ಸಿ.ಎಸ್. ಸುಧೀರ್
# ನನಗೆ 37 ವರ್ಷ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಸದ್ಯದಲ್ಲೇ ಒಂದು ಲೈಫ್ ಇನ್ಶೂರೆನ್ಸ್ ಪಾಲಿಸಿ ಖರೀದಿಸಲು ನಿರ್ಧರಿಸಿದ್ದೇನೆ. ಪಾಲಿಸಿಗಳ ಬಗ್ಗೆ ವಿಚಾರಿಸಿದಾಗ ಪ್ರೀಮಿಯಂ ಸ್ವಲ್ಪ ಹೆಚ್ಚಿಗೆ ಇದೆ ಅನಿಸಿತು. ನನ್ನ ವಯಸ್ಸಿನ ವ್ಯಕ್ತಿಗೆ ಸಾಮಾನ್ಯವಾಗಿ ಪ್ರೀಮಿಯಂ ಎಷ್ಟಿರಬಹುದು? ನಾನು ವಾರ್ಷಿಕವಾಗಿ 18 ಲಕ್ಷ ರೂ. ಸಂಬಳ ಪಡೆಯುತ್ತಿದ್ದು, ಇಬ್ಬರು ಅವಲಂಬಿತರಿದ್ದಾರೆ. ದಯವಿಟ್ಟು ಸೂಕ್ತ ಮಾಹಿತಿ ನೀಡಿ.
– ಪ್ರಶಾಂತ್, ಬೆಂಗಳೂರು
ಇನ್ಶೂರೆನ್ಸ್ ಪಡೆದುಕೊಳ್ಳುವ ವ್ಯಕ್ತಿಯ ವಯಸ್ಸು ಮತ್ತು ಎಷ್ಟು ಅವಧಿಗೆ ಇನ್ಶೂರೆನ್ಸ್ ಪಡೆಯಲಾಗುತ್ತಿದೆ ಎನ್ನುವುದರ ಮೇಲೆ ಪ್ರೀಮಿಯಂ ನಿಗದಿಯಾಗುತ್ತದೆ. ಸಾಮಾನ್ಯವಾಗಿ ಇನ್ಶೂರೆನ್ಸ್ ಪಡೆದುಕೊಳ್ಳುವ ವ್ಯಕ್ತಿಗೆ ವಯಸ್ಸಾಗಿದ್ದು, ಹೆಚ್ಚು ಅವಧಿಗೆ ಇನ್ಶೂರೆನ್ಸ್ ಪಡೆಯುತ್ತಿದ್ದರೆ ಪ್ರೀಮಿಯಂ ದುಬಾರಿಯಾಗುತ್ತದೆ. ಇದರ ಜತೆಗೆ, ಇನ್ಶೂರೆನ್ಸ್ ಪಡೆದುಕೊಳ್ಳುವ ವ್ಯಕ್ತಿ ಧೂಮಪಾನ ಮಾಡುತ್ತಿದ್ದರೂ ಪ್ರೀಮಿಯಂ ಜಾಸ್ತಿಯಾಗುತ್ತದೆ.
ಇನ್ಶೂರೆನ್ಸ್ ಪ್ರೀಮಿಯಂ ದುಬಾರಿ ಅನಿಸುತ್ತಿದೆ ಎಂದು ಹೇಳುವುದನ್ನು ನೋಡಿದಾಗ ಹೂಡಿಕೆ ಆಧಾರಿತ ಲೈಫ್ ಇನ್ಶೂರೆನ್ಸ್ ಖರೀದಿಗೆ ನೀವು ಚಿಂತನೆ ಮಾಡುತ್ತಿದ್ದೀರಿ ಎನಿಸುತ್ತದೆ. ಸಾಮಾನ್ಯವಾಗಿ ಹೂಡಿಕೆ ಆಧಾರಿತ ಮನಿ ಬ್ಯಾಕ್ ಪಾಲಿಸಿಗಳಲ್ಲಿ ಇನ್ಶೂರೆನ್ಸ್ ಮೊತ್ತದ ಜತೆಗೆ ಹೂಡಿಕೆಯ ಮೊತ್ತವೂ ಸೇರಿರುವುದರಿಂದ ಪ್ರೀಮಿಯಂ ಹೆಚ್ಚಿಗೆ ಇದ್ದೇ ಇರುತ್ತದೆ. ಆದರೆ ಟಮ್ರ್ ಲೈಫ್ ಇನ್ಶೂರೆನ್ಸ್ನಲ್ಲಿ ಹಾಗಾಗುವುದಿಲ್ಲ. ಇಲ್ಲಿ ಇನ್ಶೂರೆನ್ಸ್ ಕಂಪನಿಗಳು ಇನ್ಶೂರೆನ್ಸ್ ಮೊತ್ತಕ್ಕೆ ತಕ್ಕಂತೆ ಪ್ರೀಮಿಯಂ ಅನ್ನು ಮಾತ್ರ ಪಡೆದುಕೊಳ್ಳುತ್ತವೆ. ಉದಾಹರಣೆಗೆ ಹೇಳುವುದಾದರೆ, ನಿಮ್ಮ ವಯಸ್ಸಿಗೆ ಅನುಗುಣವಾಗಿ ಲೆಕ್ಕ ಹಾಕಿ ನೋಡಿದಾಗ, ನಿಮಗೆ 1 ಕೋಟಿ ಮೊತ್ತದ ಟಮ್ರ್ ಲೈಫ್ ಇನ್ಶೂರೆನ್ಸ್ಗೆ
11 ರಿಂದ 12 ಸಾವಿರ ರೂ. ವಾರ್ಷಿಕ ಪ್ರೀಮಿಯಂ ಬರುತ್ತದೆ. ಟಮ್ರ್ ಲೈಫ್ ಇನ್ಶೂರೆನ್ಸ್ನಲ್ಲಿ ಮೆಚ್ಯೂರಿಟಿ ಅನ್ನೋ ಅಂಶ ಇಲ್ಲ. ವ್ಯಕ್ತಿಯ ಮರಣದ ನಂತರದಲ್ಲೂ ಕುಟುಂಬಕ್ಕೆ ಆರ್ಥಿಕ ಭದ್ರತೆ ನೀಡುವ ವಿಮೆಯೇ ಟಮ್ರ್ ಲೈಫ್ ಇನ್ಶೂರೆನ್ಸ್ ಪಾಲಿಸಿ. ಇದು ಪ್ರತಿ ಕುಟುಂಬದ ಪಾಲಿನ ಆಪತ್ಬಾಂಧವ. ಪಾಲಿಸಿದಾರರು ಆಕಸ್ಮಿಕ ಸಾವಿನ ವಿರುದ್ಧ ಪಡೆಯುವ ವಿಮೆ ರಕ್ಷಣೆ ಸೌಲಭ್ಯವನ್ನು ಟಮ್ರ್ ಇನ್ಶೂರೆನ್ಸ್ ಯೋಜನೆಯು ಒಳಗೊಂಡಿರುತ್ತದೆ. ಒಂದು ವೇಳೆ, ಪಾಲಿಸಿ ಅವಧಿಯಲ್ಲಿ ಪಾಲಿಸಿದಾರನು ಮೃತಪಟ್ಟರೆ, ಗರಿಷ್ಠ ಮೊತ್ತದ ವಿಮಾ ಸುರಕ್ಷತೆಯನ್ನು ಇದು ಖಾತರಿಪಡಿಸುತ್ತದೆ. ಟಮ್ರ್ ಇನ್ಶೂರೆನ್ಸ್ ಅತ್ಯಂತ ಅಗ್ಗ ಮತ್ತು ಉತ್ತಮ ಜೀವ ವಿಮೆ. ನಿಮ್ಮ ವಾರ್ಷಿಕ ಆದಾಯವನ್ನು ಪರಿಗಣಿಸಿ ನೋಡಿದಾಗ ನೀವು ಕನಿಷ್ಠ 2 ಕೋಟಿ ರೂ. ಮೊತ್ತದ ಟಮ್ರ್ ಲೈಫ್ ಪಾಲಿಸಿ ಪಡೆದುಕೊಂಡು ಉಳಿದ ಹಣವನ್ನು ಹೆಚ್ಚು ಲಾಭ ತಂದುಕೊಡುವ ಕಡೆ ಹೂಡಿಕೆ ಮಾಡುವುದು ಉತ್ತಮವೆನಿಸುತ್ತದೆ.
# ಮಂಗಳೂರಿನಲ್ಲಿ 57 ಲಕ್ಷ ರೂ. ನೀಡಿ ಒಂದು ಫ್ಲ್ಯಾಟ್ ಖರೀದಿಸಲು ಮುಂದಾಗಿದ್ದೇನೆ. ಫ್ಲ್ಯಾಟ್ ಮೌಲ್ಯ 50 ಲಕ್ಷ ರೂ.ಗಿಂತ ಜಾಸ್ತಿ ಇದ್ದರೆ ಶೇ. 1ರಷ್ಟು ಟಿಡಿಎಸ್ (ಮೂಲದಲ್ಲೇ ತೆರಿಗೆ ಕಡಿತ) ಪಾವತಿಸಬೇಕು ಎಂಬ ನಿಯಮವಿದೆಯೇ? ಟಿಡಿಎಸ್ ಒಟ್ಟು ಖರೀದಿ ಮೌಲ್ಯದ (57 ಲಕ್ಷ ರೂ.) ಭಾಗವೇ ಆಗಿರುವುದೇ ಅಥವಾ ಪ್ರತ್ಯೇಕವೇ? ಸೂಕ್ತ ಮಾಹಿತಿ ನೀಡಿ.
– ರವಿರಾಜ್ ಶೆಟ್ಟಿ, ಮಂಗಳೂರು
ಯಾವುದೇ ಫ್ಲ್ಯಾಟ್ ಖರೀದಿಸುವಾಗ ಅದರ ಮೌಲ್ಯ 50 ಲಕ್ಷ ರೂ.ಗಿಂತ ಹೆಚ್ಚಿದ್ದರೆ ಶೇ. 1ರಷ್ಟು ಟಿಡಿಎಸ್ ಪಾವತಿಸಬೇಕಾಗುತ್ತದೆ. ಟಿಡಿಎಸ್ ಅಂದ್ರೆ ಮೂಲದಲ್ಲೇ ತೆರಿಗೆ ಕಡಿತ ಮಾಡುವುದು ಎಂದರ್ಥ. ನೀವು ತಿಳಿಸಿರುವಂತೆ 57 ಲಕ್ಷ ರೂ. ಮೌಲ್ಯದ ಫ್ಲ್ಯಾಟ್ ಖರೀದಿಸಲು ಮುಂದಾದರೆ 57 ಸಾವಿರ ರೂ.ಗಳನ್ನು ಟಿಡಿಎಸ್ ಆಗಿ ಪಾವತಿಸಬೇಕಾಗುತ್ತದೆ. ನೀವು ಫ್ಲ್ಯಾಟ್ ಮಾಲೀಕರಿಗೆ ನೀಡುವ 57 ಲಕ್ಷ ರೂ.ನಲ್ಲೇ ಟಿಡಿಎಸ್ ನ ಭಾಗವೂ ಒಳಗೊಂಡಿರುತ್ತದೆ. 57 ಲಕ್ಷದಲ್ಲಿ ಟಿಡಿಎಸ್ ಮೊತ್ತವಾದ 57 ಸಾವಿರವನ್ನು ಆದಾಯ ತೆರಿಗೆ ಇಲಾಖೆಗೆ ಪಾವತಿಸಿ ಅದರ ಚಲನ್ ಅನ್ನು ಫ್ಲ್ಯಾಟ್ ಮಾಲೀಕರಿಗೆ ನೀಡಬೇಕಾಗುತ್ತದೆ. ನೀವು ಟಿಡಿಎಸ್ ಪಾವತಿಸಿದ್ದರೆ ಮಾತ್ರ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಆಸ್ತಿ ರಿಜಿಸ್ಟ್ರೇಷನ್ ಮಾಡಲು ಅವಕಾಶ ನೀಡಲಾಗುತ್ತದೆ. ಫ್ಲ್ಯಾಟ್ನ ಖರೀದಿದಾರ, ಮಾರಾಟಗಾರ ವಿಳಾಸ ಹಾಗೂ ಫ್ಲ್ಯಾಟ್ನ ಮೌಲ್ಯವನ್ನು ಫಾರಂ 26ಕ್ಯೂಬಿಯಲ್ಲಿ ನಮೂದಿಸಿ ಟಿಡಿಎಸ್ ಪಾವತಿ ಮಾಡಬಹುದು. ಡಿಡಿಡಿ.ಠಿಜ್ಞಿಠಛ್ಝ.ಟಞ
# ಮನೆ ನವೀಕರಣ (ರೆನೋವೇಷನ್) ಮಾಡಲು ಹಣವಿಲ್ಲ. ಪರ್ಸನಲ್ ಲೋನ್ ಪಡೆದು ಮನೆ ಕಟ್ಟುವ ಆಲೋಚನೆ ಮಾಡಿದ್ದೇನೆ. ಇದು ಸರಿಯಾದ ನಿರ್ಧಾರವೇ?
– ರವಿಕುಮಾರ್, ಕೋಲಾರ
ಮನೆ ನವೀಕರಣಕ್ಕೆ ಅಂತಲೇ ಹೋಮ್ ರೆನೋವೇಷನ್ ಲೋನ್ ಅಂತ ಕೊಡ್ತಾರೆ. ಇದು ಪರ್ಸನಲ್ ಲೋನ್ನ ಒಂದು ಭಾಗವೇ ಆಗಿದೆ. ಈ ಹೊಮ್ ರೆನೋವೇಷನ್ ಅಡಿಯಲ್ಲಿ ಅರ್ಜಿ ಸಲ್ಲಿಸಿ ಸಾಲ ಪಡೆದರೆ ಬಡ್ಡಿದರ ಕಡಿಮೆ ಇರುತ್ತದೆ. ಆದರೆ, ಬರೀ ಪರ್ಸನಲ್ ಲೋನ್ ಅಂತ ಅರ್ಜಿ ಸಲ್ಲಿಸಿ ಸಾಲ ಪಡೆದರೆ ಬಡ್ಡಿದರ ಹೆಚ್ಚಿರುತ್ತದೆ. ಮನೆಯ ಪೇಂಟಿಂಗ್ನಿಂದ ಹಿಡಿದು ಕಟ್ಟಡ ವಿಸ್ತರಣೆ ಮಾಡುವುದಕ್ಕೂ ಈ ಲೋನ್ ಅವಕಾಶ ಕಲ್ಪಿಸುತ್ತದೆ. ಕೆಲ ಬ್ಯಾಂಕ್ಗಳು 20 ಲಕ್ಷದಿಂದ 30 ಲಕ್ಷದವರೆಗೂ ರೆನೋವೇಷನ್ ಲೋನ್ ನೀಡುತ್ತವೆ. ಬಡ್ಡಿದರ ಒಂದೊಂದು ಬ್ಯಾಂಕ್ನಲ್ಲಿ ಒಂದೊಂದು ರೀತಿ ಇದ್ದು, ಶೇ.8.5ರಿಂದ ಶೇ.14ವರೆಗೂ ಇದೆ. ನಿಮ್ಮ ಅಗತ್ಯಗಳು ಮತ್ತು ಬಡ್ಡಿದರವನ್ನು ಆಧರಿಸಿ ಸೂಕ್ತ ಬ್ಯಾಂಕ್ ಆಯ್ಕೆ ಮಾಡಿ ಹೋಮ್ ರೆನೋವೇಷನ್ ಲೋನ್ ಪಡೆಯುವುದು ಉತ್ತಮ ನಿರ್ಧಾರ.
# ಎರಡು ವರ್ಷಗಳ ಹಿಂದೆ ಕಾರ್ ಲೋನ್ ತೆಗೆದುಕೊಂಡಿದ್ದೆ. ಮೂರು ತಿಂಗಳ ಹಿಂದಷ್ಟೇ ಆ ಲೋನ್ ಕ್ಲೋಸ್ ಮಾಡಿದೆ. ನನ್ನ ಕಾರಿಗೆ ಕಾಂಪ್ರಹೆನ್ಸಿವ್ (ಕಂಪ್ಲೀಟ್ ಕವರೇಜ್) ಇನ್ಶೂರೆನ್ಸ್ ಮಾಡಿಸಿದ್ದೆ. ಇತ್ತೀಚೆಗಷ್ಟೇ ಅಗ್ನಿ ಅವಘಡ ದಲ್ಲಿ ನನ್ನ ಕಾರು ಸಂಪೂರ್ಣವಾಗಿ ಸುಟ್ಟು ಭಸ್ಮವಾಯಿತು. ನನಗೆ ಈಗ ವಿಮೆ ಪರಿಹಾರ ಸಿಗುತ್ತದೋ ಇಲ್ಲವೋ ಎಂಬ ಚಿಂತೆಯಾಗಿದೆ. ಸೂಕ್ತ ಸಲಹೆ ನೀಡಿ.
– ಹರೀಶ್, ಕನಕಪುರ
ನೀವು ಕಾಂಪ್ರಹೆನ್ಸಿವ್ ಇನ್ಶೂರೆನ್ಸ್ ಮಾಡಿಸಿದ್ದು, ನಿಮ್ಮ ಕಾರು ನಿಜವಾಗಿಯೂ ಅಗ್ನಿ ಅವಘಡದಲ್ಲಿ ಸುಟ್ಟು ಭಸ್ಮವಾಗಿದ್ದ ಪಕ್ಷದಲ್ಲಿ ಖಂಡಿತವಾಗಿಯೂ ನಿಮಗೆ ಇನ್ಶೂರೆನ್ಸ್ ಕವರೇಜ್ ಸಿಗುತ್ತದೆ. ಕಾರ್ ಇನ್ಶೂರೆನ್ಸ್ನಲ್ಲಿ ಥರ್ಢ್ ಪಾರ್ಟಿ ಇನ್ಶೂರೆನ್ಸ್ ಮತ್ತು ಕಾಂಪ್ರಹೆನ್ಸಿವ್ ಇನ್ಶೂರೆನ್ಸ್ ಎಂಬ ಎರಡು ಮಾದರಿಗಳಿವೆ. ಥರ್ಡ್ ಪಾರ್ಟಿ ಇನ್ಶೂರೆನ್ಸ್ನಲ್ಲಿ ನೀವು ಅಪಘಾತ ಮಾಡಿದ ವಾಹನಕ್ಕಷ್ಟೇ ಇನ್ಶೂರೆನ್ಸ್ ಕವರೇಜ್ ಸಿಗುತ್ತದೆ. ಆದರೆ ಕಾಂಪ್ರಹೆನ್ಸಿವ್ ಇನ್ಶೂರೆನ್ಸ್ನಲ್ಲಿ ನಿಮ್ಮ ವಾಹನಕ್ಕೆ ಮತ್ತು ನೀವು ಅಪಘಾತ ಮಾಡಿದ ವಾಹನಕ್ಕೆ ಇನ್ಶೂರೆನ್ಸ್ ಕವರೇಜ್ ಇರುತ್ತದೆ. ಈ ಕೆಳಗಿನ ಸಂದರ್ಭಗಳಲ್ಲಿ ನಿಮಗೆ ಕಾಂಪ್ರಹೆನ್ಸಿವ್ ಇನ್ಶೂರೆನ್ಸ್ ಕವರೇಜ್ ಸಿಗುತ್ತದೆ.
ಪ್ರಕೃತಿ ವಿಕೋಪಗಳಿಂದ ವಾಹನಕ್ಕೆ ಹಾನಿ
ಕಳ್ಳತನ
ಅಗ್ನಿ ಅವಘಡ
ದಾಂಧಲೆಯಾದಾಗ
ಪ್ರಾಣಿಗಳಿಂದಾದ ಹಾನಿ
ಮರಗಳು ಬಿದ್ದು ಹಾನಿಯಾದಾಗ
ಕಾನೂನು ಸುವ್ಯವಸ್ಥೆ ಸರಿಯಿರದೆ ವಾಹನಕ್ಕೆ ಹಾನಿಯಾದಾಗ
ನೀವೂ ಪ್ರಶ್ನೆ ಕೇಳಬಹುದು
ಮನಿ ಮಾತು ಅಂಕಣದಲ್ಲಿ ಆರ್ಥಿಕ ವಿಚಾರಗಳ ಬಗ್ಗೆ ಮಾಹಿತಿ ವಿಶ್ಲೇಷಣೆಗಳನ್ನು ನೀಡುವುದು ಮಾತ್ರವಲ್ಲ, ಓದುಗರ ಪ್ರಶ್ನೆಗಳಿಗೆ ಉತ್ತರವನ್ನೂ ನೀಡಲಾಗುತ್ತದೆ. ಹೂಡಿಕೆ, ಉಳಿತಾಯ, ತೆರಿಗೆ, ವಿಮೆ, ಷೇರು ಮಾರುಕಟ್ಟೆ – ಹೀಗೆ ವಿತ್ತರಂಗಕ್ಕೆ ಸಂಬಂಧಪಟ್ಟ ಪ್ರಶ್ನೆಗಳನ್ನು ಕಳುಹಿಸಬಹುದು. ನಮ್ಮ ತಜ್ಞರ ತಂಡದವರು ಉತ್ತರ ನೀಡುತ್ತಾರೆ. ಪ್ರಶ್ನೆ ಕಳಿಸುವವರು ಕಡ್ಡಾಯವಾಗಿ ಮೊಬೈಲ್ ಸಂಖ್ಯೆ ನಮೂದಿಸಿ.
ಪ್ರಶ್ನೆ ಕಳಿಸಬೇಕಾದ ಇಮೇಲ್: vittasuggi@gmail.com

No comments:
Post a Comment
ಅನಿಸಿಕೆ ತಿಳಿಸಿ