ್ನು ಎಫ್.ಓ.ಎರವರು ಖಚಿತಪಡಿಸಿಕೊಳ್ಳಬೇಕು
ನಿರೂಪಣೆ(ಡಾ||ಪಾಷ)


ದಿನಾಕೂಂದು ಸೂತ್ರ(6)
ಖಜಾನೆ-2ರಲ್ಲಿ ರೂ. 1000 ಕ್ಕೂ ಹೆಚ್ಚಿನ ಉಪ ವೋಚರ್ ಗಳನ್ನು ಮೇಲು ಸಹಿ ಅಧಿಕಾರಿಯ ಬದಲಿಗೆ ಡಿಡಿಓರವರೇ ಅಂಗೀಕರಿಸಿ, ರದ್ದುಪಡಿಸಿ, ತೀರ್ಣಗೊಳಿಸಬೇಕು


6.ಸರ್ಕಾರದ ಆದೇಶ ಸಂಖ್ಯೆ ಆಇ 21 ಟಿಎಆರ್ 2017, ದಿನಾಂಕ19.05.2017 ರಂತೆ, ಆನ್ ಲೈನ್ ನಲ್ಲಿ ಮೇಲು ಸಹಿಪಡೆಯಬಹುದಾದಂತಹ ಬಿಲ್ಲುಗಳ ಮುದ್ರಿತ ಪ್ರತಿಗಳು ಮೇಲುಸಹಿ ಅಧಿಕಾರಿಗಳಿಗೆ ಕಳುಹಿಸುವಂತಿಲ್ಲ. ಇಂತಹ ಸಂದರ್ಭಗಳಲ್ಲಿಡಿಡಿಓರವರೇ ಉಪವೋಚರ್ ಗಳನ್ನು ಸೂಕ್ತವಾಗಿ ಅಂಗೀಕರಿಸಿ,ರದ್ದುಪಡಿಸಿ ಮುಂದುವರೆದ ಹಾಳೆಯ (bill continuation sheet)ಜೊತೆ ಸಹಿಯೊಂದಿಗೆಸಲ್ಲಿಸಬೇಕಾಗಿರುತ್ತದೆ. 
(ನಿರೂಪಣೆ ಡಾ||ಪಾಷ).


ದಿನಾಕಂದು ಸೊತ್ರ(7)
ಠೇವಣಿ ಖಾತೆಗಳಿಗೆ ಖಜಾನೆ-2ರಲ್ಲಿ ಲೆಕ್ಕ ಶೀರ್ಷಿಕೆಗಳು ಪ್ರತಿಯೊಂದು ಜಿಲ್ಲೆಗೂ ವಿಶಿಷ್ಠವಾಗಿರುತ್ತದೆ ಇದನ್ನು ಜಿಲ್ಲಾ ಖಜಾನಾಧಿಕಾರಿಗಳು /ಸಿಬ್ಬಂದಿ ತಮ್ಮ ಜಿಲ್ಲೆಗೆ ಹಂಚಿಕೆಯಾಗಿರುವ ಎರಡು ಅಂಕಿ ಕೋಡ್ ಗಳನ್ನು ತಿಳಿದಿರಬೇಕು.
ಉದಾ :- 8443-00-117-0-xx-542 PWD work contribution
                       8443-00-117-0-xx-513 Security Deposit
                       8443-00-117-0-xx-597 F.S.D
ಈ ಮೇಲ್ಕಂಡ ಲೆಕ್ಕ ಶೀರ್ಷಿಕೆಗಳನ್ನು ಲೋಕೋಪಯೋಗಿ ಠೇವಣಿ ಖಾತೆಗೆ ನೀಡಿದ್ದು ‘xx’  ಇರುವ ಜಾಗದಲ್ಲಿ ಜಿಲ್ಲಾ ಖಜಾನೆಯ ಎರಡು ಅಂಕಿಗಳನ್ನು ನಮೂದಿಸಬೇಕು.
ಉದಾ: ಬೆಳಗಾಂ PWD ಠೇವಣಿ ಖಾತೆಯ ಲೆಕ್ಕ ಶೀರ್ಷಿಕೆ
    844-00-117-0-01-542 work contribution
    8443-00-117-0-01-513 Security Deposit
                   8443-00-117-0-01-597 FSD
01 ಎಂಬುದು ಬೆಳಗಾವಿ ಜಿಲ್ಲೆಯ ಕೋಡ್ ಸಂಖ್ಯೆಯಾಗಿರುತ್ತದೆ. ಬೆಳಗಾವಿ ಜಿಲ್ಲೆಯ ಎಲ್ಲಾ ಉಪಖಜಾನೆಗಳು ಈ ಕೋಡನ್ನೆ ಉಪಯೋಗಿಸಬೇಕು. (ರಾಜ್ಯದ ಎಲ್ಲಾ ಜಿಲ್ಲಾ ಖಜಾನೆಗಳ ಕೋಡ್ ಸಂಖ್ಯೆಗಳನ್ನು ಪ್ರಕಟಿಸಲಾಗಿದೆ).
(ನಿರೂಪಣೆ:ರವಿ )

ದಿನಕ್ಕೊಂದು ಸೂತ್ರ (8)
GIS- ಸಾಮೂಹಿಕ ವಿಮಾ ಯೋಜನೆ ಬಿಲ್ಲು ವಿವರಗಳು

೧) ಕರ್ನಾಟಕ ಸರ್ಕಾರಿ ನೌಕರರ ಸಾಮೂಹಿಕ ವಿಮಾ ಯೋಜನೆಯು ದಿನಾಂಕ ೦೧/೦೧/೧೯೮೨ ಜಾರಿಗೆ ಬಂದಿರುತ್ತದೆ.

 ೨) ಈ  ಕ್ಲೇಮುಗಳನ್ನು  C.T.S-9 miscellaneous bill type ಬಿಲ್ಲು ತಯಾರಿಸಲಾಗುತ್ತದೆ.

೨) ಸಾ.ವಿ.ಯೊ  ಕ್ಲೇಮುಗಳ ವಿಧ ಹಾಗೂ ಲೆಕ್ಕೆ ಶೀರ್ಷಿಕೆ
   ಅ)  ವಿಮಾ ನಿಧಿ insurance fund -ಮರಣಹೊಂದಿದ ನೌಕರರ ಅವಲಂಬಿತರಿಗೆ ಸಂದಾಯಿಸುವ ಕ್ಲೇಮು. 8011-00-107-0-01‌

    ಬ) ಸಾ.ವಿ.ಯೂ ಉಳಿತಾಯ ನಿದಿ saving fund - ವಯೋಮಿತಿ/ ಕಡ್ಡಾಯ ನಿವೃತ್ತಿ/ಸ್ವಇಚ್ಛಾ‌ ನಿವೃತಿ
8011-00-107-0-02

೩) ಈ ಬಿಲ್ಲುಗೆ ಈ ಕೆಳಕಂಡ ಲಗತ್ತುಗಳನ್ನು ತ್ರಿಪ್ರತಿ ಯಲ್ಲಿ
    A) ಅನುಬಂಧ -ಸಿ (Annexure -C) 
    B)  ಮಂಜೂರಾತಿ ಆದೇಶ - ವಯೋಮಿತಿ/ ಕಡ್ಡಾಯ ನಿವೃತ್ತಿ/ಸ್ವಇಚ್ಛಾ‌ ನಿವೃತಿ-ಅನುಬಂಧ-1 (page number 40-41in KSEGIS rule )

ಮರಣಹೊಂದಿದ ನೌಕರರ ಅವಲಂಬಿತರಿಗೆ ಸಂದಾಯಿಸುವಾಗ  ಅನುಬಂಧ-2 -page number 42-43 in KSEGIS rule

೩) ಮಂಜೂರಾತಿ ಪ್ರಾಧಿಕಾರ-
 ಸಮೂಹ C ಹಾಗೂ D ಇವರಿಗೆ ಕಛೇರಿಯ ಮುಖ್ಯಸ್ಥರು.
ಸಮೂಹ A ಮತ್ತು B ಇವರಿಗೆ ಇಲಾಖೆ ಮುಖ್ಯಸ್ಥರು ಇವರು ಮಂಜೂರಾತಿ ಪ್ರಾಧಿಕಾರವಾಗಿರುತ್ತಾರೆ.

 ೪) ವಿಮೆ ಕ್ಲೇಮು-
Group D-ರೂ 60,000 (group D subscription ರೂ.60 ಇರುತ್ತದೆ)
 Group C - ರೂ1,20,000 (ಚಂದಾ-೧೨೦)
 Group B -ರೂ1,80,000
 Group A- ರೂ 2,40,000
ಇದನ್ನು ಖಜಾನೆ-೨ ತಂತ್ರಾಂಶವೆ ತೋರಿಸುತ್ತದೆ.

೫) ಉಳಿತಾಯದ ಕ್ಲೇಮು
ಇದನ್ನು ಲೆಕ್ಕ ಹಾಕುವಾಗ ನೌಕರನ ಸೇವೆಗೆ ಸೇರಿದ  ವರ್ಷ ( ಮತ್ತು ನಿವೃತ್ತಿ ತಿಂಗಳು ಹಾಗೂ ವರ್ಷ ಪರಿಗಣಿಸಿ ತೆಗೆದು
KSEGIS rule ನಲ್ಲಿರುವ Table ೧೧೦-೧೪೦ ಗಳನ್ನು ತಪ್ಪದೇ ನೋಡಿರಿ.ಇದನ್ನು ಖಜಾನೆ-೨ ತಂತ್ರಾಂಶವೆ ತೋರಿಸುತ್ತದೆ.

೬) ಮರಣಹೊಂದಿದ ನೌಕರರ ಅವಲಂಬಿತರಿಗೆ  ವಿಮೆ ಕ್ಲೇಮು ಹಾಗೂ ಉಳಿತಾಯದ ಕ್ಲೇಮು ಎರಡನ್ನು  ಸಂದಾಯಿಸಲಾಗುತ್ತದೆ.



ಈ ಮೇಲಿನ ಎಲ್ಲಾ ಅಂಶಗಳನ್ನು ಈ ಕೆಳಗೆ ಲಗತ್ತಿಸಿದ KSEGIS rule ಓದುವುದು ಹಾಗೂ ಅದರಂತೆ ಪಾಲಿಸುವುದು.


DEPOSIT (ದಿನಕ್ಕೊಂದು ಸೂತ್ರ 9)
ಠೇವಣಿ ಖಾತೆ ಸಂಖ್ಯೆಗಳು
ಠೇವಣಿ ಖಾತೆಗಳಿಗೆ ಲೆಕ್ಕಶೀರ್ಷಿಕೆ ನೀಡಿದ ರೀತಿಯಲ್ಲಿ ಠೇವಣಿ ಖಾತೆ ಸಂಖ್ಯೆಗಳನ್ನು ಖಜಾನೆ-2 ರಲ್ಲಿ  ವಿಶಿಷ್ಟವಾಗಿ ಹಂಚಿಕೆ ಮಾಡಲಾಗಿದೆ. ಠೇವಣಿ ಖಾತೆ ಸಂಖ್ಯೆಗಳನ್ನು ನಮೂದಿಸದೇ ಠೇವಣಿಗಳಿಗೆ ಜಮೆ ಮಾಡಲು ಬರುವುದಿಲ್ಲ. ಸಂದಾಯದಾರರು ಮತ್ತು ಖಜಾನೆ ಸಿಬ್ಬಂದಿ/ಅಧಿಕಾರಿಗಳು ಮುಖ್ಯವಾಗಿ ಠೇವಣಿ ಲೆಕ್ಕ ಶೀರ್ಷಿಕೆ ಮತ್ತು ಖಾತೆಯ ಸಂಖ್ಯೆಯನ್ನು ತಿಳಿದಿರಬೇಕು.
ಖಜಾನೆ-2 ರಲ್ಲಿ ಠೇವಣಿ ಖಾತೆಯ ಸಂಖ್ಯೆಯು ‘9’ ಅಂಕಿಗಳುಳ್ಳ Alphanumeric ಸಂಖ್ಯೆಯಾಗಿರುತ್ತದೆ. ಉದಾ: 26577A095
ಮೊದಲೆರಡು ಅಂಕಿಗಳು (26) ಸ್ವೀಕರ್ತನ ಪ್ರವರ್ಗವನ್ನು ಸೂಚಿಸುತ್ತದೆ. ಮುಂದಿನ 4 ಅಂಕಿಗಳು (577A) ಆಯಾ ಜಿಲ್ಲಾ ಖಜಾನೆಯ ಖಜಾನೆ ಕೋಡ್ ಅಗಿರುತ್ತದೆ. ಈ ನಾಲ್ಕು ಅಂಕಿಗಳಲ್ಲಿ A ಬದಲಿಗೆ B,C,D,E ಉಪಯೋಗಿಸಿದ್ದಲ್ಲಿ ಆ ಜಿಲ್ಲೆಯ ಉಪ ಖಜಾನೆಗಳನ್ನು ಸೂಚಿಸುತ್ತದೆ. ಕೊನೆಯ ಮೂರು ಅಂಕಿಗಳು (095) ಅನುಕ್ರಮಿಕ ಖಾತೆ ಸಂಖ್ಯೆ ಅಗಿರುತ್ತದೆ.
(ನಿರೂಪಣೆ ರವಿ ಮತು ಸುಮ)


ದಿನಕ್ಕೊಂದು ಸೂತ್ರ -10
 ವೋಚರ್ ಗಳ ಮೇಲೆ ವೋಚರ್ ಸಂಖ್ಯೆಗಳನ್ನು ದಾಖಲಿಸುವುದು.

ಖಜಾನೆ-2ರಲ್ಲಿ TO Payment (Payment Authorisation) ಕಡತವನ್ನು ಅನುಮೋದಿಸಿದ ನಂತರ ವೋಚರ್ ಸಂಖ್ಯೆ ಬರುತ್ತದೆ. ಕೆಲವೊಂದು ಖಜಾನೆಗಳಲ್ಲಿ ಖಜಾನೆ-2ರಲ್ಲಿ ತೀರ್ಣಗೊಂಡಿರುವ ಬಿಲ್ಲುಗಳಿಗೆ ವೋಚರ್ ಸಂಖ್ಯೆಗಳನ್ನು ಬಿಲ್ಲಿನ ಮೇಲೆ ನಮೂದಿಸುತ್ತಿಲ್ಲವೆಂದು ಮಹಾಲೇಖಪಾಲರು ಆಕ್ಷೇಪಿಸಿರುವುದರಿಂದ ಇನ್ನು ಮುಂದೆ ಎಲ್ಲಾ ಖಜಾನಾಧಿಕಾರಿಗಳು ತೀರ್ಣಗೊಂಡ ಬಿಲ್ಲುಗಳ ಮೇಲೆ ವೋಚರ್ ಸಂಖ್ಯೆಯನ್ನು ತಪ್ಪದೇ ನಮೂದಿಸತಕ್ಕದ್ದು.


ಕೆಲವೊಂದು ಖಜಾನೆಗಳಲ್ಲಿ Top-Sheet ನಲ್ಲಿ ಬಿಲ್ಲು ಖಜಾನೆಗೆ ಸ್ವೀಕರಿಸಿದಾಗಿನಿಂದ BOA ನಿಂದ Accounts User ರವರೆಗೆ ಯಾರ ಹೆಸರು ಮತ್ತು ಕಿರು ಸಹಿ ಇರುವುದಿಲ್ಲ. ಇನ್ನು ಮುಂದೆ ಬಿಲ್ಲು ಯಾವ ಯಾವ ಹಂತಗಳಲ್ಲಿ ಯಾವ ಯಾವ ಪಾತ್ರಗಳ ವಹಿವಾಟುಗಳ ಬಗ್ಗೆ TOP Sheet ನಲ್ಲಿ ತಪ್ಪದೇ ನಮೂದಿಸುವುದು.(  ನಿರೂಪಣೆ :ರವಿ)


ದಿನಕೊಂದು ಸೂತ್ರ ೧೦

ಈ ಕೆಳಕಂಡ ಸಂದರ್ಭದಲ್ಲಿ  ಖಜಾನೆ-೨ ರಡಿ BOA, ಮುಖ್ಯ ಲೆಕ್ಕಿಗರು ಹಾಗೂ ಖಜಾನೆ ಅಧಿಕಾರಿಗಳು BILLS HOLD ಮಾಡಲಾಗುತ್ತದೆ.

1) ಆ ಕ್ಲೇಮುಗಳಿಗೆ ಆರ್ಥಿಕ ಇಲಾಖೆಯಿಂದ WAYS and Means Clearance ನೀಡಬೇಕಾದಾಗ.

2) ಸಂಬಂಧಿಸಿದ  ದಾಖಲೆಗಳು ಇರದಿದ್ದಲ್ಲಿ/ ಲಗತ್ತಿಸದಿದ್ದಲ್ಲಿ

3) ನಿಗದಿತ ಅನುದಾನ ಲಭ್ಯ ಇಲ್ಲದಿದ್ದಲ್ಲಿ/
ಕಡಿಮೆ ಇದ್ದಲ್ಲಿ.

4) Authorization ಬಾಕಿ ಇದ್ದಲ್ಲಿ ಉದಾಹರಣೆಗೆ: ಖಜಾನೆಗೆ  ಮಾನ್ಯ ಮಹಾಲೇಖಪಾಲರಿಂದ  ಜಿ.ಪಿ.ಎಪ್ partial/ final Authorization ಬರುವುದು ಬಾಕಿ ಇದ್ದಲ್ಲಿ.

ಈ ಮೇಲ್ಕಂಡ ಕಾರಣಗಳಿಗೆ ಖಜಾನೆ-೨ ರಡಿ
BOA, ಮುಖ್ಯ ಲೆಕ್ಕಿಗರು ಹಾಗೂ ಖಜಾನೆ ಅಧಿಕಾರಿಗಳು ಬಿಲ್ಲುಗಳನ್ನು ತಡೆಹಿಡಿಯಬಹುದು.


ದಿನಕೊಂದು ಸೂತ್ರ-೧೧ ಡಿ.ಎಸ್.ಸಿ ವಿತರಣೆ.

೧) ಖಜಾನೆಗಳು, ಖಜಾನೆ-2 ಪಿ.ಎಂ.ಯು ದಿಂದ ಡಿ.ಎಸ್.ಸಿ‌.ಗಳನ್ನು ಸ್ವೀಕರಿಸಿದ ನಂತರ  ಪಿ.ಎಂ.ಯು  ಕಳುಹಿಸಿರುವ excel sheet ಗೂ ತಮಗೆ ತಲುಪಿರುವ ಒಟ್ಟು ಡಿ.ಎಸ್.ಸಿಗಳು ಮತ್ತು KGID No. ತಾಳೆ ಮಾಡಿ ಸರಿಯಿದ್ದಲ್ಲಿ acknowledgement ಗೆ ಸಹಿ ಹಾಕಿ ಪಿ.ಎಂ.ಯು ಗೆ ತಪ್ಪದೇ ಕಳುಹಿಸಬೇಕು.

 ೨) ಆ ಡಿ.ಎಸ್.ಸಿಗಳನ್ನು ತಮ್ಮಲ್ಲೇ ಇಟ್ಟುಕೊಳ್ಳದೆ ಕೂಡಲೇ ಸಂಬಂಧಿಸಿದವರಿಗೆ ಸ್ವೀಕೃತಿಯನ್ನು ಪಡೆದು ವಿತರಿಸಬೇಕು.

೩) 15 ದಿನಗಳಿಗೂ ಮೀರಿ ಡಿ.ಎಸ್.ಸಿ. ವಿತರಿಸದೇ ಖಜಾನೆಗಳಲ್ಲೇ ಉಳಿಸಿಕೊಂಡು ಅವು ಬಳಕೆಗೆ ಯೋಗ್ಯವಾಗದಿದ್ದಲ್ಲಿ ಖಜಾನಾಧಿಕಾರಿಗಳು ರೂ.510/- ದಂಡದ ರೂಪದಲ್ಲಿ ಲೆಕ್ಕ ಶೀರ್ಷಿಕೆ 0070-60-800-3-05 ಗೆ ಕಟ್ಟ ಬೇಕಾಗುತ್ತದೆ.

ಸಂಗ್ರಹಣೆ: ಡಾ|| ಪಾಷಾ ಮತ್ತು ಶ್ರೀ ರವಿ.


ದಿನಕ್ಕೊಂದು ಸೂತ್ರ ೧೨

SSP KII ಪಾವತಿಯಾಗದಿರುವ ಪಿಂಚಣಿಗಳ ಜಮೆಗೆ
ಖಜಾನೆ  ಅಧಿಕಾರಿಗಳು ಕೈಗೊಳ್ಳ ಬೇಕಾದ ಕ್ರಮಗಳು

೧) ಸಂಬಂದಿಸಿದ ಪೊಸ್ಟ್ ಆಪೀಸ್ ನಿಂದ  ನಪಾವತಿಯಾದ ಪಿಂಚಣಿ ಚೆಕ್ ಪಡೆಯುವ ಮುಂಚೆ ಈ ಕೆಳಕಂಡ ಮಾಹಿತಿಯನ್ನು ಕಡ್ಡಾಯವಾಗಿ  ಪೊಸ್ಟ್ ಆಪೀಸ್ ನಿಂದ ನಿಗದಿತ ನಮೂನೆಯಲ್ಲಿ ಪಡೆಯತಕ್ಕದ್ದು
a) UTR number
b) Remittance Reference number (SSP ID ಮತ್ತು e-payment I'd )
c) PNR number
d) Name of the pensioner
e) Pension amount
f) Pension status

೨) ಮೇಲಿನ ಎಲ್ಲಾ ಮಾಹಿತಿಯನ್ನು ನಿಗದಿತ ನಮೂನೆಯಲ್ಲಿ ಪಿ.ಎಮ್.ಯು ಘಟಕಕ್ಕೆ  ಕಳಿಸುವುದು ಕಡ್ಡಾಯ.

೩) ಪಿ.ಎಮ್.ಯು ಘಟಕವು  ಪೊಸ್ಟ್ ಆಪೀಸ್ ನಿಮಗೆ ನೀಡಿರುವ ಮಾಹಿತಿಯನ್ನು ಕೆ-೨ ಡಾಟಾದೊಂದಿಗೆ ಪರಿಶೀಲಿಸಿ, ಸದರಿ ನಪಾವತಿ ಮೊತ್ತಕ್ಕೆ ಅನುಮೋದನೆ ನೀಡಿದಲ್ಲಿ ಮಾತ್ರ ಪೊಸ್ಟ್ ಆಪೀಸ್ ನಿಂದ ಆ ಮೊತ್ತಕ್ಕೆ  ಮಾತ್ರ ಚೆಕ್ ಸ್ವೀಕರಿಸಬೇಕು.



೪) ಖಜಾನೆ -೨ ರಲ್ಲಿ 2235-60-911-0-01 ಲೆಕ್ಕ ಶಿರ್ಷಿಕೆಗೆ  ಜಮೆ ಮಾಡುವುದು.
ಹಿಂದಿನ ಸಾಲಿಗೆ ಸಂಬಂದಿಸಿದಲ್ಲಿ ಅದನ್ನು 2235-60-911-0-02 ಗೆ ಜಮೆ ಮಾಡುವುದು.

೫) ಜಮೆಯಾದ ಚಲನಿನ Reference Number ನ್ನು ಪಿ.ಎಂ.ಯು ಗೆ ತಪ್ಪದೆ ಕಳುಹಿಸುವುದು.ಇದರ ಆದಾರದ ಮೇಲೆ ಪಿಂಚಣಿ status KII ಡಾಟಾ ದಲ್ಲಿ ಅಪ್ ಡೇಟ್ ಮಾಡಲಾಗುವುದು

ಈ ಎಲ್ಲಾ ಅಂಶಗಳನ್ನು ಸೊತ್ತೋಲೆ ೬೭ ನಲ್ಲಿರುವಂತೆ ತಪ್ಪದೆ ಪಾಲಿಸುವುದು.

ದಿನಕೊಂದು ಸೂತ್ರ ೧೩.

ಖಜಾನೆ-೨ ರಲ್ಲಿ  ಬಿಲ್ಲುಗಳನ್ನು ಮೇಲು ರುಜು ಕುರಿತಂತೆ ಈ ಕೆಳಗಿನಂತೆ ವಿಂಗಡಿಸಲಾಗಿದೆ,

1) ಮೇಲು ಸಹಿ ಪ್ರಾದಿಕಾರಕ್ಕೆ ಮುದ್ರಿತವಾಗಿ‌ ಬೌತಿಕವಾಗಿ ಕಳುಹಿಸುವಂತ ಬಿಲ್ಲುಗಳು
(Online ಮತ್ತು physical copy of bill ಈ ಎರಡರ ಮೇಲೆ ಮೇಲು ರುಜು ಅವಶ್ಯ)

ಉದಾಹರಣೆ: general Medical reimbursement ಬಿಲ್ಲು Payees Receipt ಬಿಲ್ಲು ಮತ್ತು ಇತರೆ

೨) ಮೇಲು ಸಹಿಗಾಗಿ online ಮೂಲಕ ಮೇಲು ಸಹಿ ಪ್ರಾದಿಕರಿಗೆ ಕಳುಹಿಸುವಂತಹ ಬಿಲ್ಲುಗಳು

ಉದಾಹರಣೆ: Supply and service, printing advertisement and etc ಬಿಲ್ಲುಗಳು

೩) ಮೇಲು ಸಹಿಯಿಂದ ವಿನಾಯಿತಿ ಹೊಂದಿರುವ ಬಿಲ್ಲುಗಳು.
ಉದಾಹರಣೆ: AC BILLS, RENT BILL, Telephone bills ಮತ್ತು ಇತರೆ ಬಿಲ್ಲುಗಳು.

ಈ ಸಂಬಂದ ಹೆಚ್ಚಿನ ಮಾಹಿತಿಗಾಗಿ ಹಾಗೂ ಸ್ಪಷ್ಟತೆಗಾಗಿ ಈ ಕೆಳಗಿನ ಆದೇಶವನ್ನು ಓದಬೇಕು ಹಾಗೂ ಅದರಂತೆ ತಪ್ಪದೆ ಪಾಲಿಸಬೇಕು.


ದಿನಕ್ಕೊಂದು ಸೂತ್ರ ೧೪


೧) ಖಜಾನೆ-೨ ರಡಿ  ಇ- ಪಾವತಿಯಾದ ಸಾಮಾಜಿಕ ಭದ್ರತಾ ಪಿಂಚಣಿಯ UTR number ನ್ನು ( ಸ್ಕ್ರೋಲ್ Approve ಮಾಡಿದ ನಂತರ ದೊರೆಯುವುದು)  ಸಂಬಂದಪಟ್ಟ ಪೋಸ್ಟ್ ಆಪೀಸ್ ಗೆ ನೀಡುವುದು.

 ೨) ಈ ಮಂಚೆ (ಹಿಂದಿನ ತಿಂಗಳಲ್ಲಿ) ಇ- ಪಾವತಿಯಾದ ಸಾಮಾಜಿಕ ಭದ್ರತಾ ಪಿಂಚಣಿಯ  payment status ನ್ನು ತಪ್ಪದೇ ವಿಚಾರಿಸುವುದು.

೩) ಪಿಂಚಣಿ ಪಾವತಿಯಲ್ಲಿ  ಪೋಸ್ಟ್ ಆಪೀಸ್ ನಿಂದ ಅನಗತ್ಯ ವಿಳಂಬವಾಗುತ್ತಿದ್ದಲ್ಲಿ ಅದನ್ನು ಮಾನ್ಯ ಆಯುಕ್ತರು ಹಾಗೂ ಮಾನ್ಯ ನಿರ್ದೇಶಕರು , ಬೆಂಗಳೂರು ರವರಿಗೆ ಮಾಹಿತಿಯನ್ನು ಸಲ್ಲಿಸುವುದು.


ದಿನಕ್ಕೊಂದು ಸೂತ್ರ15 15.ಟಿಟಿಆರ್ ಮೂಲಕ ಠೇವಣಿ ಖಾತೆಗೆ ಜಮೆ
ಠೇವಣಿ ಖಾತೆ ಸಂಖ್ಯೆ ಮತ್ತು ಲೆಕ್ಕ ಶೀರ್ಷಿಕೆ ತಿಳಿದ ನಂತರ, ಖಜಾನೆಗಳಲ್ಲಿ ಠೇವಣಿ ಖಾತೆಗಳಿಗೆ ಟಿಟಿಆರ್ ಮೂಲಕ ಹೊಂದಾಣಿಕ ಮಾಡಲು, ಸಂಬಂಧಿಸಿದ ಡಿಡಿಓಗಳು ಯಾವ ಲೆಕ್ಕ ಶಿರ್ಷಿಕೆಯಿಂದ ಹಣ ಬಿಡುಗಡೆಯಾಗುವುದೋ ಆ ಲೆಕ್ಕ ಶೀರ್ಷಿಕೆಯು Bill Type - Payees Receipts, Claim Type - Payees Receipts ಗೆ ಮ್ಯಾಪಿಂಗ್ ಆಗಿರಬೇಕು.
ಲೆಕ್ಕ ಶೀರ್ಷಿಕೆ ಮ್ಯಾಪಿಂಗ್ ಆಗದ ಹೊರತು ಟಿಟಿಆರ್ ಮೂಲಕ ಠೇವಣಿ ಖಾತೆಗೆ ಹಣವನ್ನು ಜಮೆ ಮಾಡಲು ಬರುವುದಿಲ
ನಿರೂಪಣೆ:ರವಿ


ದಿನಕ್ಕೊಂದು ಸೂತ್ರ16                                 

16.ಠೇವಣಿ ಮರುಪಾವತಿ

ಡಿಡಿಓಗಳು ಟಿಟಿಆರ್ ಮೂಲಕ ಠೇವಣಿ ಖಾತೆಗಳಿಗೆ ಜಮೆ ಮಾಡಿದ ಮೇಲೆ ಠೇವಣಿ ಖಾತೆದಾರರು ಠೇವಣಿ ಖಾತೆಯಿಂದ ಮರುಪಾವತಿ ಬಿಲ್ಲನ್ನು (Refund Bill) ತಯಾರಿಸಲು ಈ ಎರಡು ಪಾತ್ರಗಳನ್ನು ಹಂಚಬೇಕಾಗುತ್ತದೆ.
ಠೇವಣಿ ಅಧೀಕ್ಷಕರು Deposit Superintendent
ಠೇವಣಿ ಆಡಳಿತಗಾರರು Deposit Administrator
ಈ ಮೇಲಿನ ಪಾತ್ರಗಳನ್ನು ಹಂಚಿದ ನಂತರ, ಠೇವಣಿ ಖಾತೆಯಿಂದ ಮರುಪಾವತಿ ಬಿಲ್ಲನ್ನು ತಯಾರಿಸಲು ಮುಖ್ಯವಾಗಿ ಈ ಮೇಲಿನ 2 ಪಾತ್ರಗಳಿಂದ ಠೇವಣಿ ಖಾತೆಯನ್ನು ಲೆಕ್ಕಸಮನ್ವಯೀಕರಣ (Reconciliation) ಮಾಡಬೇಕು.
ಠೇವಣಿ ಕರಡು ಬಿಲ್ಲನ್ನು ತಯಾರಿಸುವಾಗ ಬಿಲ್ಲು ವಿಧ/ಕ್ಲೈಂ ವಿಧಕ್ಕೆ ಸ್ಕೀಂ ಮ್ಯಾಪಿಂಗ್ ಆಗಿರಬೇಕು. ಇಲ್ಲದಿದ್ದಲ್ಲಿ ಕರಡು ಬಿಲ್ಲನ್ನು ಉಳಿಸಿಡಲು (Save) ಆಗುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಸ್ಕೀಂ ಮ್ಯಾಪಿಂಗ್ ಸಮಸ್ಯೆಯನ್ನು ಟಿಕೇಟ್ ಸಂಖ್ಯೆಯ ಸಹಿತ ಪಿ.ಎಂ.ಯು/ಸಹಾಯವಾಣಿಗೆ ವರದಿಸಬೇಕು.
ನಿರೂಪಣೆ:ರವಿ


ದಿನಕ್ಕೊಂದು ಸೂತ್ರ ೧೬ 

ಖಜಾನೆ-೨ ರಲ್ಲಿ  Bill processing ಹಾಗೂ payment authorization Modules ಈ ಎರಡರಲ್ಲಿ ಬಿಲ್ಲುಗಳನ್ನು ತೀರ್ಣಗೊಳಿಸಲು ಈ ಕೆಳಗಿನಂತೆ  ಮೂರು ತರಹದ ಸರದಿ ಸಾಲು ( Queue)  ವ್ಯವಸ್ಥೆ ಇರುತ್ತದೆ.

೧) ಜೇಷ್ಠತೆ ಅನುಸಾರ (Seniority Queue)- ಯಾವ ಬಿಲ್ಲು ಮೊದಲು Front office ನಲ್ಲಿ inward ಆಗುತ್ತದೆಯೊ ಅದನ್ನು ಮೊದಲು‌ Process ಮಾಡಬೇಕು ( Determined by virtue of presentation) ಅಂದರೆ ಮೊದಲು ಸಲ್ಲಿಸಿದ ಬಿಲ್ಲನ್ನು ಮೊದಲು ತೀರ್ಣಗೊಳಿಸಲಾಗುತ್ತದೆ.
ಉದಾಹರಣೆ: TA bill, DC bills, GPF bills, GIS Bills ಮತ್ತು ಇತರೆ.

೨) ಆದ್ಯತೆ ಅನುಸಾರ (Priority Queue)- ಕೆಲವು ಬಿಲ್ಲಗಳು/ಕ್ಲೇಮುಗಳಿಗೆ ಖಜಾನೆ-೨ ತಂತ್ರಾಂಶದಲ್ಲಿ ಆದ್ಯತೆ ನೀಡಲಾಗಿದ್ದು ಆ ಬಿಲ್ಲುಗಳನ್ನು Bill processing ಹಾಗೂ Payment authorization ಮಾಡದೆ ಜೇಷ್ಠತೆ ಪಟ್ಟಿಯಲ್ಲಿರುವ ಬಿಲ್ಲುಗಳಿಗೆ ಅವಕಾಶ ಇರುವುದಿಲ್ಲ. ಇದನ್ನು ಖಜಾನೆ-೨ ತಂತ್ರಾಂಶವೆ ನಿರ್ಧರಿಸುವುದು
ಉದಾಹರಣೆ: ವೇತನ ಬಿಲ್ಲುಗಳು, ವೇತನ ಸಂಬಂದಿಸಿದ ಬಿಲ್ಲುಗಳು ಹಾಗೂ AC ಬಿಲ್ಲುಗಳು

೩) ತ್ವರಿತ/ವೇಗದೂತ ಪಟ್ಟಿ ಅನುಸಾರ
(Express queue)-   ಬಿಲ್ಲು/ಕ್ಲೇಮುಗಳಿಗೆ  ತುರ್ತಾಗಿ ತೀರ್ಣಗೊಳಿಸಲು  ಡಿ.ಡಿ.ಓ ಗಳು ಮಾನ್ಯ ಖಜಾನೆ ನಿರ್ದೇಶಕರು, ಬೆಂಗಳೂರು ಹಾಗೂ ಖಜಾನೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿ, ಅದನ್ನು   ಅನುಮೊದಿಸಿದ ನಂತರ ಈ ಬಿಲ್ಲು/ಕ್ಲೇಮುಗಳು ಮೊದಲೆರಡು ಪಟ್ಟಿಯಲ್ಲಿರುವ (Queue)  ಬಿಲ್ಲುಗಳಿಗೂ ಮುಂಚೆ  ಈ ಬಿಲ್ಲುಗಳನ್ನು Bill process ಹಾಗೂ Payment Authorization ಮಾಡಬೇಕಾಗುತ್ತದೆ.


ದಿನಕ್ಕೊಂದು ಸೂತ್ರ ೧೭

 ಖಜಾನೆ-೨ ರಡಿ‌ Open ಚೆಕ್ ವಿತರಣೆ ಕುರಿತು.

೧) ಎ.ಸಿ. ಬಿಲ್ಲು, ಶವಸಂಸ್ಕಾರ ಕ್ಲೇಮು,  ರಹಸ್ಯ/ಗುಪ್ತ ಸೇವಾ ವೆಚ್ಚದ ಕ್ಲೇಮು , ಮಂಗಡ ಹಣ ಮರುಭರಣ ಕ್ಲೇಮು,  ಈ ನಾಲ್ಕು ಕ್ಲೇಮುಗಳಿಗೆ ಮಾತ್ರ ಬಳಸಬೇಕಾದ  ಸ್ವಿಕೃತ ನೋಂದಣಿ ಸಂಖ್ಯೆಯನ್ನು (recipient ID)  ಪಿ.ಎಮ್.ಯು‌ ಘಟಕದಿಂದ ಡಿ.ಡಿ.ಓವಾರು ಸೃಜಿಸಲಾಗಿದೆ.

೨) ಇದಕ್ಕಾಗಿ ಹೊಸ recipient I'd ಸೃಜಿಸಬೇಕಾದ ಅವಶ್ಯಕತೆ ಇರುವುದಿಲ್ಲ.

೩) ಡಿ.ಡಿ.ಓ ಕಛೇರಿಯ
ಬಿಲ್ಲು ತಯಾರಕನು (caseworker)  ಮೇಲ್ಕಂಡ ನಾಲ್ಕು ಬಿಲ್ಲುಗಳನ್ನು/ ಕ್ಲೇಮುಗಳನ್ನು ತಯಾರಿಸುವಾಗ, select recipient ಎಂಬಲ್ಲಿ 3200 ಎಂದು ಟೈಪ್ ಮಾಡಬೇಕು, ಅಲ್ಲಿ ಆ ಡಿ.ಡಿ.ಓ ಗೆ ಮಾತ್ರ ಸಂಬಂದಿಸಿದ recipient I'd ಸ್ವಯಂ ಕಾಣಿಸಿಕೊಂಡಾಗ ಅದನ್ನು select ಮಾಡಿ ಬಿಲ್ಲನ್ನು ತಯಾರಿಸತಕ್ಕದ್ದು.

೫) ಡಿ.ಡಿ.ಓಗೆ 3200 recipient ಕಾಣಿಸದಿದ್ದಲ್ಲಿ,  ಹೊಸದಾಗಿ ಸೃಜಿಸಲು k2.helpdesk@ Karnataka.gov.in e-mail ಕಳುಹಿಸಿ,  ಹಾಗೂ copy marked to  pm2@karnataka.gov.in copy (ಯೋಜನಾ ವ್ಯವಸ್ಥಾಪಕರು ಖಜಾನೆ-೨ ರವರ e-mail ವಿಳಾಸ )  ಡಿ.ಡಿ.ಓ  ಕೊಡ್,ಡಿ.ಡಿ.ಓ  ಹೆಸರು, ಪೂರ್ಣ ವಿಳಾಸದೊಂದಿಗೆ  e-mail ಕಳುಹಿಸಿದಲ್ಲಿ ಪಿ.ಎಂ.ಯು ಘಟಕದಿಂದ ಇದನ್ನು ಸೃಜಿಸಿ ಮಾಹಿತಿ ನೀಡಲಾಗುತ್ತದೆ.

೪) ಖಜಾನೆ ಅದಿಕಾರಿಗಳು, ಡಿ.ಡಿ.ಓಗಳಿಂದ ಸ್ವಿಕೃತವಾಗುವ ಎ.ಸಿ. ಬಿಲ್ಲು, ಶವಸಂಸ್ಕಾರ ಕ್ಲೇಮು,  ರಹಸ್ಯ/ಗುಪ್ತ ಸೇವಾ ವೆಚ್ಚದ ಕ್ಲೇಮು , ಮಂಗಡ ಹಣ ಮರುಭರಣ ಕ್ಲೇಮಿನ ಬಿಲ್ಲುಗಳನ್ನು ತೀರ್ಣಗೋಳಿಸುವಾಗ,  online ನಲ್ಲಿ ಹಾಗೂ physical annexure ನಲ್ಲಿ ಡಿ.ಡಿ.ಓ ಹೆಸರು ಹಾಗೂ Recipient I'd (32 ಎಂದು ಪ್ರಾರಂಭವಾಗುತ್ತದೆ) ನಮೂದಾಗಿದೆಯೇ ಎಂದು ಗಮನಿಸಬೇಕು ?

೫) ಈ ಕ್ಲೇಮುಗಳಿಗೆ ಡಿ.ಡಿ.ಓ ಗಳು Recipient I'd 32 ಬಿಟ್ಟು ಬೇರೆ  Recipient I'd ಬಳಸಿದಲ್ಲಿ ಅಂತಹ ಬಿಲ್ಲು
/ಕ್ಲೇಮುಗಳನ್ನು ಖಜಾನೆ ಅಧಿಕಾರಿಗಳು ಅನುಮೋದಿಸಬಾರದು.
ನಿರೂಪಣೆ: ಅಮರೆ ಗೌಡ


ದಿನಕ್ಕೊಂದು ಸೂತ್ರ 18
18 .ಠೇವಣಿ ಖಾತೆ ಉದ್ದೇಶದ ವಿವರಣೆ

ಠೇವಣಿ ಖಾತೆಗಳಿಗೂ ಖಜಾನೆ-2ರಲ್ಲಿ ಪ್ರತಿಯೊಂದು ಲೆಕ್ಕ ಶೀರ್ಷಿಕೆಗೆ ಅನುಗುಣವಾಗಿ ಉದ್ದೇಶ ಕೋಡ್ ಸೃಜಿಸಲಾಗಿದೆ.
ಉದಾ :- ಪಿ.ಡಬ್ಲ್ಯೂಡಿ ವಂತಿಕೆಗೆ -542 ಆಗಿರುತ್ತದೆ.
ಸಿ.ಬಿ.ಎಫ್ ಠೇವಣಿ ಖಾತೆಗೆ – 506 ಆಗಿರುತ್ತದೆ

8443-00-117-0-01-542
8342-00-120-0-18-506

ಲೆಕ್ಕ ಶಿರ್ಷಿಕೆಯ ಕೊನೆಯ ಮೂರು ಅಂಕಿಗಳು ಠೇವಣಿ ಖಾತೆಗಳ ಲೆಕ್ಕ ಶೀರ್ಷಿಕೆಯ ಉದ್ದೇಶವನ್ನು ಸೂಚಿಸುತ್ತದೆ.
ನಿರೂಪಣೆ ರವಿ


ದಿನಕ್ಕೊಂದು ಸೂತ್ರ ೨೦

ಖಜಾನೆ-೨ ಡಿ.ಡಿ.ಓ ಕೋಡ್  

೧) ಖಜಾನೆ-೨ ಡಿ.ಡಿ.ಓ ಕೋಡ್ ೧೧ (alphanumeric ಅಂಕಿಗಳು ಹಾಗೂ ಅಕ್ಷರ ಎರಡು ಸೇರಿ) ಹೊಂದಿರುತ್ತದೆ.

೨) ಮೊದಲ ಎರಡು ಅಂಕಿಯು ಆಡಳಿತ ಇಲಾಖೆ ಸೂಚಿಸುತ್ತದೆ.
ಉದಾಹರಣೆ : ಖಜಾನೆ ಇಲಾಖೆಗೆ ಆರ್ಥಿಕ ಇಲಾಖೆಯು ಆಡಳಿತ ಇಲಾಖೆ‌‌ ಆಗಿರುತ್ತದೆ ಅರ್ಥಿಕ ಇಲಾಖೆಯ ಖಜಾನೆ-೨ ಅಂಕಿ -12  ಇರುತ್ತದೆ.

೩) ಮೂರನೆ ಅಂಕಿಯು ಇಂಗ್ಲಿಷ್ ಅಕ್ಷರದಿಂದ ಗುರುತಿಸಲಾಗುತ್ತದೆ. ಪ್ರತಿ ಆಡಳಿತ ಇಲಾಖೆಯ ಅಧೀನದಲ್ಲಿ ಬರುವ ಪ್ರತಿಯೊಂದು ಇಲಾಖೆಯನ್ನು ಒಂದಕ್ಷರದ ಇಂಗ್ಲಿಷ್ ವರ್ಣಮಾಲೆಯಿಂದ ಗುರುತಿಸಲಾಗುತ್ತದೆ.
ಉದಾ: ಖಜಾನೆ ನಿರ್ದೇನಾಲಯವನ್ನು ‘E ’ ಎಂದು ಇರುತ್ತದೆ.

೪) ಮುಂದಿನ ಎರಡು ಅಂಕಿ  ನಿರ್ದೇಶನಾಲಯದ ಕ್ಷೇತ್ರಿಯ ಕಛೇರಿಯಿಂದ ಆರ್ಥಿಕ ಇಲಾಖೆಗೆ ಲೆಕ್ಕ ಶೀರ್ಷಿಕೆವಾರು ಆಯವ್ಯಯ ಬೇಡಿಕೆಯನ್ನು     ಸಲ್ಲಿಸುವ  ಕ್ಷೇತ್ರಿಯ ಕಛೇರಿಯದ್ದಾಗಿರುತ್ತದೆ ( field office which give the budget requirement for a head of account to FD)
ಉದಾ: 01- ಖಜಾನೆ ನಿರ್ದೇಶನಾಲಯ/ ಕ್ಷೇತ್ರಿಯ ಕಛೇರಿ

೫) ನಂತರದ ೫ ಅಂಕಿಗಳು ಡಿ.ಡಿ.ಓ ಗುರುತಿಸುತ್ತದೆ.

ಅದರಲ್ಲಿ 10001 ರಿಂದ 99999 ವರೆಗೆ ಅಂಕಿಗಳು ಇದ್ದಲ್ಲಿ ಅವರು ಡಿ.ಡಿ.ಓ ಎಂದು ಅರ್ಥ.

ಅದರಲ್ಲಿ 01000 ರಿಂದ 09999ವರೆಗೆ ಅಂಕಿಗಳು ಇದ್ದಲ್ಲಿ ಅವರು ನಿಯಂತ್ರಣಾಧಿಕಾರಿ (Controlling officer) ಎಂದು ಅರ್ಥ.

ಅದರಲ್ಲಿ 00100 ರಿಂದ 00999 ವರೆಗೆ ಅಂಕಿಗಳು ಇದ್ದಲ್ಲಿ ಅವರು ಮುಖ್ಯ ನಿಯಂತ್ರಣ ಅಧಿಕಾರಿಗಳು ( Chief Controlling officer) ಎಂದು ಅರ್ಥ.
ಉದಾ

೬) ಕೊನೆಯ ಅಕ್ಷರ O ಅಥವಾ D ಇರುವುದು ಅದರಲ್ಲಿ  O'  ಎಂದು ಇದ್ದಲ್ಲಿ ಅವರು ಖಜಾನೆ-೨ ರಲ್ಲಿ ಮೂಲ ಪಾತ್ರ ನಿರ್ವಹಿಸುವ ಡಿ.ಡಿ.ಓ ಆಗಿರುತ್ತಾರೆ.

ಅದರಲ್ಲಿ  D'  ಎಂದು ಇದ್ದಲ್ಲಿ ಅವರು ಖಜಾನೆ-೨ ರಡಿ  ಡಿ.ಡಿ.ಓ ಮೂಲ ಪಾತ್ರವನ್ನು ಅವರ ಅಧೀನ ಅಧಿಕಾರಿಗೆ  ಪ್ರತ್ಯಾಯೋಜಿಸಿರುತ್ತಾರೆ.

ಉದಾಹರಣೆ: 12E01-10104O ಇದು ಉಪ ನಿರ್ದೇಶಕರು,  ಜಿಲ್ಲಾ ಖಜಾನೆ ಧಾರವಾಡ ರವರ ಕೆ-೨ ಡಿ.ಡಿ.ಓ ಕೋಡ್.

ದಿನಕೂಂದು ಸೂತ್ರ ೨೧
ಠೇವಣಿ ಖಾತೆಗಳ ಸಮನ್ವಯೀಕರಣ
ಖಜಾನೆ-2 ರಲ್ಲಿ ಎಲ್ಲಾ ಠೇವಣಿ ಖಾತೆಗಳಿಗೂ ಪ್ರತಿ ಮಾಹೆಯಲ್ಲಿ ಠೇವಣಿ ಖಾತೆಗಳನ್ನು ಸಮನ್ವಯೀಕ ರಿಸಬೇಕಾಗುತ್ತದೆ. ಇಲ್ಲವಾದಲ್ಲಿ ಠೇವಣಿ ಖಾತೆಗಳಲ್ಲಿ ವಹಿವಾಟುಗಳನ್ನು ನಡೆಸಲು ಸಾಧ್ಯವಾಗುವುದಿಲ್ಲ, ಠೇವಣಿ ಖಾತೆಗಳಿಂದ ಬಿಲ್ಲು ಅಥವಾ ಚೆಕ್ಕಿನ ಮುಖಾಂತರ ಹಣ ಸೆಳೆಯಲು ಠೇವಣಿ ಆಡಳಿತಗಾರರು ಮತ್ತು ಖಜಾನಾಧಿಕಾರಿಗಳು ಠೇವಣಿ ಖಾತೆಗಳನ್ನು ಸಮನ್ವಯೀಕರಿಸಿಕೊಳ್ಳಬೇಕು.
ಠೇವಣಿ ಖಾತೆಗಳನ್ನು ಸಮನ್ವಯೀಕರಿಸಲು ಮುಖ್ಯವಾಗಿ ಖಜಾನೆ-2ರಲ್ಲಿ,ಠೇವಣಿ ಆಡಳಿತಗಾರರಿಗೆ  ‘2’ ಪಾತ್ರಗಳನ್ನು ಖಜಾನಾಧಿಕಾರಿಗಳು ಹಂಚಬೇಕಾಗುತ್ತದೆ.
1.ಠೇವಣಿ ಅಧೀಕ್ಷಕರು (Deposit Superintendent)
2.ಠೇವಣಿ ಆಡಳಿತಗಾರ(Deposit Administrator)
ನಿರೂಪಣೆ: ರವಿ

ದಿನಕೂಂದು ಸುತ್ರ22

ಸಂಪೂರ್ಣ ಟಿಟಿಆರ್ ಬಿಲ್ಲುಗಳಲ್ಲಿ ವೋಚರ್ ಸಂಖ್ಯೆಯನ್ನು ನಮೂದಿಸುವ ಕುರಿತು
ಸಂಪೂರ್ಣ ಟಿಟಿಆರ್ ಬಿಲ್ಲುಗಳು ಅಂದರೆ ಬಿಲ್ಲಿನ ಪೂರ್ಣ ಮೊತ್ತವನ್ನು ಒಂದು ಲೆಕ್ಕಶೀರ್ಷಿಕೆಯಿಂದ ಇನ್ನೊಂದು ಲೆಕ್ಕಶೀರ್ಷಿಕೆಗೆ ವರ್ಗಾಯಿಸುವ ಬಿಲ್ಲುಗಳು (ಉದಾ: ಕೆಜಿಐಡಿಗೆ ಪಾವತಿಯಾಗುವ ವಾಹನ ವಿಮೆ ಬಿಲ್ಲು, ಠೇವಣಿ ಖಾತೆಗೆ ವರ್ಗಾಯಿಸುವ ಬಿಲ್ಲುಗಳು). ಬಿಎಓ ರವರಿಂದ ಅನುಮೋದಿತವಾದ ಕೂಡಲೇ ವೋಚರ್ ಸಂಖ್ಯೆಯು ಸೃಜನೆಯಾಗುತ್ತದೆ. ಬಿಎಓರವರೇ ವೋಚರ್ ಸಂಖ್ಯೆಯನ್ನು ಬಿಲ್ಲಿನ ಮೇಲೆ ದಾಖಲಿಸಬೇಕ


ದಿನಕೂಂದು ಸೂತ್ರ ೨೩
ಎರಡೆರಡು ಬಾರಿ ಪಾವತಿಸುವುದನ್ನು ತಪ್ಪಿಸಲು ಮಂಜೂರಾತಿ ಆದೇಶಗಳು, ಮಹಾಲೇಖಪಾಲರ ಪ್ರಾಧಿಕರಣಗಳು, ಅಡ್ವೈ ಸ್ (Treasury Advices) ಗಳ ಮೇಲೆ ಪಾವತಿಸಲಾಗಿದೆ ಎಂಬ ಹಿಂಬರಹವನ್ನು ದಾಖಲಿಸಬೇಕು


ದಿನಕೂಂದು ಸೂತ್ರ೨೪
ಅರ್ಥೋಪಾಯ ತೀರುವಳಿ (Ways and Means Clearance) ಅವಶ್ಯಕವಿರುವ ಬಿಲ್ಲುಗಳನ್ನು ಪಿಪಿಯು-ಪಿಎ ಹಂತದಲ್ಲಿ ಆನ್ ಲೈನ್ ಮೂಲಕ ಆರ್ಥಿಕ ಇಲಾಖೆಗೆ ಕಳುಹಿಸಲಾಗುವುದು. ಆದುದರಿಂದ ಅರ್ಥೋಪಾಯ ತೀರುವಳಿ (Ways and Means Clearance) ಅವಶ್ಯವಿರುವ ಬಿಲ್ಲುಗಳನ್ನು ಪರಿಶೀಲಿಸಿ ಆದ್ಯತೆ ಮೇಲೆ ಸಂಸ್ಕರಿಸಬೇಕ

ದಿನಕ್ಕೊಂದು ಸೂತ್ರ-೨೫

 ಡಿ.ಡಿ.ಓ ರವರು ಡಿ.ಸಿ.ಬಿಲ್ಲುಗಳಿಗೆ  ಕಂಪೂಟರನಲ್ಲಿ ಮುದ್ರಣವಾದ ಉಪ ವೋಚರ್ ಗಳನ್ನು ಲಗತ್ತಿಸುತ್ತಾರೆ.

ಅದರೆ ಖಜಾನೆ ಅಧಿಕಾರಿಗಳು ಹಾಗೂ ಖಜಾನೆ ಸಿಬ್ಬಂದಿಗಳು ಗಮನಿಸಬೇಕಾದ ಅಂಶವೆಂದರೆ ಕಂಪೂಟರನಲ್ಲಿ ಮುದ್ರಣವಾದ ಉಪ ವೋಚರ್ ಗಳಲ್ಲಿ ಈ ಕೆಳಕಂಡ ಯಾವ ವಿಧದ ಉಪ ವೋಚರ ಲಗತ್ತಿಸಿದ್ದಾರೆ ಎಂಬುದು? 

೧) ಮೂಲ ಪ್ರತಿ (Original) -ಸ್ವಿಕೃತನ ಪ್ರತಿ

೨) ನಕಲು ಪ್ರತಿ -ಸಾಗಾಣಿಕೆದಾರರ ಪ್ರತಿ

೩) ಕಛೇರಿ ಪ್ರತಿ

೪) ಹೆಚ್ಚುವರಿ ಪ್ರತಿ

ಈ ಮೇಲೆ ಹೇಳಲಾದ ಉಪ ವೋಚರ್ ಗಳಲ್ಲಿ ಮೂಲ ಪ್ರತಿ (Original-ಸ್ವಿಕೃತನ ಪ್ರತಿ) ಡಿ.ಸಿ‌. ಬಿಲ್ಲಿಗೆ ಲಗತ್ತಿಸಲಾಗಿದೆಯೆ ಅಥವಾ ಇಲ್ಲವೆ?

ಲಗತ್ತಿಸದಿದ್ದಲ್ಲಿ ಸಂಬಂದಿಸಿದ ಡಿ.ಡಿ.ಓ ರವರಿಗೆ ಆ ಬಿಲ್ಲಿಗೆ ಉಪ ವೋಚರನ ಮೂಲ ಪ್ರತಿ (Original) -ಸ್ವಿಕೃತನ ಪ್ರತಿ ಲಗತ್ತಿಸಲು ಒತ್ತಾಯಿಸುವುದು.


ದಿನಕೂಂದು ಸೂತ್ರ ೨೬
ಬಿಲ್ಲುಗಳನ್ನು ತಯಾರಿಸುವಾಗ ‘ಸ್ಟೋರ್ಸ್’ ಕ್ಲೈಂಗಳನ್ನು ತಪ್ಪಾಗಿ ಬಳಸಲಾಗುತ್ತಿದೆ. ಈ ಕೆಳಕಂಡ ಸಾಮಗ್ರಿಗಳು ಸ್ಟೋರ್ಸ್ ವ್ಯಾಪ್ತಿಯಲ್ಲಿ ಬರುತ್ತವೆ.

ಪೀಠೋಪಕರಣಗಳ ಖರೀದಿ, ಪುಸ್ತಕಗಳು, ರಾಸಾಯನಿಕಗಳು, ವೈಜ್ಞಾನಿಕ ಸಲಕರಣಗಳು, ಆಸ್ಪತ್ರೆ, ಬಂಧಿಖಾನೆ ಡೈಯಟ್ ಪದಾರ್ಥಗಳು, ಮ್ಯೂಸಿಯಂ ನಮೂನೆಗಳು, ಇಲಾಖೆಯಿಂದ ಕಟ್ಟಡ ಕಟ್ಟು ಸಾಮಾಗ್ರಿಗಳು, ಮಿಷಿನರಿ ತಯಾರಿಕೆ, ಸಾಧನಗಳು ಮುಂತಾದವುಗಳು


ದಿನಕೂಂದು ಸೂತ್ರ ೨೭
ರೂ.5000 ಕ್ಕಿಂತ ಹೆಚ್ಚಿನ ಮೊತ್ತದ ಚೆಕ್ಕುಗಳನ್ನು ನೀಡುವಂತಿಲ್ಲ.
ಮೃತ ಸರ್ಕಾರಿ ನೌಕರರ ಶವ ಸಂಸ್ಕಾರದ ಕ್ಲೈಂಗಳು (Claims on Obsequies Charges), ಗೌಪ್ಯ ಸೇವೆಗಳು (Secret Service), ಎಸಿ ಬಿಲ್ಲುಗಳು ಹಾಗೂ ಖಾಯಂ ಮುಂಗಡದ ಮರು ಭತ್ಯೆ ಕ್ಲೈಂ (Permanent Advance Recoupement) ಗಳ ಸಂಬಂಧ ಇದಕ್ಕೆ ವಿನಾಯತಿ ಇರುತ್ತದೆ.

ಎಸಿ ಬಿಲ್ಲುಗಳು, ಗೌಪ್ಯಸೇವೆ ವೆಚ್ಚಗಳು, ಖಾಯಂ ಮುಂಗಡ ಮರುಭರ್ತಿ ಹಾಗೂ ಸರ್ಕಾರಿ ನೌಕರರ ಶವ ಸಂಸ್ಕಾರದ ವೆಚ್ಚಗಳ ಕ್ಲೈಂಗಳಿಗೆ ತೆರೆದ ಚೆಕ್ಕುಗಳನ್ನು ಡಿಡಿಓರವರಿಗೆ ಸ್ವೀಕರ್ತನ ವಿಧ -32 ಡಿಡಿಓ ರಲ್ಲಿ ವಿತರಿಸಬೇಕು.


ದಿನಕ್ಕೊಂದು ಸೂತ್ರ ೨೭

ಖಜಾನೆ-೨ ರಲ್ಲಿ
ಈ ಕೆಳಕಂಡ ಬಿಲ್ಲುಗಳ ಕ್ಲೇಮುಗಳಿಗೆ
 physical ಹಾಗೂ online ಮೇಲು ಸಹಿ ( Countersignature ) ಅವಶ್ಯಕ ಇರುತ್ತದೆ.

೧) ಸಾಮಾನ್ಯ ವೈದ್ಯಕೀಯ ಮರು ಭತ್ಯೆ ಕ್ಲೇಮು (General Medical Reimbursement bill)- ವೇತನ ಬಿಲ್ಲು

೨) ಸ್ವೀಕೃತ ರಶೀದಿ ಕ್ಲೇಮು/ಬಿಲ್ಲು
(Payees Receipt Bill)

೩) Grant in Aid bill - Grant -in-Aid general/ Salary/Salary educational institutions/ asset creation ಕ್ಲೇಮುಗಳು.


ದಿನಕೂಂದು ಸೂತ್ರ 28
ಖಜಾನಾಧಿಕಾರಿ e-Payment File ಗಳನ್ನು ನಿಯಮಿತ ಅಂತರಗಳಲ್ಲಿ ಆರ್.ಬಿ.ಐಗೆ ರವಾನಿಸಬೇಕು. ಇದು ಮಧ್ಯಾಹ್ನ 12.00 ಗಂಟೆ ಅಥವಾ ಸಂಜೆ 4.00 ಗಂಟೆ ಮಾತ್ರ ಆಗಿರಬೇಕಾಗಿಲ್ಲ.

ಸಾಮಾನ್ಯವಾಗಿ ಆರ್.ಬಿ.ಐಗೆ ಕಳುಹಿಸಲಾಗದ 4.00 ಗಂಟೆಯ ನಂತರ ಖಜಾನಾಧಿಕಾರಿ ಪಾವತಿ ಕಡತಗಳನ್ನು ಸೃಜಿಸಬಾರದು.


ದಿನಕ್ಕೊಂದು ಸೂತ್ರ ೨೯

ಸ್ವೀಕರ್ತನ ರಶೀದಿ

೧)  ಯಾವುದೇ ಬಿಲ್ಲಿನ ನಮೂನೆ ನಿಗದಿಪಡಿಸದಿದ್ದಲ್ಲಿ ಸ್ವೀಕೃರ್ತನ ರಸೀದಿಯನ್ನು ಉಪಯೋಗಿಸಬೇಕು.

೨) ಪ್ರಕೃತಿ ವಿಕೋಪ ನಿಧಿ
ಸಿ.ಆರ್.ಎಪ್ (calamity relief fund)  ಹಾಗೂ ಶಾಸಕ ಸ್ಥಳಿಯಾಭಿವೃದ್ದಿ ಯೋಜನೆಗಳಿಗೆ ಹೊರತುಪಡಿಸಿ ಹಣವನ್ನು ಸೆಳೆದು ವೈಯಕ್ತಿಕ ಠೇವಣಿ ಖಾತೆ ಅಥವಾ ಬ್ಯಾಂಕ್ ಖಾತೆಗಳಲ್ಲಿ ಠೇವಣಿ ಇಡುವುದನ್ನು ನಿರ್ಭಂದಿಸಲಾಗಿದೆ‌.

೩) ಯೋಜನೆಗಳನ್ನು ಜಾರಿಗೊಳಿಸುವ ಏಜೆನ್ಸಿಗಳಾದ ಮಂಡಳಿಗಳು, ನಿಗಮಗಳು, ಸಹಕಾರ ಸಂಘಗಳು, ಸಾರ್ವಜನಿಕ ವಲಯ ಉದ್ಯಮಗಳು ಮಾತ್ರ ಸ್ವೀಕರ್ತನ ರಶೀದಿ ಮೇಲೆ ಹಣ ಪಡೆಯಬಹುದು.

೪) ಜಿಲ್ಲಾಧಿಕಾರಿಗಳು/ಇಲಾಖಾಧಿಕಾರಿಗಳು ಸವಿವರ ಸಾದಿಲ್ವಾರು ಬಿಲ್ಲಿನ ಮೂಲಕವೇ ಸೆಳೆಯಬೇಕು.

ದಿನಕೂಂದು ಸೂತ್ರ೩೦

ಪ್ರತಿಯೊಂದು ಖಜಾನೆಯು ಓರ್ವ ಇಲಾಖಾ ಬಳಕೆದಾರರನ್ನು ಹೊಂದಿರಬೇಕು (departmental user).

ಸ್ವೀಕೃತಿ ಮತ್ತು ಚಲನ್ ಬೇರೆ ಬೇರೆಯಾಗಿರುತ್ತದೆ. ಸ್ವೀಕೃತಿಯು ಹಣವನ್ನು ಸ್ವೀಕರಿಸಿರುವುದಕ್ಕೆ ಸ್ವೀಕೃತಿಯಾಗಿರುತ್ತದೆ (Acknowledgement). 

ದಿನದಲ್ಲಿ ಸೃಜಿಸಲಾದ ಸ್ವೀಕೃತಿಗಳು ದಿನಾಂತ್ಯದಲ್ಲಿ ಡಿಡಿಓ ಲಾಗಿನ್ ನಲ್ಲಿ ಸಂಚಿತವಾಗುತ್ತದೆ (consolidated challan).


ದಿನಕೂಂದು ಸೂತ್ರ ೩೧

ಪ್ರತಿದಿನ ಸ್ಕ್ರೋಲ್ ಗಳನ್ನು ಅನುಮೋದಿಸಬೇಕು. ಅನುಮೋದಿಸಿದ ತಕ್ಷಣ ಆರ್.ಬಿ.ಡಿಯನ್ನು ಸೃಜಿಸಬೇಕು.

ಸ್ಕ್ರೋಲ್ ಗಳನ್ನು ಅನುಮೋದಿಸದೇ ಇದ್ದಲ್ಲಿ ಆಗುವ ಪರಿಣಾಮಗಳು :-

ಡಿಡಿಓರವರಿಂದ ವಿಫಲ ಇ-ಪಾವತಿಗಳಿಗೆ ಬಿಲ್ಲುಗಳನ್ನು ತಯಾರಿಸಲಾಗುವುದಿಲ್ಲ,
ಡಿಡಿಓ ವರದಿಗಳಲ್ಲಿ ಯುಟಿಆರ್ ಸಂಖ್ಯೆಗಳು ನಮೂದಿತವಾಗುವುದಿಲ್ಲ. ಹಾಗೂ
ಮುಂದಿನ ತಿಂಗಳಿಗೆ ವರ್ಗಾಯಿಸಲ್ಪಡುವುದರಿಂದ ಲೆಕ್ಕಗಳ ಮೇಲೆ ಪರಿಣಾಮವಾಗುತ್ತದೆ.

,ದಿನಕೂಂದು ಸೂತ್ರ೩೨
1.ಬಿಲ್ಲಿನ ಅನುಬಂಧದ ವಿವರಗಳನ್ನು ಸ್ವೀಕರ್ತನ ವಿವರಗಳಿಗೆ ಪರಿಶೀಲಿಸಬೇಕು. ಡಿಡಿಓ, ಪದನಾಮ, ಬ್ಯಾಂಕ್, ಮುಂತಾದ ತಪ್ಪು ಸ್ವೀಕರ್ತರಾಗಿದ್ದಲ್ಲಿ ಆಕ್ಷೇಪಿಸಬೇಕು.
2.ಕ್ಷೇಮ ನಿಧಿ, ಹುಲಿ ಮೀಸಲು ನಿಧಿ, ಮುಂತಾದವುಗಳ ನಿಧಿಗಳಿಗೆ ವೆಚ್ಚ ಮರುಭರ್ತಿಯ ರೀತಿ ಪಾವತಿಸಬಾರದು. ಸೇವೆ ಮತ್ತು ಸರಬರಾಜುದಾರರಿಗೆ ನೇರವಾಗಿ ಪಾವತಿಗಳನ್ನು ಮಾಡಬೇಕು.


ದಿನಕ್ಕೋಂದು ಸೂತ್ರ೩೩
ಖಜಾನಾಧಿಕಾರಿ e-Payment File ಗಳು ಸಿದ್ಧವಾಗಿದ್ದು, ಆರ್.ಬಿ.ಐಗೆ ಕಳುಹಿಸಲಾಗದಿದ್ದಲ್ಲಿ ಅಂತಹ ಬ್ಯಾಚಿನ ವೋಚರ್ ಗಳನ್ನು ವೋಚರ್ ಸಂಖ್ಯೆ ಸೃಜನೆಯ ದಿನಾಂಕದಂದು ಲೆಕ್ಕಕ್ಕೆ ತೆಗೆದುಕೊಳ್ಳಬೇಕು.


ದಿನಕ್ಕೂಂದು ಸೂತ್ರ ೩೪
ಆನ್ ಲೈನ್ ನಲ್ಲಿ ಮೇಲು ಸಹಿಯಾದ ಬಿಲ್ಲಗಳ ಕುರಿತು ಸೂಚನೆಗಳು

1)     ಸರ್ಕಾರದ ಆದೇಶ ಸಂ.ಆಇ/21/ಟಿಎಆರ್/2017 ದಿನಾಂಕ 19/05/2017 ರ ರೀತ್ಯ, ಅನುಭಂದ 2ರಲ್ಲಿ ತಿಳಿಸಿರುವ ಬಿಲ್ಲುಗಳು ಮೇಲುಸಹಿ ಅಧಿಕಾರಿಗಳಿಂದ ಆನ್ ಲೈನ್ ಮೂಲಕ ಮೇಲು ಸಹಿಯಾಗ ಬೇಕಾಗಿರುತ್ತವೆ.

2)    ಖಜಾನೆ 2ರಲ್ಲಿ ಈ ರೀತಿ ಆನ್ ಲೈನ್ ನಲ್ಲಿ ಮೇಲು ಸಹಿಯಾದಾಗ, ಮೇಲುಸಹಿಯ ವಿವರಗಳನ್ನೊಳಗೊಂಡ ಒಂದು ಮುಂದುವರಿದ ಹಾಳೆ (bill continuation sheet) ಸೃಜನೆಯಾಗುತ್ತದೆ.

3)    ಡಿಡಿಓರವರು ಮುದ್ರಿತ ಬಿಲ್ಲುಗಳನ್ನು  ಖಜಾನೆಗೆ ಸಲ್ಲಿಸುವಾಗ ಈ ಹಾಳೆಯನ್ನು ಮುದ್ರಿಸಿ ಬಿಲ್ಲಿಗೆ ಲಗ್ಗತ್ತಿಸ ಬೇಕಾಗುತ್ತದೆ.

4)   ಈ ಮುಂದುವರಿದ ಹಾಳೆಗಳನ್ನು ಲಗ್ಗತಿಸದೇ ಇರುವ ಮೇಲುಸಹಿಯಾದ ಬಿಲ್ಲುಗಳನ್ನು ಖಜಾನೆಯಲ್ಲಿ ಅಂಗೀಕರಿಸಬಾರದು.

     

                      Online Counter signature bills



1)   As per GO No. AYEE/21/TAR/2017 Dated 19/05/2017, Bills listed in Annexure 2 requires Online Counter signature.



2)   After online countersignature in Khajane II, a bill continuation sheet will be generated containing the details of counter signature 



3)   This sheet  has to be printed and enclosed to the physical copy of the bill by the DDO while submitting the bill to the Treasury. 





4)   Countersigned bills without this continuation sheet shall not be accepted in the Treasuries


ದಿನಕ್ಕೂಂದು ಸೂತ್ರ೩೫
ಖಜಾನೆಯಲ್ಲಿ ನಿರ್ವಹಿಸಬೇಕಾದ ಶಾಸನ ಬದ್ಧ ವರದಿಗಳು
1.ಕ್ಯಾಶ್ ಅಕೌಂಟ್ (Cash Account)
2.ಪಾವತಿಗಳ ಪಟ್ಟಿ (Schedule of Payments)
3.ಮುಕ್ತಾಯ ಘೋಷ್ವಾರೆ (Closing Abstract)
4.ಆರ್.ಬಿ.ಡಿ (RBD)
5.ವೆಚ್ಚ ಶೀರ್ಷಿಕೆಗಳಿಗಾಗಿ ನಮೂನೆ 1,2,3 ಸೇರಿದಂತೆ ಪಾವತಿಗಳ ತಃಖ್ತೆ (SOP)
ಎಲ್ಲಾ ಜಮೆ ಶೀರ್ಷಿಕೆಗಳಿಗೆ ನಮೂನೆ-2 ಮತ್ತು ಟಿಟಿಆರ್ ನೊಂದಿಗೆ SOR
6.ಠೇವಣಿ ಶಿಲ್ಕು ಪಟ್ಟಿ ಹಾಗೂ ಧನ –ಋಣ ಪಟ್ಟಿ (Plus and Minus Memo)
7.ಚೆಕ್ಕುಗಳು –ಕೆಟಿಸಿ-66(ಎ ಮತ್ತು ಬಿ), ಕೆಟಿಸಿ -28, ಧನ –ಋಣ ಪಟ್ಟಿ, ವ್ಯಪಗತ ತಃಖ್ತೆ, ನಗದಾಗದ ಚೆಕ್ಕುಗಳು.


ದಿನಕ್ಕೊಂದು ಸೂತ್ರ ೩೬
ಹಣವನ್ನು ಸೆಳೆಯುವುದು (ಸಾ.ವೆ.ಕೈ ಕಂಡಿಕೆ-17)

ತಕ್ಷಣದ ಪಾವತಿಗಾಗಿ ಮಾತ್ರ ಖಜಾನೆಯಿಂದ ಹಣ ಸೆಳೆಯುವುದು.

ವೆಚ್ಚವನ್ನು ನಿರೀಕ್ಷಿಸಿ ಅಥವಾ ಅನುದಾನ ವ್ಯಪಗತವಾಗುವುದನ್ನು ತಪ್ಪಿಸಲು ಹಣ ಸೆಳೆಯುವಂತಿಲ್ಲ.

ಸರಿಯಾದ ವೋಚರ್ ಗಳು ಇಲ್ಲದೇ ಹಾಗೂ ವೆಚ್ಚದ ಸ್ವರೂಪ ನಮೂದಿಸದೇ ಹಣವನ್ನು ಸೆಳೆಯುವಂತಿಲ್ಲ.

ಮಹಾಲೇಖಪಾಲರಿಂದ (ಜಿ.ಪಂ/ತಾ.ಪಂ ಸಂಬಂಧ ಜಿ.ಪಂ ಮುಖ್ಯ ಲೆಕ್ಕಾಧಿಕಾರಿಗಳು) ಪ್ರಾಧಿಕರಿಸಲ್ಪಟ್ಟ ಡಿಡಿಓಗಳು ಮಾತ್ರ ಹಣ ಸೆಳೆಯಬಹುದು.

ಅನುದಾನಿತ ಸಂಸ್ಥೆಗಳು/ಸಂಸ್ಥೆಗಳು/ವ್ಯಕ್ತಿಗಳು ಸೆಳೆಯುವ ಬಿಲ್ಲುಗಳಿಗೆ ಸರ್ಕಾರದ ಅಧಿಕಾರಿಗಳ ಮೇಲು ಸಹಿ ಇರಬೇಕು.

ಖಜಾನೆಯಿಂದ ಹಣ ಸೆಳೆಯುವ ಮುಂಚೆಯೆ ಸಾದಿಲ್ವಾರು ಮುಂತಾದ ವೆಚ್ಚಗಳನ್ನು ಭರಿಸಬೇಕಾದಲ್ಲಿ ಕಚೇರಿಗೆ ಮಂಜೂರಾಗಿರುವ ಖಾಯಂ ಮುಂಗಡದಿಂದ ಭರಿಸಿ ಖಾಯಂ ಮುಂಗಡವನ್ನು ಮರು ಭರಣ ಮಾಡಿಕೊಳ್ಳಬಹುದು.

ಸೇವಾ ಮತ್ತು ಸರಬರಾಜುದಾರರಿಗೆ ನೇರವಾಗಿ ಪಾವತಿಗಳನ್ನು ಪಾವತಿ ಮಾಡಬೇಕು. ಡಿಡಿಓರವರ ಹೆಸರಿಗೆ ಪಾವತಿಸುವಂತಿಲ್ಲ. (ಸಾ.ವೆ.ಕೈ ಕಂಡಿಕೆ-17)

ಪ್ರಯಾಣದ ಸಂದರ್ಭದಲ್ಲಿ ಸಾರ್ವಜನಿಕ ಸೇವೆಯಲ್ಲಿ ಭರಿಸಲಾದ ಕೂಲಿ ವೆಚ್ಚ ಗಾಡಿ (ಆಟೋ) ಮುಂತಾದ ವೆಚ್ಚಗಳಿಗೆ ಮಾತ್ರ ಸರ್ಕಾರಿ ನೌಕರರ ಪ್ರಮಾಣಿಸಿ ವೆಚ್ಚವನ್ನು ಪಡೆಯಬಹುದು. ವೋಚರ್ ಅಗತ್ಯವಿರುವುದಿಲ್ಲ. (ಕ.ಆ.ಸಂ ಅನುಚ್ಛೇಧ-50)
               
ದಿನಾಂಕ 02.10.2013ರ ನಂತರದ ಅವಧಿಯ ಪಂಚಾಯತ್ ಕಾಮಗಾರಿ ಬಿಲ್ಲುಗಳಿಗೆ ಗಾಂಧಿ ಸಾಕ್ಷಿ ಕಾಯಕ ವರ್ಕ್ ಸಾಫ್ಟ್ ತಂತ್ರಾಂಶದ ಮೂಲಕ ಸಿದ್ಧಪಡಿಸಿದ ಪಾವತಿಯ ಆದೇಶ ಲಗತ್ತಿಸಿರಬೇಕು. (ಸರ್ಕಾರದ ಸುತ್ತೋಲೆ ಸಂಖ್ಯೆ ಗ್ರಾ.ಆ.ಪ/03/ಗಣಕ ಕೋಶ/2013, ದಿ: 20.09.2014)


ದಿನಕ್ಕೊಂದು ಸೂತ್ರ೩೭

ಸಂಕ್ಷಿಪ್ತ ಸಾದಿಲ್ವಾರು ಬಿಲ್ಲುಗಳು (FD 1 TCE 2010 dated: 11.06.2010)

ಪ್ರತಿಯೋರ್ವ ಡಿಡಿಓಗೆ ದಿನದ ಮಿತಿ ರೂ.500/-
ರೂ.500/- ಕ್ಕಿಂತ ಮೀರಿದ್ದಲ್ಲಿ ನಿಯಂತ್ರಣಾಧಿಕಾರಿಗಳಿಂದ ಅನುಮತಿ

ರೂ. 2 ಲಕ್ಷಕ್ಕೂ ಮೀರಿದ್ದಲ್ಲಿ ಆರ್ಥಿಕ ಇಲಾಖೆಯ ಲಿಖಿತ ಅನುಮತಿ

ಮೇಲಾಧಿಕಾರಿಗಳ ಅನುಮತಿ ಪಡೆಯುವದನ್ನು ತಪ್ಪಿಸಲು ಒಂದೇ ವೆಚ್ಚವನ್ನು ವಿಭಜಿಸುವಂತಿಲ್ಲ.

ವಾಹನಗಳ ಖರೀದಿಗೆ ರೂ. 25 ಲಕ್ಷಗಳ ಮಿತಿ.

ಪರೀಕ್ಷೆಯ ವೆಚ್ಚಗಳ ರೂ. 50 ಲಕ್ಷಗಳ ಮಿತಿ.

ಎನ್.ಸಿ.ಸಿ ಕ್ಯಾಂಪ್ ಗಳಿಗೆ ರೂ. 10 ಲಕ್ಷಗಳ ಮಿತಿ.

ಚುನಾವಣೆ ವೆಚ್ಚಗಳಿಗಾಗಿ ಯಾವುದೇ ಮಿತಿ ಇರುವುದಿಲ್ಲ.

ಎ.ಸಿ. ಬಿಲ್ಲನ್ನು ಸೆಳೆದ ಒಂದು ತಿಂಗಳೊಳಗೆ ಎನ್.ಡಿ.ಸಿ ಬಿಲ್ಲನ್ನು ಖಜಾನೆಗೆ ಸಲ್ಲಿಸಬೇಕು.


ದಿನಕೊಂದು ಸೂತ್ರ ೩೮
ಮೇಲು ಸಹಿ:
ಡಿಡಿಓರವರ ಉನ್ನತಾಧಿಕಾರಿಗಳು ಮೇಲು ಸಹಿ ಅಧಿಕಾರಿಗಳಾಗಿರುತ್ತಾರೆ. ಅಂದರೆ ಡಿಡಿಓ ಕಚೇರಿಯ ನಿಯಂತ್ರಣ ಕಚೇರಿ ಮುಖ್ಯಸ್ಥರು. ಡಿಡಿಓ ಕಚೇರಿಯಲ್ಲಿಯೇ ಬಿಲ್ಲುಗಳನ್ನು ಸೆಳೆಯಲು ಅಧೀನದ ಅಧಿಕಾರಿಗೆ ಪ್ರಾಧಿಕರಿಸಿ ಡಿಡಿಓರವರು (ಕಚೇರಿ ಮುಖ್ಯಸ್ಥರು) ಮೇಲು ಸಹಿ ಅಧಿಕಾರಿಗಳಾಗುವಂತಿಲ್ಲ.

ತಾಲ್ಲೂಕು ಪಂಚಾಯತ್ ಗೆ ಸಂಬಂಧಿಸಿದಂತೆ,

ತಾ.ಪಂ ಇಓ ರವರು ಸೆಳೆಯುವ ಬಿಲ್ಲುಗಳಿಗೆ - ಜಿ.ಪಂ ಸಿಎಓ ರವರು

ತಾ.ಪಂ ಲೈನ್ ಇಲಾಖೆಗಳು ಸೆಳೆಯುವ ತಾ.ಪಂ ಬಿಲ್ಲುಗಳಿಗೆ – ತಾ.ಪಂ ಇಓ

ತಾ.ಪಂ ಲೈನ್ ಇಲಾಖೆಗಳು ಸೆಳೆಯುವ ಜಿ.ಪಂ ಹಾಗೂ ರಾಜ್ಯವಲಯದ ಸ್ಕೀಂ ಬಿಲ್ಲುಗಳಿಗೆ 
ಇಓಟಿಪಿ (ಆರ್ಥಿಕ ಪ್ರತ್ಯಾಯೋಜನೆ ಅಧಿಕಾರಿದ ಮಿತಿಯಂತೆ)
ಸಂಬಂಧಿಸಿದ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು

ಮೇಲು ಸಹಿ ಅಧಿಕಾರಿಗಳು ತಮ್ಮ ಪರವಾಗಿ ಮೇಲು ಸಹಿ ಮಾಡಲು ಮೇಲು ಸಹಿ ಅಧಿಕಾರವನ್ನು (ಪತ್ರಾಂಕಿತ ಪ್ರಯಾಣ ಭತ್ಯೆ ಬಿಲ್ಲುಗಳನ್ನು ಹೊರತುಪಡಿಸಿ) ತಮ್ಮ ಅಧೀನದ ಓರ್ವ ಪತ್ರಾಂಕಿತ ಅಧಿಕಾರಿಗಳಿಗೆ ಪ್ರಾಧಿಕರಿಸಬಹುದು.


ದಿನಕೂಂದು ಸೂತ್ರ ೩೯

1.ಪ್ರೋಫಾರ್ಮ ಇನ್ವಾಯ್ಸ್
(ಎಫ್.ಡಿ/2/ಟಿಟಿಸಿ/98, ದಿನಾಂಕ: 10.11.1998, 31.08.1999 ಹಾಗೂ ಎಫ್.ಡಿ/1/ಟಿಟಿಸಿ/2001, ದಿ: 22.01.2001)

ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳು, ಅಲ್ಪ ಸಂಖ್ಯಾತರ ಮತ್ತು ಬುಡಕಟ್ಟು ಕಲ್ಯಾಣ ಇಲಾಖೆಗಳು ಖರೀದಿಸುವ ಕೆಲವೊಂದು ಪದಾರ್ಥಗಳಿಗೆ ವಿನಾಯಿತಿಸಿ, ಉಳಿದಂತೆ ಪ್ರೋಫಾರ್ಮ ಇನ್ವಾಯ್ಸ್ ಗಳ ಮೇಲೆ ಸಾದಿಲ್ವಾರು ಬಿಲ್ಲುಗಳನ್ನು ಸೆಳೆಯುವುದನ್ನು ನಿರ್ಭಂಧಿಸಲಾಗಿದೆ.

2.ಸಾಮಗ್ರಿಗಳ ಖರೀದಿ (ಸ.ಆ.ಸಂ. ಆಇ 01 ಟಿಸಿ ಇ 2012 ದಿ. 21.06.2012) (ಸಾ.ವೆ.ಕೈ ನಿಯಮ 55(49)(ಎ))


ಮುಕ್ತ ಮಾರುಕಟ್ಟೆಯಲ್ಲಿ ಖರೀದಿಸುವ ಸಲುವಾಗಿ ಮಿತಿ ರೂ.5000/- ಹೆಚ್ಚಿಸಿ ಆದೇಶಿಸಲಾಗಿದೆ.

ರೂ.5000/- ಮೀರಿದ ರೂ.1.00 ಲಕ್ಷಗಳವರೆಗಿನ ಖರೀದಿಗಳನ್ನು ಸ್ಪರ್ಧಾತ್ಮಕ ಕೋಟೇಶನ್ (ದರಪಟ್ಟಿ) ಕರೆಯುವುದರ ಮೂಲಕ ಖರೀದಿಸತಕ್ಕದ್ದು.

ರೂ.1.00 ಲಕ್ಷ ಮೀರಿದ ಖರೀದಿಗೆ ಕೆ.ಟಿ.ಪಿ.ಪಿ. ನಿಯಮ ಅನ್ವಯವಾಗುವುದು. 
ನಿಯಮಾನುಸಾರ ಅಗತ್ಯವಿದ್ದಲ್ಲಿ ಮೇಲು ಸಹಿಯಾಗಬೇಕು.


ದಿನಕ್ಕೊಂದು ಸೂತ್ರ 40

ಖಜಾನೆ ಚೆಕ್ಕುಗಳು : (ಸರ್ಕಾರದ ಪತ್ರ ಸಂ:ಅಇ 105 ಆಖಇ 09 ದಿ:30-07-2009)

ಗಣಕಯಂತ್ರದ ಮೂಲಕ ಮುದ್ರಿತವಾದ ಚೆಕ್ಕುಗಳಲ್ಲಿ ಕೈಬರಹದ ತಿದ್ದುಪಡಿಗಳನ್ನು ನಿರ್ಭಂದಿಸಲಾಗಿದೆ.

ಲೋಪಪೂರಿತ ಚೆಕ್ಕುಗಳನ್ನು ರದ್ದುಪಡಿಸಿ ಗಣಕಯಂತ್ರದ ಮೂಲಕವೇ ಹೊಸ ಚೆಕ್ಕನ್ನು ಮುದ್ರಿಸಿ ವಿತರಿಸಬೇಕು.

ಸಾಮಾನ್ಯವಾಗಿ ರೂ. 1000/- ಕ್ಕೆ ಮೀರಿದ ಚೆಕ್ಕುಗಳು ಅಕೌಂಟ್ ಪೆಯೀ ಯಾಗಿರಬೇಕು. (ಕ.ಆ.ಸಂ ಅನುಚ್ಛೇಧ-72)

ಖಜಾನೆ-2ರಲ್ಲಿ ಎಸಿ ಬಿಲ್ಲು, ಸರ್ಕಾರಿ ಮೃತ ನೌಕರರ ಶವ ಸಂಸ್ಕಾರದ ಬಿಲ್ಲು, ಗೌಪ್ಯ ಸೇವಾ ಬಿಲ್ಲುಗಳು ಹಾಗೂ ಖಾಯಂ ಮುಂಗಡ, ಮರು ಭರಣ ಬಿಲ್ಲುಗಳಿಗೆ ಮಾತ್ರ ಚೆಕ್ಕುಗಳ ಮೂಲಕ ಪಾವತಿಯಾಗುತ್ತದೆ. ಉಳಿದಂತೆ ರೂ. 5000/- ಕ್ಕೆ ಮೀರಿದ ಚೆಕ್ಕುಗಳಿಗೆ ಖಜಾನೆ ನಿರ್ದೇಶಕರ ಅನುಮತಿ ಅಗತ್ಯವಾಗಿರುತ್ತದೆ.


ದಿನಕ್ಕೊಂದು ಸೂತ್ರ 41

ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾಯಿಸುವ ಬಗ್ಗೆ (ಸ.ಆ.ಸಂ ಎಫ್.ಡಿ 5 ಟಿಎಆರ್ 2017 ದಿ : 30.01.2017)

ಸರ್ಕಾರಿ ಆದೇಶದ ದಿನಾಂಕದ ನಂತರ ಹೊಸ ಬ್ಯಾಂಕ್ ಖಾತೆಗಳಿಗೆ ಸಂಬಂಧಿಸಿದಂತೆ :
ಮಂಜೂರಾತಿ ನೀಡಿದ ದೃಢೀಕೃತ ಸರ್ಕಾರದ ಆದೇಶದ ಪ್ರತಿಯನ್ನು ಬಿಲ್ಲಿಗೆ ಲಗತ್ತಿಸಿರಬೇಕು.

ಸದರಿ ಸರ್ಕಾರದ ಆದೇಶದಲ್ಲಿ ಯಾವ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾಯಿಸಬೇಕು ಎಂಬುದರ ವಿವರಗಳು ಲಭ್ಯವಿರಬೇಕು.

ಪ್ರತಿಯೊಂದು ಬಿಲ್ಲಿಗೂ ಆಡಳಿತ ಇಲಾಖೆಯು ಪ್ರಕಟಿಸಿರುವ ಬ್ಯಾಂಕ್ ಖಾತೆಗಳ ನೋಟಿಫಿಕೇಶನ್ ಪ್ರತಿಯನ್ನು ಲಗತ್ತಿಸುವಂತೆ ಡಿಡಿಓರವರಿಗೆ ತಿಳಿಸಬೇಕು.

ಹಣವನ್ನು ವರ್ಗಾಯಿಸಬೇಕಾದ ಬ್ಯಾಂಕ್ ಖಾತೆಯು ಸದರಿ ನೋಟಿಫಿಕೇಶನ್ ನಲ್ಲಿ ಇರುವುದನ್ನು ಖಜಾನೆಗಳು ಪರಿಶೀಲಿಸಬೇಕು.


ದಿನಕ್ಕೊಂದು ಸೂತ್ರ 42

ಕಚೇರಿ ಮುಖ್ಯಸ್ಥರು Bill Status Report ನ್ನು Bill Processing>Report>Bill Status ಜನರೇಟ್ ಮಾಡುವುದು. 
ಈ ವರದಿಯಲ್ಲಿ ಪ್ರತಿ ದಿನ ಸಂಸ್ಕರಿಸಿದ ಬಿಲ್ಲುಗಳ ಮಾಹಿತಿಯು ಈ ಶೀರ್ಷಿಕೆಯಡಿ ದೊರೆಯುತ್ತದೆ : ಪ್ರಾರಂಭಿಕ
 ಶಿಲ್ಕು (ಹಿಂದಿನ ದಿನ ಸಂಸ್ಕರಿಸಿದ ಬಾಕಿ ಬಿಲ್ಲುಗಳು), ಈ ಸ್ವೀಕರಿಸಿದ ಬಿಲ್ಲುಗಳು, - ಅನುಮೋದಿಸಿದ, ಆಕ್ಷೇಪಿಸಿದ, ರದ್ದುಪಡಿಸಿದ, ತಿರಸ್ಕರಿಸಿದ ಬಿಲ್ಲುಗಳು ಹಾಗೂ ಬಾಕಿ ಇರುವ ಬಿಲ್ಲುಗಳು.

HOO should generate the Bill Status Report in the path Bill Processing>Report>Bill Status. This report will give the count of Bills: Opening Balance (pending bills from previous day, Bills inwarded, Bills –Approved, Objected, Rejected, Cancelled and Pending Bills for a period.


ದಿನಕ್ಕೊಂದು ಸೂತ್ರ 43

ವರ್ಗಾವಣೆಗೊಂಡ ಡಿಡಿಓಗಳು ಖಜಾನೆಗೆ ಸಲ್ಲಿಸಿರುವ ‘CTSCs’ ಗಳ ಮೇಲೆ ತಕ್ಷಣ ಕ್ರಮಕೈಗೊಳ್ಳುವುದು.

ಎ) ಒಬ್ಬ ಅಧಿಕಾರಿಯು ತನ್ನ ಆರ್ಥಿಕ ವ್ಯವಹಾರದ ಜವಾಬ್ದಾರಿಯನ್ನು ಮತ್ತೊಬ್ಬ ಕೆಳ ಹಂತದ ತನ್ನ ಕಚೇರಿಯಲ್ಲಿರುವ ‘ಗೆಜೆಟೆಡ್’ ಅಧಿಕಾರಿಗೆ ವರ್ಗಾಯಿಸಲು ಅವಕಾಶವಿರುತ್ತದೆ. ಹಲವಾರು ಸಂದರ್ಭಗಳಲ್ಲಿ ಪ್ರತ್ಯಾಯೋಜನೆ ಮಾಡಿದ ಅಧಿಕಾರಿಯು ವರ್ಗಾವಣೆಗೊಂಡು ಮೊತ್ತೊಬ್ಬ ಅಧಿಕಾರಿ ವರದಿ ಮಾಡಿಕೊಂಡ ನಂತರವೂ ಪ್ರತ್ಯಾಯೋಜನೆಗೊಂಡ ಅಧಿಕಾರಿಯೇ ಕಾರ್ಯ ನಿರ್ವಹಿಸುತ್ತಿರುವುದು ಕಂಡುಬರುತ್ತದೆ ಹಾಗಾಗಿ ವರ್ಗಾವಣೆಗೊಂಡು ಎಲ್ಲಾ ಅಧಿಕಾರಿಗಳು ಮಾಹಿತಿಯನ್ನು ಖಜಾನೆ-2ರಲ್ಲಿ ದಾಖಲಿಸಬೇಕು ಹಾಗೂ ಚೆಕ್ ಔಟ್ ಮಾಡಲೇಬೇಕು ಹಾಗೂ ಹೊಸದಾಗಿ ವರದಿ ಮಾಡಿಕೊಂಡ  ಅಧಿಕಾರಿಯು ಪ್ರತ್ಯಾಯೋಜನೆ ಮಾಡಲು ಇಚ್ಚಿಸಿದಲ್ಲಿ, ಖಜಾನೆಗೆ ಕೋರಿಕೆ ಸಲ್ಲಿಸಿ, ರೋಲ್ ಪ್ರತ್ಯಾಯೋಜನೆಯನ್ನು ಮಾಡಿಸಿಕೊಳ್ಳುವುದು.

Act on the CTCs received at the treasury.
Most often an officer who has delegated his role to another Gazetted subordinate officer will be transferred. Even after the relived officer has moved,  the new incumbent will not be registered in the system. The delegated officer will continue to perform. Therefore act on CTCs immediately.


ದಿನಕ್ಕೊಂದು ಸೂತ್ರ 44

ಸಂದರ್ಭಾನುಸಾರ ಸಹಾಯಕ ಖಜಾನಾಧಿಕಾರಿಯನ್ನು, ಬೇರೊಂದು ಖಜಾನೆಗೆ ಹೆಚ್ಚುವರಿ ಹುದ್ದೆಯಲ್ಲಿ ನಿಯೋಜಿಸಿದಾಗ, ಅವನ/ಳ ಮೂಲ ಹುದ್ದೆಯನ್ನು ಯಾರಿಗೂ ನೀಡುವಂತಿಲ್ಲ.

 ಬದಲಾಗಿ ಬಟಾವಡೆ ಅಧಿಕಾರಿಯ (DDO) ಪ್ರಭಾರವನ್ನು, ಆ ಕಚೇರಿಯ ಮುಖ್ಯ ಲೆಕ್ಕಿಗನಿಗೆ ನಿಯೋಜಿಸುವುದು.

ಆಗ ಸಹಾಯಕ ಖಜಾನಾಧಿಕಾರಿಯು ತನ್ನನ್ನು ನಿಯೋಜಿಸಿದ ಖಜಾನೆಯಲ್ಲಿ ಯಾವುದೇ ಅಡೆತಡೆಯಿಲ್ಲದೆ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತದೆ.

           When a ATO at treasury is kept in additional charge at another treasury his primary post should not be delegated to anybody.
a.        Instead delegate the DDO role to HA. Then the ATO will be able to perform at another treasury.

ದಿನಕ್ಕೊಂದು ಸೂತ್ರ 45
ಬಾಡಿಗೆ, ವಿದ್ಯುತ್, ನೀರು, ವಾಹನ ಬಾಡಿಗೆ ಮತ್ತು ಇತ್ಯಾದಿ ವೆಚ್ಚಗಳನ್ನು ಅನುದಾನವ್ಯಪಗತವಾಗುತ್ತದೆಂದು ಯಾವುದೇ ಕಾರಣಕ್ಕೂ ಮುಂಗಡವಾಗಿ ಭರಿಸುವಂತಿಲ್ಲ.

 ಬಾಡಿಗೆ, ವಿದ್ಯುತ್, ನೀರು, ವಾಹನ ಬಾಡಿಗೆ ಮತ್ತು ಇತ್ಯಾದಿ ವೆಚ್ಚಗಳ ಬಳಕೆಗಳಿಗೆ ಸರಬುದಾರರು ನೀಡಿದ ಸೇವೆಗಳಿಗೆ ಮಾತ್ರ ಪಾವತಿ ಮಾಡತಕ್ಕದ್ದು.

           No advance Payment should be made for the services to be rendered such as rent, water, electricity, diesel, vehicle payments etc.

   Payments to utilities can be made only after services are rendered for the pre-determined period.


ದಿನಕ್ಕೊಂದು ಸೂತ್ರ 46

ಒಂದು ವರ್ಷ ಅವಧಿ ಮೀರಿದ ಕ್ಲೇಮುಗಳಿಗೆ ವಿಳಂಬ ವಿನಾಯತಿಯನ್ನು ಲಗತ್ತಿಸುವುದು ಕಡ್ಡಾಯ.

Claims more than a year old will require delay condonation.

ಅನುಚ್ಚೇಧ 20(ಡಿ) ಕೆ.ಎಫ್.ಸಿ. ಅನ್ವಯ ವಿಳಂಬ ವಿನಾಯಿತಿ ಪಡೆಯದೆ ಸಲ್ಲಿಸುವ ಕ್ಲೇಮುಗಳನ್ನು ಖಜಾನೆಯಲ್ಲಿ ಆಕ್ಷೇಪಿಸಬೇಕು.

Bills not condoned for delay should be objected in the treasury. (Art 20(d) of KFC).



ದಿನಕ್ಕೊಂದು ಸೂತ್ರ 47

           ಆಕ್ಷೇಪಿತ ಬಿಲ್ಲುಗಳನ್ನು ಮರಳಿ ನಿರ್ವಹಿಸುವಂತಿದ್ದರೆ, ಬಿಲ್ಲು ತೀರ್ಣಗೊಳಿಸುವ ಅಧಿಕಾರಿಯು (BAO) ಅದನ್ನು “Bill Processing>Process>Recall Objected bill worklist” ಈ ಹಾದಿಯಲ್ಲಿ ಹಿಂಪಡೆಯಹುದು.

ಒಂದು ವೇಳೆ ಬಿಲ್ಲು ಸ್ವೀಕರಿಸುವ ಸಹಾಯಕ (Front Office Assistant) ಈಗಾಗಲೇ ‘ರೆಟರ್ನ್ ಮೆಮೋ ಪ್ರಿಂಟ್’ ಮಾಡಿದ್ದಲ್ಲಿ ಮರಳಿ ಪಡೆಯಲು ಸಾಧ್ಯವಾಗುವುದಿಲ್ಲ.

                Bills objected and with the FOA for returning can be recalled by BAO in the path Bill Processing>Process>Recall Objected bill worklist.

  If the FOA has already generated return memo BAO will not be able to recall the bills.


ದಿನಕ್ಕೊಂದು ಸೂತ್ರ 48

 ಪಾವತಿ ಪ್ರಾಧಿಕಾರ/ Payment Authorization

ಬಿಲ್ಲಿನಲ್ಲಿಯ ಉಪ ವೋಚರುಗಳಲ್ಲಿಯ ವಿವರಗಳಿಗೂ, ‘ಅನುಬಂಧ-ಅ’ ದಲ್ಲಿಯ ವಿವರಗಳಿಗೂ ತಾಳೆಯಾಗಬೇಕು.

 The recipient detail in the Annexure should match the Sub voucher details.

            ಬಿಲ್ಲಿನ ಪಾವತಿಯನ್ನು ಡಿಡಿಓ ಹುದ್ದೆಗೆ ಕೋರಿದ್ದಲ್ಲಿ ಉದಾ: ವಲಯ ಅರಣ್ಯ ಅಧಿಕಾರಿ – ಸ್ವೀಕೃತ ನ ವಿಧ 26 ಇದ್ದಲ್ಲಿ ಸರ್ಕಾರದ ವಿಶೇಷ ಅನುಮತಿಯಿಲ್ಲದ ಹೊರತು ಪಾವತಿಯನ್ನು ಮಾಡಬಾರದು.

Do not authorize payment if the recipient is the designation of the DDO – Eg. Range Forest Officer (Category 26), unless there is express permission from the Government and DOT.


ದಿನಕ್ಕೊಂದು ಸೂತ್ರ 49

ತೀರ್ಣಗೊಂಡ ಬಿಲ್ಲುಗಳನ್ನು ಪಾವತಿಗಾಗಿ ಅಧಿಕೃತಗೊಳಿಸಿದ ನಂತರ ನಿರಂತರವಾಗಿ (ಗಂಟೆಗೊಮ್ಮೆ) ಇ-ಪಾವತಿಗಾಗಿ ‘RBI’ ಗೆ ಕಳುಹಿಸುವುದು.  ಪಾವತಿಗೆ ಕಳುಹಿಸಿದ ಬ್ಯಾಚ್ ನ ಸ್ವೀಕೃತಿ ಆರ್.ಬಿ.ಐ. ನೀಡಿದಾಗ ಖಜಾನೆಯಲ್ಲಿನ ಬಿಲ್ಲು ಬಾಕಿ ಪ್ರಮಾಣವು ಕಡಿಮೆಯಾಗುತ್ತದೆ. ಆರ್.ಬಿ.ಐ.ಗೆ ಕಳುಹಿಸದೆ ಒಮ್ಮೆಲೆ ಸಂಜೆಯಲ್ಲಿ ಒಂದು ಬ್ಯಾಚ್ ಕಳುಹಿಸುವ ಅಭಾಸ ಸರಿಯಾದ ಕ್ರಮವಾಗಿರುವುದಿಲ್ಲ.  

           Bills approved should be authorized for payment and clogged till the end of the day. Until the e-payment file is sent to RBI the pendency count will not reduce.


ದಿನಕ್ಕೊಂದು ಸೂತ್ರ 50

ಮುಖ್ಯ ಲೆಕ್ಕಿಗರು ಬಿಲ್ಲು ವಿಧ ಮತ್ತು ಕ್ಲೇಮು ವಿಧವನ್ನು ಅವುಗಳ ಅಗತ್ಯತೆಗಳಿಗನುಗುಣವಾಗಿ ಸಮಗ್ರವಾಗಿ ಪರಿಶೀಲಿಸಬೇಕು.

ತಾಳೆಪಟ್ಟಿಯನುಸಾರ ನಿರ್ಧಿಷ್ಟ
 ಪ್ರಮಾಣ ಪತ್ರಗಳನ್ನು ಮತ್ತು ದೃಢೀಕರಣಗಳನ್ನು ಪರಿಶೀಲಿಸಿ ಅನುಮೋದಿಸಬೇಕು.

ಮುಖ್ಯ ಲೆಕ್ಕಿಗರಿಗೆ ಹಂಚಿದ ಖಜಾನೆ ಚಟುವಟಿಕೆಗಳು:-
1)            ಯೋಜನೆಗಳ ಲೆಕ್ಕ ಶೀರ್ಷಿಕೆಗಳ ಪರಿಶೀಲನೆ
2)            TTR ಗಳ ಗಮ್ಯಸ್ಥಾನದ ಪರಿಶೀಲನೆ
3)            ತಾಳೇಪಟ್ಟಿಯ ಪರಿಶೀಲನೆ
4)            ಪ್ರಮಾಣ ಪತ್ರಗಳ ಪರಿಶೀಲನೆ
5)            ಪೂರಕ ದಾಖಲೆಗಳ ಪರಿಶೀಲನೆ
6)            ಫಲಾನುಭವಿ/ಅನುಬಂಧ-ಅ ಪರಿಶೀಲನೆ

Head Accountant has to verify the appropriateness of the claim type and validate the bill against bill claim specific checklist validations and certificates.

The assigned activities of the Head Accountant are:
a.     Scheme HoA verification
b.     TTR destination verification
c.     Checklist verification
d.     Certificate verification
e.     Supporting documents verification
f.     Recipient verification















ಹೆಚ್ಚು ಓದಿದವು