ಆರ್. ಎಸ್. ಜಿ. ಈ. ಗುಂಪಿನ ವತಿಯಿಂದ "ಸಮುದಾಯದೆಡೆಗೆ ಮಾಹಿತಿ" ಎಂಬ ಸರಣಿ ಕಾರ್ಯಕ್ರಮವನ್ನು ಪ್ರಾರಂಭಿಸುತ್ತಿರುವ ಬಗ್ಗೆ
ಭೂಮಿಗೆ ಬಿದ್ದ ಬೀಜ, ಎದೆಗೆ ಬಿದ್ದ ಅಕ್ಷರ ಇಂದಲ್ಲ ನಾಳೆ ಫಲ ಕೊಡುವುದು.' ಎಂಬ ಸಾಹಿತಿ ದೇವನೂರು ಮಹದೇವ ಅವರ ಸಾಲುಗಳನ್ನು ಸ್ಮರಿಸುತ್ತ!
ರಾಜ್ಯದ ಎಲ್ಲಾ ಅಂಗವಿಕಲ ವ್ಯಕ್ತಿಗಳಿಗೆ ಮತ್ತು ಅಂಗವಿಕಲರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲರಿಗು ಆರ್. ಎಸ್.ಜಿ. ಈ. ನಿರ್ವಾಹಕ ತಂಡದ ನಮಸ್ಕಾರಗಳು.
ಬಂಧುಗಳೆ, ರಾಷ್ಟ್ರದ ಸಮಸ್ಥ ಅಂಗವಿಕಲ ವ್ಯಕ್ತಿಗಳ ಸಮುದಾಯಕ್ಕೆ ಸಂಬಂಧಿಸಿದಂತೆ, ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮದ ಜಾರಿ, ಒಂದು ಹೊಸ ಪರ್ವಕಾಲದ ಆರಂಭವೆಂದೆ ಪರಿಗಣಿಸಲಾಗುತ್ತಿದೆ.
ಭಾರತದ ಮಟ್ಟಿಗೆ ಖಾಯ್ದೆಯ ಜಾರಿ ಒಂದು ಐತಿಹಾಸಿಕ ಮೈಲುಗಲ್ಲು ಎಂದು ಪರಿಗಣಿಸಿದಾಗಿಯು, ಪಯಣಿಸಬೇಕಾದ ದಾರಿ ಬಹು ದೂರವು, ಸಂಕೀರ್ಣವು ಆಗಿರಲಿದೆ ಎಂಬುದು ಕಟು ಸತ್ಯ.
ಸಾಮೂಹಿಕವಾಗಿ ಸಾಗಬೇಕಾದ ಈ ಪಯಣಕ್ಕೆ, ಪ್ರತಿಯೊಬ್ಬರು ವ್ಯಕ್ತಿ ಮಟ್ಟದಲ್ಲಿ ಜಾಗೃತಿಗೊಂಡು ಸನ್ನದ್ಧಗೊಳ್ಳಬೇಕಾದ ತುರ್ತು ಅವಷ್ಯಕತೆ ಇದೆ.
ಪ್ರಿಯ ಬಂಧುಗಳೇ, ಈ ಪಯಣದ ಮೊದಲ ಹೆಜ್ಜೆಯನ್ನು ನಾವು ಇಂದಲ್ಲದೆ ಮತ್ತೆಂದು ಹಾಗೂ ಸ್ವತಃ ಅಂಗವಿಕಲ ವ್ಯಕ್ತಿಗಳಾದ ನಾವಲ್ಲದೆ ಮತ್ತ್ಯಾರು ಇಡಲು ಸಾಧ್ಯ?
ಈ ನಿಟ್ಟಿನಲ್ಲಿ, ನಿರ್ವಾಹಕ ತಂಡವು, "ಸಮುದಾಯದೆಡೆಗೆ ಮಾಹಿತಿ" "Information towards Community." ಎಂಬ ಹೆಸರಿನ ಸರಣಿ ಕಾರ್ಯಕ್ರಮವನ್ನು ಆರಂಭಿಸುತ್ತಿದೆ.
ಅಂಗವಿಕಲ ವ್ಯಕ್ತಿಗಳ ಎದೆಗಳಲ್ಲಿ ಹಕ್ಕುಗಳ ಬೀಜ ಬಿತ್ತನೆ ಈ ಸರಣಿ ಕಾರ್ಯಕ್ರಮದ ಮಹತ್ವದ ಉದ್ದೇಶ.
ಏನಿದು ಸಮುದಾಯದೆಡೆಗೆ ಮಾಹಿತಿ (ಐ.ಟಿ.ಸಿ.) ಕಾರ್ಯಕ್ರಮ?
ಐ.ಟಿ.ಸಿ. ಕಾರ್ಯಕ್ರಮವು ಆನ್ಲೈನ್ ಸರಣಿ ಕಾರ್ಯಕ್ರಮವಾಗಿದ್ದು, ಸುಮಾರು 8 ಸಂಚಿಕೆಗಳಲ್ಲಿ ಮೂಡಿಬರಲಿದ್ದು, ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಕುರಿತಾದ ಸಮಗ್ರ ಮಾಹಿತಿಯನ್ನು ಒದಗಿಸಲಿದೆ.
ವಿಶ್ವ ಅಂಧರ ಸಂಘಟನೆ (World Blind Union) ಮತ್ತು ವಿವಿಧ ಅಂತರರಾಷ್ಟ್ರೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿರುವ ಹಾಗೂ ಸ್ವತಃ ಹೋರಾಟಗಾರರಾದ ಶ್ರಿಯುತರಾದ ಜಾನ್ ವಿಕ್ಟರ್ ಕೊರ್ಡಾರಿವೊ ರವರು ಸರಣಿ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿರುತ್ತಾರೆ.
ಯಾವೆಲ್ಲ ಅಂಶಗಳನ್ನು ಈ ಐ.ಟಿ.ಸಿ. ಸರಣಿ ಒಳಗೊಂಡಿರುತ್ತದೆ?
1. ಪರಿಚಯಾತ್ಮಕ ಅಧಿವೇಶನ:
ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅರ್ಥ ಮತ್ತು ಮಹತ್ವ, ಪ್ರಸಕ್ತ ಭಾರತೀಯ ಸಂದರ್ಭದಲ್ಲಿ ಹಕ್ಕುಗಳ ಕುರಿತಾದ ಅರಿವಿನ ಅನಿವಾರ್ಯತೆ ಇವೆ ಮೊದಲಾದ ಅಂಶಗಳನ್ನು ಈ ಅಧಿವೇಶನವು ಒಳಗೊಂಡಿರಲಿದೆ.
2. ಜಾಗತಿಕ ಮಟ್ಟದಲ್ಲಿ ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಬೆಳವಣಿಗೆ/ಹೋರಾಟಗಳ ಕುರಿತಾದ ಒಂದು ಸಿಂಹಾವಲೋಕನ.
3. ಭಾರತದಲ್ಲಿ ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಬೆಳವಣಿಗೆ, ಒಂದು ಸಂಕ್ಷಿಪ್ತ ಅವಲೋಕನ:
4. U.N.C.R.P.D., ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಕುರಿತಾದ ವಿಶ್ವಸಂಸ್ಥೆಯ ಒಡಂಬಡಿಕೆ ಕುರಿತಂತೆ ವಿಸ್ತೃತ ಮಾಹಿತಿ.
5. ಭಾರತದ ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ, 2016 ಮತ್ತು ತತ್ಸಂಬಂಧಿ ಬೆಳವಣಿಗೆಗಳ ಕುರಿತಂತೆ ಸಮಗ್ರ ವಿಶ್ಲೇಷಣೆ.
6. ಪರ್ವಕಾಲದ ಹೊಸ್ತಿಲಲ್ಲಿ ಜಾಗೃತ ಅಂಗವಿಕಲ ನಾಗರೀಕರ ಹಾಗೂ ಸಂಬಂಧಿಸಿದ ಭಾಗಿದಾರರ ಪಾತ್ರ.
ಯಾರೆಲ್ಲಾ ಪಾಲ್ಗೋಳ್ಳಬಹುದು?
18 ವರ್ಷಗಳ ಮೇಲ್ಪಟ್ಟ ಆಸಕ್ತ ದೃಷ್ಟಿ ಸವಾಲಿಗ ಮತ್ತು ಇತರ ಅಂಗವಿಕಲ ವ್ಯಕ್ತಿಗಳು ಹಾಗೂ ಈ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಗವಿಕಲೇತರ ವ್ಯಕ್ತಿಗಳು, (ಸ್ವಯಂ ಸೇವಕರು)
ಹಾಗೂ ಸಂಬಂಧಿಸಿದ ಸರಕಾರೇತರ ಸಂಸ್ಥೆಗಳ ಪ್ರತಿನಿಧಿಗಳು.
ಸೂಚನೆಗಳು:
1. ಕಾರ್ಯಕ್ರಮವು ಆನ್ಲೈನ್ ಮಾಧ್ಯಮವಾದ Zoom ವೇದಿಕೆಯಲ್ಲಿ ಮೂಡಿಬರಲಿದ್ದು, ನೊಂದಾಯಿತರು Zoom ತಂತ್ರಾಂಶವನ್ನು ಬಳಸುವುದು ಅವಶ್ಯ.
2. ಐ.ಟಿ.ಸಿ. ಸರಣಿ ಕಾರ್ಯಕ್ರಮಕ್ಕೆ ನೊಂದಾಯಿಸಿಕೊಳ್ಳುವವರು ಸಾಂಕೇತಿಕವಾಗಿ ರೂ. 250 ಗಳ "Token of Commitment"
ಅನ್ನು ಪಾವತಿಸಬೇಕಾಗಿರುತ್ತದೆ.
ವಿಷೇಶ ಸೂಚನೆ: ವಿದ್ಯಾರ್ಥಿಗಳು (ದೂರ ಶಿಕ್ಷಣದ ವಿದ್ಯಾರ್ಥಿಗಳನ್ನು ಹೊರತುಪಡಿಸಿ) ರೂ. 150 ಗಳನ್ನು ಮಾತ್ರ ಪಾವತಿಸಬೇಕಿರುತ್ತದೆ.
ನೋಂದಾಯಿತ ಸಂಖ್ಯೆಯನ್ನಾಧರಿಸಿ ನಿಗದಿತ ಮೊತ್ತವು ಪರಿಷ್ಕರಣೆಗೆ ಒಳಪಡಬಹುದಾಗಿರುತ್ತದೆ.
ಸಂಗ್ರಹಣೆಯಾದ ಮೊತ್ತವನ್ನು ಸಂಪನ್ಮೂಲ ವ್ಯಕ್ತಿಗಳ ಸಮುದಾಯಾಧರಿತ ಚಟುವಟಿಕೆಗಳಲ್ಲಿನ ವಿನಿಯೋಗಕ್ಕೆ ನೀಡಲಾಗುವುದು.
ಮುಂದುವರೆದು, ಸರಣಿ ಆರಂಭದ ನಂತರ, ಈ ಮೊದಲು ಪಾವತಿಸಿದ ಶುಲ್ಕವನ್ನು ಹಿಂದಿರುಗಿಸಲಾಗುವುದಿಲ್ಲ.
3. ಐ.ಟಿ.ಸಿ. ಸರಣಿ ಕಾರ್ಯಕ್ರಮಕ್ಕೆ ನೊಂದಾಯಿಸಿಕೊಳ್ಳಲು ಕೊನೆಯ ದಿನಾಂಕ; 25/05/2019ರ ಸಂಜೆ 8 ಗಂಟೆ ಆಗಿರುತ್ತದೆ.
ಮುಂದುವರೆದು, ಒಟ್ಟು 30 ಜನರಿಗೆ ಮಾತ್ರ ಅವಕಾಶವಿದ್ದು, ಮೊದಲು ಪೂರ್ಣವಾಗಿ ನೋಂದಾಯಿಸಿಕೊಂಡ 30 ಹೆಸರುಗಳನ್ನು ಮಾತ್ರ ಪರಿಗಣಿಸಲಾಗುತ್ತದೆ.
ನೋಂದಣಿ ಮತ್ತು ಹಣ ಪಾವತಿ ವಿಧಾನ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ದೂರವಾಣಿ-ವಾಟ್ಸ್ಯಾಪ್ ಸಂಖ್ಯೆಗಳು:
ಶ್ರೀ. ಜಗದೀಶ್: 855, 322, 79, 23.
Call (jagadeesh R)85532-27923
ಶ್ರೀ. ಶಿವಕುಮಾರ್ ಆರ್. ಸಿ: 90, 60, 720, 937
Call (rc shivakumar)90607-20937
4. ಐ.ಟಿ.ಸಿ. "ಸಮುದಾಯದೆಡೆಗೆ ಮಾಹಿತಿ" ಕಾರ್ಯಕ್ರಮವು ಸುಮಾರು 8 ಮಾಸಿಕ ಸಂಚಿಕೆಗಳಲ್ಲಿ, ಗೊತ್ತುಪಡಿಸಲಾಗುವ ವಾರಂತ್ಯದ ದಿನಗಳಲ್ಲಿ ಮೂಡಿಬರಲಿದ್ದು, ಅಗತ್ಯವಿದ್ದಲ್ಲಿ ತಿಂಗಳ ಮಧ್ಯಭಾಗದಲ್ಲಿ ಪೂರಕ ಅಧಿವೇಶನಗಳನ್ನು ಆಯೋಜಿಸಲಾಗುವುದು.
5. ಪೂರ್ಣ ಕಾರ್ಯಕ್ರಮವು ವಿಶೇಷವಾಗಿ ರಚಿಸಲಾದ ಸಂಯೋಜಕ ತಂಡದ ಮೂಲಕ ಸಂಯೋಜಿಸಲ್ಪಡುತ್ತಿದ್ದು,
ಶ್ರೀ. ಜಗದೀಶ್, ಶ್ರೀಮತಿ ಸಂಧ್ಯ ರಾಣಿ, ಶಿವಕುಮಾರ್ ಆರ್. ಸಿ. ಹಾಗೂ ಶ್ರೀ. ಮಂಜು ಕೆ. ಸಂಯೋಜನ ತಂಡದ ಸದಸ್ಯರಾಗಿರುತ್ತಾರೆ.
6. ಕಾರ್ಯಕ್ರಮಕ್ಕೆ ನೋಂದಾಯಿಸಿಕೊಂಡ ನೋಂದಾಯಿತರು ಕಾಲಕಾಲಕ್ಕೆ ಸಂಯೋಜಕ ತಂಡ ನೀಡಲಿರುವ ಸೂಚನೆಗಳನ್ನು ಪಾಲಿಸುವುದು ಅವಶ್ಯವಿರುತ್ತದೆ.
ಉಲ್ಲಂಘನೆಯ ಸಂದರ್ಭದಲ್ಲಿ ನೋಂದಣಿಯನ್ನು ರದ್ದುಗೊಳಿಸುವ ಪೂರ್ಣ ವಿವೇಚನೆಯನ್ನು ಈ ತಂಡ ಕಾದಿರಿಸಿಕೊಂಡಿರುತ್ತದೆ.
7. ಅಗತ್ಯ ಸಂದರ್ಭಗಳಲ್ಲಿ ಈ ಮೇಲಿನ ಪ್ರಕಟಣೆಯ ಯಾವುದೇ ಭಾಗವನ್ನು ಬದಲಿಸಲು ಹೊಸ ಸೂಚನೆಗಳನ್ನು ರೂಪಿಸಲು ನಿರ್ವಾಹಕ ತಂಡ ಮುಕ್ತವಾಗಿರುತ್ತದೆ.
ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಕುರಿತಾದ ಈ ಸಮಗ್ರ ಜಾಗೃತಿ ಸರಣಿ ಕಾರ್ಯಕ್ರಮಕ್ಕೆ ಸಮುದಾಯದ ಬಂಧುಗಳು ನೋಂದಾಯಿಸಿಕೊಳ್ಳುವ ಮೂಲಕ,
ತಮ್ಮ ನಡಿಗೆಯನ್ನು ಖಾತ್ರಿಪಡಿಸುವಿರೆಂಬ ಆಶಯದೊಂದಿಗೆ,
ಆರ್. ಎಸ್. ಜಿ. ಈ. ನಿರ್ವಾಹಕ ತಂಡ.
No comments:
Post a Comment
ಅನಿಸಿಕೆ ತಿಳಿಸಿ