Monday, June 24, 2019

ಸಂಖ್ಯೆ : ಸಿಆಸುಇ 186 ಎಸ್‌ಆರ್ ಎಸ್ 2018 ಕರ್ನಾಟಕ ಸರ್ಕಾರದ ಸಚಿವಾಲಯ . ವಿಧಾನ ಸೌಧ , ಬೆಂಗಳೂರು , ದಿನಾಂಕ : 24 . 06 . 2019 ಸುತ್ತೋಲೆ ವಿಷಯ : ಕರ್ನಾಟಕ ( ರಾಜ್ಯದ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳ ) ಮೀಸಲಾತಿ ಆಧಾರದ ಮೇಲೆ ಬಡ್ತಿ ಹೊಂದಿರುವ ಸರ್ಕಾರಿ ನೌಕರರಿಗೆ ತತ್ಪರಿಣಾಮವಾದ ಜೇಷ್ಠತೆಯನ್ನು ವಿಸ್ತರಿಸುವ ಅಧಿನಿಯಮ , 2017ರನ್ವಯ ಕ್ರಮ ತೆಗೆದುಕೊಳ್ಳುವ ಬಗ್ಗೆ .

Page number 1
ಸಂಖ್ಯೆ : ಸಿಆಸುಇ 186 ಎಸ್‌ಆರ್ ಎಸ್ 2018
ಕರ್ನಾಟಕ ಸರ್ಕಾರದ ಸಚಿವಾಲಯ .
ವಿಧಾನ ಸೌಧ ,
ಬೆಂಗಳೂರು , ದಿನಾಂಕ : 24 . 06 . 2019
ಸುತ್ತೋಲೆ ವಿಷಯ : ಕರ್ನಾಟಕ ( ರಾಜ್ಯದ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳ ) ಮೀಸಲಾತಿ
ಆಧಾರದ ಮೇಲೆ ಬಡ್ತಿ ಹೊಂದಿರುವ ಸರ್ಕಾರಿ ನೌಕರರಿಗೆ ತತ್ಪರಿಣಾಮವಾದ ಜೇಷ್ಠತೆಯನ್ನು ವಿಸ್ತರಿಸುವ ಅಧಿನಿಯಮ ,
2017ರನ್ವಯ ಕ್ರಮ ತೆಗೆದುಕೊಳ್ಳುವ ಬಗ್ಗೆ . ಉಲ್ಲೇಖ : 1 , ಮಾನ್ಯ ಸರ್ವೋಚ್ಚ ನ್ಯಾಯಾಲಯವು ಎಂ . ಎ . ಸಂಖ್ಯೆ : 1151 / 2018
ಮತ್ತು ರಿಟ್ ಅರ್ಜಿ ಸಂಖ್ಯೆ : 764 / 2018 ಮತ್ತು ಸಂಬಂಧಿಸಿದ
ಪ್ರಕರಣಗಳಲ್ಲಿ ದಿನಾಂಕ : 10 . 05 . 2019ರಂದು ನೀಡಿರುವ ತೀರ್ಪು . 2 . ಸರ್ಕಾರದ ಆದೇಶ ಸಂಖ್ಯೆ : ಸಿಆಸುಇ 186 ಎಸ್ ಆರ್ ಎಸ್ 2018
ದಿನಾಂಕ : 27 . 02 . 2019 3 . ಸರ್ಕಾರದ ಆದೇಶ ಸಂಖ್ಯೆ : ಸಿಆಸುಇ 186 ಎಸ್ ಆರ್ ಎಸ್ 2018
ದಿನಾಂಕ : 15 . 05 . 2019
1 , ಮಾನ್ಯ ಸರ್ವೋಚ್ಚ ನ್ಯಾಯಾಲಯವು ಎಂ . ಎ . ಸಂಖ್ಯೆ : 1151 / 2018 ಮತ್ತು ರಿಟ್ ಅರ್ಜಿ
ಸಂಖ್ಯೆ : 764 / 2018 ಮತ್ತು ಸಂಬಂಧಿಸಿದ ಪ್ರಕರಣಗಳಲ್ಲಿ ದಿನಾಂಕ : 10 . 05 . 2019ರಂದು ತೀರ್ಪು ನೀಡಿ ಕರ್ನಾಟಕ ( ರಾಜ್ಯದ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳ ) ಮೀಸಲಾತಿ ಆಧಾರದ ಮೇಲೆ ಬಡ್ತಿ ಹೊಂದಿರುವ ಸರ್ಕಾರಿ ನೌಕರರಿಗೆ ತತ್ಪರಿಣಾಮವಾದ ಜೇಷ್ಠತೆಯನ್ನು ವಿಸ್ತರಿಸುವ ಅಧಿನಿಯಮ , 2017ರ ಸಿಂಧುತ್ವವನ್ನು ಎತ್ತಿ ಹಿಡಿದಿರುತ್ತದೆ .
GK . KR
V 24o &
Page number 2
2 . ಮಾನ್ಯ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ ಕರ್ನಾಟಕ ( ರಾಜ್ಯದ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳ ) ಮೀಸಲಾತಿ ಆಧಾರದ ಮೇಲೆ ಬಡ್ತಿ ಹೊಂದಿರುವ ಸರ್ಕಾರಿ ನೌಕರರಿಗೆ ತತ್ಪರಿಣಾಮವಾದ ಜೇಷ್ಠತೆಯನ್ನು ವಿಸ್ತರಿಸುವ ಅಧಿನಿಯಮ , 2017ರನ್ವಯ ಕ್ರಮ ತೆಗೆದುಕೊಳ್ಳುವ ಬಗ್ಗೆ ಉಲ್ಲೇಖ ( 2 ) ಮತ್ತು ( 3 ) ರ ಸರ್ಕಾರದ ಆದೇಶಗಳಲ್ಲಿ ಮಾರ್ಗಸೂಚನೆಗಳನ್ನು ನೀಡಲಾಗಿರುತ್ತದೆ .
3 , ಮೇಲೆ ( 2 ) ರಲ್ಲಿ ಓದಲಾದ ದಿನಾಂಕ : 27 . 2 . 2019ರ ಸರ್ಕಾರಿ ಆದೇಶದ ಕಂಡಿಕೆ 8ರ ಉಪ ಕಂಡಿಕೆ
( 1 ) ರನ್ವಯ ಕ್ರಮ ತೆಗೆದುಕೊಂಡ ನಂತರ ಸದರಿ ಆದೇಶದ ಕಂಡಿಕೆ 8ರ ಉಪ ಕಂಡಿಕೆ ( 2 ) ರನ್ವಯ ಜೇಷ್ಠತಾ ಪಟ್ಟಿಗಳನ್ನು ತಯಾರಿಸುವ ಸಂದರ್ಭದಲ್ಲಿ ಉದ್ಭವವಾಗುವ ಸಂದೇಹಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಮತ್ತು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಇವರ ಅಧ್ಯಕ್ಷತೆಯಲ್ಲಿ ನಡೆದ ವಿವಿಧ ಸಭೆಗಳಲ್ಲಿ ಚರ್ಚಿಸಲಾಗಿರುತ್ತದೆ . ಜೇಷ್ಠತಾ ಪಟ್ಟಿಗಳನ್ನು ಪರಿಷ್ಕರಿಸುವ ಸಂಬಂಧ ಉದ್ಭವಿಸಬಹುದಾದ ಸಂಭವನೀಯ ಪ್ರಶ್ನೆಗೆ ಉತ್ತರಗಳನ್ನು ನೀಡುವುದು ಸೂಕ್ತ ಎಂದು ಭಾವಿಸಿ ಪದೇ ಪದೇ ಕೇಳಲಾಗುವ ಪ್ರಶ್ನೆಗಳಿಗೆ ( Frequently asked questions ) ಉತ್ತರಗಳನ್ನು ಇದರೊಡನೆ ಎಲ್ಲಾ ಇಲಾಖೆಗಳ ಮಾಹಿತಿಗಾಗಿ ಪರಿಚಲಿಸಲಾಗಿದೆ . ( ಅನುಬಂಧ - ಒಟ್ಟು 8 ಪುಟಗಳು ) . ಅದರನ್ವಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ . 4 . ಎಲ್ಲಾ ಇಲಾಖೆಗಳು ಜೇಷ್ಠತಾ ಪಟ್ಟಿಗಳನ್ನು ತಯಾರಿಸುವ ಸಂದರ್ಭದಲ್ಲಿ ಪ್ರಚಲಿತ
ಜಾರಿಯಲ್ಲಿರುವ ನಿಯಮಗಳು ಮತ್ತು ಆದೇಶಗಳನ್ವಯ ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳತಕ್ಕದ್ದು . ಅದನ್ನು ಪಾಲಿಸಲು ನೇಮಕಾತಿ ಪ್ರಾಧಿಕಾರಗಳು ವಿಫಲರಾದಲ್ಲಿ ಸರ್ಕಾರವು ಅಂತಹ ವಿಫಲತೆಯನ್ನು ಗಂಭೀರವಾಗಿ ಪರಿಗಣಿಸುವುದು . ಜೇಷ್ಠತಾ ಪಟ್ಟಿಗಳನ್ನು ತಯಾರಿಸುವ ಸಂದರ್ಭದಲ್ಲಿ ಪ್ರಚಲಿತ ಜಾರಿಯಲ್ಲಿರುವ ನಿಯಮಗಳು ಮತ್ತು ಆದೇಶಗಳನ್ನು ಉಲ್ಲಂಘಿಸಿ , ತಪ್ಪಾಗಿ ಜೇಷ್ಠತಾ ಪಟ್ಟಿಗಳನ್ನು ಪ್ರಕಟಿಸಿದಲ್ಲಿ ಅಂತಹ ಪ್ರಾಧಿಕಾರಿ / ಅಧಿಕಾರಿಗಳ ವಿರುದ್ದ ನಿಯಮಾನುಸಾರ ಶಿಸ್ತು ಕ್ರಮ ಕೈಗೊಳ್ಳತಕ್ಕದ್ದು .
Gayath n . M . R
V4 *
Page number 3
5 , ಈ ಸೂಚನೆಗಳು ಸ್ವಾಯತ್ತ ಸಂಸ್ಥೆಗಳು / ವಿಶ್ವವಿದ್ಯಾಲಯಗಳು / ಸಾರ್ವಜನಿಕ ಉದ್ದಿಮೆ / ಆಯೋಗ / ನಿಗಮ / ಮಂಡಳಿಗಳು ಮತ್ತು ಸರ್ಕಾರದಿಂದ ಅನುದಾನ ಪಡೆಯುವ ಸಂಸ್ಥೆಗಳಿಗೂ ಅನ್ವಯವಾಗುತ್ತದೆ ಎಂದು ತಿಳಿಸಲಾಗಿದೆ .
Gayathni . M . R
4 8 285
( ಗಾಯತ್ರಿ ಎಂ . ಆರ್ ) ಸರ್ಕಾರದ ಅಧೀನ ಕಾರ್ಯದರ್ಶಿ - 3 ( ಪ್ರ ) ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ .
I ( ಸೇವಾ ನಿಯಮಗಳು ) . ಇವರಿಗೆ : ಸಂಕಲನಕಾರರು , ಕರ್ನಾಟಕ ರಾಜ್ಯ ಪತ್ರ , ವಿಕಾಸಸೌಧ , ಬೆಂಗಳೂರು ಇವರು ಈ ಸುತ್ತೋಲೆಯನ್ನು ವಿಶೇಷ ರಾಜ್ಯ ಪತ್ರದಲ್ಲಿ ಪ್ರಕಟಿಸಿ 500 ಪ್ರತಿಗಳನ್ನು , ಸಿ . ಆ . ಸು . ಇ ಸೇವಾ ನಿಯಮಗಳು ವಿಶೇಷ ಕೋಶ , ಕೊಠಡಿ ಸಂಖ್ಯೆ : 32 , ನೆಲಮಹಡಿ , ವಿಧಾನ ಸೌಧ , ಬೆಂಗಳೂರು ಇಲ್ಲಿಗೆ ಕಳುಹಿಸಲು ಕೋರಿದೆ .
ಪ್ರತಿಯನ್ನು : 1 . ಸರ್ಕಾರದ ಮುಖ್ಯಕಾರ್ಯದರ್ಶಿಯವರು 2 . ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯವರು . 3 , ಸರ್ಕಾರದ ಎಲ್ಲಾ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿಗಳು / ಪ್ರಧಾನ
ಕಾರ್ಯದರ್ಶಿಗಳು / ಕಾರ್ಯದರ್ಶಿಗಳು . 4 , ರಾಜ್ಯಪಾಲರ ವಿಶೇಷ ಕಾರ್ಯದರ್ಶಿಗಳು , ರಾಜಭವನ , ಬೆಂಗಳೂರು . 5 , ಪ್ರಧಾನ ಮಹಾಲೇಖಪಾಲರು ( ಜಿ & ಎಸ್ ಎಸ್ ಎ ) , ಕರ್ನಾಟಕ , ಹೊಸ ಕಟ್ಟಡ , ಅಡಿಟ್
ಭವನ , ಬೆಂಗಳೂರು - 1 , 6 , ಪ್ರಧಾನ ಮಹಾಲೇಖಪಾಲರು ( ಇ & ಆರ್ ಎಸ್ ಎ ) , ಕರ್ನಾಟಕ , ಹೊಸ ಕಟ್ಟಡ , ಅಡಿಟ್
ಭವನ , ಬೆಂಗಳೂರು - 1 , 7 . ಪ್ರಧಾನ ಮಹಾಲೇಖಪಾಲರು ( ಎ & ಇ ) , ಕರ್ನಾಟಕ , ಪಾರ್ಕ್ ಹೌಸ್ ರಸ್ತೆ , ಬೆಂಗಳೂರು - 1 , 8 , ಎಲ್ಲಾ ಇಲಾಖಾ ಮುಖ್ಯಸ್ಥರು / ಜಿಲ್ಲಾಧಿಕಾರಿಗಳು / ಎಲ್ಲಾ ಜಿಲ್ಲಾ ಪಂಚಾಯತಿಯ ಮುಖ್ಯ
ಕಾರ್ಯನಿರ್ವಹಣಾಧಿಕಾರಿಗಳು / ಎಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು , 9 , • ಕಾರ್ಯದರ್ಶಿಯವರು , ಕರ್ನಾಟಕ ವಿಧಾನ ಸಭೆ / ಕರ್ನಾಟಕ ವಿಧಾನ ಪರಿಷತ್ ,
ವಿಧಾನ ಸೌಧ , ಬೆಂಗಳೂರು - 1 ,
Page number 4
10 . • ಕಾರ್ಯದರ್ಶಿ , ಕರ್ನಾಟಕ ಲೋಕಸೇವಾ ಆಯೋಗ , ಉದ್ಯೋಗ ಸೌಧ , ಬೆಂಗಳೂರು . 11 , • ರಿಜಿಸ್ಟ್ರಾರ್ ಜನರಲ್ , ಕರ್ನಾಟಕ ಉಚ್ಚ ನ್ಯಾಯಾಲಯ ಬೆಂಗಳೂರು - 1 , 12 , • ರಿಜಿಸ್ಟ್ರಾರ್ , ಕರ್ನಾಟಕ ಲೋಕಾಯುಕ್ತ , ಡಾ : ಬಿ . ಆರ್ . ಅಂಬೇಡ್ಕರ್ ವೀಧಿ , ಬೆಂಗಳೂರು . 13 . • ರಿಜಿಸ್ಟ್ರಾರ್ , ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿ , ಕೆ . ಜಿ . ರಸ್ತೆ ಬೆಂಗಳೂರು . 14 , ² ರಿಜಿಸ್ಟ್ರಾರ್ , ಕರ್ನಾಟಕ ಮೇಲ್ಮನವಿ ನ್ಯಾಯಾಧೀಕರಣ , ಬಹುಮಹಡಿಗಳ ಕಟ್ಟಡ ,
ಬೆಂಗಳೂರು . 15 . ಖಜಾನಾಧಿಕಾರಿ , ರಾಜ್ಯ ಹುಜೂರು ಖಜಾನೆ , ನೃಪತುಂಗ ರಸ್ತೆ . ಬೆಂಗಳೂರು . 16 . ಶಾಖಾ ರಕ್ಷಾ ಕಡತ / ಬಿಡಿ ಪ್ರತಿಗಳು .
( “ ಮುಖ ಪತ್ರದೊಂದಿಗೆ )
( ಈ ಸುತ್ತೋಲೆಯ ಪ್ರತಿಯನ್ನು ಸಚಿವಾಲಯ ವಾಹಿನಿ ಅಂತರ್ಜಾಲ ವಿಳಾಸ :
http : / / 172 . 19 . 1 . 185 / svlivesearch ) www . dpar . karnataka . gov . in / servicerules ರಲ್ಲಿ ಪಡೆಯಬಹುದಾಗಿದೆ )
Page number 5
ದಿನಾಂಕ : 24 . 06 . 2019ರ ಸುತ್ತೋಲೆ ಸಂಖ್ಯೆ : ಸಿಆಸುಇ 186 ಎಸ್ ಆರ್ ಎಸ್ 2018ಕ್ಕೆ
ಅನುಬಂಧ ಪದೇ ಪದೇ ಕೇಳಲಾಗುವ ಪ್ರಶ್ನೆಗಳು
1 , ಮಾನ್ಯ ಸರ್ವೋಚ್ಚ ನ್ಯಾಯಾಲಯವು ಪವಿತ್ರ ಪ್ರಕರಣ - 1 ರಲ್ಲಿ ದಿನಾಂಕ 09 . 02 . 2017ರಲ್ಲಿ ನೀಡಿದ
ತೀರ್ಪಿನ ಪೂರ್ವದಲ್ಲಿ ಮತ್ತು ನಂತರದಲ್ಲಿ ಪರಿಗಣಿಸಿದ ಮುಂಬಡ್ತಿಯ ಪ್ರಕರಣಗಳಲ್ಲಿ ಮೊಹರಾದ ಲಕೋಟೆಯಲ್ಲಿರಿಸಿದ್ದು , ನಂತರ ಸರ್ಕಾರಿ ನೌಕರರು ದೋಷಮುಕ್ತರಾದ ಸಂದರ್ಭಗಳಲ್ಲಿ ಪೂರ್ವಾನ್ವಯವಾಗಿ ಮುಂಬಡ್ತಿಯನ್ನು ನೀಡಬಹುದೇ ? ಉತ್ತರ : ಈ ಕೆಳಕಂಡ ಷರತ್ತುಗಳಿಗೊಳಪಟ್ಟು ಪೂರ್ವಾನ್ವಯ ಮುಂಬಡ್ತಿಯನ್ನು ನೀಡಬಹುದಾಗಿದೆ : ( 1 ) ಮೊದಲಿಗೆ ಕರ್ನಾಟಕ ( ರಾಜ್ಯದ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳಿಗೆ ನೇಮಕಾತಿ
ಆಧಾರದ ಮೇಲೆ ಬಡ್ತಿ ಹೊಂದಿರುವ ಸರ್ಕಾರಿ ನೌಕರರಿಗೆ ತತ್ಪರಿಣಾಮವಾದ ಜೇಷ್ಠತೆಯನ್ನು ವಿಸ್ತರಿಸುವ ಅಧಿನಿಯಮ , 2017ರನ್ವಯ ಜೇಷ್ಠತಾಪಟ್ಟಿಗಳನ್ನು
ಪರಿಷ್ಕರಿಸಿ ಪ್ರಕಟಿಸತಕ್ಕದ್ದು : ( 2 ) ಮೊಹರಾದ ಲಕೋಟೆಯಲ್ಲಿ ಮುಂಬಡ್ತಿ ನೀಡಲು ಶಿಫಾರಸ್ಸು ಮಾಡಿರತಕ್ಕದ್ದು ; ( 3 ) ಜೇಷ್ಠತೆಯಲ್ಲಿ ಕಿರಿಯರಾದ ಸರ್ಕಾರಿ ನೌಕರನು ಮುಂಬಡ್ತಿ ಹೊಂದಿರಬೇಕು ; ( 4 ) ಕರ್ನಾಟಕ ಲೋಕ ಸೇವಾ ಆಯೋಗದೊಡನೆ ಸಮಾಲೋಚನೆ
ಮಾಡತಕ್ಕದ್ದು ;
2 , ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿದ ಅಭ್ಯರ್ಥಿಗಳು ನೇರ ನೇಮಕಾತಿಯಲ್ಲಿ
ಅವರಿಗಾಗಿ ಗುರುತಿಸಲಾದ ರೋಸ್ಟರ್ ಬಿಂದುಗಳಿಗೆ ಎದುರಾಗಿ ಆಯ್ಕೆಯಾಗದೇ , ಸಾಮಾನ್ಯ ಅರ್ಹತೆಯಲ್ಲಿ ಆಯ್ಕೆಗೊಂಡಿದ್ದರೆ ಅಂತಹವರನ್ನು ಮುಂಬಡ್ತಿ ನೀಡುವ ಉದ್ದೇಶಕ್ಕಾಗಿ ಅವರ ಪ್ರಾತಿನಿಧ್ಯತೆಯನ್ನು ಲೆಕ್ಕಹಾಕಲು ಪರಿಗಣಿಸಬೇಕೇ ? ಉತ್ತರ : ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿದ ಅಭ್ಯರ್ಥಿಗಳು ನೇರ ನೇಮಕಾತಿಯಲ್ಲಿ ಅವರಿಗಾಗಿ ಗುರುತಿಸಲಾದ ರೋಸ್ಟರ್ ಬಿಂದುಗಳಿಗೆ ಎದುರಾಗಿ ಆಯ್ಕೆಯಾಗದೇ , ಸಾಮಾನ್ಯ ಅರ್ಹತೆಯಲ್ಲಿ ಆಯ್ಕೆಗೊಂಡಿದ್ದರೂ ಸಹ , ಮುಂಬಡ್ತಿ ಮೀಸಲಾತಿ ಅನ್ವಯವಾಗುವ ಮುಂದಿನ ಹುದ್ದೆಗಳಿಗೆ ಮೀಸಲಾತಿ ಅನ್ವಯಿಸಿ ಮುಂಬಡ್ತಿ ನೀಡುವ ಸಂದರ್ಭಗಳಲ್ಲಿ ಅವರ
Gayathri M . R
421
Page number 6
ಪ್ರಾತಿನಿಧ್ಯತೆಯನ್ನು ಲೆಕ್ಕಹಾಕುವ ಉದ್ದೇಶಕ್ಕಾಗಿ ಅವರಿಗಾಗಿ ಗುರುತಿಸಲಾದ ರೋಸ್ಪರ್ ಬಿಂದುಗಳಿಗೆ ಎದುರಾಗಿ ಪರಿಗಣಿಸತಕ್ಕದ್ದು . ಈ ಬಗ್ಗೆ ದಿನಾಂಕ : 1 . 6 . 1978ರ ಸರ್ಕಾರದ ಆದೇಶ ಸಂಖ್ಯೆ : ಡಿಪಿಎಆರ್ 29 ಎಸ್ ಬಿ ಸಿ 77ರಲ್ಲಿ ಸ್ಪಷ್ಟವಾಗಿ ತಿಳಿಸಲಾಗಿರುತ್ತದೆ ಮತ್ತು ಇದೇ ಅಂಶವನ್ನೇ 2017ರ ಅಧಿನಿಯಮದ ಷೆಡ್ಯೂಲ್ ನಲ್ಲಿ ಉದಾಹರಣೆಯ ರೂಪದಲ್ಲಿ ವಿವರಿಸಲಾಗಿರುತ್ತದೆ .
3 , ದಿನಾಂಕ : 27 . 4 . 1978ರಿಂದ ಜೇಷ್ಠತಾ ಪಟ್ಟಿಗಳನ್ನು ಪರಿಷ್ಕರಿಸಿದಾಗ ಅಯಾಯ ವೃಂದದಲ್ಲಿನ
ಹುದ್ದೆಗಳ ಒಟ್ಟು ಸಂಖ್ಯೆಯ ಆಧಾರದ ಮೇಲೆ ಪರಿಗಣಿಸಬೇಕೇ ? ಅಥವಾ ಆಯಾಯ ವೃಂದದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸರ್ಕಾರಿ ನೌಕರರ ಒಟ್ಟು ಸಂಖ್ಯೆಯ ಆಧಾರದ ಮೇಲೆ ( ಖಾಲಿ ಹುದ್ದೆಗಳನ್ನು ಹೊರತುಪಡಿಸಿ ಕಾರ್ಯನಿರತ ವೃಂದ ಬಲ ) ಪರಿಗಣಿಸಬೇಕೇ ?
ಉತ್ತರ : ಜೇಷ್ಠತಾಪಟ್ಟಿಗಳನ್ನು ಪರಿಷ್ಕರಿಸುವ ಸಂದರ್ಭದಲ್ಲಿ ದಿನಾಂಕ : 27 , 4 . 1978ರಿಂದ 2 . 2 . 1999ರವರೆಗಿನ ಅವಧಿಯಲ್ಲಿ ಮುಂಬಡ್ತಿ ಮೀಸಲಾತಿ ರೋಸ್ಟರ್ ಬಿಂದುಗಳ ಸಂಖ್ಯೆಗೆ ಅನುಗುಣವಾಗಿ ಮುಂಬಡ್ತಿ ಹೊಂದಿದ ಮೀಸಲಾತಿ ವರ್ಗಕ್ಕೆ ಸೇರಿದ ನೌಕರರಿಗೆ ತತ್ಪರಿಣಾಮ ಜೇಷ್ಠತೆಯನ್ನು ನೀಡಿ ಪರಿಷ್ಕರಿಸಬೇಕಾಗುತ್ತದೆ .
3 . 1 ದಿನಾಂಕ : 3 . 2 . 1999ರ ನಂತರ ಮಾತ್ರ , ಆಯಾಯ ವೃಂದದಲ್ಲಿನ ಸರ್ಕಾರಿ ನೌಕರರ ಒಟ್ಟು ಸಂಖ್ಯೆಯ ಆಧಾರದ ಮೇಲೆ ( ಖಾಲಿ ಹುದ್ದೆಗಳನ್ನು ಹೊರತುಪಡಿಸಿ ಕಾರ್ಯನಿರತ ವೃಂದ ಬಲವನ್ನು ) ಪರಿಗಣಿಸಿ ಪರಿಷ್ಕರಿಸಬೇಕಾಗುತ್ತದೆ , ಅಂದರೆ , ಆಯಾಯ ವೃಂದದಲ್ಲಿನ ಹುದ್ದೆಗಳ ಒಟ್ಟು ಸಂಖ್ಯೆಯ ಆಧಾರದ ಮೇಲೆ ಪ್ರಾತಿನಿಧ್ಯತೆಯನ್ನು ಲೆಕ್ಕಹಾಕಲು ಆಸ್ಪದವಿರುವುದಿಲ್ಲ . ಈ ಸಂಬಂಧವಾಗಿ ದಿನಾಂಕ 03 . 02 . 1999ರ ಸರ್ಕಾರದ ಆದೇಶ ಸಂಖ್ಯೆ . ಸಿಆಸುಇ 21 ಎಸ್ ಬಿ ಸಿ 97 ಮತ್ತು ದಿನಾಂಕ 13 . 04 . 1999ರ ಸಮಸಂಖ್ಯೆಯ ಸರ್ಕಾರದ ಆದೇಶದ ಕಡೆಗೆ ಗಮನಸೆಳೆಯಲಾಗಿದೆ .
4 , ಮುಂಬಡ್ತಿ ನೀಡುವ ಉದ್ದೇಶಕ್ಕಾಗಿ ಪಜಾ / ಪಪಂಗಳ ಪ್ರಾತಿನಿಧ್ಯತೆಯನ್ನು ಲೆಕ್ಕಹಾಕಲು ನೇರ ನೇಮಕಾತಿ ಬ್ಯಾಕ್ಲಾಗ್ ಅಥವಾ ಮುಂಬಡ್ತಿ ಬ್ಯಾಕ್ಲಾಗ್ ಎದುರಿಗೆ ನೇಮಕಗೊಂಡವರನ್ನು ಪರಿಗಣಿಸಬೇಕೇ ? ಉತ್ತರ : ದಿನಾಂಕ 03 . 02 . 1999ರ ಸರ್ಕಾರದ ಆದೇಶ ಸಂಖ್ಯೆ : ಸಿಆಸುಇ 21 ಎಸ್ ಬಿ ಸಿ 97ರಲ್ಲಿನ ಕಂಡಿಕೆ 7 ಮತ್ತು 8ಗಳನ್ನು ಈ ಕೆಳಕಂಡ ಪಟ್ಟಿಯ ಕಾಲಂ ( 1 ) ರಲ್ಲಿ ಉತ್ತರಿಸಲಾಗಿದೆ ಹಾಗೂ ಆ
GAL . 4 -
ek V
Page number 7
ಕಂಡಿಕೆ 7 ಮತ್ತು 8ಗಳನ್ನು ನಂತರದ ದಿನಾಂಕ 13 . 04 . 1999ರ ಸಮಸಂಖ್ಯೆಯ ಸರ್ಕಾರದ ಆದೇಶದಲ್ಲಿ ಮಾರ್ಪಡಿಸಲಾಗಿದ್ದು , ಅದನ್ನು ಈ ಕೆಳಕಂಡ ಪಟ್ಟಿಯ ಕಾಲಂ ( 2 ) ರಲ್ಲಿ ಉದ್ದರಿಸಲಾಗಿದೆ :
ದಿನಾಂಕ 03 . 02 . 1999ರ ಸರ್ಕಾರದ ಆದೇಶ ದಿನಾಂಕ 13 . 04 . 1999ರ ಸರ್ಕಾರದ ಆದೇಶ | ಸಂಖ್ಯೆ : ಸಿಆಸುಇ 21 ಎಸ್ ಬಿ ಸಿ 97ರಲ್ಲಿನ ಕಂಡಿಕೆ ಸಂಖ್ಯೆ ಸಿಆಸುಇ 21 ಎಸ್ ಬಿ ಸಿ 97ರಲ್ಲಿನ 7 ಮತ್ತು 8ರ ಉದ್ಭತ ಭಾಗ : ( ಇದನ್ನು ದಿನಾಂಕ ಕಂಡಿಕೆ 7 ಮತ್ತು 8ರ ಉದೃತ ಭಾಗ . ( ಇದು 13 . 04 . 1999ರ ಸಮಸಂಖ್ಯೆಯ ಸರ್ಕಾರದ ಪ್ರಸ್ತುತ ಜಾರಿಯಲ್ಲಿರುತ್ತದೆ . ) ಆದೇಶದಲ್ಲಿ ಪ್ರತಿಷ್ಠಾಪಿಸಲಾಗಿದ್ದು , ( substituted ) ದಿನಾಂಕ : 03 . 02 . 1999ರ ಸರ್ಕಾರದ ಆದೇಶದ ಕಂಡಿಕೆ 7 ಮತ್ತು 8 ಪ್ರಸ್ತುತ ಜಾರಿಯಲ್ಲಿರುವುದಿಲ್ಲ . ( 1 )
( 2 ) " 7 . Promotion of the persons belonging " 7 . Promotion of the persons to the Scheduled Castes and the belonging to the Scheduled Castes Scheduled Tribes against backlog shall and the Scheduled Tribes against be accorded only if in a cadre , the backlog shall be continued to be representation of the persons belonging accorded in accordance with the to the Scheduled Castes is less than 15 % Government Order dated 24 . 06 . 1997 , and those belonging to the Scheduled read at ( 7 ) above . Tribes is less than 3 % and it shall be 8 . The provisions of the Government limited to the extent of the shortfall . Order dated 24 . 06 . 1997 read at ( 7 ) 8 . Promotions made against backlog above , will continue to operate until shall be taken into account for the existing backlog is cleared but calculating the percentages of while making any promotion representation of the persons belonging thereafter in favour of the persons to the Scheduled Castes and the belonging to the Scheduled Castes or Scheduled Tribes to the extent of 15 % the Scheduled Tribes , their and 3 % respectively . "
representation shall be maintained to the extent of 15 % and 3 % respectively of the total working strength " !
ಮೇಲಿನ ಪಟ್ಟಿಯ ಕಾಲಂ ( 2 ) ರಲ್ಲಿ ಉದ್ದರಿಸಲಾದ ದಿನಾಂಕ 13 . 04 . 1999ರ ಸರ್ಕಾರದ ಆದೇಶ ಸಂಖ್ಯೆ , ಸಿಆಸುಇ 21 ಎಸ್ ಬಿ ಸಿ 97ರಲ್ಲಿನ ಕಂಡಿಕೆ 7 ಮತ್ತು 8ರಂತೆ ಕ್ರಮ ತೆಗೆದುಕೊಳ್ಳತಕ್ಕದ್ದು .
5 , ಬ್ಯಾಕ್ಲಾಗ್ ಎದುರು ಮುಂಬಡ್ತಿ ಹೊಂದಿದ ನೌಕರರು ಯಾವ ದಿನಾಂಕದಿಂದ ಜೇಷ್ಠತೆಗೆ
ಅರ್ಹರಾಗುತ್ತಾರೆ ?
ಉತ್ತರ : ಬ್ಯಾಕ್ಲಾಗ್ ಎದುರು ಮುಂಬಡ್ತಿ ಹೊಂದಿದ ನೌಕರರು ಮುಂಬಡ್ತಿ ಹೊಂದಿದ ದಿನಾಂಕದಿಂದ ಜೇಷ್ಠತೆಗೆ ಅರ್ಹರಾಗುತ್ತಾರೆ . ದಿನಾಂಕ : 27 . 4 . 1978ರ ಸದರಿ ಆದೇಶದಲ್ಲಿ ನಿಗದಿಪಡಿಸಿರುವ
Gaythni . M . R
44ಶಾ ೩೫೨
Page number 8
ಮೀಸಲಾತಿ ರೋಸ್ಪರನ್ನು ದಿನಾಂಕ 30 . 08 . 1979ರ ಸರ್ಕಾರದ ಆದೇಶ ಸಂಖ್ಯೆ : ಡಿಪಿಎಆರ್ 22 ಎಸ್ ಬಿಸಿ 79ರಲ್ಲಿ ಮಾರ್ಪಡಿಸಲಾಗಿದೆ . ಈ ಆದೇಶಗಳಲ್ಲಿ ಪಜಾ / ಪಪಂ ನೌಕರರಿಗೆ ನಿಗದಿಪಡಿಸಿರುವ ಮೀಸಲಾತಿ ಬಿಂದುಗಳ ಉದ್ದೇಶವು ಮುಂಬಡ್ತಿ ನೀಡುವ ಒಂದು ಸಂದರ್ಭದಲ್ಲಿ ಆ ವರ್ಗಕ್ಕಾಗಿ ಮೀಸಲಿಡಲಾದ ಹುದ್ದೆಗಳ ಸಂಖ್ಯೆಯನ್ನು ಲೆಕ್ಕಹಾಕುವುದಾಗಿರುತ್ತದೆ . ಈ ಮೀಸಲಾತಿ ಬಿಂದುಗಳು ನೌಕರರ ಜೇಷ್ಠತೆಯನ್ನು ನಿರ್ಧರಿಸುವುದಿಲ್ಲ .
6 . ಸಂಖ್ಯಾಧಿಕ ಹುದ್ದೆ ( Supernumerary post ) ಎಂದರೇನು ?
ಉತ್ತರ : ಸಂಖ್ಯಾಧಿಕ ಹುದ್ದೆಗಳನ್ನು ( supernumerary posts ) ಸೃಜಿಸಲು ಅನುಸರಿಸಬೇಕಾದ ತತ್ವಗಳನ್ನು ಕೆ . ಸಿ . ಎಸ್ . ಆರ್ . ರ ನಿಯಮ 100 ( 9 ) ರಲ್ಲಿ ನೀಡಲಾಗಿದೆ . ಸಂಖ್ಯಾಧಿಕ ಹುದ್ದೆಯು ಒಂದು ತಾತ್ಕಾಲಿಕವಾಗಿ ಮತ್ತು ಖಾಯಂ ಹುದ್ದೆಗಳಿಗೆ ಸಮಾನಾಂತರವಾಗಿ ಸೃಜಿಸಲಾದ ಹುದ್ದೆಯಾಗಿರುತ್ತದೆ . ಸಂಖ್ಯಾಧಿಕ ಹುದ್ದೆಯ ಎದುರಿಗೆ ಮುಂಬಡ್ತಿ ಹೊಂದಿದವರಿಗೆ ಸದರಿ ವೃಂದದ ಖಾಯಂ ಹುದ್ದೆಗಳಲ್ಲಿ ಅರ್ಹತಾ ದಿನಾಂಕ ಲಭ್ಯವಾಗುವವರೆಗೆ ಮುಂದುವರಿಸಿ , ಖಾಯಂ ಹುದ್ದೆಗಳಿಗೆ ಎದುರಾಗಿ ಅವರುಗಳನ್ನು ಸರಿದೂಗಿಸಿದ ನಂತರ , ಸಂಖ್ಯಾಧಿಕ ಹುದ್ದೆಯು ತಂತಾನೆ ರದ್ದಾಗುತ್ತದೆ .
7 , ಸಂಖ್ಯಾಧಿಕ ಹುದ್ದೆಗಳನ್ನು ಯಾರಿಗಾಗಿ ಸೃಜಿಸಬೇಕು ? ಉತ್ತರ : ಈ ಅಂಶಕ್ಕೆ ಸಂಬಂಧಿಸಿದಂತೆ ದಿನಾಂಕ 27 . 02 . 2019ರ ಸರ್ಕಾರದ ಆದೇಶ ಸಂಖ್ಯೆ . ಸಿಆಸುಇ 186 ಎಸ್ ಅರ್ ಎಸ್ 2018ರ ಕಂಡಿಕೆ 8 ( 1 ) ( ಎ ) ಮತ್ತು 2017ರ ಅಧಿನಿಯಮದ ಕಲಂ 5ರ ಪರಂತುಕ , ಇವುಗಳಲ್ಲಿ ವಿವರಿಸಲಾಗಿದ್ದು , ಅದರ ಸಂಬಂಧಿಸಿದ ಭಾಗವನ್ನು ಈ ಕೆಳಗೆ ಉದ್ಧರಿಸಲಾಗಿದೆ : ( 1 ) ದಿನಾಂಕ 27 . 02 . 2019ರ ಸದರಿ ಸರ್ಕಾರದ ಆದೇಶದ ಕಂಡಿಕೆ 8 ( 1 ) ( ಅ ) ರ ಸಂಬಂಧಿಸಿದ
ಉದ್ಭತ ಭಾಗ : “ . . . . . ದಿನಾಂಅ 06 . 05 . 2017ರ ಸರ್ಕಾರದ ಆದೇಶದಲ್ಲಿಯೇ ತಯಾರಿಸಲಾದ ಜೀರಾ ನದಿಯಲ್ಲಿ ಪ . ಜಾ . ಮತ್ತು ಪ . ಪಂ . Tಆಗೆ ಸೇರಿದ ಯಾವುದೇ ಸರ್ಕಾರಿ ನೌಆCC
ಕೆಯನ್ನು ಮಾರ್ಪಡಿಸಿ , ಅವರ ಮುಂಬಡ್ತಿಯನ್ನು ಪುನರಾವಲೋಕಿಸಿ , ಅವರಿಗೆ ಅರ್ಹತಾ ದಿವಾಂಅವನ್ನು ನೀಗಿಸಿ , ಅಂತಹ ಅರ್ಹ ಫಾ ದಿನಾಂಕದ ಆಧಾCದ ಮೇಲೆ ಕೆಳಹಂತದ ವೈದಿದಲ್ಲಿ ಹಿ೦ಬಲಿಯಾebದೇ , ಆಂಹ ಘರ್ಜರಿ ನೌಅರರನ್ನು ಅವರು ಹಿಂಡಿ ಹವಾpದಿದ ಏಅಮಾರ್ವೇದ ಧಾಳಿ ಮಾಡಿಸಿದ್ದ ವೃಂದಕ್ಕೆ ಹಿಂಬಡ್ತಿ ಹಾಂದಿದ ದಿನಾಂಕದಿಂದ ಮಾರ್ವಾವಧಿಯವಾಗಿ ಜಾರಿಗೆ ಬರುವಂತೆ , ಮರುಮಳನಿಯುಕ್ತಿಗಾಅಪವಿಲ್ಲಿದ್ದು , ಅವರು ಕಳಹಂತದ ವೃದVಅಗೆ ಹಿಡಿಯುವ ಪಾರ್ವದ ವೃಂದದ ವೇತನ ಶ್ರೇಣಿಯಲ್ಲಿ ಮತ್ತು ವೇತನವ ಅದೇ ಹಂತದಲ್ಲಿ ಅವರು ವೇಶವವಮ್ಮ
Gayathn ' . M . R
( 24p ( 2 )
Page number 9
ಪಡೆಯುವುದನ್ನು ಮುಂದುವರೆಸುತ್ತಿದ್ದು , ಒಂದು ವೇಳೆ ಹಿಂಬಡ್ತಿಯಾಳ್ಳುವ ನಿಕಟಪಾರ್ವದಲ್ಲಿ ಅವರು ಮಾಂಬಿದ್ಧ ವೃಂದದ ಹುದ್ದೆಗಳು ಪ್ರಸ್ತುತ ಖಾತಿ ಇಲ್ಲದೇ ಇದ್ದೇ ಆರ್ಥಿಕ ಇಲಾಖೆಯು ಸಹಮತಿಸಿದೆಯೆಂದು ಭಾವಿಸಿ , ಕಾರ್ವಾಕ ಸರ್ಕಾರಿ ಪಟವಾಲಯದ ಸಂಬಂಧಿಸಿದ ಆಡಳಿತ ಇಲಾಖೆಯು ಸಾಪರನಾಮರರಿ ಹುದ್ದೆಯನ್ನು ಸೃಜಿಸಿ ಅದರಲ್ಲಿ ಸ್ಥಳನಿಯುಕ್ತಿಗಾಅಘಾದ್ದು "
( 2 ) 2017ರ ಅಧಿನಿಯಮದ ಕಲಂ 5ರ ಪರಂತುಕದ ಉದ್ಭತ ಭಾಗ : “ ಪರಂತು , ಅಂಥ
ಪುನರಾವಲೋಕನೆಯ ತರುವಾಯ , ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳಿಗೆ ಸೇರಿದ ಸರ್ಕಾರಿ ನೌಕರರನ್ನು ಮೀಸಲಾತಿ ಬ್ಯಾಕ್ಲಾಗ್ ಆದೇಶಗಳಲ್ಲಿ ಕಲ್ಪಿಸಿರುವ ಮೀಸಲಾತಿಗೆ ಮುಂಬಡ್ತಿ ನೀಡಿರುವುದು ಕಂಡುಬಂದಲ್ಲಿ ಕಾಲಕಾಲಕ್ಕೆ ಹೊರಡಿಸಲಾದ ಮೀಸಲಾತಿ ಆದೇಶಗಳಿಗೆ ಅನುಸಾರವಾಗಿ ಇರುವ ರೋಸ್ಪರ್ ಬಿಂದುಗಳಿಗೆ ಸಂಬಂಧಿಸಿದಂತೆ ಸೂಕ್ತ ಅರ್ಹತೆಯ ದಿನಾಂಕಗಳನ್ನು ನಮೂದಿಸಿ ಸರಿಹೊಂದಿಸತಕ್ಕದ್ದು ಮತ್ತು ಜೋಡಿಸತಕ್ಕದ್ದು . ಮೀಸಲಾತಿ ಅಥವಾ ಬ್ಯಾಕ್ಲಾಗ್ ಖಾಲಿಸ್ಥಾನಗಳಿಗಿಂತ ಹೆಚ್ಚಾಗಿ ಅಥವಾ ಮೀಸಲಾತಿ ಉಪಬಂಧಗಳ ವ್ಯಾಪ್ತಿಯೊಳಗೆ ಈಗಾಗಲೇ ಮೀಸಲಾತಿ ಹೊಂದಿರುವ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳಿಗೆ ಸೇರಿದ ವ್ಯಕ್ತಿಗಳ ಸಂದರ್ಭದಲ್ಲಿ ರೋಸ್ಟರ್ ಬಿಂದುಗಳಿಗೆ ಪ್ರತಿಯಾಗಿ ಸರಿಹೊಂದಿಸಲು ಮತ್ತು ಜೋಡಿಸಲು ಸಾಧ್ಯವಾಗದಿದ್ದಲ್ಲಿ , ಅವರು ಪ್ರಸ್ತುತವಾಗಿ ಕಾರ್ಯನಿರ್ವಹಿಸುತ್ತಿರುವ ವೃಂದದಲ್ಲಿ , ಆ ವೃಂದದಲ್ಲಿ ಬಡ್ತಿಗೆ ಅರ್ಹತೆಯನ್ನು ಪಡೆಯುವ ದಿನಾಂಕದವರೆಗೆ ಸಂಬಂಧಿಸಿದ ಆಡಳಿತ ಇಲಾಖೆಯು ಇದಕ್ಕೆ ಆರ್ಥಿಕ ಇಲಾಖೆಯು ಸಹಮತಿಸಿದೆಯೆಂದು ಭಾವಿಸಿ ಸೃಜಿಸಲಾದ , ಸೂಪರ್ ನ್ಯೂಮರರಿ ಹುದ್ದೆಗಳಿಗೆ ಪ್ರತಿಯಾಗಿ ಅವರನ್ನು ಮುಂದುವರಿಸತಕ್ಕದ್ದು " ,
8 , ಜೇಷ್ಠತಾ ಪಟ್ಟಿ ಪರಿಷ್ಕರಣೆ ಸಂದರ್ಭದಲ್ಲಿ ನಿವೃತ್ತ ನೌಕರರ ಹೆಸರನ್ನು ಸೇರಿಸಬೇಕೇ ಅಥವಾ - ಬೇಡವೇ ; ಉತ್ತರ : ಮಾನ್ಯ ಸರ್ವೋಚ್ಚ ನ್ಯಾಯಾಲಯವು ಬಿ . ಕೆ . ಪವಿತ್ರ - 1 ಪ್ರಕರಣದಲ್ಲಿ ದಿನಾಂಕ 09 . 02 . 2017ರಂದು ನೀಡಿದ ತೀರ್ಪಿನ ಹಿನ್ನೆಲೆಯಲ್ಲಿ ಸರ್ಕಾರ ದಿನಾಂಕ 06 . 05 . 2017 ರಂದು ಹೊರಡಿಸಿದ ಆದೇಶದಲ್ಲಿ ನೀಡಿದ ಮಾರ್ಗಸೂಚನೆಗಳನ್ವಯ , ದಿನಾಂಕ 09 . 02 . 2017 ರಂದು ಅಸ್ತಿತ್ವದಲ್ಲಿದ್ದ ಮುಂಬಡ್ತಿ ಮೀಸಲಾತಿ ಅನ್ವಯವಾಗುವ ವೃಂದಗಳ ಮತ್ತು ನಂತರದ ಉನ್ನತ ವೃಂದಗಳ ಜೇಷ್ಠತಾ ಪಟ್ಟಿಗಳನ್ನು ಪುನರಾವಲೋಕನ ಮಾಡಿ ಪ್ರಕಟಿಸಲಾಗಿತ್ತು . ಪರಿಣಾಮವಾಗಿ ,
15
Gayathri M . R
( 4
Page number 10
ದಿನಾಂಕ 09 . 02 . 2017ರ ಪೂರ್ವದಲ್ಲಿದ್ದ ಜೇಷ್ಠತಾ ಪಟ್ಟಿಗಳು ಅಸ್ತಿತ್ವವನ್ನು ಕಳೆದುಕೊಂಡಿರುತ್ತವೆ . ಮಾನ್ಯ ಸರ್ವೋಚ್ಚ ನ್ಯಾಯಾಲಯವು ದಿನಾಂಕ 10 . 05 . 2019ರಂದು ನೀಡಿದ ತನ್ನ ತೀರ್ಪಿನಲ್ಲಿ 2017ರ ಅಧಿನಿಯಮದ ಸಿಂಧುತ್ವವನ್ನು ಎತ್ತಿಹಿಡಿದಿರುವುದರಿಂದ ಪವಿತ್ರ - 1ರ ಪ್ರಕರಣದಲ್ಲಿ ಮಾನ್ಯ ಸರ್ವೋಚ್ಚ ನ್ಯಾಯಾಲಯವು ದಿನಾಂಕ 09 . 02 . 2017ರ ತೀರ್ಪಿನನ್ವಯ ತಯಾರಿಸಿ ಪ್ರಕಟಿಸಲಾದ ಜೇಷ್ಠತಾ ಪಟ್ಟೆಗಳೂ ತಮ್ಮ ಅಸ್ತಿತ್ವವನ್ನು ಕಳೆದುಕೊಂಡಿರುತ್ತವೆ . ಪರಿಣಾಮವಾಗಿ , 2017ರ ಅಧಿನಿಯಮದನ್ವಯ ಎಲ್ಲಾ ಜೇಷ್ಠತಾ ಪಟ್ಟೆಗಳನ್ನು ದಿನಾಂಕ 27 . 04 . 1978 ರಿಂದ ಪುನರಾವಲೋಕನ ಮಾಡಿ ಪರಿಷ್ಕರಿಸಿದ ಜೇಷ್ಠತಾ ಪಟ್ಟಿಗಳನ್ನು ಪ್ರಕಟಿಸಬೇಕಾಗಿರುತ್ತದೆ . ಈ ರೀತಿ ಜೇಷ್ಠತಾ ಪಟ್ಟಿಗಳನ್ನು ಪುನರಾವಲೋಕನ ಮಾಡಿ ಪರಿಷ್ಕರಿಸಿದ ಜೇಷ್ಠತಾ ಪಟ್ಟಿಗಳನ್ನು ಪ್ರಕಟಿಸುವಾಗ , ಯಾವುದೇ ಒಂದು ವೃಂದಕ್ಕೆ ಮುಂಬಡ್ತಿ ಹೊಂದಿ ನಿವೃತ್ತರಾದ , ನಿಧನರಾದ ನೌಕರರುಗಳ ಹೆಸರುಗಳನ್ನು ಜೇಷ್ಠತಾ ಪಟ್ಟಿಯಲ್ಲಿ ಸೇರಿಸಬೇಕಾಗುತ್ತದೆ . ಈ ರೀತಿ ಜೇಷ್ಠತಾ ಪಟ್ಟಿಗಳನ್ನು ಪುನರಾವಲೋಕನ ಮಾಡಿ ಅರ್ಹತಾ ದಿನಾಂಕಗಳನ್ನು ನಿಗದಿಪಡಿಸುವಾಗ ಕರ್ನಾಟಕ ರಾಜ್ಯ ಸಿವಿಲ್ ಸೇವಾ ( ಮುಂಬಡ್ತಿ , ವೇತನ ಮತ್ತು ಪಿಂಚಣಿಗಳ ಕ್ರಮಬದ್ಧತೆ ) ಅಧಿನಿಯಮ , 1973ರ ಕಲಂ 4 , 5 , 6 ಮತ್ತು 7 ನ್ನು ಕಲಂ 9ರೊಡನೆ ಸಹವಾಚನ ಮಾಡಿಕೊಂಡಂತೆ ಇವುಗಳನ್ವಯ ನಿರ್ಧರಿಸಿ ಪಿಂಚಣಿಯನ್ನು ಮರು ನಿಗದಿಪಡಿಸಬೇಕಾಗುತ್ತದೆ . ಸಾಂದರ್ಭಿಕವಾಗಿ ಹೇಳುವುದಾದರೆ , ಮುಂಬಡ್ತಿಗಳನ್ನು ಪುನರಾವಲೋಕನ ಮಾಡಿ ಅರ್ಹತಾ ದಿನಾಂಕಗಳನ್ನು ನಿಗದಿಪಡಿಸುವಾಗ ಸರ್ಕಾರಿ ನೌಕರರಿಗೆ ಅವರಿಗೆ ವಾಸ್ತವವಾಗಿ ಮುಂಬಡ್ತಿ ಹೊಂದಿದ ದಿನಾಂಕಕ್ಕಿಂತ ಹಿಂದಿನ ದಿನಾಂಕಗಳು ಅರ್ಹತಾ ದಿನಾಂಕಗಳಾಗಿ ಲಭ್ಯವಾದದಲ್ಲಿ , ಲಭ್ಯವಾದ ಅಂತಹ ಅರ್ಹತಾ ದಿನಾಂಕಗಳಿಂದ ವೇತನವನ್ನು ಕಾಲ್ಪನಿಕವಾಗಿ ಮರು ನಿಗದಿಪಡಿಸಬೇಕಾಗುತ್ತದೆ . ಆದರೆ , ಅಂತಹ ಸರ್ಕಾರಿ ನೌಕರರು ವೇತನ ಬಾಕಿಗೆ ಅರ್ಹರಾಗುವುದಿಲ್ಲ . ಒಂದುವೇಳೆ , ಮುಂಬಡ್ತಿ ಪುನರಾವಲೋಕನ ಮಾಡಿ ಅರ್ಹತಾ ದಿನಾಂಕಗಳನ್ನು ನಿಗದಿಪಡಿಸುವಾಗ ಸರ್ಕಾರಿ ನೌಕರರಿಗೆ ಅವರಿಗೆ ವಾಸ್ತವವಾಗಿ ಮುಂಬಡ್ತಿ ಹೊಂದಿದ ದಿನಾಂಕಕ್ಕಿಂತ ನಂತರದ ದಿನಾಂಕಗಳು ಅರ್ಹತಾ ದಿನಾಂಕಗಳಾಗಿ ಲಭ್ಯವಾದಲ್ಲಿ , ಲಭ್ಯವಾದ ಅಂತಹ ಅರ್ಹತಾ ದಿನಾಂಕಗಳಿಂದ ವೇತನವನ್ನು ಕಾಲ್ಪನಿಕವಾಗಿ ಮರು ನಿಗದಿಪಡಿಸಬೇಕಾಗುತ್ತದೆ . ಆದರೆ , ಅಂತಹ ಸರ್ಕಾರಿ ನೌಕರರಿಂದ ಈಗಾಗಲೇ ಪಾವತಿಸಿದ ವೇತನವನ್ನು ವಸೂಲು ಮಾಡುವಂತಿಲ್ಲ , ಅಲ್ಲದೆ , ಮುಂಬಡ್ತಿ
Gayaten . MR
TV 484 25
Page number 11
ಪುನರಾವಲೋಕನ ಮಾಡುವಾಗ ಸರ್ಕಾರಿ ನೌಕರರಿಗೆ ಮುಂಬಡ್ತಿ ವೃಂದದಲ್ಲಿ ಅರ್ಹತಾ ದಿನಾಂಕಗಳು ಲಭ್ಯವಾಗದೇ ಇದ್ದಲ್ಲಿ , ಅಂತಹ ನೌಕರರುಗಳ ಪ್ರಕರಣಗಳನ್ನು ದಿನಾಂಕ 27 . 02 . 2019ರ ಸದರಿ ಆದೇಶದ ಕಂಡಿಕೆ 8 ( 1 ) ಮತ್ತು 2017ರ ಅಧಿನಿಯಮದ ಕಲಂ 5ರಡಿ ಇರುವ ಪರಂತುಕದನ್ವಯ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ .
9 , 2017ರ ಅಧಿನಿಯಮದನ್ವಯ ಜೇಷ್ಠತಾ ಪಟ್ಟಿಯನ್ನು ಎಂದಿನಿಂದ ಪರಿಷ್ಕರಿಸಬೇಕು ? ಮತ್ತು ಏಕೆ ?
ಉತ್ತರ : ಮುಂಬಡ್ತಿ ಮೀಸಲಾತಿ ನೀತಿಯು ದಿನಾಂಕ 27 , 04 . 1978ರ ಸರ್ಕಾರದ ಆದೇಶ ಸಂಖ್ಯೆಡಿಪಿಎಆರ್ 29 ಎಸ್ ಬಿಸಿ 77ರ ಅನ್ವಯ ಜಾರಿಗೆ ಬಂದಿರುತ್ತದೆ . ಈ ಮೀಸಲಾತಿಯನ್ನು ಜಾರಿಗೊಳಿಸುವ ಬಗ್ಗೆ ಮತ್ತು ಮುಂಬಡ್ತಿ ಹೊಂದಿದ ಪಜಾ / ಪಪಂ ವರ್ಗಕ್ಕೆ ಸೇರಿದ ನೌಕರರ ಮತ್ತು ಸಾಮಾನ್ಯ ವರ್ಗಕ್ಕೆ ಸೇರಿದ ನೌಕರರ ನಡುವಿನ ಅಂತರ ಜೇಷ್ಠತೆಯನ್ನು ನಿಗದಿಪಡಿಸುವ ಬಗ್ಗೆ ಅದರಲ್ಲಿ ವಿವರಿಸಲಾಗಿದೆ . ಮಾನ್ಯ ಸರ್ವೋಚ್ಚ ನ್ಯಾಯಾಲಯವು ದಿನಾಂಕ 10 . 05 . 2019ರಂದು ನೀಡಿರುವ ತೀರ್ಪಿನಲ್ಲಿ 2017ರ ಅಧಿನಿಯಮದ ಸಿಂಧುತ್ವವನ್ನು ಎತ್ತಿ ಹಿಡಿದಿರುತ್ತದೆ . ಪರಿಣಾಮವಾಗಿ , ದಿನಾಂಕ 27 . 04 . 1978ರ ಸದರಿ ಆದೇಶದನ್ವಯ ಮೀಸಲಾತಿ ನೀತಿಯನ್ನು ಅನುಸರಿಸಿ ಸಂಬಂಧಿಸಿದ ವೃಂದ ಮತ್ತು ನೇಮಕಾತಿ ನಿಯಮಗಳನ್ವಯ ಮುಂಬಡ್ತಿ ಹೊಂದಿದ ಮೀಸಲಾತಿ ವರ್ಗಕ್ಕೆ ಸೇರಿದ ನೌಕರರು ಮುಂಬಡ್ತಿ ಹೊಂದಿದ ದಿನಾಂಕದಿಂದ ಜೇಷ್ಠತೆಗೆ ಅರ್ಹರಾಗುತ್ತಾರೆ . ಈ ಅಂಶವನ್ನು 2017ರ ಅಧಿನಿಯಮದ ಸೆಕ್ಷನ್ 4ರಲ್ಲಿ ಸಂರಕ್ಷಿಸಿರುವುದರಿಂದ ಜೇಷ್ಠತಾ ಪಟ್ಟಿಗಳನ್ನು ಅಂದಿನಿಂದಲೇ ಪರಿಷ್ಕರಿಸಬೇಕಾಗುತ್ತದೆ . ಅಲ್ಲದೇ ದಿನಾಂಕ 27 . 02 . 2019ರ ಆದೇಶದ ಕಂಡಿಕೆ 8 ( 2 ) ರಲ್ಲಿ ಇದೇ ಅಂಶವನ್ನು ಅಂದರೆ ಜೇಷ್ಠತಾಪಟ್ಟಿಯನ್ನು ದಿನಾಂಕ 27 . 04 . 1978ರಿಂದ ಪರಿಷ್ಕರಿಸತಕ್ಕದ್ದೆಂದು ತಿಳಿಸಲಾಗಿದೆ .
10 . ಮಾನ್ಯ ಸರ್ವೋಚ್ಚ ನ್ಯಾಯಾಲಯವು ಬಿ . ಕೆ . ಪವಿತ್ರ - 1 ಪ್ರಕರಣದಲ್ಲಿ ದಿನಾಂಕ 09 . 02 . 2017ರಂದು ನೀಡಿದ ತೀರ್ಪಿನ ಹಿನ್ನೆಲೆಯಲ್ಲಿ ತಯಾರಿಸಿ ಪ್ರಕಟಿಸಲಾದ ಜೇಷ್ಠತಾ ಪಟ್ಟಿಗಳನ್ನು , 2017ರ ಅಧಿನಿಯಮ ಜಾರಿಗೆ ಬಂದ ನಂತರವೂ ಉಳಿಸಿಕೊಳ್ಳಬೇಕೇ ? ಉತ್ತರ : ಇಲ್ಲ .
Gayathini . M . R
472
Page number 12
11 . ಬಿ . ಕೆ . ಪವಿತ್ರ ಪ್ರಕರಣದ ಪೂರ್ವದಲ್ಲಿ ಪ್ರಕಟಿಸಲಾದ ಜೇಷ್ಠತಾ ಪಟ್ಟಿಗಳನ್ನೇ ಅಳವಡಿಸಿಕೊಳ್ಳಬೇಕೇ
ಅಥವಾ ಮತ್ತೊಮ್ಮೆ ಪರಿಷ್ಕರಿಸಬೇಕೇ ?
ಉತ್ತರ : 2017ರ ಅಧಿನಿಯಮದ ಕಲಂ 5ರನ್ವಯ ಜೇಷ್ಠತಾ ಪಟ್ಟಿಗಳನ್ನು ದಿನಾಂಕ : 27 . 04 . 1978ರಿಂದ ಪರಿಷ್ಕರಿಸಬೇಕಾಗುತ್ತದೆ . ಆದುದರಿಂದ , ಬಿ . ಕೆ . ಪವಿತ್ರ - 1 ಪ್ರಕರಣದ ಪೂರ್ವದಲ್ಲಿ ಪ್ರಕಟಿಸಲಾದ ಜೇಷ್ಠತಾ ಪಟ್ಟಿಗಳನ್ನು ಅಳವಡಿಸಿಕೊಳ್ಳುವಂತಿಲ್ಲ .
12 . ದಿನಾಂಕ : 27 . 04 . 1978ರ ನಂತರ ಪಜಾ / ಪಪಂ ಗಳಿಗೆ ಮುಂಬಡ್ತಿ ಮೀಸಲಾತಿ ಪ್ರಮಾಣದಲ್ಲಿ
ಬದಲಾವಣೆ ಮಾಡಲಾಗಿದೆಯೇ ? ಉತ್ತರ : ದಿನಾಂಕ : 27 . 04 . 1978ರ ಸರ್ಕಾರದ ಸದರಿ ಆದೇಶದಲ್ಲಿ ಮುಂಬಡ್ತಿ ಮೀಸಲಾತಿ ನೀತಿಯನ್ನು ಜಾರಿಗೊಳಿಸಲಾಗಿದೆ . ಈ ಆದೇಶದನ್ವಯ , ಪ . ಜಾ . ಗಳಿಗೆ ಶೇಕಡಾ 15 ಮತ್ತು ಪ . ಪಂ . ಗಳಿಗೆ ಶೇಕಡ 3ರಷ್ಟು ಮೀಸಲಾತಿಯನ್ನು ಕಲ್ಪಿಸಲಾಗಿದ್ದು , ಈ ಮೀಸಲಾತಿಯ ಪ್ರಮಾಣದಲ್ಲಿ ಯಾವುದೇ ಬದಲಾವಣೆಯಾಗಿರುವುದಿಲ್ಲ .
13 , 2017ರ ಅಧಿನಿಯಮದನ್ವಯ ಜೇಷ್ಠತಾ ಪಟ್ಟಿಗಳನ್ನು ಸಿದ್ಧಪಡಿಸುವಾಗ Catch up ತತ್ವವನ್ನು
ಅನುಸರಿಸಬೇಕೇ ? ಉತ್ತರ : ಮಾನ್ಯ ಸರ್ವೋಚ್ಛ ನ್ಯಾಯಾಲಯವು ಬಿ . ಕೆ . ಪವಿತ್ರ - 2 ಪ್ರಕರಣದಲ್ಲಿ ದಿನಾಂಕ 10 . 05 . 2019ರಂದು ನೀಡಿದ ತೀರ್ಪಿನಲ್ಲಿ 2017ರ ಅಧಿನಿಯಮದ ಸಿಂಧುತ್ವವನ್ನು ಎತ್ತಿ ಹಿಡಿದಿರುವುದಿರಂದ , ಮಾನ್ಯ ಸರ್ವೋಚ್ಛ ನ್ಯಾಯಾಲಯವು ಬಿ . ಕೆ . ಪವಿತ್ರ - 1 ಪ್ರಕರಣದಲ್ಲಿ ದಿನಾಂಕ 09 . 02 . 2017ರಂದು ನೀಡಿರುವ ತೀರ್ಪಿನಲ್ಲಿ ಉಲ್ಲೇಖಿಸಿರುವ catch up principle applies ಎಂಬ ಅಂಶವು ಈಗ ಅನ್ವಯವಾಗುವುದಿಲ್ಲ . ತತ್ಪರಿಣಾಮ ಜೇಷ್ಠತೆಯನ್ನು ಅನುಸರಿಸಬೇಕ್ಕಾಗುತ್ತದೆ .
, H
L
- ( ಗಾಯತ್ರಎಂ . ಆರ್ )
ಸರ್ಕಾರದ ಅಧೀನ ಕಾರ್ಯದರ್ಶಿ - 3 ( ಪ್ರ ) ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ .
K ( ಸೇವಾ ನಿಯಮಗಳು )

No comments:

Post a Comment

ಅನಿಸಿಕೆ ತಿಳಿಸಿ

ಹೆಚ್ಚು ಓದಿದವು