Monday, September 24, 2018

**RSGE**::: ಚೆಸ್ ಒಲಿಂಪಿಯಾಡ್​ಗೆ ಭಾರತದ ಅಂಧ ಸ್ಪರ್ಧಿ!,

ಭಾರತದ ಅಂಧ ಚೆಸ್ ಆಟಗಾರ್ತಿ ವೈಶಾಲಿ ನರೇಂದ್ರ ಸಲಾವ್​ಕರ್, ವಿಶ್ವ ಚೆಸ್ ಒಲಿಂಪಿಯಾಡ್​ನಲ್ಲಿ ಸ್ಪರ್ಧಿಸಲಿರುವ ಭಾರತದ ಮೊದಲ ದೃಷ್ಟಿಹೀನ ಸ್ಪರ್ಧಿ ಎನಿಸಲಿದ್ದಾರೆ. ಜಾರ್ಜಿಯಾದ ಬಟುಮಿಯಲ್ಲಿ ಭಾನುವಾರ ಆರಂಭವಾಗಲಿರುವ 43ನೇ ಆವೃತ್ತಿಯ ಒಲಿಂಪಿಯಾಡ್​ನಲ್ಲಿ, ಇಂಟರ್​ನ್ಯಾಷನಲ್ ಬ್ರೖೆಲಿ ಚೆಸ್ ಸಂಸ್ಥೆ (ಐಬಿಸಿಎ) ತಂಡದ ಭಾಗವಾಗಿ ವೈಶಾಲಿ ಸ್ಪರ್ಧೆ ಮಾಡಲಿದ್ದಾರೆ. ಫಿಡೆ ಮಾನ್ಯತೆ ಹೊಂದಿರುವ ಐಬಿಸಿಎ, ಒಲಿಂಪಿಯಾಡ್​ನ ಮುಕ್ತ ಹಾಗೂ ಮಹಿಳಾ ವಿಭಾಗಕ್ಕೆ ತಂಡವನ್ನು ಕಳುಹಿಸಿಕೊಟ್ಟಿದೆ. ‘ಮಹಾರಾಷ್ಟ್ರದ 45 ವರ್ಷದ ವೈಶಾಲಿ, ಕಳೆದ 20-25 ವರ್ಷಗಳಿಂದ ಚೆಸ್ ಆಡುತ್ತಿದ್ದು, ಎಂಟು ಬಾರಿ ರಾಷ್ಟ್ರೀಯ ಚಾಂಪಿಯನ್ ಕೂಡ ಆಗಿದ್ದಾರೆ. ಈ ಸಾಧನೆಗೆ ಅವರು ಅರ್ಹರಾಗಿದ್ದಾರೆ’ ಎಂದು ಐಬಿಸಿಎ ಜತೆ, ಅಖಿಲ ಭಾರತ ಅಂಧರ ಚೆಸ್ ಸಂಸ್ಥೆ (ಎಐಸಿಎಫ್​ಬಿ) ಅಧ್ಯಕ್ಷರೂ ಆಗಿರುವ ಜಾಧವ್ ಚಾರುದತ್ತ ಸಂಭ್ರಮ ವ್ಯಕ್ತಪಡಿಸಿದ್ದಾರೆ. ಸ್ಪೇನ್​ನ ಇಬ್ಬರು ಚೆಸ್ ಆಟಗಾರ್ತಿಯರಿಗೆ ಟೂರ್ನಿಯಲ್ಲಿ ಭಾಗವಹಿಸಲು ಸಾಧ್ಯವಾಗದ ಕಾರಣ ವೈಶಾಲಿಗೆ ಈ ಅದೃಷ್ಟ ಒಲಿದಿದೆ. ಒಲಿಂಪಿಯಾಡ್ ಅಧಿಕೃತ ವೆಬ್​ಸೈಟ್ ಪ್ರಕಾರ, ಅಂತಾರಾಷ್ಟ್ರೀಯ ಕಿವುಡರ ಚೆಸ್ ಸಮಿತಿ ತಂಡದ ಭಾಗವಾಹಿ ಭಾರತದ ಮಲಿಕಾ ಹಂಡಾ ಸ್ಪರ್ಧೆ ಮಾಡಲಿದ್ದಾರೆ.

No comments:

Post a Comment

ಅನಿಸಿಕೆ ತಿಳಿಸಿ

ಹೆಚ್ಚು ಓದಿದವು