Friday, June 29, 2018

ಸುತ್ತೋಲೆ: ವಿಷಯ: ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮಗಳು, 1963ರಲ್ಲಿ ನಿಗದಿಪಡಿಸಿರುವ ಸರ್ಕಾರಿ ನೌಕರರ ಅವಲಂಬಿತ ತಂದೆ- ತಾಯಿಯವರ ಆದಾಯದ ಮಿತಿಯನ್ನು ಪರಿಷ್ಕರಿಸುವ ಬಗ್ಗೆ



ಕರ್ನಾಟಕ ಸರ್ಕಾರ
ಸಂಖ್ಯೆ: ಸಿಆಸುಇ 21 ಎಸ್ಎಂಆರ್ 2018
ಕರ್ನಾಟಕ ಸರ್ಕಾರದ ಸಚಿವಾಲಯ,
ವಿಧಾನಸೌಧ,
ಬೆಂಗಳೂರು, ದಿನಾಂಕ:22.06.2018
ಸುತ್ತೋಲೆ
ವಿಷಯ: ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮಗಳು, 1963ರಲ್ಲಿ
ನಿಗದಿಪಡಿಸಿರುವ ಸರ್ಕಾರಿ ನೌಕರರ ಅವಲಂಬಿತ ತಂದೆ- ತಾಯಿಯವರ
ಆದಾಯದ ಮಿತಿಯನ್ನು ಪರಿಷ್ಕರಿಸುವ ಬಗ್ಗೆ,
ಉಲ್ಲೇಖ : (1) ಅಧಿಸೂಚನೆ ಸಂಖ್ಯೆ: ಸಿಆಸುಇ 2 ಎಸ್ಎಂಆರ್ 2015, ದಿನಾಂಕ:29.08.2017,
(2) ಸರ್ಕಾರಿ ಆದೇಶ ಸಂಖ್ಯೆ: ಆಇ (ವಿಶೇಷ) 8 ಪಿಇಎನ್ 2012, ದಿನಾಂಕ: 03.05.2012,
(3) ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ 2 ಎಸ್ ಎಂಆರ್ 2015, ದಿನಾಂಕ:27.09.2017,
(4) ಸರ್ಕಾರಿ ಆದೇಶ ಸಂಖ್ಯೆ: ಆಇ 33 ಪಿಇಎನ್ 2018, ದಿನಾಂಕ: 24.04.2018,
ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮಗಳು, 1963
ನಿಯಮ 2(1) (ii) ರಲ್ಲಿ ನಿಗಧಿಪಡಿಸಿರುವ ಷರತ್ತುಗಳನ್ನು ಪೂರೈಸುವ ರಾಜ್ಯ ಸರ್ಕಾರಿ
ನೌಕರರ ಅವಲಂಬಿತ ತಂದೆ-ತಾಯಿಯವರ ವೈದ್ಯಕೀಯ ವೆಚ್ಚ ಮರುಪಾವತಿಗೆ
ಅವಕಾಶವನ್ನು ಕಲ್ಪಿಸಲಾಗಿದೆ.
ಉಲ್ಲೇಖಿತ(1) ಅಧಿಸೂಚನೆಯಲ್ಲಿ, ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ
ಹಾಜರಾತಿ) ನಿಯಮಗಳು 1963 ನಿಯಮ 2(1) (i)ರಲ್ಲಿರುವ ಆದಾಯದ ಮಿತಿ
ಆರು ಸಾವಿರ ರೂಪಾಯಿಗಳುಎಂಬ ಪದಗಳ ಬದಲಿಗೆ "ರಾಜ್ಯ ಸರ್ಕಾರವು
ನಿಗಧಿಪಡಿಸಿದ ಕನಿಷ್ಠ ಮೂಲ ಪಿಂಚಣಿ ಹಾಗೂ ವೈದ್ಯಕೀಯ ವೆಚ್ಚ ಮರುಪಾವತಿಯನ್ನು
ಪರಿಗಣಿಸುವ ದಿನಾಂಕದಂದು ಕನಿಷ್ಟ ಮೂಲ ಪಿಂಚಣಿಗೆ ಲಭ್ಯವಾಗುವ ತುಟ್ಟಿಭತ್ಯೆಯನ್ನು
ಒಳಗೊಂಡ ಮೊತ್ತಎಂಬ ಪದಗಳನ್ನು ಪ್ರತಿಷ್ಟಾಪಿಸಿ ತಿದ್ದುಪಡಿ ಮಾಡಲಾಗಿದೆ.
ಉಲ್ಲೇಖಿತ (2) ಆದೇಶದಲ್ಲಿ ಆರ್ಥಿಕ ಇಲಾಖೆಯು ನಿಗದಿಪಡಿಸಿದ ನಿವತಿ
ವೇತನ ಸೌಲಭ್ಯದ ಪರಿಮಿತಿಯನ್ನು ಆಧರಿಸಿ, ಉಲ್ಲೇಖಿತ(3) ಆದೇಶದಲ್ಲಿ, ಸರ್ಕಾರಿ
ನೌಕರರ ಅವಲಂಬಿತ ತಂದೆ-ತಾಯಿಯ ವೈದ್ಯಕೀಯ ವೆಚ್ಚ ಮರುಪಾವತಿ ಪ್ರಕರಣಗಳ
ಪರಿಶೀಲನೆಯ ಸಂದರ್ಭದಲ್ಲಿ ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ)
(ತಿದ್ದುಪಡಿ) ನಿಯಮಗಳು, 2017ರನ್ವಯ ನಿಗದಿಪಡಿಸಿದ ಆದಾಯದ ಮಿತಿಯ
ಪರಿಗಣನೆಯನ್ನು ಸ್ಪಷ್ಟಿಕರಿಸಲಾಗಿದೆ. ಸಂದರ್ಭದಲ್ಲಿ, ರಾಜ್ಯದ ನಿವೃತ್ತ ಸರ್ಕಾರಿ
ನೌಕರರುಗಳಿಗೆ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳು ಮತ್ತು ಕರ್ನಾಟಕ
ನಾಗರೀಕ ಸೇವಾ(ಅಸಾಧಾರಣ ನಿವೃತ್ತಿ ವೇತನ) ನಿಯಮಾವಳಿಗಳು 2003 ರನ್ವಯ
ಲಭ್ಯವಾಗುವ ವಿವಿಧ ಬಗೆಯ ನಿವೃತ್ತಿ ವೇತನಗಳಿಗೆ ಆರ್ಥಿಕ ಇಲಾಖೆಯು
ನಿಗಧಿಪಡಿಸಿರುವ ಮಾಹೆಯಾನ ರೂ.4800/-ಗಳ ಕನಿಷ್ಠ ಮೊತ್ತವನ್ನು 'ರಾಜ್ಯ ಸರ್ಕಾರವು
ನಿಗಧಿಪಡಿಸಿದ ಕನಿಷ್ಟ ಮೂಲ ಪಿಂಚಣಿ' ಎಂದು ಪರಿಗಣಿಸಲಾಗಿರುತ್ತದೆ.

1 comment:

  1. ಸರ್ ಇದರ 2ನೇ ಪೇಜ್ ಹಾಕಿ

    ReplyDelete

ಅನಿಸಿಕೆ ತಿಳಿಸಿ

ಹೆಚ್ಚು ಓದಿದವು