Thursday, January 31, 2019

ಡಿಪಾಸಿಟರಿ ಖಾತೆಯ ಕುರಿತು ಪ್ರಶ್ನೋತ್ತರ-ಭಾಗ೧

ಡಿಪಾಸಿಟರಿ ಖಾತೆಯ ಕುರಿತು ಪ್ರಶ್ನೋತ್ತರದ ಮೂಲಕ ಕೆಲವು ಮಾಹಿತಿ: ಪ್ರ ೧: ಕೇಂದ್ರ ಹಾಗೂ ನಮ್ಮ ರಾಜ್ಯ ಸರ್ಕಾರಿ ನೌಕರರು ಷೇರುಮಾರುಕಟ್ಟೆಯಲ್ಲಿ Trading ಹಾಗೂ ಹೂಡಿಕೆ ಮಾಡಬಹುದೇ? ಹಾಗೂ Demat ಅವಶ್ಯವಿದಿಯೇ? ಉ: ಷೇರುಮಾರುಕಟ್ಟೆ ಹಾಗೂ ಕಚೇರಿ ವ್ಯವಹಾರದ ಸಮಯ ಒಂದೇ ಇರುವುದರಿಂದ, Day Trading ಅಪರಾಧವಾಗುತ್ತದೆ. ಆದುದ್ದರಿಂದ ShareBrokers ಮುಖಾಂತರ ಷೇರುಗಳಲ್ಲಿ ಹಣ ಹೂಡಬಹುದು. ಇಂತಹ ಹೂಡಿಕೆಗೆ Demat ಖಾತೆ ಅವಶ್ಯವಿದ್ದ Brokers ಸಹಾಯ ಮಾಡುತ್ತಾರೆ. ಸರ್ಕಾರಿ ನೌಕರರು ಷೇರುಮಾರುಕಟ್ಟೆ– ಮ್ಯೂಚುವಲ್ ಫಂಡುಗಳಿಗೆ ಹಣ ಹೂಡಲು ಅವಕಾಶವಿದೆ. ಇದು ಅಪರಾಧವಲ್ಲ. ಉಳಿತಾಯ ಸಾಮರ್ಥ್ಯಕ್ಕನುಗುಣವಾಗಿ ಉಳಿಸಬಹುದು. ಇದಕ್ಕೆ ಮಿತಿ ಎನ್ನುವುದಿರುವುದಿಲ್ಲ. ಆದರೆ, ಆದಾಯದ ಮೂಲ ವಾರ್ಷಿಕ ವರದಿಯಲ್ಲಿ ನಮೂದಿಸುವುದು ಅವಶ್ಯವಿದೆ. ಅ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರು ಗಮನಿಸಿರಿ: ನಡತೆ ನಿಯಮ, 1966ರ 21ನೆ ನಿಯಮದ ವಿವರಣೆಯಂತೆ ರಾಜ್ಯ ಸರ್ಕಾರಿ ನೌಕರನು ಷೇರುಗಳನ್ನು, ಭದ್ರತಾ ಪತ್ರಗಳನ್ನು ಅಥವಾ ಇತರ ಬಂಡವಾಳ ಹೂಡಿಕೆಗಳನ್ನು ಮೇಲಿಂದ ಮೇಲೆ ಖರೀದಿ ಮಾಡುವುದನ್ನು ಅಥವಾ ಮಾರಾಟ ಮಾಡುವುದನ್ನು ಅಥವಾ ಅವೆರಡನ್ನೂ ಮಾಡುವುದನ್ನು ಈ ಉಪನಿಯಮದ ಅರ್ಥ ವ್ಯಾಪ್ತಿಯೊಳಗೆ ಸಟ್ಟಾ ವ್ಯವಹಾರವೆಂದು ಭಾವಿಸಬೇಕಾಗಿ ತಿಳಿಸಿದೆ. ಹಾಗೆಯೇ, ಇದೇ ನಿಯಮದ 23ನೆ ನಿಯಮವು ಚರ, ಸ್ಥಿರ ಮತ್ತು ಬೆಲೆ ಬಾಳುವ ಸ್ವತ್ತು.- (1) ಪ್ರತಿಯೊಬ್ಬ ಸರ್ಕಾರಿ ನೌಕರನು ಯಾವುದೇ ಸೇವೆಗೆ ಅಥವಾ ಹುದ್ದೆಗೆ ಅವನ ಮೊದಲ ನೇಮಕ ಆದಾಗ ಮತ್ತು ಆ ತರುವಾಯ 1[ಮಾರ್ಚ್ 31ಕ್ಕೆ ಅಂತ್ಯಗೊಳ್ಳುವ] ಪ್ರತಿ ಹನ್ನೆರಡು ತಿಂಗಳ ಅಂತರದಲ್ಲಿ ತನ್ನ ಮತ್ತು ತನ್ನ ಕುಟುಂಬದ ಎಲ್ಲ ಸದಸ್ಯರ ಚರಾಸ್ತಿಗಳ ಹಾಗೂ ಸ್ಥಿರಾಸ್ತಿಗಳ ಮತ್ತು ಹೊಣೆಗಾರಿಕೆಗಳ ವಿವರಪಟ್ಟಿಕೆಯನ್ನು ನೀಡಲೇಬೇಕು. ಆ. ಕೇಂದ್ರ ಸರ್ಕಾರಿ ನೌಕರರು ಗಮನಿಸಿರಿ: 1964ರ ಕೇಂದ್ರ ಸರ್ಕಾರದ ನಡತೆ ನಿಯಮದ 35ನೆ ನಿಯಮವು ಕೂಡ 35(1) No Government servant shall speculate in any stock, share or other investment: Provided that nothing in this sub-rule shall apply to occasional investments made through stockbrokers or other persons duly authorized and licensed or who have obtained a certificate of registration under the relevant law. Explanation - Frequent purchase or sale or both, of shares, securities or other investments shall be deemed to be speculation within the meaning of this sub-rule. ಎಂದು ತಿಳಿಸುತ್ತದೆ. ಪ್ರ 2: ಅಂಧ ವ್ಯಕ್ತಿಗಳು ಅಥವಾ ಅನಕ್ಷರಸ್ಥರು ಒಟ್ಟಾರೆ ಹೆಬ್ಬೆಟ್ಟು ಸಹಿದಾರರು depository ಖಾತೆಯನ್ನು ಹೊಂದಬಹುದೆ? ಉ: ಖಂಡಿತವಾಗಿಯೂ ಹೆಬ್ಬೆಟ್ಟು ಸಹಿದಾರರು ಕೂಡ depository ಖಾತೆಯನ್ನು ಹೊಂದಬಹುದು. NSDL ಮೂಲಕ ಹೊರಡಿಸಲ್ಪಟ್ಟ Master Circular on Account Opening Version 4.0 February 2012 ಸುತ್ತೋಲೆಯಲ್ಲಿರುವ ಪುಟ ಸಂಖ್ಯೆ 17ರಲ್ಲಿರುವ 1.2.4 ಅನಕ್ಷರಸ್ಥ ವ್ಯಕ್ತಿ ಹಾಗೂ ಪುಟ 19ನೆ 1.2.5 ಅಂಧ ವ್ಯಕ್ತಿ ಡಿಪಾಸಿಟರಿ ಖಾತೆಯನ್ನು ಹೊಂದುವುದರ ಕುರಿತು ಉಲ್ಲೇಖಿಸಿದೆ. ಇದಕ್ಕೆ ಪೂರಕ ಸುತ್ತೋಲೆ Circular No. NSDL/POLICY/2007/0049 Date : August 21, 2007 ನೋಡಬಹುದಾಗಿದೆ.

ಹೆಚ್ಚು ಓದಿದವು