ಲ.ರಾಘವೇಂದ್ರ ಸೇವಾ ಕಾನೂನು ತಜ್ಞರು
ಭಾರತ ಸಂವಿಧಾನವು ನಾಗರಿಕ ಹುದ್ದೆ ಎಂಬುದನ್ನು ಔಪಚಾರಿಕವಾಗಿ ಪರಿಭಾಷಿಸಿರುವುದಿಲ್ಲ. ಸಂವಿಧಾನದ ಅನುಚ್ಛೇದ 310ರಲ್ಲಿ ರಕ್ಷಣಾ ಸೇವೆಗಳು ಅಥವಾ ನಾಗರೀಕ ಸೇವೆಗಳು ಎಂಬ ಪದಗಳನ್ನು ಬಳಸಲಾಗಿದೆ. ಈ ಸಂದರ್ಭ ಗಮನದಲ್ಲಿಟ್ಟುಕೊಂಡು, ಯಾವುದು ರಕ್ಷಣಾ ಸೇವೆ ಅಲ್ಲವೊ, ಅದು ನಾಗರೀಕ ಸೇವೆ ಎಂದು ಮನಗಾಣಬೇಕು. ರಕ್ಷಣಾ ಸೇವೆಯಲ್ಲಿರುವವರು ಸಾರ್ವಜನಿಕ ಸಂಪರ್ಕಕ್ಕೆ ಬರುವುದಿಲ್ಲ. ಆದರೆ ನಾಗರೀಕ ಸೇವೆಯಲ್ಲಿರುವವರು ಸಾರ್ವಜನಿಕ ಸಂಪರ್ಕಕ್ಕೆ ಬರುತ್ತಾರೆ. ಆದುದರಿಂದ ನಾಗರೀಕ ಸೇವೆಗಳನ್ನು ಸಾಮಾನ್ಯವಾಗಿ ಸಾರ್ವಜನಿಕ ಸೇವೆಗಳು ಎಂದೂ ಕರೆಯಲಾಗುತ್ತದೆ. ಭಾರತ ಸರ್ಕಾರದ ಅಡಿ, ರಕ್ಷಣಾ ಸೇವೆಗಳು ಮತ್ತು ನಾಗರೀಕ ಸೇವೆಗಳು – ಎರಡೂ ಇರುತ್ತವೆ. ಆದರೆ ರಾಜ್ಯ ಸರ್ಕಾರಗಳಡಿ ರಕ್ಷಣಾ ಸೇವೆಗಳು ಇರುವುದಿಲ್ಲ.
ನಾಗರೀಕ ಮತ್ತು ನಾಗರಿಕ ಸೇವೆಗೂ ಇರುವ ವ್ಯತ್ಯಾಸ: ನಾಗರೀಕ ಸೇವೆಗಳು ಒಂದು ನಿರ್ದಿಷ್ಟ ಉದ್ದೇಶವಿರುವ ಸಮಗ್ರ ಸೇವೆಗಳಾಗಿರುತ್ತವೆ. ನಾಗರೀಕ ಸೇವೆಗಳಿಗೆ ಸಾಮಾನ್ಯವಾಗಿ ನಿರ್ದಿಷ್ಟ ವೃಂದ ಮತ್ತು ನೇಮಕಾತಿ ನಿಯಮಗಳು ಇರುತ್ತವೆ. ಆ ನಿಯಮಗಳಲ್ಲಿ ಆ ಸೇವೆಗಳ ಅತಿ ಉನ್ನತ ಹುದ್ದೆಯಿಂದ ಹಿಡಿದು, ಅತಿ ಕೆಳಹಂತದ ಹುದ್ದೆಯವರೆಗೆ ನೇಮಕಾತಿ ಕಾರ್ಯವಿಧಾನಗಳು, ನೇಮಕಾತಿಗಾಗಿ ಅರ್ಹತೆಗಳು ಮೊದಲಾದವುಗಳಿಗೆ ಸಂಬಂಧಿಸಿದ ಉಪಬಂಧಗಳಿರುತ್ತದೆ. ಅಂತಹ ನಿಯಮಗಳಲ್ಲಿ ನೇಮಕಾತಿ ಎಂದರೆ ನೇರ ನೇಮಕಾತಿ ಮತ್ತು ಪದೋನ್ನತಿಯಿಂದ ನೇಮಕಾತಿ ಸೇರಿರುತ್ತವೆ. ಒಂದು ಸೇವೆಯನ್ನು, ಸೇವೆ ಎಂದು ಯಾವಾಗ ಹೇಳುತ್ತೇವೆಂದರೆ, ಅದರ ಅತ್ಯುನ್ನತ ಹುದ್ದೆ ಮತ್ತು ಅತಿ ಕೆಳಹಂತದ ಹುದ್ದೆ ಒಂದು ಜಾಲದಲ್ಲಿ ಬಂದಾಗ, ಅದನ್ನು ನಾಗರೀಕ ಸೇವೆಗಳು ಎಂದು ಹೇಳುತ್ತೇವೆ. ಇಂತಹ ಜಾಲದಲ್ಲಿ ಯಾರು ನೇಮಕಾತಿ ಪ್ರಾಧಿಕಾರಿ, ಯಾರು ಶಿಸ್ತು ಪ್ರಾಧಿಕಾರಿ, ಮುಂತಾದ ಅಂಶಗಳನ್ನು ಶಾಸನಬದ್ಧ ನಿಯಮಗಳ ಮುಖಾಂತರ ನಿರ್ದಿಷ್ಟಪಡಿಸಲಾಗುತ್ತದೆ. ಉದಾಹರಣೆ: ಕರ್ನಾಟಕ ಸಿವಿಲ್ ಸೇವೆಗಳು(ವರ್ಗೀಕರಣ, ನಿಯಂತ್ರಣ ಮತ್ತು ಅಪೀಲು) ನಿಯಮಗಳು, 1957ರ ನಿಯಮ 5, ನಾಗರಿಕ ಸೇವೆಗಳನ್ನು ಸಮೂಹ ಎ,ಬಿ,ಸಿ ಮತ್ತು ಡಿ ಹುದ್ದೆಗಳಾಗಿ ವರ್ಗೀಕರಿಸಿರುತ್ತದೆ. ನಿಯಮ 6 ರಾಜ್ಯ ನಾಗರೀಕ ಸೇವೆಗಳನ್ನು ಷೆಡ್ಯೂಲ್ M, MM MMM ರಲ್ಲಿರುವ ಹುದ್ದೆಗಳಾಗಿ ವರ್ಗೀಕರಿಸಿರುತ್ತದೆ. ಅಲ್ಲದೆ, ಆಡಳಿತಾತ್ಮಕವಾಗಿ ನಿಯಂತ್ರಣ ಸರಪಳಿ ರೂಪದಲ್ಲಿ ಇಂತಹ ಸೇವೆಗಳಲ್ಲಿ ಅಧಿಕಾರ ಶ್ರೇಣಿ ಅಥವಾ ಹುದ್ದೆಗಳ ಶ್ರೇಣಿ ಜಾರಿಯಲ್ಲಿರುತ್ತವೆ. ಇದಕ್ಕೆ ವಿರುದ್ಧವಾಗಿ ಅಡ್ವಕೇಟ್ ಜನರಲ್ ಹುದ್ದೆ ಪ್ರತ್ಯೇಕ ಹುದ್ದೆ, ಸರ್ಕಾರಿ ವಕೀಲರ ಹುದ್ದೆ ಪ್ರತ್ಯೇಕ ಹುದ್ದೆ, ಆದರೆ ಕರ್ನಾಟಕ ಸಾರ್ವಜನಿಕ ಅಭಿಯೋಗಗಳ ಸೇವೆ ಒಂದು ಸಿವಿಲ್ ಸೇವೆ.
ಸಂವಿಧಾನದ ಅನುಚ್ಛೇಧ 311ರ ಉದ್ದೇಶಕ್ಕೆ ರಾಜ್ಯದಡಿ ಸೇವೆ ನಿರ್ಧಾರ: ಒಬ್ಬ ವ್ಯಕ್ತಿ ರಾಜ್ಯದಡಿ ಸೇವೆ ಸಲ್ಲಿಸುತ್ತಿದ್ದಾನೊ ಅಥವಾ ಇಲ್ಲವೊ ಎಂಬುದನ್ನು ಕೆಳಗಿನ ವಿಧಾನದಿಂದ ತಿಳಿಯಬಹುದು.
# ಪರಸ್ಪರ ಸಂಬಂಧದಲ್ಲಿ ಸೇವೆಯ ಅಂಶ ಇರಬೇಕು. ವ್ಯಕ್ತಿಯನ್ನು, ರಾಜ್ಯ ಯಾವುದಾದರೂ ನಿರ್ದಿಷ್ಟ ಸೇವೆ ಸಲ್ಲಿಸಲು ನೇಮಿಸಿರಬೇಕು. ಆ ಸೇವೆ ಪೂರ್ಣಕಾಲಿಕವಾಗಿಯಾದರೂ ಇರಬಹುದು ಅಥವಾ ಅರೆಕಾಲಿಕವಾದರೂ ಆಗಿರಬಹುದು.
# ವ್ಯಕ್ತಿ ಮತ್ತು ರಾಜ್ಯದ ನಡುವೆ ಯಜಮಾನ-ಸೇವಕನ ಸಂಬಂಧವಿರಬೇಕು. ಇಂತಹ ಸಂಬಂಧ ಇದೆಯೇ ಇಲ್ಲವೇ ಎಂಬುದನ್ನು ಕೆಳಗಿನ ಅಂಶಗಳಿಂದ ತಿಳಿದುಕೊಳ್ಳಬಹುದು.
# ಆಯ್ಕೆ ಮಾಡಲು ಮತ್ತು ನೇಮಿಸಲು ರಾಜ್ಯಕ್ಕೆ ಅಧಿಕಾರ ಇದೆಯೆ?
# ನೇಮಿಸಲ್ಪಟ್ಟ ವ್ಯಕ್ತಿಯನ್ನು ಅಮಾನತುಗೊಳಿಸುವ ಮತ್ತು ಸೇವೆಯಿಂದ ವಜಾ ಮಾಡುವ ಅಧಿಕಾರ ರಾಜ್ಯಕ್ಕೆ ಇದೆಯೆ?
# ನೇಮಿಸಲ್ಪಟ್ಟ ವ್ಯಕ್ತಿಯ ಕಾರ್ಯನಿರ್ವಹಣೆ ಮತ್ತು ಕಾರ್ಯವಿಧಾನ ರಾಜ್ಯದ ನಿಯಂತ್ರಣಕ್ಕೆ ಒಳಪಟ್ಟಿದೆಯೆ?
# ನೇಮಿಸಲ್ಪಟ್ಟ ವ್ಯಕ್ತಿಗೆ ರಾಜ್ಯ ಯಾವುದಾದರೂ ವೇತನ ಅಥವಾ ಸಂಭಾವನೆ ನಗದು ರೂಪದಲ್ಲಾಗಲಿ ಅಥವಾ ಬೇರೆ ಯಾವುದೇ ರೂಪದಲ್ಲಾಗಲಿ ಕೊಡುತ್ತಿದೆಯೆ?
ಮೇಲಿನ ಯಾವುದಾದರೂ ಪ್ರಶ್ನೆಗೆ ಹೌದು ಎಂಬ ಉತ್ತರ ಬಂದರೆ, ನೇಮಿಸಲ್ಪಟ್ಟ ವ್ಯಕ್ತಿ ರಾಜ್ಯದ ಸೇವಕನೆಂದು ನಿರ್ಣಯಿಸಬಹುದು.

No comments:
Post a Comment
ಅನಿಸಿಕೆ ತಿಳಿಸಿ