Wednesday, March 27, 2019

ಸುತ್ತೋಲೆ ವಿಷಯ : ಸರ್ಕಾರಿ ಅಧಿಕಾರಿ / ನೌಕರರುಗಳ ವಿರುದ್ಧ ಶಿಸ್ತುಕ್ರಮ ಇಲಾಖಾ ವಿಚಾರಣೆಯ ಅವಶ್ಯಕ ಪರಿಪೂರ್ಣ ಪ್ರಸ್ತಾವನೆಗಳನ್ನು ವಿಳಂಬವಿಲ್ಲದೇ ಸಲ್ಲಿಸುವ ಬಗ್ಗೆ.

ಕರ್ನಾಟಕ ಸರ್ಕಾರ
ಸಂಖ್ಯೆ : ಸಿಆಸುಇ 76 ಸೇವಿ 2018
ಕರ್ನಾಟಕ ಸರ್ಕಾರದ ಸಚಿವಾಲಯ ,
ವಿಧಾನಸೌಧ . ಬೆಂಗಳೂರು , ದಿನಾಂಕ : 21 . 01 . 2019
ಸುತ್ತೋಲೆ
ವಿಷಯ : ಸರ್ಕಾರಿ ಅಧಿಕಾರಿ / ನೌಕರರುಗಳ ವಿರುದ್ಧ ಶಿಸ್ತುಕ್ರಮ ಇಲಾಖಾ ವಿಚಾರಣೆಯ
ಅವಶ್ಯಕ ಪರಿಪೂರ್ಣ ಪ್ರಸ್ತಾವನೆಗಳನ್ನು ವಿಳಂಬವಿಲ್ಲದೇ ಸಲ್ಲಿಸುವ ಬಗ್ಗೆ
ಮರು ಸೂಚನೆಗಳು , ಉಲ್ಲೇಖ : ( 1 ) ಅಧಿಕೃತ ಜ್ಞಾಪನ ಸಂಖ್ಯೆ : ಡಿಪಿಎಆರ್ 41 ಎಸ್‌ಡಿಇ 83 , ದಿನಾಂಕ : 16 . 08 . 1983 .
( 2 ) ಅಧಿಕೃತ ಜ್ಞಾಪನ ಸಂಖ್ಯೆ : ಡಿಪಿಎಆರ್‌ 33 ಎಸ್‌ಡಿಇ 83 , ದಿ : 24 . 05 . 1984 , ( 3 ) ಸುತ್ತೋಲೆ ಸಂಖ್ಯೆ : ಸಿಆಸುಇ 7 ನೇಣವಿ 96 , ದಿನಾಂಕ : 04 . 07 . 1996 , ( 4 ) ಸುತ್ತೋಲೆ ಸಂಖ್ಯೆ : ಸಿಆಸುಇ 04 ಸೇಇವಿ 96 , ದಿನಾಂಕ : 28 . 08 . 1996 , ( 5 ) ಸುತ್ತೋಲೆ ಸಂಖ್ಯೆ : ಸಿಆಸುಇ 09 ಸೇಣವಿ 98 , ದಿನಾಂಕ : 03 . 08 . 1998 , ( 6 ) ಸುತ್ತೋಲೆ ಸಂಖ್ಯೆ : ಸಿಆಸುಇ 47 ಸೇವಿ 2007 , ದಿನಾಂಕ : 23 . 03 . 2002 . ( 7 ) ಸುತ್ತೋಲೆ ಸಂಖ್ಯೆ : ಸಿಆಸುಇ 07 ಸೇವಿ 2003 , ದಿನಾಂಕ : 12 . 05 . 2003 , ( 8 ) ಸುತ್ತೋಲೆ ಸಂಖ್ಯೆ : ಸಿಆಸುಇ 1 ಸೇಇವಿ 2005 , ದಿನಾಂಕ : 09 . 02 . 2005 ,
ಸರ್ಕಾರಿ ನೌಕರನು ಸೇವೆಯಲ್ಲಿದ್ದಾಗ ಅವನ ಮೇಲೆ ಹೂಡಿದ ಯಾವುದೇ ಇಲಾಖಾ ತನಿಖೆಗಳ ಬಗ್ಗೆ ಅವನು ಸೇವೆಯಿಂದ ನಿವೃತ್ತಿಯಾದ ನಂತರ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ನಿಯಮ 214 ( 2 ) ( ಬಿ ) ರ ಉಪಬಂಧಗಳಿಗೆ ಒಳಪಟ್ಟು ಇಲಾಖಾ ವಿಚಾರಣೆಯನ್ನು ಆರಂಭಿಸುವ ಮತ್ತು ಸೇವೆಯಲ್ಲಿದ್ದಾಗ ಅವನ ವಿರುದ್ಧ ಆರಂಭಿಸಿರುವ ಇಲಾಖಾ ವಿಚಾರಣೆಯನ್ನು ನಿಯಮ 214 ( 2 ) ( ಎ ) ರ ಉಪಬಂಧಗಳಿಗೆ ಒಳಪಟ್ಟು ಮುಂದುವರೆಸುವ ಅವಕಾಶವಿದೆ . ಇದರ ಹೊರತಾಗಿ ಕರ್ನಾಟಕ ನಾಗರಿಕ ಸೇವಾ ( ವರ್ಗೀಕರಣ , ನಿಯಂತ್ರಣ ಮತ್ತು ಮೇಲ್ಮನವಿ ) ನಿಯಮಗಳು , 1957ರಲ್ಲಿರುವ ನಿಯಮಗಳ ಪ್ರಕಾರ ಹೊಸದಾಗಿ ಇಲಾಖಾ ವಿಚಾರಣೆ ಪ್ರಾರಂಭಿಸುವುದಕ್ಕೆ ಮತ್ತು ಪ್ರಾರಂಭಿಸಿರುವ ಇಲಾಖಾ ವಿಚಾರಣೆಯನ್ನು ಮುಂದುವರೆಸುವುದಕ್ಕೆ ಅವಕಾಶವಿರುವುದಿಲ್ಲ . ಕಾರಣ ಕರ್ನಾಟಕ ನಾಗರಿಕ ಸೇವಾ ( ವರ್ಗೀಕರಣ , ನಿಯಂತ್ರಣ ಮತ್ತು ಮೇಲ್ಮನವಿ ) ನಿಯಮಗಳು ಅಂತಹ ನಿವೃತ್ತ ನೌಕರರಿಗೆ ಅನ್ವಯಿಸುವುದಿಲ್ಲ . ಸರ್ಕಾರಿ ನೌಕರನು ನಿವೃತ್ತಿಯಾದ ನಂತರ ಅವನ ಮೇಲೆ ಹೂಡಲಾಗಿದ್ದ ಇಲಾಖಾ ತನಿಖೆಗಳನ್ನು ಸರ್ಕಾರಕ್ಕೆ ಆರ್ಥಿಕ ಹಾನಿ ಉಂಟಾಗಿಲ್ಲವೆಂಬ ಕಾರಣ ನೀಡಿ ಅವುಗಳನ್ನು ಹಿಂದಕ್ಕೆ ತೆಗೆದುಕೊಳ್ಳುವ ಪ್ರಸ್ತಾವನೆಗಳು ಸರ್ಕಾರದ ಮುಂದೆ ಬಂದ ಸಂದರ್ಭದಲ್ಲಿ ಸರ್ಕಾರವು ಆ ಬಗ್ಗೆ ಪರಿಶೀಲಿಸಿ , ಉಲ್ಲೇಖ ( I ) ಮತ್ತು ( 2 ) ರ ಅಧಿಕೃತ ಜ್ಞಾಸನಗಳಲ್ಲಿ ನಿವೃತ್ತಿ ಆಗುವಂತಹ ಸರ್ಕಾರಿ ನೌಕರರ ಮೇಲೆ ಹೂಡಲಾಗಿರುವ ಇಲಾಖಾ ತನಿಖೆಗಳನ್ನು ಅವರು ನಿವೃತ್ತಿ ಆಗುವುದಕ್ಕೆ ಮುಂಚೆ ಇತ್ಯರ್ಥ ಮಾಡುವ ಕುರಿತು ಸೂಚನೆಗಳನ್ನು ನೀಡಿದೆ .
2 . ತದನಂತರದಲ್ಲಿ ನಿವೃತ್ತಿ ಹೊಂದಿದ ಆಪಾದಿತ ಅಧಿಕಾರಿ ವಿರುದ್ಧ ಇಲಾಖಾ ವಿಚಾರಣೆ ಪ್ರಾರಂಭಿಸಬೇಕಾದ ಪ್ರಕರಣವೊಂದರಲ್ಲಿ ಸಕಾಲದಲ್ಲಿ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ನಿಯಮ 214 ( ಬಿ ) ( ತ ) ರಲ್ಲಿ ನಿಗದಿಪಡಿಸಿದ ಕಾಲಮಿತಿಯೊಳಗೆ ವಿಚಾರಣೆಯನ್ನು ಪ್ರಾರಂಭಿಸಿಲ್ಲದ ಕಾರಣ ಆಪಾದಿತ ಅಧಿಕಾರಿಯ ಮೇಲೆ ಇಲಾಖಾ ವಿಚಾರಣೆ ಹೂಡಲು ಅಸಾಧ್ಯವಾದ ಪರಿಸ್ಥಿತಿ ಉಂಟಾದುದಲ್ಲದೇ ಆರೋಪಿ ಸರ್ಕಾರಿ ನೌಕರರು ನಿವೃತ್ತಿ ಹೊಂದುವ 2 - 3 ದಿನಗಳ ಮುಂಚೆ ಇಲ್ಲವೇ ಹಿಂದಿನ ದಿನ ಅವ ದುರ್ನಡತೆಗೆ ಸಂಬಂಧಿಸಿದ ವಿವರಗಳು ನೀಡಿ ಅವರ ಮೇಲೆ ಶಿಸ್ತಿನ ಕ್ರಮ ಆರಂಭಿಸಲು ಇಲಾಖೆಗಳು ಸರ್ಕಾರಕ್ಕೆ ಪ್ರಸ್ತಾವನೆಗಳನ್ನು ಕಳುಹಿಸುತ್ತಿರುವುದು ಸಹ ಸರ್ಕಾರದ ಗಮನಕ್ಕೆ ಬಂದ ಸಂದರ್ಭದಲ್ಲಿ ಸರ್ಕಾರವು ಉಲ್ಲೇಖ ( 4 ) ರ ಸುತ್ತೋಲೆಯಲ್ಲಿ ಸರ್ಕಾರಿ ನೌಕರನ ದುರ್ನಡತೆ ಗಮನಕ್ಕೆ ಬಂದ ತಕ್ಷಣ ಶಿಸ್ತಿನ ಪ್ರಾಧಿಕಾರಕ್ಕೆ ಅದನ್ನು ತಿಳಿಸಬೇಕು . ನಿವೃತ್ತಿ ಹೊಂದಲಿರುವ ನೌಕರರ ಪ್ರಕರಣದಲ್ಲಿ ಶಿಸ್ತಿನ ಪ್ರಾಧಿಕಾರಕ್ಕೆ ಅಂತಹ ಮಾಹಿತಿ ಸರ್ಕಾರಿ ನೌಕರನು ನಿವೃತ್ತಿ ಹೊಂದುವ ಕನಿಷ್ಠ 2 ಅಥವಾ 3 ತಿಂಗಳ ಪೂರ್ವದಲ್ಲಿ ನೀಡಿ , ಕರಡು ದೋಷಾರೋಪಣಾ ಪಟ್ಟಿ ಇತ್ಯಾದಿ , ಸಂಬಂಧಿಸಿದ ಕಾಗದ ಪತ್ರ ಮತ್ತು ದಾಖಲೆಗಳೊಡನೆ ಶಿಸ್ತುಪಾಧಿಕಾರಿಗಳಿಗೆ ಕಳುಹಿಸುವ ಬಗ್ಗೆ ಮತ್ತು ವಯೋನಿವೃತ್ತಿ ಅಂಚಿನಲ್ಲಿರುವ ಅಂತಹ ಆಪಾದಿತ ಸರ್ಕಾರಿ ನೌಕರರ ನಿವೃತ್ತಿ ದಿನಾಂಕವನ್ನು ಕಡ್ಡಾಯವಾಗಿ ನಮೂದಿಸುವ ಬಗ್ಗೆ ಸೂಚನೆಗಳನ್ನು ನೀಡಲಾಗಿದೆ . ಉಲ್ಲೇಖ ( 5 ) ರ ಸುತ್ತೋಲೆಯಲ್ಲಿ ನಿವೃತ್ತಿ ಹೊಂದಲಿರುವ ಅಧಿಕಾರಿಗಳ ವಿರುದ್ಧ ಶಿಸ್ತಿನ ಪ್ರಸ್ತಾವನೆಗಳನ್ನು ಸಂಬಂಧಿಸಿದ ಅಧಿಕಾರಿ ವಯೋ ನಿವೃತ್ತಿ ಹೊಂದುವ ಕನಿಷ್ಠ ಆರು ತಿಂಗಳ ಮುಂಚೆಯೇ ಕಳುಹಿಸಬೇಕೆಂದು ತಿಳಿಸಲಾಗಿದೆ .
3 . ಉಲ್ಲೇಖ ( 8 ) ರ ಸುತ್ತೋಲೆಯಲ್ಲಿ ನಿವೃತ್ತಿ ಅಂಚಿನಲ್ಲಿರುವ ಅಧಿಕಾರಿಗಳ ವಿರುದ್ಧ ಶಿಸ್ತು ಪ್ರಕರಣಗಳನ್ನು ಕಳುಹಿಸುವಲ್ಲಿ ಇಲಾಖೆಗಳು ಯಾವುದೇ ವಿಳಂಬವನ್ನು ಮಾಡಬಾರದು , ಹೀಗೆ ಕೊನೆ ಗಳಿಗೆಯಲ್ಲಿ ಪ್ರಸ್ತಾವನೆಗಳನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಕಳುಹಿಸಿದಲ್ಲಿ ಮತ್ತು ಅಂತಹ ವಿಚಾರಣೆಯು ಕಾಲಮಿತಿಯನ್ನು ಮೀರಿದ್ದಾದಲ್ಲಿ ವಿಳಂಬಕ್ಕೆ ಜವಾಬ್ದಾರರಾದ ನೌಕರರು / ಅಧಿಕಾರಿಗಳನ್ನು ಗುರುತಿಸಿ ಅವರುಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ತಿಳಿಸಲಾಗಿದೆ .
4 , ಉಲ್ಲೇಖ ( 6 ) ರ ಸುತ್ತೋಲೆಯಲ್ಲಿ ಕರ್ನಾಟಕ ನಾಗರಿಕ ಸೇವಾ ( ವರ್ಗೀಕರಣ , ನಿಯಂತ್ರಣ ಮತ್ತು ಮೇಲ್ಮನವಿ ) ನಿಯಮಗಳು , 1957ರ ನಿಯಮಗಳ ಅಡಿಯಲ್ಲಿ ಆರಂಭಿಸುವ ಪ್ರತಿಯೊಂದು ಪ್ರಕರಣದಲ್ಲಿ ಆಪಾದಿತ ಸರ್ಕಾರಿ ನೌಕರನ ವಯೋ ನಿವೃತ್ತಿ ದಿನಾಂಕ ಸೇರಿದಂತೆ ಇತರೆ ವಿವರಗಳನ್ನು ಸಂಬಂಧಿಸಿದ ದಾಖಲೆಗಳೊಂದಿಗೆ ಯಾವಾಗಲೂ ಇಡತಕ್ಕದ್ದೆಂದು ಹಾಗೂ ಅದನ್ನು ಸಂಬಂಧಿಸಿದ ಪ್ರಾಧಿಕಾರಿಗಳಿಗೆ ಲಭ್ಯಮಾಡತಕ್ಕದ್ದೆಂದು ಹಾಗೂ ಈ ವಿವರಗಳನ್ನು ತಪ್ಪದೆ ಕಡತದ ಕವಚದ ಮೇಲೆ ದಪ್ಪ ಅಕ್ಷರದಲ್ಲಿ ಕೆಂಪು ಶಾಯಿಯಲ್ಲಿ ನಮೂದಿಸಬೇಕೆಂದು ಸೂಚನೆಗಳನ್ನು ನೀಡಲಾಗಿದೆ .
5 , ಈ ರೀತಿ ಸರ್ಕಾರವು ಕಾಲಕಾಲಕ್ಕೆ ಹೊರಡಿಸಿದ ಮೇಲ್ಕಂಡ ಸೂಚನೆಗಳಿದ್ದಾಗ್ಯೂ ಇತ್ತೀಚೆಗೆ ಆಡಳಿತ ಇಲಾಖೆಯೊಂದು ಆರೋಪಿತ ಸರ್ಕಾರಿ ನೌಕರನ ವಿರುದ್ಧ ಶಿಸ್ತು ಪ್ರಕರಣದ ಪೂರ್ಣ ಪ್ರಸ್ತಾವನೆಯನ್ನು ಶಿಸ್ತುಪ್ರಾಧಿಕಾರಕ್ಕೆ ಆ ಅಧಿಕಾರಿ ನಿವೃತ್ತಿ ಹೊಂದುವ ಒಂದು ವಾರದ ಮುಂಚೆ ಕಳುಹಿಸಿರುವುದರಿಂದ , ಅಂತಹ ಆರೋಪಿತ ಅಧಿಕಾರಿ ವಿರುದ್ಧ ಕ್ರಮ ಜರುಗಿಸಲು ಅವಕಾಶವಿಲ್ಲದಂತಾಗಿರುವ ವಿಷಯವು ಸರ್ಕಾರದ ಗಮನಕ್ಕೆ ಬಂದಿದೆ .
( 1 ) ಆದುದರಿಂದ , ನಿವೃತ್ತಿ ಹೊಂದಲಿರುವ ಅಧಿಕಾರಿ / ನೌಕರರ ವಿರುದ್ದದ ಶಿಸ್ತುಕ್ರಮದ ಪರಿಪೂರ್ಣ ಪ್ರಸ್ತಾವನೆ ಗಳನ್ನು ಆಡಳಿತ ಇಲಾಖೆಗಳು ಅಂತಹ ಅಧಿಕಾರಿ / ನೌಕರರು ನಿವೃತ್ತರಾಗುವ ಕನಿಷ್ಠ 30 ದಿನಗಳ ಮುಂಚೆ ಶಿಸ್ತುಪ್ರಾಧಿಕಾರಕ್ಕೆ ಸಲ್ಲಿಸತಕ್ಕದ್ದು .
> > 2) ಕಡತದ ಕವಚದ ಮೇಲೆ ದಪ್ಪ ಅಕ್ಷರಗಳಲ್ಲಿ ಕೆಂಪು ಶಾಹಿಯಲ್ಲಿ ಆಪಾದಿತ ಸರ್ಕಾರಿ ನೌಕರರ ವಯೋ ನಿವೃತ್ತಿ ದಿನಾಂಕ ನಮೂದಿಸತಕ್ಕದ್ದು .
( 3 ) ಮೇಲಿನ ಕಾಲಮಿತಿ ಮೀರಿದಾದಲ್ಲಿ ವಿಳಂಬಕ್ಕೆ ಜವಾಬ್ದಾರರಾದ ನೌಕರರ / ಅಧಿಕಾರಿಗಳನ್ನು ಗುರುತಿಸಿ , ಆದರುಗಳ ವಿರುದ್ಧ ಶಿಸ್ತು ಕ್ರಮ ಜರುಗಿಸತಕ್ಕದ್ದು . ಈ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸತಕ್ಕದ್ದು .
ಸವಿಲ್ಲಾ ( ಟಿ . ಎಂ . ವಿಜಯ್ ಭಾಸ್ಕರ್ ) ಸರ್ಕಾರದ ಮುಖ್ಯ ಕಾರ್ಯದರ್ಶಿ
ಅವರಿಗೆ : ಸಂಕಲನಕಾರರು , ಕರ್ನಾಟಕ ರಾಜ್ಯ ಪತ್ರ ಇವರಿಗೆ ಇದನ್ನು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಿ ಅದರ 200 ಪ್ರತಿಗಳನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ( ಸೇವಾ ನಿಯಮಗಳು ) , ವಿಧಾನಸೌಧ ಇಲ್ಲಿಗೆ ಕಳುಹಿಸಲು ಕೋರಿದೆ .
1 ) ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು , 2 ) ಸರ್ಕಾರದ ಎಲ್ಲಾ ಅಪರ ಮುಖ್ಯ ಕಾರ್ಯದರ್ಶಿಗಳು / ಪ್ರಧಾನ ಕಾರ್ಯದರ್ಶಿಗಳು / ಕಾರ್ಯದರ್ಶಿಗಳು . 3 ) ಎಲ್ಲಾ ಇಲಾಖಾ ಮುಖ್ಯಸ್ಥರು / ಜಿಲ್ಲಾಧಿಕಾರಿಗಳು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು , ಜಿಲ್ಲಾ
ಪಂಚಾಯತ್ , 4 ) ಸರ್ಕಾರದ ಎಲ್ಲಾ ವಿಶೇಷ / ಅಪರ / ಸಹ / ಉಪ ಕಾರ್ಯದರ್ಶಿಗಳು . 5 ) ಸರ್ಕಾರದ ಎಲ್ಲಾ ಅಧೀನ ಕಾರ್ಯದರ್ಶಿಗಳು . 6 ) ನಿರ್ದೇಶಕರು , ಕರ್ನಾಟಕ ಸರ್ಕಾರ ಸಚಿವಾಲಯ ತರಬೇತಿ ಸಂಸ್ಥೆ .

No comments:

Post a Comment

ಅನಿಸಿಕೆ ತಿಳಿಸಿ

ಹೆಚ್ಚು ಓದಿದವು