ವಿಷಯ: 2019 ನೇ ಸಾಲಿನ ಬ್ರೈಲ್ ಹೊಸ ವರ್ಷದ ಆಚರಣೆಯ ಪ್ರಯುಕ್ತ ಬ್ರೈಲ್ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸುತ್ತಿರುವ ಕುರಿತು:
ದಿನಾಂಕ 01-11-2018.
ಪ್ರಥಮವಾಗಿ, ಸಮಸ್ತ ದೃಷ್ಟಿಸವಾಲಿಗ/ಅಂಧ ಸಮುದಾಯದ ಸ್ನೇಹಿತರಿಗೆ ಆರ್.ಎಸ್.ಜಿ ಇ ವಾಟ್ಸ್ಯಾ ಪ್ ಗುಂಪಿನ ಅಡ್ಮಿನ್ ತಂಡದ ವತಿಯಿಂದ ಕರ್ನಾಟಕ ರಾಜ್ಯೋತ್ಸವದ ಆರ್ಧಿಕ ಶುಭಾಶಯಗಳು ಹಾಗೂ ಅನಂತ ನಮನಗಳು.
ನಮ್ಮ ಬಗ್ಗೆ ಹೆಚ್ಚಿನ ಮಾಹಿತಿಗೆ, ಪ್ಲೇ ಸ್ಟೋರ್ ನಿಂದ "RSGE" ಆಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿರಿ.
ಸ್ನೇಹಿತರೆ, ದೃಷ್ಟಿ ಸವಾಲಿಗ/ಅಂಧ ಸಮುದಾಯದ ಪಾಲಿಗೆ ನವ ಷಕೆಯೊಂದರ ಆರಂಭಕ್ಕೆ ನಾಂದಿ ಆಗಬಹುದೆಂಬ ಭರವಸೆ ಮೂಡಿಸಿದ ಹೊಸ ಮತ್ತು ವಿಭಿನ್ನ ಆಲೋಚನೆಯೊಂದು ನಮ್ಮನ್ನು ಹೊಸ ದಿಕ್ಕಿನೆಡೆಗೆ ಹೆಜ್ಜೆ ಹಾಕಲು ಪ್ರೇರೇಪಿಸಿತು.
ನಮ್ಮೆಲ್ಲರಿಗೆ ತಿಳಿದಿರುವಂತೆ, ಹೊಸ ವರ್ಷ ಎಂದರೆ ಹೊಸ ಆರಂಭ, ಶುಭಸಂಕೇತ ಹಾಗು ವಿವಿಧ ಷಖೆಗಳ ಆರಂಭ. ತಾತ್ವಿಕ ಮತ್ತು ಐತಿಹಾಸಿಕ ದೃಷ್ಟಿಯಲ್ಲಿ ಹೊಸ ವರ್ಷದ ಪರಿಭಾಷೆಯನ್ನು ಅವಲೋಕಿಸಿದರೆ, ಗ್ರೆಗೋರಿಯನ್ ಕ್ಯಾಲೆಂಡರ್ ಅನ್ವಯ ಜಾಗತಿಕ ಮಟ್ಟದಲ್ಲಿ ಜನವರಿ ತಿಂಗಳ ಮೊದಲನೇಯ ದಿನವನ್ನು, ಪ್ರಾದೇಶಿಕ ಮಟ್ಟದಲ್ಲಿ ಯುಗಾದಿಯನ್ನು ಹೊಸ ವರ್ಷ ವನ್ನಾಗಿ ಆಚರಿಸಲಾಗುತ್ತಿದೆ.
ಬ್ರೈಲ್ ಆವಿಷ್ಕಾರ ಅಂಧ ಸಮುದಾಯಕ್ಕೆ ಮಹತ್ವದ ಕೊಡುಗೆ ಎಂದು ನಿರೂಪಿಸಿದ್ದು, ಇದು ಅಂಧ ಸಮುದಾಯವನ್ನು ಅಸಾಯಕತೆಯ ಕತ್ತಲಿನಿಂದ ಭರವಸೆಯ ಬೆಳಕಿನೆಡೆಗೆ ಕೊಂಡೊಯ್ಯಲು ಹೊಸ ಹಾದಿಯನ್ನು ನಿರ್ಮಿಸಿತು. ನಮ್ಮ ಸಮುದಾಯದ ಹಿತ ದೃಷ್ಟಿಯಿಂದ ಆದ ಎಲ್ಲಾ ಬೆಳವಣಿಗೆಗೆ ಬ್ರೈಲ್ ಬುನಾದಿ ಎಂದರೆ ತಪ್ಪಾಗಲಾರದು. ಅದನ್ನು ಪರಿಗಣೆಗೆ ತೆಗೆದುಕೊಂಡು, ಆರ್.ಎಸ್.ಜಿ.ಇ. ತಂಡವು ಅಂತರ್ ರಾಷ್ಟ್ರೀಯ ಬ್ರೈಲ್ ದಿನವನ್ನು ದೃಷ್ಟಿಸವಾಲಿಗ/ಅಂಧ ಸಮುದಾಯದ ಹೊಸ ವರ್ಷ ವನ್ನಾಗಿ ಆಚರಿಸಿತು. ಆಚರಣೆಯ ಪ್ರಯುಕ್ತ,, ಮೂರು ದಿನಗಳ ಕಾಲ ವೈವಿಧ್ಯಮಯ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಜನವರಿ 4 2018 (ಬ್ರೈಲ್ ಪಿತಾಮಹ ಲೂಯಿ ಬ್ರೈಲ್ ರವರ ಜನ್ಮದಿನ) ರಿಂದ 6 ಜನವರಿ 2018 (ಲೂಯಿ ಬ್ರೈಲ್ ರವರು ಇಹಲೋಕ ತೆಜಿಸಿದ ದಿನ) ದ ವರೆಗೆ ನೆರವೇರಿತು.
ಇದಕ್ಕೆ ಅಭೂತಪೂರ್ವ ಸ್ಪಂದನೆ ನೀಡಿದ ಸಮಸ್ತ ದೃಷ್ಟಿ ಸವಾಲಿಗ ಸಮುದಾಯಕ್ಕೆ ಈ ಮೂಲಕ ಅನಂತ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇವೆ.
ಮುಂದುವರೆದು, ಮುಂಬರಲಿರುವ ಹೊಸ ವರ್ಷಕ್ಕೆ ದೇಶದ ವಿವಿಧ ಭಾಗಗಳಲ್ಲಿ ನೆಲೆಸಿರುವ, ನಮ್ಮ ಗುಂಪಿನ ಸದಸ್ಯರಲ್ಲದ ದೃಷ್ಟಿಸವಾಲುಳ್ಳ/ಅಂಧ ಸ್ನೇಹಿತರನ್ನು ಸಹ ಆಚರಣೆಯಲ್ಲಿ ತೊಡಗಿಸಿಕೊಳ್ಳಲು ಅಡ್ಮಿನ್ ತಂಡವು ಆಶಿಸುತ್ತದೆ. ಈ ಉದ್ದೇಶಕ್ಕೆ ಪೂರಕವಾಗಿ, ರಾಷ್ಟ್ರೀಯ ಮಟ್ಟದ ಬ್ರೈಲ್ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲು ನಿರ್ಣಯಿಸಲಾಗಿದೆ.
ಸ್ಪರ್ಧೆಯ ಕುರಿತಾದ ವಿವರ:
1. ಸ್ಪರ್ಧೆಯು ರಾಷ್ಟ್ರೀಯ ಮಟ್ಟದ್ದಾಗಿದ್ದು, ಕನ್ನಡ, English ಹಾಗೂ ಹಿಂದಿ ಭಾಷೆಗಳಲ್ಲಿ ಯಾವುದಾದರು ಒಂದು ಭಾಷ ಮಾಧ್ಯಮದಲ್ಲಿ ಮಾತ್ರ ಓರ್ವ ಸ್ಪರ್ಧಿಯು ಭಾಗವಹಿಸಲು ಅವಕಾಶವಿರುತ್ತದೆ.
2. ಸ್ಪರ್ಧಿಗಳನ್ನು ಎರಡು ಗುಂಪುಗಳಾಗಿ ವರ್ಗೀಕರಿಸಲಾಗಿದೆ.
A. ಮೊದಲ ವರ್ಗವು ವಿದ್ಯಾರ್ಥಿಗಳ ವರ್ಗವಾಗಿದ್ದು, 10 ನೇ ತರಗತಿಯ ನಂತರದ ವಿವಿಧ ಶೈಕ್ಷಣಿಕ ಹಂತಗಳಾದ ಪಿ.ಯೂ.ಸಿ, ಡಿಪ್ಲೊಮ, ಐಟಿಐ ವಿದ್ಯಾರ್ಥಿಗಳು, ಪದವಿ ಮತ್ತು ಸ್ನಾತಕೋತರ ಪದವಿಗಳಲ್ಲಿ ಪ್ರಸಕ್ತ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಮಾತ್ರ ವಯೋಮಿತಿಗೆ ಒಳಪಡದೆ ಸ್ಪರ್ಧಿಸಲು ಅರ್ಹರಾಗಿರುತ್ತಾರೆ.
B.ಎರಡನೆ ವರ್ಗ ಸಾಮಾನ್ಯವರ್ಗವಾಗಿದ್ದು, ಮೊದಲನೆ ವರ್ಗಕ್ಕೆ ಸೇರದ, ಯಾವುದೆ ದೃಷ್ಟಿಸವಾಲಿಗ/ಅಂಧವ್ಯಕ್ತಿಗಳು ಸ್ಪರ್ಧಿಸಲು ಅವಕಾಶವಿರುತ್ತದೆ.
ಪ್ರತೀ ವರ್ಗದ ಸ್ಪರ್ಧಿಗಳಿಗೆ ಪ್ರತ್ಯೇಕ ವಿಷಯ ನೀಡಲಾಗಿದ್ದು, ತಾವು ಒಳಪಡುವ ವರ್ಗಕ್ಕೆ ನಿಗದಿಗೊಳಿಸಲಾದ
ವಿಷಯಕ್ಕೆ ಸಂಬಂಧಿಸಿದಂತೆ ಮಾತ್ರ ಪ್ರಬಂಧವನ್ನು ಕಳುಹಿಸತಕ್ಕದ್ದು.
ಪ್ರಬಂಧದ ವಿಷಯಗಳು:
1. ಮೊದಲ/ವಿದ್ಯಾರ್ಥಿ ವರ್ಗಕ್ಕೆ, ದೃಷ್ಟಿಸವಾಲುಳ್ಳ ವಿದ್ಯಾರ್ಥಿಗಳು ಪ್ರಸಕ್ತ ಶೈಕ್ಷಣಿಕ ವ್ಯವಸ್ಥೆಯಲ್ಲಿ ಎದುರಿಸುತ್ತಿರುವ ಸಮಸ್ಯೆಗಳು ಮತ್ತು
ಅವುಗಳ ನಿವಾರಣೆಯಲ್ಲಿ ಸ್ವತಃ ವಿದ್ಯಾರ್ಥಿಗಳ, ಮತ್ತು ಸರಕಾರದ ಪಾತ್ರ.
2. ಎರಡನೆ ವರ್ಗ/ಸಾಮಾನ್ಯ ವರ್ಗಕ್ಕೆ ನೀಡಲಾದ ವಿಷಯ:
ಔದ್ಯೋಗಿಕ ವಲಯದಲ್ಲಿ ಕೌಶಲ್ಯಾಭಿವೃದ್ಧಿಯು ಸೇರಿದಂತೆ ಉದ್ಯೋಗಿ ಮತ್ತು ಉದ್ಯೋಗ ಆಕಾಂಶಿಗಳು ಪ್ರಸಕ್ತ ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಅವುಗಳ ನಿವಾರಣೆಯಲ್ಲಿ ಸ್ವತಃ ಉದ್ಯೋಗಿಗಳು-ಉದ್ಯೋಗಾಕಾಂಶಿಗಳು, ಹಾಗು ಸರಕಾರ ಮತ್ತು ಸರಕಾರೇತರ ಸಂಸ್ಥೆಗಳ ಪಾತ್ರ.
3. ಉತ್ತಮ ಪ್ರಭಂದವೊಂದು ಹೊಂದಿರಬೇಕಾದ ಅವಶ್ಯಯ ಅಂಶಗಳು:
A. ಪ್ರಬಂಧ ರಚನೆಯು ವ್ಯವಸ್ಥಿತವಾದ, ಸುಲಲಿತವು, ಸ್ಪಷ್ಟವು ಹಾಗೂ ನೇರವಾಗಿ ವಿಷಯವನ್ನು ಕುರಿತಂತೆ ಇರುವುದು ಅತ್ಯಗತ್ಯ.
B. ವ್ಯಾಕರಣ ಶುದ್ದತೆ, ಉತ್ತಮ ವಾಕ್ಯ ರಚನೆ, ಕಚಿತತೆ, ಹಾಗೂ ಒಟ್ಟಾರೆ ಬರವಣಿಗೆಯು ಸ್ಪಷ್ಟವಾಗಿ ಇರುವುದು ಅವಷ್ಯ.
4. ನಿಯಮಗಳು:
A. ಸ್ಪರ್ಧಿಯು ಕನ್ನಡ ಅಥವ ಆಂಗ್ಲ ಅಥವ ಹಿಂದಿ ಯಾವುದಾದರು ಒಂದು ಭಾಷೆಯಲ್ಲಿ ಹಾಗೂ ಒಂದು ವಿಷಯವನ್ನು ಕುರಿತಂತೆ ಮಾತ್ರ ಪ್ರಬಂಧವನ್ನು ಬರೆಯುವುದು.
B. ಆಕ್ಷೇಪಿತ/ಅವಹೇಳನಕಾರಿ ಭಾಷೆಯ ಬಳಕೆ, ಅನಾರೋಗ್ಯಕರವಾದ ಟೀಕೆಗಳಿಗೆ, ಅಗೌರವ ಸೂಚಿಸುವ, ಯಾವುದೆ ವ್ಯಕ್ತಿ/ವ್ಯಕ್ತಿಗಳ, ಸಮುದಾಯ, ಸಂಘ ಸಂಸ್ಥೆಗಳ ಘನತೆಗೆ ಕುಂದು ತರುವಂತಹ ಬರವಣಿಗೆಯನ್ನು ಕಟ್ಟುನಿಟ್ಟಾಗಿ ನಿಷೇದಿಸಲಾಗಿದೆ.
C. ಪ್ರಬಂಧವು ಒಟ್ಟು 12 ಪುಟಗಳನ್ನು ಮೀರುವಂತಿಲ್ಲ [ಮುಕಪುಟವನ್ನು ಹೊರತುಪಡಿಸಿ].
ಒಂದುವೇಳೆ ಬೋರ್ಡ್ & ಗೈಡ್ ಬಳಸಿ ಹಾಳೆಯ ಎರಡು ಬದಿ ಬರೆಯುವುದಾದಲ್ಲಿ ಒಟ್ಟು ಹಾಳೆಗಳ ಸಂಖ್ಯೆ 8 ಹಾಳೆಗಳನ್ನು ಮೀರುವಂತಿಲ್ಲ.
D. ಪ್ರತಿಯೊಂದು ಪುಟದ ಮೊದಲ ಸಾಲಿನ ಬಲಭಾಗದ ಕೊನೆಯಲ್ಲಿ ಪುಟಸಂಖ್ಯೆ ನಮೂದಿಸಿ ಅನುಕ್ರಮವಾಗಿ ಟ್ಯಾಗ್ ಮಾಡುವುದು ಕಡ್ಡಾಯ.
E. ಪ್ರಬಂಧ ನಮ್ಮ ಕೈ ಸೇರುವವರೆಗೆ ಬ್ರೈಲ್ ಹಾಳೆ ಮತ್ತು ಚುಕ್ಕೆಗಳ ಗುಣಮಟ್ಟ ಕಾಯ್ದುಕೊಳ್ಳಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುವುದು ಸ್ಪರ್ಧಿಗಳ ಸ್ವಯಂ ಜವಬ್ದಾರಿಯಾಗಿರುತ್ತದೆ.
ಬ್ರೈಲ್ ಅಕ್ಷರಗಳ ರಚನೆಗೆ ಅವಕಾಶ ಕಲ್ಪಿಸುವ, ಅಕ್ಷರಗಳು ಬಹಳಕಾಲ ಉಳಿಯುವಂತಹ ಹಾಳೆ (ಬ್ರೈಲ್ ಶೀಟ್) ಗಳನ್ನೆ ಬಳಸಬೇಕು.
F. ಸ್ಪರ್ಧಿಗಳು ಸ್ವತಃ ಬ್ರೈಲ್ ಲಿಪಿಯಲ್ಲಿ ಬರೆಯುವುದು ಕಡ್ಡಾಯ.
ಯಾವುದೇ ಸಂದರ್ಭದಲ್ಲಿ ಪ್ರಬಂಧ ರಚನೆಯ ಸಂಬಂಧ ಅನಪೇಕ್ಷಿತ ವಿಧಾನಗಳನ್ನು ಸ್ಪರ್ಧಿಯು ಅನುಸರಿಸಿರುವ ಬಗ್ಗೆ ಸಂದೇಹ ಬಂದಲ್ಲಿ ನಿರ್ವಾಹಕ ತಂಡವು ಆ ಕುರಿತಂತೆ ಪರಿಶೀಲಿಸಲು ಹಾಗೂ ಯಾವುದೇ ಮಾಹಿತಿ ನೀಡದೆ ತಿರಸ್ಕರಿಸಲು ಮುಕ್ತವಾಗಿರುತ್ತದೆ.
ಸ್ಪರ್ಧಿಗಳು ಮೇಲೆ ವಿವರಿಸಿರುವ ಪ್ರತಿಯೊಂದು ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
ಯಾವುದೆ ಸ್ಪರ್ಧಿ ನಿಯಮವನ್ನು ಉಲ್ಲಂಘಿಸಿದಲ್ಲಿ, ಯಾವುದೆ ನಿರ್ಧಾರವನ್ನು ತೆಗೆದುಕೊಳ್ಳಲು ಅಡ್ಮಿನ್ ತಂಡಕ್ಕೆ ಪೂರ್ಣ ಸ್ವತಂತ್ರವಿರುತ್ತದೆ.
ಅಲ್ಲದೆ, ಅಗತ್ಯವೆನಿಸಿದಲ್ಲಿ, ಸದರಿ ಪ್ರಕಟಣೆಯಲ್ಲಿನ ಯಾವುದೇ ಅಂಶಗಳನ್ನು ಮಾರ್ಪಾಡು ಮಾಡಲು ಅಡ್ಮಿನ್ ತಂಡ ಸಂಪೂರ್ಣ ಮುಕ್ತವಾಗಿರುತ್ತದೆ.
ವಿಶೇಷ ಸೂಚನೆಗಳು:
A. ಮೊದಲನೇಯ ಪುಟದಲ್ಲಿ ತಮ್ಮ ವೈಯಕ್ತಿಕ ವಿವರಗಳಾದ, ಹೆಸರು, ಸ್ಥಳ ಮತ್ತು ದಿನಾಂಕ, ಸ್ಪರ್ಧಿಸುತ್ತಿರುವ ವರ್ಗ, ವೈಯಕ್ತಿಕ ವಿಳಾಸ ಮತ್ತು ದೂರವಾಣಿ ಸಂಖ್ಯೆಗಳನ್ನು ನಮೂದಿಸಬೇಕು.
B. ವಿದ್ಯಾರ್ಥಿ ವರ್ಗದಲ್ಲಿ ಸ್ಪರ್ಧಿಸುವವರು ಶೈಕ್ಷಣಿಕ ಸಂಸ್ಥೆಯಿಂದ ಪಡೆದಿರುವ ಚಾಲ್ತಿಯಲ್ಲಿರುವ ಗುರುತಿನ ಚೀಟಿಯ ಪ್ರತಿಯನ್ನು ಲಗತ್ತಿಸುವುದು ಕಡ್ಡಾಯ.
ಮೇಲೆ ತಿಳಿಸಿರುವ ಎಲ್ಲ ವಿವರಗಳನ್ನು ಕಡ್ಡಾಯವಾಗಿ ನೀಡಬೇಕು ಮತ್ತು ಈ ಪುಟವನ್ನು ಪುಟಗಳ ಮಿತಿಯಿಂದ ಹೊರಗಿಡಲಾಗುವುದು.
C. ಪ್ರಬಂಧಗಳನ್ನು ಕೆಳಗೆ ನೀಡಲಾಗುವ ವಿಳಾಸಗಳಿಗೆ ಅಂಚೆ ಮೂಲಕ ತಲುಪಿಸಲು ಡಿಸಂಬರ್ ಒಂದು ಕೊನೆ ದಿನವಾಗಿರುತ್ತದೆ
ಅಂಚೆ ಮೂಲಕ ಪ್ರಬಂಧಗಳನ್ನು ಕಳುಹಿಸುವಾಗ ಉಚಿತ ಅಂಚೆ ಸೌಲಭ್ಯ ಪಡೆಯಲು (free matter for the blind) ಎಂದು ನಮೂದಿಸಿ ನೋಂದಾವಣೆ ಅಂಚೆ ಮೂಲಕವೇ ಕಳುಹಿಸಬೇಕು.
ಕನ್ನಡ, ಆಂಗ್ಲ ಹಾಗೂ ಹಿಂದಿ ಪ್ರಬಂಧಗಳನ್ನು ಕಳುಹಿಸಲು ಪ್ರತ್ಯೇಕ ವಿಳಾಸಗಳನ್ನು ಸೂಚಿಸಲಾಗಿದೆ.
ಕನ್ನಡ ಪ್ರಬಂಧಗಳನ್ನು ಕಳುಹಿಸಬೇಕಾದ ವಿಳಾಸ:
ಶಿವಕುಮಾರ್ ಆರ್ ಸಿ, ಪ್ರಥಮ ದರ್ಜೆ ಸಹಾಯಕರು, ನಂಜನಗೂಡು ಉಪ ಖಜಾನೆ, ನಂಜನಗೂಡು ತಾಲ್ಲೂಕು, ಮೈಸೂರು 571302.
ಆಂಗ್ಲ ಮತ್ತು ಹಿಂದಿ ಪ್ರಬಂಧಗಳನ್ನು ಕಳುಹಿಸಬೇಕಾದ ವಿಳಾಸ:
ಜಗದೀಶ್ ಆರ್, ನಂಬರ್ 63, ಸಂತೋಷ್ ನಿಲಯ, ಮೊದಲನೆ ಅಡ್ಡ ರಸ್ತೆ, ಸಿಡೇದಹಳ್ಳಿ ಮುಖ್ಯ ರಸ್ತೆ, ಎಸ್.ಆರ್ ಬಡಾವಣೆ, ನಾಗಸಂದ್ರ ಅಂಚೆ, ಬೋನ್ಮಿಲ್ ಬೆಂಗಳೂರು 560073.
ಕನ್ನಡದಲ್ಲಿ ನೆರವು ಪಡೆಯಲು ದೂರವಾಣಿ ಸಂಖ್ಯೆ: 9844401284, 9900946451.
ಆಂಗ್ಲ ಬಾಷೆಯಲ್ಲಿ ನೆರವು ಪಡೆಯಲು:
9739021181, 8073183323.
F. ಎಲ್ಲಾ 3 ಭಾಷ ಮಾಧ್ಯಮಗಳನ್ನು ಒಳಗೊಂಡಂತೆ, ಎರಡು ವಿಷಯಗಳಿಗೆ ತಲಾ ಎರಡು ಬಹುಮಾನಗಳನ್ನು ನಿಗದಿಗೊಳಿಸಲಾಗಿರುತ್ತದೆ.
ಅಲ್ಲದೆ, ಪ್ರತೀ ಭಾಷೆಯಲ್ಲಿನ ಉತ್ತಮ ಪ್ರಬಂಧಕ್ಕೆ ತಲಾ ಒಂದರಂತೆ ವಿಶೇಷ ಬಹುಮಾನವಿರುತ್ತದೆ.
ಮೌಲ್ಯ ಮಾಪಕರ ನಿರ್ಧಾರವೆ ಅಂತಿಮವಾಗಿರುತ್ತದೆ.
ತಮ್ಮೆಲ್ಲರ ಉತ್ಸಾಹಯುತ ಪಾಲ್ಗೊಳ್ಳುವಿಕೆಯ ಆಶಯದೊಂದಿಗೆ;
ಆರ್. ಎಸ್. ಜಿ. ಇ. ನಿರ್ವಾಹಕ ತಂಡ.

No comments:
Post a Comment
ಅನಿಸಿಕೆ ತಿಳಿಸಿ