ನನಗೆ ಸರ್ಕಾರಿ ಸುತ್ತೋಲೆ ಒಂದು ಬೇಕಿದೆ, ಹುಡುಕುವ ಬಗೆ ಹೇಗೆ?
ಕರ್ನಾಟಕ ಸೇವಾ ನಿಯಮಗಳಿಗೆ ಸಂಬಂದಿಸಿದ ಕೆಲವು ಮಾಹಿತಿಗಳು ಬೇಕಾಗಿದೆ, ಯಾರಲ್ಲಿ ಪಡೆದುಕೊಳ್ಳುವುದು?
ಕಾರ್ಯ ಸ್ಥಳದಲ್ಲಿ ಕೆಲವು ಅನಾನುಕೂಲ ಉಂಟಾಗಿದೆ, ಯಾರ ಬಳಿ ಚರ್ಚಿಸುವುದು?
ಹೀಗೆ ಹತ್ತು ಹಲವು ಸವಾಲುಗಳನ್ನು ಎದುರಿಸುತ್ತಿದ್ದ ರಾಜ್ಯ ಸರ್ಕಾರಿ ಅಂಧ ನೌಕರರಿಗೆ ಅವುಗಳನ್ನು ಮೆಟ್ಟಿ ನಿಲ್ಲುವ ಮಾರ್ಗೋಪಾಯವನ್ನು ಕಂಡುಕೊಳ್ಳುವ ಅಗತ್ಯವಿತ್ತು. ಕಾರ್ಯಸ್ಥಳಗಳಲ್ಲಿ ತಾವು ಅನುಭವಿಸುತ್ತಿದ್ದ ಸಮಸ್ಯೆಗಳನ್ನು ಹಂಚಿಕೊಳ್ಳಲು ಮತ್ತು ಅವುಗಳನ್ನು ಪರಿಹರಿಸಿಕೊಳ್ಳಲು ವೇದಿಕೆಯೊಂದನ್ನು ಕಲ್ಪಿಸಿಕೊಳ್ಳುವ ಅವಶ್ಯಕತೆಯಿತ್ತು. ಈ ನಿಟ್ಟಿನಲ್ಲಿ ಧೃಡ ನಿರ್ದಾರ ಕೈಗೊಂಡ ಕೆಲವು ಸಮಾನ ಮನಸ್ಕ ಗೆಳೆಯರು, ವಾಟ್ಸ್ಯಾಪ್ ಗುಂಪೊಂದನ್ನು ರಚಿಸಿಕೊಳ್ಳುವ ಮೂಲಕ ಸ್ವಸಹಾಯ ಪದ್ದತಿಗೆ ನಾಂದಿ ಹಾಡಿದರು. ಹೀಗೆ ರಚಿತವಾದ ವಾಟ್ಸ್ಯಾಪ್ ಗುಂಪು ಜವಬ್ದಾರಿಯುತ ರಾಜ್ಯ ಸರ್ಕಾರಿ ನೌಕರರ ಗುಂಪು.
ಮಾಹಿತಿ ಮೂಲಕ ಸಬಲೀಕರಣ ಎಂಬ ಧ್ಯೇಯ ವಾಕ್ಯದೊಂದಿಗೆ ಪಯಣ ಆರಂಬಿಸಿ ಮಾಹಿತಿಗಳನ್ನು ಪರಸ್ಪರ ಹಂಚಿಕೊಳ್ಳುತ್ತಾ, ಅನುಮಾನಗಳನ್ನು ಪರಿಹರಿಸಿಕೊಂಡು ಚರ್ಚೆಗಳಲ್ಲಿ ನಿರುತರಾಗಿ ಸಾಗುತಿದ್ದ ಹಾದಿಯಲ್ಲಿ ತಿರುವೊಂದು ಬಂದೊದಗಿತು. 29 ಜನವರಿ 2017, ರಾಜ್ಯ ಸರ್ಕಾರವು ತನ್ನ ನೌಕರರ ವೇತನ ಪರಿಷ್ಕರಣೆ ಗಾಗಿ ವೇತನ ಆಯೋಗ ರಚಿಸುವ ಸುಳಿವು ನೀಡುತಿದ್ದಂತೆಯೆ ನಮ್ಮ ಆರ್ ಎಸ್ ಜಿ ಯಲ್ಲಿ ಅಂಧ ನೌಕರರು ವೇತನ ಆಯೋಗದಿಂದ ಪಡೆಯಬಹುದಾದ ಪ್ರಯೋಜನಗಳ ಕುರಿತು ಮೂರುದಿನಗಳ ಅಭಿಪ್ರಾಯ ಅಭಿಯಾನ ಆರಂಬಿಸಿತು. ನಂತರ, ಹತ್ತು ಅಂಶಗಳನ್ನೊಳಗೊಂಡ ಪಟ್ಟಿಯನ್ನು ತಯಾರಿಸಿಕೊಂಡಿತು. ಆದರೆ, ಈ ನಮ್ಮ ಬೇಡಿಕೆಗಳನ್ನು ಆಯೋಗದ ಮುಂದೆ ಮಂಡಿಸುವ ಬಗೆ ಹೇಗೆ? ವಾಟ್ಸ್ಯಾಪ್ ಗಷ್ಟೆ ಸೀಮಿತಗೊಂಡಿರುವ ತಂಡ ಒಂದಕ್ಕೆ ತನ್ನ ಅಭಿಪ್ರಾಯ ಮಂಡಿಸಲು ಆಯೋಗ ಅವಕಾಶ ನೀಡುವುದೇ ಹೀಗೆ ಹಲವಾರು ಪ್ರಶ್ನೆಗಳನ್ನು ಗುಂಪಿನ ಸದಸ್ಯರ ಮುಂದಿಟ್ಟಾಗ, ಅಂಧ ಸರ್ಕಾರಿ ನೌಕರರಿಗಾಗಿ ಪ್ರತ್ಯೇಕ ಸಂಘಟನೆಯನ್ನು ರಚಿಸಿಕೊಳ್ಳಬೇಕಾಗಿದೆ ಎಂಬ ಆಶಯವನ್ನು ಗುಂಪಿನ ನಿರ್ವಾಹಕ ತಂಡದ ಮುಂದಿಟ್ಟರು. ಹೀಗೆ, ರಾಜ್ಯ ಮಟ್ಟದ ಸಂಗಟನೆಯೊಂದನ್ನು ರಚಿಸುವ ಹೊಣೆ ಆರ್ ಎಸ್ ಜಿ ಹೆಗಲೇರಿತು. 12 ಮಾರ್ಚ್ 2017 ರಂದು ಮೈಸೂರಿನಲ್ಲಿ ಸಮಾವೇಶ ಆಯೋಜಿಸಿ, ಅದರಲ್ಲಿ ಪಾಲ್ಗೊಂಡಿದ್ದ ಅಂಧ ನೌಕರರ ಅಬಿಪ್ರಾಯ ಆಧರಿಸಿ, ಸಂಘಟನೆಯ ತಾತ್ಕಾಲಿಕ ಸಮಿತಿ ರಚಿಸಿತು. ಅಲ್ಲದೆ, ಸದಸ್ಯತ್ವ ಅಬಿಯಾನದಲ್ಲಿ ಪ್ರಮುಖ ಪಾತ್ರ ವಹಿಸುವ ಮೂಲಕ ತನ್ನ ಜವಬ್ದಾರಿಯನ್ನು ಪೂರೈಸಿತು. ಮುಂದೆ, 12 ಅಕ್ಟೋಬರ್ 2017 ರಂದು ರಾಜ್ಯ ಸರ್ಕಾರಿ ಅಂಧ ನೌಕರ ಸಂಘಟನೆಯೊಡಗೂಡಿ ಆರನೆ ರಾಜ್ಯ ವೇತನ ಆಯೋಗದೆದುರು ನೌಕರರ ಬೇಡಿಕೆಗಳನ್ನು ಅತ್ಯುತ್ತಮವಾಗಿ ಪ್ರಸ್ತುತಪಡಿಸಿತು.
ನವ ಋತುವಿನ ಸ್ವಾಗತಕ್ಕೆ ವಿಬಿನ್ನ ಮತ್ತು ವಿಶಿಷ್ಟ ಸಂಭ್ರಮಾಚರಣೆ
ಸಭಾಂಗಣ ಗಳಲ್ಲಿ, ತೆರೆದ ಸ್ಥಳಗಳಲ್ಲಿ ಸಾರ್ವಜನಿಕ ವೇದಿಕೆಯನ್ನೊಮ್ಮೆ ಊಹಿಸಿಕೊಳ್ಳಿ? ಕಿಕ್ಕಿರಿದು ಧಾವಿಸುವ ಜನಸಾಗರ, ವೇದಿಕೆಯನ್ನು ಅಲಂಕರಿಸುವ ಆಹ್ವಾನಿತ ರು, ಭಾಷಣ, ಚರ್ಚೆ ಸಾಂಸ್ಕ್ರತಿಕ ಚಟುವಟಿಕೆಗಳು ಇವೆಲ್ಲ ಸಾಮಾನ್ಯವಾಗಿ ನೆರವೇರುತ್ತವೆ. ಇಂತಹುದ್ದೆ ಒಂದು ವೇದಿಕೆ ವಾಟ್ಸ್ಯಾಪ್ ಗುಂಪಿನಲ್ಲಿ ಸೃಷ್ಟಿಸಿದರೆ ಹೌದು, ಇಂತಹದೊಂದು ಹೊಸ ಆಯಾಮಕ್ಕೆ ನಿಮ್ಮ ಜವಬ್ದಾರಿಯುತ ರಾಜ್ಯ ಸರ್ಕಾರಿ ನೌಕರರ ಗುಂಪು ಮುನ್ನುಡಿ ಬರೆಯಿತು. ಬ್ರೇಲ್ ಪಿತಾಮಹ ಲೂಯಿರವರ ಜನ್ಮದಿನವನ್ನು ಅಂದರ ಪಾಲಿನ ಹೊಸಾ ವರ್ಷ ಎಂಬ ಘೋಷಣೆಯೊಂದಿಗೆ ಲೂಯೀ ಬ್ರೇಲ್ರವರ 209 ನೆ ಜಯಂತಿಯನ್ನು ಆಯೋಜಿಸಿ ಸಂಭ್ರಮಿಸಿತು. ಈ ಕಾರ್ಯಕ್ರಮವು ಲೂಯೀರವರ ಜನ್ಮದಿನವಾದ ದಿನಾಂಕ 04/01/2018 ರಂದು ಆರಂಭಗೊಂಡು, ಅವರು ಚಿರನಿದ್ರೆಗೆ ಜಾರಿದ ದಿನವಾದ ದಿನಾಂಕ 06/01/2018 ರಂದು ಸಮಾರೋಪಗೊಂಡಿತು. ಚರ್ಚಾ ಸ್ಪರ್ದೆ, , ಭಾಷಣಗಳೊಡನೆ ಸಾಂಸ್ಕ್ರತಿಕ ಕಾರ್ಯಕ್ರಮಗಳು ಗಮನ ಸೆಳೆದವು. ಅಲ್ಲದೆ, ವೇದಿಕೆಯೊಂದರ ಕ್ರಮಬದ್ದ ಚಟುವಟಿಕೆಗಳು, ಸಮಯಪಾಲನೆ, ಉದ್ಘಾಟನೆ ಸಮಾರೋಪ ಸಮಾರಂಭದ ವರೆಗೆ ನೆರವೇರಿದ್ದು ಈ ಸಮಾರಂಬದ ವೈಶಿಷ್ಟ್ಯ
ಆಪ್ಲೈನ್ ಕಾರ್ಯಗಾರಗಳು:
ಕೇವಲ ವಾಟ್ಸ್ಯಾಪಿಗಷ್ಟೇ ಸೀಮಿತಗೊಳ್ಳದೆ, ತನ್ನ ಮುಖ್ಯ ದ್ಯೇಯ “”ಮಾಹಿತಿ ಮೂಲಕ ಸಬಲೀಕರಣ”” ಇದನ್ನು ಪೂರೈಸಿಕೊಳ್ಳಲು ಆಫ್ಲೈನ್ನಲ್ಲಿಯೂ ಸಹ ಕಾರ್ಯಗಾರಗಳನ್ನು ಏರ್ಪಡಿಸಿಕೊಂಡು ಬಂದಿದೆ. ಎನ್.ೆಪ್.ಬಿ ಮೈಸೂರು ಇವರ ಸಹಬಾಗಿತ್ವದಲ್ಲಿ ಅ್ಯಂಡ್ರೋಯಿಡ್ ಫೋನ್ ಬಳಕೆಯ ಕಾರ್ಯಗಾರ ಮತ್ತು ಐಟೀ ರಿಟರ್ನ್ಸ್ ಕಾರ್ಯಗಾರಗಳು ಇದಕ್ಕೆ ಸಾಕ್ಷಿಯಾಗಿವೆ.
ವಿಶೇಷ ದಿನಗಳಂದು ವಿಶಿಷ್ಟ ಆಚರಣೆಗಳು.
ಕೇವಲ ಮಾಹಿತಿ ವಿನಿಮಯ ಚರ್ಚೆಗಳಿಗಷ್ಟೆ ಸೀಮಿತಗೊಳ್ಳದೆ ಸಾಮಾಜಿಕ ಜಾಲತಾಣದಲ್ಲಿ ಹೊಸ ಆಯಾಮ ಒಂದಂನು ಆರಂಬಿಸುವ ನಿಟ್ಟಿನಲ್ಲಿ ಕೆಲವು ವಿಶೇಷ ದಿನಗಳಾದ, ವಿಶ್ವ ಮಹಿಳಾದಿನ, ಅಂತಹ ದಿನವನ್ನು ವಿಶಿಷ್ಟವಾಗಿ ಆಚರಿಸಿತು, 27 ಜುಲೈ ಅಂದು ಹೆಲೆನ್ ಕಲರ್ ರವರನ್ನು ಸ್ಮರಿಸುವ ಮೂಲಕ ಸ್ಪೂರ್ತಿಯ ಗಣಿಗೆ ನಮನಸಲ್ಲಿಸಿತು.
ಆರ್.ಎಸ್.ಜಿ.ಇ. ಯಾಪ್ ಈಗ ಪ್ಲೇಸ್ಸ್ಟೋರ್ನಲ್ಲಿ ಲಭ್ಯ
ವಾಟ್ಸ್ಯಾಪ್ ಗುಂಪಿನಲ್ಲಿ ಸದಸ್ಯತ್ವವು ನಿರ್ದಿಷ್ಟ ಸಂಖ್ಯೆಯ ಮಿತಿಗೆ ಒಳಪಡುತ್ತದೆ. ಅಲ್ಲದೆ, ಪ್ರತಿಯೊಬ್ಬ ಸದಸ್ಯನು ಹೊಸದಾಗಿ ಸದಸ್ಯತ್ವ ಪಡೆದುಕೊಳ್ಳಲು ಈಗಾಗಲೆ ಸದಸ್ಯತ್ವ ಪಡೆದುಕೊಂಡಿರುವ ಸದಸ್ಯರ ಮೂಲಕ ಅಡ್ಮಿನ್ಗಳಿಗೆ ಮನವಿ ಸಲ್ಲಿಸಬೇಕಾಗುತ್ತದೆ. ಇದನ್ನು ತಪ್ಪಿಸಲು ಆರ್.ಎಸ್.ಜಿ. ಅ್ಯಪ್ ರಚಿಸಿದ್ದು, ಆಸಕ್ತರು ಇದನ್ನು ಪ್ಲೇ ಸ್ಟೋರ್‌ನಿಂದ ಪಡೆದುಕೊಳ್ಳಬಹುದಾಗಿದೆ.
ಗುಡಿಯೊಂದು ನಿರ್ಮಿಸಲು ಹಲವರ ಶ್ರಮ ಬೇಕು, ಅಂತೆಯೆ ವಾಟ್ಸ್ಯಾಪ್ ಗುಂಪೊಂದು ಸಾದನೆಯ ಶಿಖರವೇರಲು ಅದರ ಪ್ರತಿಒಬ್ಬ ಸದಸ್ಯನ ಕೊಡುಗೆ ಬೇಕು. ಆರ್.ಎಸ್.ಜಿಯ ಪ್ರತಿಯೊಬ್ಬ ಸದಸ್ಯರಿಗು ತಮ್ಮ ಭಾಗವಹಿಸುವಿಕೆಗಾಗಿ ಅಡ್ಮಿನ್ ತಂಡವು ವಂದಿಸುತ್ತದೆ. ಎರಡು ವಸಂತಗಳನ್ನು ಪೂರೈಸಿರುವ ನಿಮ್ಮ ಆರ್ ಎಸ್ ಜಿ ಗುಂಪು ರಾಜ್ಯ ಸರ್ಕಾರಿ ನೌಕರರ ಅನುಕೂಲ, ಅಗತ್ಯತೆಗೆ ಅನುಗುಣವಾಗಿ, ಇನ್ನು ಹೆಚ್ಚಿನ ಶ್ರಮ ವಹಿಸಲು ನಿಮ್ಮೆಲ್ಲರ ಬೆಂಬಲ ಅತ್ಯಗತ್ಯ.