Tuesday, December 18, 2018

World Braille declaration from UNO

Seventy-third session

Third Committee

Agenda item 74

Promotion and protection of human rights


        Antigua and Barbuda, Australia, Bangladesh, Belarus, Belize, Cabo Verde, Lebanon, Madagascar, Mongolia, Myanmar, Paraguay, Saudi Arabia, Singapore and Venezuela (Bolivarian Republic of): revised draft resolution

        World Braille Day

    The General Assembly,

    Recognizing that multilingualism, as a core value of the Organization, contributes to the achievement of the purposes and principles of the United Nations, as set out in Articles 1 and 2 of the Charter of the United Nations,

    Recognizing also that the United Nations pursues multilingualism as a means of promoting, protecting and preserving diversity of languages and cultures globally, as well as of improving the efficiency, performance and transparency of the Organization,

    Reaffirming its resolutions 53/199 of 15 December 1998 and 61/185 of 20 December 2006 on the proclamation of international years and Economic and Social Council resolution 1980/67 of 25 July 1980 on international years and anniversaries, particularly paragraphs 1 to 10 of the annex thereto on the agreed criteria for the proclamation of international years, and paragraphs 13 and 14, in which it is stated that an international day or year should not be proclaimed before the basic arrangements for its organization and financing have been made,

    Recalling the International Covenant on Civil and Political Rights, and the International Covenant on Economic, Social and Cultural Rights,1

    Recalling also that braille is a means of communication for blind persons, as reflected in article 2 of the Convention on the Rights of Persons with Disabilities, and can be relevant in the contexts of education, freedom of expression and opinion, and access to information and written communication, as well as in the context of social inclusion for blind persons, as reflected in articles 21 and 24 of the Convention,

    Recognizing that braille is a tactile representation of alphabetic and numerical symbols using six dots to represent each letter and number, and even musical, mathematical and scientific symbols,

    Recognizing also that braille is used by blind and partially sighted people to read the same books and periodicals as those printed in a visual font,

    Affirming that the use of braille by individuals who are blind or partially sighted ensures the communication of important information to them and others and represents competency, independence and equality,

    Affirming also that, because the importance of well-developed literacy skills on the part of all individuals is reflected in the value placed on reading and writing in schools and throughout society, instruction in literacy skills can justifiably be considered the cornerstone of education and an important tool in the fight against poverty,

    Recognizing that promoting human rights and fundamental freedoms in the context of access to written language is a critical prerequisite to the full realization of human rights for blind and partially sighted people,

    1.    Decides to proclaim 4 January World Braille Day, to be observed each year beginning in 2019, in order to raise awareness of the importance of braille as a means of communication in the full realization of the human rights for blind and partially sighted people;

    2.    Invites all Member States, relevant organizations of the United Nations system, other international organizations and civil society, including non-governmental organizations and the private sector, to observe World Braille Day in an appropriate manner, in order to raise public awareness of braille as a means of communication;

    3.    Encourages Member States to take measures throughout society to raise awareness of braille as a means of communication;

    4.    Requests the Secretary-General to bring the present resolution to the attention of all Member States and organizations of the United Nations system;

    5.    Stresses that the cost of all activities that may arise from the implementation of the present resolution should be met from voluntary contributions.

Wednesday, December 05, 2018

Date extension for essay competition

ಸಮಸ್ತ ಅಂಧ ಸಮುದಾಯದ ಸ್ನೇಹಿತರುಗಳಿಗೆ ಆರ್.ಎಸ್.ಜಿ ನಿರ್ವಾಹಕ ತಂಡದ ನಮನಗಳು.
ವಿಷಯ: ರಾಷ್ಟ್ರೀಯ ಬ್ರೈಲ್ ಪ್ರಬಂದ ಸ್ಪರ್ದೆಯ ದಿನಾಂಕವನ್ನು 15/12/2018 ರವರೆಗೆ ವಿಸ್ತರಿಸಿರುವ ಬಗ್ಗೆ.
ರಾಷ್ಟ್ರೀಯ ಬ್ರೈಲ್ ಪ್ರಬಂದಕ್ಕೆ ಸಂಬಂದಿಸಿದಂತೆ ಇ ಹಿಂದೆ ಅಡ್ಮಿನ್ ತಂಡ ನೀಡಿದ್ದ ಪ್ರಕಟಣೆಯು ದಿನಾಂಕ 01/11/2018 ರ ನಂತರ ವಿವಿಧ ವಾಟ್ಸ್ಯಾಪ್ ಗುಂಪುಗಳು ಮತ್ತು ಮೇಲಿಂಗ್ ಲಿಸ್ಟ್ಗಳಲ್ಲಿ ಪ್ರಕಟಗೊಂಡಿತ್ತು. ಇದರ ಅನ್ವಯ 30/11/2018 ಪ್ರಬಂದಗಳನ್ನು ಅಂಚೆ ಮೂಲಕ ಸಲ್ಲಿಸಲು ಕೊನೇಯ ದಿನವಾಗಿತ್ತು. ವಿಷಯಗಳ ವಿಸ್ತಾರವಾದ ವ್ಯಾಪ್ತಿ ಮತ್ತು ದೂರವಾಣಿ ಮುಕಾಂತರ ದೇಶದ ವಿವಿಧ ಬಾಗಗಳಿಂದ ಸ್ವೀಕರಿಸಿದ ಮನವಿಗಳನ್ನು ಪರಿಗಣಿಸಿ, ಪ್ರಬಂದಗಳನ್ನು ಸಲ್ಲಿಸುವ ದಿನಾಂಕವನ್ನು 15/12/2018 ರವರೆಗೆ ವಿಸ್ತರಿಸಲು ಅಡ್ಮಿನ್ ತಂಡ ನಿರ್ದರಿಸಿರುತ್ತದೆ. ಸ್ಪರ್ದೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ಹಿಂದಿನ ಪ್ರಕಟಣೆಯನ್ನು ಓದಿರಿ.
ಪ್ರಕಟಣೆಯನ್ನು ಇ ಕೆಳಗಿನ ಲಿಂಕ್ ಗೆ ಬೇಟಿ ನೀಡುವ ಮೂಲಕ ಪಡೆದುಕೊಳ್ಳಬಹುದಾಗಿದೆ.
http://rsgevi.blogspot.com/search/label/%E0%B2%AA%E0%B3%8D%E0%B2%B0%E0%B2%95%E0%B2%9F%E0%B2%A3%E0%B3%86%E0%B2%97%E0%B2%B3%E0%B3%81%21
ಇ ಕೆಳಗೆ ನೀಡಿರುವ ದೂರವಾಣಿ ಸಂಖೆಗಳಿಗೆ ಕರೆಮಾಡಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳ ಬಹುದು.
ಕನ್ನಡದಲ್ಲಿ ಮಾಹಿತಿ ಪಡೆಯಲು: 9844401284, 9900946451.
ಆಂಗ್ಲ ಬಾಶೆಯಲ್ಲಿ ಮಾಹಿತಿ ಪಡೆಯಲು: 9739021181, 8073183323.
ನಿಮ್ಮ ುತ್ಸಾಹ ಬರಿತ ಪಾಲ್ಗೊಳ್ಳುವಿಕೆಯ ನಿರಿಕ್ಶೆಯಲ್ಲಿ.
ಆರ್.ಎಸ್.ಜಿ ನಿರ್ವಾಹಕ ತಂಡ.

Tuesday, November 20, 2018

R s g e dept exam info 2018

https://drive.google.com/file/d/1QvYLAPglUpa2cxSJSAwHQTwNz3xoZgrS/view?usp=drivesdk

Thursday, November 08, 2018

Kcsr Useful information

ನಾಮನಿರ್ದೇಶನದ  ಪ್ರಾಮುಖ್ಯತೆ
------------------------------------
  ಸರ್ಕಾರಿ  ನೌಕರ  GPF , KGID , LIC , FBF , KGIS , DCRG  , Family pension , ಅಲ್ಲದೆ   SB a/c , ಮತ್ತು  FD a/c ಇತ್ಯಾದಿಗಳಿಗೆ ಎಲ್ಲದಕ್ಕೂ  ನಾಮನಿರ್ದೇಶನ( Nominee ) ಕಡ್ಡಾಯವಾಗಿ ಮಾಡಲೇಬೇಕಾಗುತ್ತದೆ .
ಕೇವಲ ನಾಮನಿರ್ದೇಶನ  ಮಾಡಿದರೆ  ಸಾಲದು , ಅದನ್ನು  ಸಂದರ್ಭಾನುಸಾರ  Update  ಮಾಡುತ್ತಾ ಇರಬೇಕು .
  ನಾಮನಿರ್ದೇಶನಗಳನ್ನು  ಒಬ್ಬರ  ಹೆಸರಿನಲ್ಲಿಯೇ  ಮಾಡಬೇಕೆಂದೇನೂ
ಇಲ್ಲ . ಒಬ್ಬನಿಗಿಂತ  ಹೆಚ್ಚಿನ ವ್ಯಕ್ತಿಗಳನ್ನು  ನಾಮನಿರ್ದೇಶಿತರನ್ನಾಗಿ
ಮಾಡಬಹುದು . ಹೆಚ್ಚಿನ  ವ್ಯಕ್ತಿಗಳನ್ನು ಮಾಡುವಾಗ  ತಾನು  ಮೃತಪಟ್ಟಲ್ಲಿ
ಯಾವ ವ್ಯಕ್ತಿಗಳಿಗೆ  ಎಷ್ಟೆಷ್ಟು  ಪಾಲು ಹಣ ಕೊಡಬೇಕು  ಎಂಬುದನ್ನು ಕೂಡ  ದಾಖಲಿಸಬೇಕು. ನೌಕರನ  ಕೇಂದ್ರಸ್ಥಾನ
_____________________
KCSR ನಿಯಮ 513 ರ  ಪ್ರಕಾರ  ಕೇಂದ್ರ ಸ್ಥಾನ   ಎಂದರೆ   ತಾನು  ಕರ್ತವ್ಯ  ನಿರ್ವಹಿಸುವ  ಕಾರ್ಯಸ್ಥಳದಿಂದ  8 ಕಿ.ಮೀ. ದೂರವನ್ನು   ಕೇಂದ್ರ ಸ್ಥಾನ ವೆಂದು   ಕರೆಯುವರು .
8 ಕಿ. ಮೀ . ಮೀರಿ  ಬೆಳೆಸಿದ  ಪ್ರಯಾಣಕ್ಕೆ  ಪ್ರಯಾಣ ಭತ್ಯೆ  ಪಡೆಯಬಹುದು .
ಪ್ರವಾಸದ  ಕಾಲದಲ್ಲಿ  ಕೇಂದ್ರಸ್ಥಾನ ದಿಂದ 8 ಕಿ. ಮೀ .ಒಳಗೆ  ತಂಗುವುದನ್ನು  ಕೇಂದ್ರಸ್ಥಾನದಲ್ಲಿ   ತಂಗುವುದಾಗಿ ಭಾವಿಸಬೇಕು .
ದಿನದ 24 ಗಂಟೆಯೂ  ಸರ್ಕಾರಿ ನೌಕರ *

-------------------------------
K C S R ನಿಯಮಾವಳಿಯ  ನಿಯಮ  26( ಎ ) ಪ್ರಕಾರ  ಸರ್ಕಾರಿ ನೌಕರನು  ದಿನವಿಡಿ  ಅಂದರೆ 24 ಗಂಟೆಯೂ ಆತನಿಗೆ  ಸಂಬಳ ನೀಡುತ್ತಿರುವ  ಸರ್ಕಾರದ  ಕರ್ತವ್ಯಕ್ಕಾಗಿಯೇ  ಇರಬೇಕಾಗುತ್ತದೆ .

ಸರ್ಕಾರ  ರಜಾ ದಿನದಂದು  ಕರ್ತವ್ಯ ನಿರ್ವಹಿಸಲು  ಆದೇಶಿಸಿದರೆ
ಅದನ್ನು  ತಿರಸ್ಕರಿಸಲು  ಬರುವುದಿಲ್ಲ . ಉದಾಹರಣೆಗೆ  ಒಬ್ಬ  ವ್ಯಕ್ತಿಯು ಸಂಜೆ 5-30 ಕ್ಕೆ  ವಯೋ ನಿವೃತ್ತಿ  ಹೊಂದಿ ,  ಅದೇ ದಿನ ರಾತ್ರಿ   11-30ಕ್ಕೆ
ಮೃತಪಟ್ಟ ಎಂದು ಭಾವಿಸೋಣ , K C S R ನಿಯಮಾವಳಿಯ  ನಿಯಮ 8 ( 14 )ರ ಪ್ರಕಾರ  ದಿನ ಎಂದರೆ  ಮಧ್ಯರಾತ್ರಿಯಲ್ಲಿ   ಆರಂಭಗೊಳ್ಳುತ್ತದೆ
ಮತ್ತು  ಕೊನೆಗೊಳ್ಳುತ್ತದೆ .
ಏಕೆಂದರೆ , X  ಎಂಬ ನೌಕರ  ದಿನಾಂಕ 30- 09 - 1993 ರಂದು   ಸಂಜೆ 5-30 ಕ್ಕೆ ವಯೋ ನಿವೃತ್ತಿ ಹೊಂದಿ ರಾತ್ರಿ  10-30 ಕ್ಕೆ ನಿಧನರಾದರು . ಈ
KAT ಯು  ಅರ್ಜಿ ಸಂಖ್ಯೆ  : 3452 ,98 ರ  ದಿನಾಂಕ 03-09-1998 ರಂದು ಈ ವ್ಯಕ್ತಿಯು ಸೇವಾವಧಿಯಲ್ಲಿ     ಮೃತಪಟ್ಟಿರುವುದರಿಂದ
ರಾಜ್ಯ ಸರ್ಕಾರಿ ನೌಕರರ ಸಮೂಹ ವಿಮಾ ಯೋಜನೆ  ನಿಯಮಗಳು
1981 ರ ನಿಯಮ  21(2) ರ ಪ್ರಕಾರ 3 ತಿಂಗಳ ಅವಧಿಯೊಳಗೆ
ಸಮೂಹ ವಿಮಾ ಹಣವನ್ನು ಪಾವತಿಸಲು  ಆದೇಶಿಸಿದೆ . Exemption on professional  Tax
ವೃತ್ತಿ  ತೆರಿಗೆಯಿಂದ  ವಿನಾಯತಿ
~~~~~~~~~~~~~
ಸರ್ಕಾರದ   ಅಧಿಸೂಚನೆ  ಸಂಖ್ಯೆ  ಎಫ್.ಡಿ. 12
ಸಿ.ಪಿ.ಟಿ.94( ¡¡¡ )ದಿನಾಂಕ  30 - 2 - 1994 ರ  ಪ್ರಕಾರ
ಒಂದೇ  ಮಗುವಿದ್ದು  ಸಂತಾನಹರಣ   ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡವರಿಗೆ   ( ದಂಪತಿಗಳ  ಪೈಕಿ  ಒಬ್ಬರಲ್ಲಿ )  ದಿನಾಂಕ  01 - 04 - 1994  ರಿಂದ  ವೃತ್ತಿ  ತೆರಿಗೆ  ವಿನಾಯತಿ ನೀಡಲಾಗಿದೆ .
ಮಹಿಳಾ  ನೌಕರರಿಗೆ  *
------------------------------------
  ಮಹಿಳಾ ನೌಕರರು   ಮದುವೆಯಾಗಿ   ಗಂಡನ ಮನೆಯಲ್ಲಿ 
ವಾಸವಾಗಿದ್ದರೂ  ಸಹ  ಮಹಿಳಾ  ನೌಕರರ  ತಂದೆ - ತಾಯಿ ಈ ನೌಕರರ
ಅವಲಂಬಿತರಾಗಿದ್ದಲ್ಲಿ  ಸರ್ಕಾರದ  ಅಧಿಸೂಚನೆ  ಸಂಖ್ಯೆ ಸಿ.ಆ.ಸು.ಇ.
26/ ಎಸ್ . ಎಂ . ಆರ್ 2011 ದಿನಾಂಕ 27- 03- 2012 ರಂತೆ ಪೋಷಕರ  ಮಾಸಿಕ  ಆದಾಯ 6000/- ರೂ  ಮೀರದಿದ್ದರೆ  ಅಂತವರು ವೈದ್ಯಕೀಯ ಮರುವೆಚ್ಛ  ಪಾವತಿ ಮಾಡಿಕೊಳ್ಳುವ ಅವಕಾಶವಿದೆ.
ಅಸಾಧಾರಣ ರಜೆ ( Extraordinary Leave )
_________________

ಸರ್ಕಾರಿ  ನೌಕರನು ಅವನ  ಹಕ್ಕಿನಲ್ಲಿ  ಯಾವುದೇ  ವಿಧವಾದ  ರಜೆ  ಇಲ್ಲದಿದ್ದಾಗ , ಅಥವಾ  ವಿಶೇಷ ಸನ್ನಿವೇಶಗಳಲ್ಲಿ  KCSR  ನಿಯಮ  117 ( ಎ ) ರ ಪ್ರಕಾರ  ಅಸಾಧಾರಣ  ರಜೆಯನ್ನು  ಪಡೆಯಬಹುದಾಗಿರುತ್ತದೆ .
        ಆದರೆ  ಈ  ಅಸಾಧಾರಣ  ರಜೆಯ  ಅವಧಿಗೆ  ಯಾವುದೇ  ವೇತನ  ಭತ್ಯೆಗಳು  ಲಭ್ಯವಾಗುವುದಿಲ್ಲ .

   ಯಾವುದೇ  ರಜೆ  ಇಲ್ಲದ  ನೌಕರರು  ಕ್ಯಾನ್ಸರ್  ,  ಕುಷ್ಠ  ,  ಕ್ಷಯ ,  ಮಾನಸಿಕ  ಅಸ್ವಸ್ಥತೆ   ಇತ್ಯಾದಿ  ಮಾರಕ  ಖಾಯಿಲೆಗಳಿಗೆ   ತುತ್ತಾದಲ್ಲಿ   ವೈದ್ಯಕೀಯ
ಪ್ರಮಾಣಪತ್ರದ  ಆಧಾರದ  ಮೇಲೆ  18 ತಿಂಗಳ  ಅವಧಿಗೆ  ಅಸಾಧಾರಣ  ರಜೆ  ಮಂಜೂರು ಮಾಡಲು ಅವಕಾಶವಿದೆ .
KCSR  ನಿಯಮ 117 ( ಬಿ )( ¡¡¡ ) ರ  ಪ್ರಕಾರ  ಸತತ ಮೂರು  ವರ್ಷ  ಸೇವೆ  ಸಲ್ಲಿಸಿದ  ನೌಕರರಿಗೆ  ಉನ್ನತ ವ್ಯಾಸಂಗಕ್ಕೆ  2 ವರ್ಷ , ಡಾಕ್ಟರೇಟ್  ಕೋರ್ಸ್ ಗಾಗಿ 3 ವರ್ಷಅಸಾಧಾರಣ  ರಜೆ  ಪಡೆಯಲು ಅವಕಾಶವಿದೆ .ರಿಮೂವಲ್ -  ಡಿಸ್ಮಿಸಲ್ ಗೂ  ಇರುವ  ವ್ಯತ್ಯಾಸ  ? ?
_____________________
ರಿಮೂವಲ್ ( ಕೆಲಸದಿಂದ  ತೆಗೆದುಹಾಕುವುದು).  ಯಾವುದೇ  ಆರ್ಥಿಕ ಸೌಲಭ್ಯವೂ  ದೊರೆಯುವುದಿಲ್ಲ , ಆದರೆ  ಮತ್ತೊಂದು  ಹುದ್ದೆಗೆ
ಆಯ್ಕೆಯಾಗಬಹುದು .
ಆದರೆ  ಡಿಸ್ಮಿಸಲ್ ( ಕೆಲಸದಿಂದ  ವಜಾ ಮಾಡುವುದು ) . ಈ ಆದೇಶವಾದಾಗ  ಆರ್ಥಿಕ  ಸೌಲಭ್ಯವೂ  ಸಿಗುವುದಿಲ್ಲ , ಹಾಗು  ಬೇರೆ ಹುದ್ದೆಗೆ
ನೇಮಕಾತಿಯು  ಸಿಗುವುದಿಲ್ಲ .ಅಮಾನತ್ತು  ( Suspension )
____________________
1)ಒಬ್ಬ ನೌಕರರನ್ನು  ಅಮಾನತ್ತು ಮಾಡುವಾಗ ಮುಂಚಿತವಾಗಿ ನೋಟೀಸು ಕೊಡಬೇಕೆಂದು ನಿಯಮವಿಲ್ಲ .
2) ಅಮಾನತ್ತು ಅವಧಿಯಲ್ಲಿ ಕಡ್ಡಾಯವಾಗಿ ಶೇಕಡಾ 50% ಜೀವನಾಧಾರ ಭತ್ಯೆ  ಕೊಡಬೇಕು .
3) ಅಮಾನತ್ತನ್ನು  ಗರಿಷ್ಠ 6 ತಿಂಗಳೊಳಗಾಗಿ  ಅಂತಿಮ  ಆದೇಶ ಹೊರಡಿಸಬೇಕು . ಮುಂದುವರಿಸಬೇಕಾದರೆ ಸರ್ಕಾರಕ್ಕೆ  ವರದಿ ಸಲ್ಲಿಸಬೇಕು .
4) ಯಾವುದಾದರೂ  ಕಾರಣದಿಂದ 48 ಗಂಟೆ ಮೀರಿದ  ಅವಧಿಯವರಿಗೆ ಅಭಿರಕ್ಷೆಯಲ್ಲಿ  ( ಪೋಲಿಸ್ ಕಷ್ಟಡಿ ) ತಡೆಹಿಡಿದಿದ್ದರೆ  ಸ್ವಯಂಚಾಲಿತವಾಗಿ  ಅಮಾನತ್ತು ಜಾರಿಯಾಗುತ್ತದೆ .
5)  ವಿಚಾರಣೆ  ಬಾಕಿ ಇರುವಾಗ ನೌಕರರನನ್ನು  ಅಮಾನತ್ತುಗೊಳಿಸಬಹುದು. ಆದರೆ,  ಅಮಾನತ್ತು ದಂಡನೆ  ಅಲ್ಲ.
6) ತಿಂಗಳಿಗೂ  ಮೀರಿದ ಅವಧಿಗೆ  ಅಮಾನತ್ತು ಮುಂದುವರಿದ ಪ್ರಕರಣಕ್ಕೆ ಶೇಕಡಾ 75% ,  ಹಾಗು ವರ್ಷಕ್ಕೂ  ಮೀರಿದ ಅವಧಿಗೆ  ಶೇ100% ರಷ್ಟು ಸಂಬಳ ಪಾವತಿಸಬೇಕು .
7) ಅಮಾನತ್ತಾದ  ನೌಕರ  ವಿಚಾರಣೆಯಿಂದ  ಆರೋಪ ಮುಕ್ತನಾದಲ್ಲಿ  ಪೂರ್ಣ  ವೇತನ  ನೀಡಬೇಕು .
8 ) ಅಮಾನತ್ತು ನಂತರ ಶಿಸ್ತು ನಡವಳಿಕೆ  ನಡೆಸದಿದ್ದಲ್ಲಿ  ಅದು  ನ್ಯಾಯಸಮ್ಮತವಲ್ಲ .
9 ) ಲಘು ದಂಡನೆ  ವಿಧಿಸುವುದೊಂದಿಗೆ  ಅಮಾನತ್ತು ಅವಧಿ ಕೊನೆಗೊಂಡಾಗ ಈ ಅವಧಿಗೆ  ಪೂರ್ಣ ವೇತನ  ಮತ್ತು ಭತ್ಯೆಗಳನ್ನು ಕೊಡಬೇಕು .
10 ) ' ಬಿ ' ಗುಂಪಿನ  ಅಧಿಕಾರಿಗಳನ್ನು  ಅಮಾನತ್ತುಗೊಳಿಸುವ  ಅಧಿಕಾರ - ಜಿಲ್ಲಾಧಿಕಾರಿ  ಮತ್ತು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿಗೆ  ಅಧಿಕಾರ ಇರುವುದಿಲ್ಲ .

Saturday, November 03, 2018

**RSGE**



Wondering what it means?
RSGE is a whatsup self help group created for the benefit of state government employees of Karnataka. We are intending to bring state government employees on a solitary platform that  to discuss matter pertaining to work place, various challenges, government policies, and so on.
Sharing circulars, discussion about kannada O.C.R, response to queries are some of the achievements of RSGE.
Here are the benefits one can get by holding membership at RSGE
1. gets an opportunity to share challenges faced by him and find solution through detailed discussion.
2. enable it’s members to share views and knowledge with the other members.
3. find answers to your doubts, find answers to your questions relating to Karnataka civil services rules, leave benefits, increments’ allowances ETC.
4. can hold a debate and discussion that promotes the welfare and growth of a government servant, enrich the knowledge that can guide to perform well in the service.
5. will get an updates and news related to state government employees.
Any employee holding permanent post under government of Karnataka can become the member of RSGE.
Now, we step forward to bring info through this app
It’s like (admins) are: prashanth MN, jagadeesh S, shivaji mane, shrinivasamoorthi BG, shivakumar RC, keshavamoorthi and manju k.

**special anounsement from RSGE admin team**

Greetings to visually impaired community friends from admin team of R.S.G.E (Responsible state government employees of Karnataka with vision impairment) WhatsApp group.
Sub: hosting national level essay brail competition for upcoming Louie Brail day
To know more about us, kindly download RSGE app from place store.
A thought that might be considered an inimitable and new provoked us to step into new direction which could mark the beginning of new era for visually impaired community. As we all know, New Year mark the beginning of new thing, indicator of auspicious day and start of various new period. For analytical and historical reasons if we trace back the definition of New Year, Gregorian calendar propounds first January at the global level; yugadi at regional level as the start of New Year. Brail was the invention which laid a foundation to construct new avenue to drive visually impaired community from the dark of helpless to the light of hopes. Brail proved to be a bass for all other Consequent developments to promote the welfare of our community. Hence, R.S.G.E decided to celebrate international Brail day as the new year of visually impaired community. Various programs were held in our WhatsApp group from fourth January 2018 (birth day of Louie Brail) to 6 January 2018 (a day when Louie Brail renounced the world). Admin team would like to thank for those of you gave us an overwhelming response for our effort. For the upcoming New Year, we wish to include our visually impaired friends staying at different parts of our country, who are not our group members. In order to fulfil the above stated aspiration we decided to host national level Brail Essay competition.
About the competition:
This will be a national level competition and participants are given the option of choosing any one out of three languages, Kannada, Hindi and English.
2. Participants will be divided in to two groups.
a. First group will comprise of students and those who are studying at different levels of various academic disciplines after high school, students pursuing P.U.C, diploma, I.T.I, and those who are undergoing graduation, post-graduation of any age are permitted to take part.
b. Second category is a general category. Any visually impaired person who does not belong to first category will be allowed to take part.
There is going to be specific subjects to each category, and participants are needed to send essays only on those subjects assigned to their respective category.
c. Once a participant felt, that his or her essay is ready, it needs to be sent to us through post.
Subjects for essay.
For category 1/student category:
Problems faced by visually impaired students at various academic levels and corrective measures, role of students themselves and government to resolve those problems.
For category 2:
In the field of employment, along with skill development, several other problems faced by visually impaired employees and job aspirants. What are the corrective measures? And Role of employees, job aspirants themselves, government and non-governmental organizations to resolve those problems.
A good essay must focus on following aspects.
An essay must be well organized, clear, directly relates to the subject.
A participant who is writing an essay need to frame clear sentences and must not use those terms that gives indefinite and duel meaning.
Rules of the competition.
A participant can write essay in any one language Kannada, Hindi, or in English and on only one subject.
Use of objectionable/abusing language, unhealthy criticism, insulting, disgracing of any person, community, and association/organization is strictly prohibited.
Excluding home page, total page limit of 12 pages is applicable to both the category. In case of using wooden slate and a guide total number of brail sheets must not exceed 8.
On the top of the right-hand side of each page should include page number, and pages must neatly tagged in a right order.
It is the responsibility of a participant to take all necessary measures to preserve the quality of brail sheets and dots till it reach us.
Only those paper sheets which are good enough to facilitate to sustain and preserve brail dots are to be used.
It is mandatory to write essay’s only in Brail. At any stage, participant cannot adopt unacceptable form of writing with regard to essay. If found any such suspects admin team has full powers to verify and reject them without any further notice.
A participant needs to follow each and every rule mentioned above. If any participant fails to do so, admin team is free to take any decision. If found necessary, admin team has all rights to modify this announcement/notice.
Special instructions.
Use the first page to fill following personal information: name, place, and date, category of participation, personal address and phone number.
Those participants taking part in first/students category need to attach valid identification card obtained from their educational organizations/institutions.
It is mandatory to provide all above information and this page is not accountable for page limit.
First disember is the last date to send the essays through post to the addresses which will be mentioned below.
It is mandatory to send through register post by stating “free matter for the blind” to avail free postal service.
Separate addresses are notified to send English, Hindi and Kannada essays.
Address to send Kannada documents:
Shivakumar RC, first division assistant, nanjangud sub-treasury nanjangud taluk, Mysore 571302.
Address to send English and Hindi documents:
Jagadeesh R.
No.63, Santhosh nilaya, first cross, sidedahalli mainroad, S.R layout, nagasandra post, bonemill, Bangalore 560073.
For any assistance in Kannada over phone: 9844401284, 9900946451.
For any assistance in English over phone: 9739021181, 8073183323.
Including all three languages, there will be two prices for each category.
There will be one special price for each language.
Looking forward for your enthusiastic participation.
Thanks in advance.
R.S.G.e admin team.

Friday, November 02, 2018

ಆರ್. ಎಸ್. ಜಿ. ಇ. ವಿಶೇಷ ಪ್ರಕಟಣೆ!

ವಿಷಯ: 2019 ನೇ ಸಾಲಿನ ಬ್ರೈಲ್ ಹೊಸ ವರ್ಷದ ಆಚರಣೆಯ ಪ್ರಯುಕ್ತ ಬ್ರೈಲ್ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸುತ್ತಿರುವ ಕುರಿತು:
ದಿನಾಂಕ 01-11-2018.
ಪ್ರಥಮವಾಗಿ, ಸಮಸ್ತ  ದೃಷ್ಟಿಸವಾಲಿಗ/ಅಂಧ ಸಮುದಾಯದ ಸ್ನೇಹಿತರಿಗೆ ಆರ್.ಎಸ್.ಜಿ ಇ ವಾಟ್ಸ್ಯಾ ಪ್ ಗುಂಪಿನ ಅಡ್ಮಿನ್ ತಂಡದ ವತಿಯಿಂದ ಕರ್ನಾಟಕ ರಾಜ್ಯೋತ್ಸವದ ಆರ್ಧಿಕ ಶುಭಾಶಯಗಳು ಹಾಗೂ ಅನಂತ ನಮನಗಳು.
ನಮ್ಮ ಬಗ್ಗೆ ಹೆಚ್ಚಿನ ಮಾಹಿತಿಗೆ, ಪ್ಲೇ ಸ್ಟೋರ್ ನಿಂದ "RSGE" ಆಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿರಿ.
ಸ್ನೇಹಿತರೆ, ದೃಷ್ಟಿ ಸವಾಲಿಗ/ಅಂಧ ಸಮುದಾಯದ ಪಾಲಿಗೆ ನವ ಷಕೆಯೊಂದರ ಆರಂಭಕ್ಕೆ ನಾಂದಿ ಆಗಬಹುದೆಂಬ ಭರವಸೆ ಮೂಡಿಸಿದ ಹೊಸ ಮತ್ತು ವಿಭಿನ್ನ ಆಲೋಚನೆಯೊಂದು ನಮ್ಮನ್ನು ಹೊಸ ದಿಕ್ಕಿನೆಡೆಗೆ ಹೆಜ್ಜೆ ಹಾಕಲು ಪ್ರೇರೇಪಿಸಿತು.
ನಮ್ಮೆಲ್ಲರಿಗೆ ತಿಳಿದಿರುವಂತೆ, ಹೊಸ ವರ್ಷ ಎಂದರೆ ಹೊಸ ಆರಂಭ, ಶುಭಸಂಕೇತ ಹಾಗು ವಿವಿಧ ಷಖೆಗಳ ಆರಂಭ. ತಾತ್ವಿಕ ಮತ್ತು ಐತಿಹಾಸಿಕ ದೃಷ್ಟಿಯಲ್ಲಿ ಹೊಸ ವರ್ಷದ ಪರಿಭಾಷೆಯನ್ನು ಅವಲೋಕಿಸಿದರೆ, ಗ್ರೆಗೋರಿಯನ್ ಕ್ಯಾಲೆಂಡರ್ ಅನ್ವಯ ಜಾಗತಿಕ ಮಟ್ಟದಲ್ಲಿ ಜನವರಿ ತಿಂಗಳ ಮೊದಲನೇಯ ದಿನವನ್ನು, ಪ್ರಾದೇಶಿಕ ಮಟ್ಟದಲ್ಲಿ ಯುಗಾದಿಯನ್ನು ಹೊಸ ವರ್ಷ ವನ್ನಾಗಿ ಆಚರಿಸಲಾಗುತ್ತಿದೆ.
ಬ್ರೈಲ್ ಆವಿಷ್ಕಾರ ಅಂಧ ಸಮುದಾಯಕ್ಕೆ ಮಹತ್ವದ ಕೊಡುಗೆ ಎಂದು ನಿರೂಪಿಸಿದ್ದು, ಇದು ಅಂಧ ಸಮುದಾಯವನ್ನು ಅಸಾಯಕತೆಯ ಕತ್ತಲಿನಿಂದ ಭರವಸೆಯ ಬೆಳಕಿನೆಡೆಗೆ ಕೊಂಡೊಯ್ಯಲು ಹೊಸ ಹಾದಿಯನ್ನು ನಿರ್ಮಿಸಿತು. ನಮ್ಮ ಸಮುದಾಯದ ಹಿತ ದೃಷ್ಟಿಯಿಂದ ಆದ ಎಲ್ಲಾ ಬೆಳವಣಿಗೆಗೆ ಬ್ರೈಲ್ ಬುನಾದಿ ಎಂದರೆ ತಪ್ಪಾಗಲಾರದು. ಅದನ್ನು ಪರಿಗಣೆಗೆ ತೆಗೆದುಕೊಂಡು, ಆರ್.ಎಸ್.ಜಿ.ಇ. ತಂಡವು ಅಂತರ್ ರಾಷ್ಟ್ರೀಯ ಬ್ರೈಲ್ ದಿನವನ್ನು ದೃಷ್ಟಿಸವಾಲಿಗ/ಅಂಧ ಸಮುದಾಯದ ಹೊಸ ವರ್ಷ ವನ್ನಾಗಿ ಆಚರಿಸಿತು. ಆಚರಣೆಯ ಪ್ರಯುಕ್ತ,, ಮೂರು ದಿನಗಳ ಕಾಲ ವೈವಿಧ್ಯಮಯ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಜನವರಿ 4 2018 (ಬ್ರೈಲ್ ಪಿತಾಮಹ ಲೂಯಿ ಬ್ರೈಲ್ ರವರ ಜನ್ಮದಿನ) ರಿಂದ 6 ಜನವರಿ 2018 (ಲೂಯಿ ಬ್ರೈಲ್ ರವರು ಇಹಲೋಕ ತೆಜಿಸಿದ ದಿನ) ದ ವರೆಗೆ ನೆರವೇರಿತು.
ಇದಕ್ಕೆ ಅಭೂತಪೂರ್ವ ಸ್ಪಂದನೆ ನೀಡಿದ ಸಮಸ್ತ ದೃಷ್ಟಿ ಸವಾಲಿಗ ಸಮುದಾಯಕ್ಕೆ ಈ ಮೂಲಕ ಅನಂತ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇವೆ.
ಮುಂದುವರೆದು, ಮುಂಬರಲಿರುವ ಹೊಸ ವರ್ಷಕ್ಕೆ ದೇಶದ ವಿವಿಧ ಭಾಗಗಳಲ್ಲಿ ನೆಲೆಸಿರುವ, ನಮ್ಮ ಗುಂಪಿನ ಸದಸ್ಯರಲ್ಲದ ದೃಷ್ಟಿಸವಾಲುಳ್ಳ/ಅಂಧ ಸ್ನೇಹಿತರನ್ನು ಸಹ ಆಚರಣೆಯಲ್ಲಿ ತೊಡಗಿಸಿಕೊಳ್ಳಲು ಅಡ್ಮಿನ್ ತಂಡವು ಆಶಿಸುತ್ತದೆ. ಈ ಉದ್ದೇಶಕ್ಕೆ ಪೂರಕವಾಗಿ, ರಾಷ್ಟ್ರೀಯ ಮಟ್ಟದ ಬ್ರೈಲ್ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲು ನಿರ್ಣಯಿಸಲಾಗಿದೆ.
ಸ್ಪರ್ಧೆಯ ಕುರಿತಾದ ವಿವರ:
1. ಸ್ಪರ್ಧೆಯು ರಾಷ್ಟ್ರೀಯ ಮಟ್ಟದ್ದಾಗಿದ್ದು, ಕನ್ನಡ, English ಹಾಗೂ ಹಿಂದಿ ಭಾಷೆಗಳಲ್ಲಿ  ಯಾವುದಾದರು ಒಂದು ಭಾಷ ಮಾಧ್ಯಮದಲ್ಲಿ ಮಾತ್ರ ಓರ್ವ ಸ್ಪರ್ಧಿಯು ಭಾಗವಹಿಸಲು ಅವಕಾಶವಿರುತ್ತದೆ.
2. ಸ್ಪರ್ಧಿಗಳನ್ನು ಎರಡು ಗುಂಪುಗಳಾಗಿ ವರ್ಗೀಕರಿಸಲಾಗಿದೆ.
A. ಮೊದಲ ವರ್ಗವು ವಿದ್ಯಾರ್ಥಿಗಳ ವರ್ಗವಾಗಿದ್ದು, 10 ನೇ ತರಗತಿಯ ನಂತರದ ವಿವಿಧ ಶೈಕ್ಷಣಿಕ ಹಂತಗಳಾದ ಪಿ.ಯೂ.ಸಿ, ಡಿಪ್ಲೊಮ, ಐಟಿಐ ವಿದ್ಯಾರ್ಥಿಗಳು, ಪದವಿ ಮತ್ತು ಸ್ನಾತಕೋತರ ಪದವಿಗಳಲ್ಲಿ ಪ್ರಸಕ್ತ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಮಾತ್ರ ವಯೋಮಿತಿಗೆ ಒಳಪಡದೆ ಸ್ಪರ್ಧಿಸಲು ಅರ್ಹರಾಗಿರುತ್ತಾರೆ.
B.ಎರಡನೆ ವರ್ಗ ಸಾಮಾನ್ಯವರ್ಗವಾಗಿದ್ದು, ಮೊದಲನೆ ವರ್ಗಕ್ಕೆ ಸೇರದ, ಯಾವುದೆ ದೃಷ್ಟಿಸವಾಲಿಗ/ಅಂಧವ್ಯಕ್ತಿಗಳು ಸ್ಪರ್ಧಿಸಲು ಅವಕಾಶವಿರುತ್ತದೆ.
ಪ್ರತೀ ವರ್ಗದ ಸ್ಪರ್ಧಿಗಳಿಗೆ ಪ್ರತ್ಯೇಕ ವಿಷಯ ನೀಡಲಾಗಿದ್ದು, ತಾವು ಒಳಪಡುವ ವರ್ಗಕ್ಕೆ ನಿಗದಿಗೊಳಿಸಲಾದ
ವಿಷಯಕ್ಕೆ ಸಂಬಂಧಿಸಿದಂತೆ ಮಾತ್ರ ಪ್ರಬಂಧವನ್ನು ಕಳುಹಿಸತಕ್ಕದ್ದು.
ಪ್ರಬಂಧದ ವಿಷಯಗಳು:
1. ಮೊದಲ/ವಿದ್ಯಾರ್ಥಿ ವರ್ಗಕ್ಕೆ, ದೃಷ್ಟಿಸವಾಲುಳ್ಳ ವಿದ್ಯಾರ್ಥಿಗಳು  ಪ್ರಸಕ್ತ ಶೈಕ್ಷಣಿಕ ವ್ಯವಸ್ಥೆಯಲ್ಲಿ ಎದುರಿಸುತ್ತಿರುವ ಸಮಸ್ಯೆಗಳು ಮತ್ತು
ಅವುಗಳ ನಿವಾರಣೆಯಲ್ಲಿ ಸ್ವತಃ ವಿದ್ಯಾರ್ಥಿಗಳ, ಮತ್ತು ಸರಕಾರದ ಪಾತ್ರ.
2. ಎರಡನೆ ವರ್ಗ/ಸಾಮಾನ್ಯ ವರ್ಗಕ್ಕೆ ನೀಡಲಾದ ವಿಷಯ:
ಔದ್ಯೋಗಿಕ ವಲಯದಲ್ಲಿ ಕೌಶಲ್ಯಾಭಿವೃದ್ಧಿಯು  ಸೇರಿದಂತೆ ಉದ್ಯೋಗಿ ಮತ್ತು ಉದ್ಯೋಗ ಆಕಾಂಶಿಗಳು ಪ್ರಸಕ್ತ ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಅವುಗಳ ನಿವಾರಣೆಯಲ್ಲಿ ಸ್ವತಃ ಉದ್ಯೋಗಿಗಳು-ಉದ್ಯೋಗಾಕಾಂಶಿಗಳು, ಹಾಗು ಸರಕಾರ ಮತ್ತು ಸರಕಾರೇತರ ಸಂಸ್ಥೆಗಳ ಪಾತ್ರ.
3. ಉತ್ತಮ ಪ್ರಭಂದವೊಂದು ಹೊಂದಿರಬೇಕಾದ ಅವಶ್ಯಯ ಅಂಶಗಳು:
A. ಪ್ರಬಂಧ ರಚನೆಯು ವ್ಯವಸ್ಥಿತವಾದ, ಸುಲಲಿತವು, ಸ್ಪಷ್ಟವು ಹಾಗೂ ನೇರವಾಗಿ ವಿಷಯವನ್ನು ಕುರಿತಂತೆ ಇರುವುದು ಅತ್ಯಗತ್ಯ.
B. ವ್ಯಾಕರಣ ಶುದ್ದತೆ, ಉತ್ತಮ ವಾಕ್ಯ ರಚನೆ, ಕಚಿತತೆ, ಹಾಗೂ ಒಟ್ಟಾರೆ ಬರವಣಿಗೆಯು ಸ್ಪಷ್ಟವಾಗಿ ಇರುವುದು ಅವಷ್ಯ.
4. ನಿಯಮಗಳು:
A. ಸ್ಪರ್ಧಿಯು ಕನ್ನಡ ಅಥವ ಆಂಗ್ಲ ಅಥವ ಹಿಂದಿ ಯಾವುದಾದರು ಒಂದು ಭಾಷೆಯಲ್ಲಿ ಹಾಗೂ ಒಂದು ವಿಷಯವನ್ನು ಕುರಿತಂತೆ ಮಾತ್ರ ಪ್ರಬಂಧವನ್ನು ಬರೆಯುವುದು.
B. ಆಕ್ಷೇಪಿತ/ಅವಹೇಳನಕಾರಿ  ಭಾಷೆಯ ಬಳಕೆ, ಅನಾರೋಗ್ಯಕರವಾದ ಟೀಕೆಗಳಿಗೆ, ಅಗೌರವ ಸೂಚಿಸುವ, ಯಾವುದೆ ವ್ಯಕ್ತಿ/ವ್ಯಕ್ತಿಗಳ, ಸಮುದಾಯ, ಸಂಘ ಸಂಸ್ಥೆಗಳ ಘನತೆಗೆ ಕುಂದು ತರುವಂತಹ ಬರವಣಿಗೆಯನ್ನು ಕಟ್ಟುನಿಟ್ಟಾಗಿ ನಿಷೇದಿಸಲಾಗಿದೆ.
C. ಪ್ರಬಂಧವು ಒಟ್ಟು 12 ಪುಟಗಳನ್ನು ಮೀರುವಂತಿಲ್ಲ [ಮುಕಪುಟವನ್ನು ಹೊರತುಪಡಿಸಿ].
ಒಂದುವೇಳೆ ಬೋರ್ಡ್ & ಗೈಡ್ ಬಳಸಿ ಹಾಳೆಯ ಎರಡು ಬದಿ ಬರೆಯುವುದಾದಲ್ಲಿ ಒಟ್ಟು ಹಾಳೆಗಳ ಸಂಖ್ಯೆ 8 ಹಾಳೆಗಳನ್ನು ಮೀರುವಂತಿಲ್ಲ.
D. ಪ್ರತಿಯೊಂದು ಪುಟದ ಮೊದಲ ಸಾಲಿನ ಬಲಭಾಗದ ಕೊನೆಯಲ್ಲಿ ಪುಟಸಂಖ್ಯೆ ನಮೂದಿಸಿ ಅನುಕ್ರಮವಾಗಿ ಟ್ಯಾಗ್ ಮಾಡುವುದು ಕಡ್ಡಾಯ.
E. ಪ್ರಬಂಧ ನಮ್ಮ ಕೈ ಸೇರುವವರೆಗೆ ಬ್ರೈಲ್ ಹಾಳೆ ಮತ್ತು ಚುಕ್ಕೆಗಳ ಗುಣಮಟ್ಟ ಕಾಯ್ದುಕೊಳ್ಳಲು ಅಗತ್ಯವಿರುವ ಎಲ್ಲ  ಕ್ರಮಗಳನ್ನು ತೆಗೆದುಕೊಳ್ಳುವುದು ಸ್ಪರ್ಧಿಗಳ  ಸ್ವಯಂ ಜವಬ್ದಾರಿಯಾಗಿರುತ್ತದೆ.
ಬ್ರೈಲ್ ಅಕ್ಷರಗಳ ರಚನೆಗೆ ಅವಕಾಶ ಕಲ್ಪಿಸುವ, ಅಕ್ಷರಗಳು ಬಹಳಕಾಲ ಉಳಿಯುವಂತಹ ಹಾಳೆ (ಬ್ರೈಲ್ ಶೀಟ್) ಗಳನ್ನೆ ಬಳಸಬೇಕು.
F. ಸ್ಪರ್ಧಿಗಳು ಸ್ವತಃ ಬ್ರೈಲ್ ಲಿಪಿಯಲ್ಲಿ ಬರೆಯುವುದು ಕಡ್ಡಾಯ.
ಯಾವುದೇ ಸಂದರ್ಭದಲ್ಲಿ ಪ್ರಬಂಧ ರಚನೆಯ ಸಂಬಂಧ ಅನಪೇಕ್ಷಿತ ವಿಧಾನಗಳನ್ನು ಸ್ಪರ್ಧಿಯು ಅನುಸರಿಸಿರುವ ಬಗ್ಗೆ ಸಂದೇಹ ಬಂದಲ್ಲಿ ನಿರ್ವಾಹಕ ತಂಡವು ಆ ಕುರಿತಂತೆ ಪರಿಶೀಲಿಸಲು   ಹಾಗೂ ಯಾವುದೇ ಮಾಹಿತಿ ನೀಡದೆ ತಿರಸ್ಕರಿಸಲು ಮುಕ್ತವಾಗಿರುತ್ತದೆ.
ಸ್ಪರ್ಧಿಗಳು ಮೇಲೆ ವಿವರಿಸಿರುವ ಪ್ರತಿಯೊಂದು ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
ಯಾವುದೆ ಸ್ಪರ್ಧಿ ನಿಯಮವನ್ನು ಉಲ್ಲಂಘಿಸಿದಲ್ಲಿ, ಯಾವುದೆ ನಿರ್ಧಾರವನ್ನು ತೆಗೆದುಕೊಳ್ಳಲು ಅಡ್ಮಿನ್ ತಂಡಕ್ಕೆ ಪೂರ್ಣ ಸ್ವತಂತ್ರವಿರುತ್ತದೆ.
ಅಲ್ಲದೆ, ಅಗತ್ಯವೆನಿಸಿದಲ್ಲಿ,  ಸದರಿ ಪ್ರಕಟಣೆಯಲ್ಲಿನ ಯಾವುದೇ ಅಂಶಗಳನ್ನು ಮಾರ್ಪಾಡು ಮಾಡಲು ಅಡ್ಮಿನ್ ತಂಡ ಸಂಪೂರ್ಣ ಮುಕ್ತವಾಗಿರುತ್ತದೆ.
ವಿಶೇಷ ಸೂಚನೆಗಳು:
A. ಮೊದಲನೇಯ ಪುಟದಲ್ಲಿ ತಮ್ಮ ವೈಯಕ್ತಿಕ ವಿವರಗಳಾದ, ಹೆಸರು, ಸ್ಥಳ ಮತ್ತು ದಿನಾಂಕ, ಸ್ಪರ್ಧಿಸುತ್ತಿರುವ ವರ್ಗ, ವೈಯಕ್ತಿಕ ವಿಳಾಸ ಮತ್ತು ದೂರವಾಣಿ ಸಂಖ್ಯೆಗಳನ್ನು ನಮೂದಿಸಬೇಕು.
B. ವಿದ್ಯಾರ್ಥಿ ವರ್ಗದಲ್ಲಿ ಸ್ಪರ್ಧಿಸುವವರು ಶೈಕ್ಷಣಿಕ ಸಂಸ್ಥೆಯಿಂದ ಪಡೆದಿರುವ ಚಾಲ್ತಿಯಲ್ಲಿರುವ ಗುರುತಿನ ಚೀಟಿಯ ಪ್ರತಿಯನ್ನು ಲಗತ್ತಿಸುವುದು ಕಡ್ಡಾಯ.
ಮೇಲೆ ತಿಳಿಸಿರುವ ಎಲ್ಲ  ವಿವರಗಳನ್ನು ಕಡ್ಡಾಯವಾಗಿ ನೀಡಬೇಕು ಮತ್ತು ಈ ಪುಟವನ್ನು ಪುಟಗಳ ಮಿತಿಯಿಂದ ಹೊರಗಿಡಲಾಗುವುದು.
C. ಪ್ರಬಂಧಗಳನ್ನು ಕೆಳಗೆ ನೀಡಲಾಗುವ ವಿಳಾಸಗಳಿಗೆ ಅಂಚೆ ಮೂಲಕ ತಲುಪಿಸಲು ಡಿಸಂಬರ್ ಒಂದು ಕೊನೆ ದಿನವಾಗಿರುತ್ತದೆ
ಅಂಚೆ ಮೂಲಕ ಪ್ರಬಂಧಗಳನ್ನು ಕಳುಹಿಸುವಾಗ ಉಚಿತ ಅಂಚೆ ಸೌಲಭ್ಯ ಪಡೆಯಲು (free matter for the blind) ಎಂದು ನಮೂದಿಸಿ ನೋಂದಾವಣೆ ಅಂಚೆ ಮೂಲಕವೇ ಕಳುಹಿಸಬೇಕು.
ಕನ್ನಡ, ಆಂಗ್ಲ ಹಾಗೂ ಹಿಂದಿ ಪ್ರಬಂಧಗಳನ್ನು ಕಳುಹಿಸಲು ಪ್ರತ್ಯೇಕ ವಿಳಾಸಗಳನ್ನು ಸೂಚಿಸಲಾಗಿದೆ.
ಕನ್ನಡ ಪ್ರಬಂಧಗಳನ್ನು ಕಳುಹಿಸಬೇಕಾದ ವಿಳಾಸ:
ಶಿವಕುಮಾರ್ ಆರ್ ಸಿ, ಪ್ರಥಮ ದರ್ಜೆ ಸಹಾಯಕರು, ನಂಜನಗೂಡು ಉಪ ಖಜಾನೆ, ನಂಜನಗೂಡು ತಾಲ್ಲೂಕು, ಮೈಸೂರು 571302.
ಆಂಗ್ಲ ಮತ್ತು ಹಿಂದಿ ಪ್ರಬಂಧಗಳನ್ನು ಕಳುಹಿಸಬೇಕಾದ ವಿಳಾಸ:
ಜಗದೀಶ್ ಆರ್, ನಂಬರ್ 63, ಸಂತೋಷ್ ನಿಲಯ, ಮೊದಲನೆ ಅಡ್ಡ ರಸ್ತೆ, ಸಿಡೇದಹಳ್ಳಿ ಮುಖ್ಯ ರಸ್ತೆ, ಎಸ್.ಆರ್ ಬಡಾವಣೆ, ನಾಗಸಂದ್ರ ಅಂಚೆ, ಬೋನ್ಮಿಲ್ ಬೆಂಗಳೂರು 560073.
ಕನ್ನಡದಲ್ಲಿ ನೆರವು ಪಡೆಯಲು ದೂರವಾಣಿ ಸಂಖ್ಯೆ: 9844401284, 9900946451.
ಆಂಗ್ಲ ಬಾಷೆಯಲ್ಲಿ ನೆರವು ಪಡೆಯಲು:
9739021181, 8073183323.
F. ಎಲ್ಲಾ 3 ಭಾಷ ಮಾಧ್ಯಮಗಳನ್ನು ಒಳಗೊಂಡಂತೆ, ಎರಡು ವಿಷಯಗಳಿಗೆ ತಲಾ ಎರಡು ಬಹುಮಾನಗಳನ್ನು ನಿಗದಿಗೊಳಿಸಲಾಗಿರುತ್ತದೆ.
ಅಲ್ಲದೆ, ಪ್ರತೀ ಭಾಷೆಯಲ್ಲಿನ ಉತ್ತಮ ಪ್ರಬಂಧಕ್ಕೆ ತಲಾ ಒಂದರಂತೆ ವಿಶೇಷ ಬಹುಮಾನವಿರುತ್ತದೆ.
ಮೌಲ್ಯ ಮಾಪಕರ ನಿರ್ಧಾರವೆ ಅಂತಿಮವಾಗಿರುತ್ತದೆ.
ತಮ್ಮೆಲ್ಲರ ಉತ್ಸಾಹಯುತ ಪಾಲ್ಗೊಳ್ಳುವಿಕೆಯ ಆಶಯದೊಂದಿಗೆ;
ಆರ್. ಎಸ್. ಜಿ. ಇ. ನಿರ್ವಾಹಕ ತಂಡ.

Thursday, October 25, 2018

**RSGE**::: ಸರ್ಕಾರಿ ಕಾರ್ನರ್​

ಭೂಮಾಪನ ಇಲಾಖೆಯಲ್ಲಿ ಭೂಮಾಪಕರಾಗಿದ್ದ ನನ್ನ ತಂದೆ 2018ರ ಆ.18ರಂದು ಆಕಸ್ಮಿಕವಾಗಿ ನಿಧನರಾದರು. ನಾನು ಸ್ನಾತಕೋತ್ತರ ಪದವೀಧರನಾಗಿದ್ದು, ಪ್ರಥಮ ದರ್ಜೆ ಸಹಾಯಕ ಹುದ್ದೆ ನೀಡಲು ಕೋರಿದಾಗ ಸಕ್ಷಮ ಅಧಿಕಾರಿಯು ದ್ವಿತೀಯ ದರ್ಜೆ ಸಹಾಯಕ ಹುದ್ದೆ ಅಂಗೀಕರಿಸಿದ್ದಾರೆ. ಸದ್ಯ ದ್ವಿತೀಯ ದರ್ಜೆ ಸಹಾಯಕನಾಗಿರುವ ನಾನು ಪ್ರಥಮದರ್ಜೆ ಸಹಾಯಕ ಹುದ್ದೆಗೆ ನಿಯೋಜಿಸುವಂತೆ ಮತ್ತೆ ಮನವಿ ಸಲ್ಲಿಸಬಹುದೇ? ಇಲಾಖೆ ಕೈಗೊಂಡ ನಿರ್ಧಾರ ಕ್ರಮಬದ್ಧವಾಗಿದೆಯೇ?
| ಬಿ.ಕೆ. ಕುಲಕರ್ಣಿ ವಿಜಯಪುರ
ಕರ್ನಾಟಕ ಸರ್ಕಾರಿ ಸೇವಾ (ಅನುಕಂಪದ ಮೇರೆಗೆ ನೇಮಕ) ನಿಯಮಾವಳಿ 1996ರ ನಿಯಮ 3ರ ಪ್ರಕಾರ ಅನುಕಂಪದ ಮೇರೆಗೆ ನೇಮಕವಾಗಲು ನಿಗದಿತ ವಿದ್ಯಾರ್ಹತೆ ಹೊಂದಿದ್ದರೆ ಅರ್ಹರಾಗುತ್ತಾರೆ. 2017ರ ಅ.27ರ ಸರ್ಕಾರಿ ಸುತ್ತೋಲೆ ಸಂಖ್ಯೆ ಸಿಆಸುಇ 105, ಸೇಅನೇ 2017ರ ಪ್ರಕಾರ ಅನುಕಂಪದ ಆಧಾರದ ಮೇಲೆ ನೇಮಕಾತಿ ಸಂದರ್ಭ ಅರ್ಜಿದಾರರ ಅರ್ಜಿ ಪರಿಗಣಿಸುವಾಗ ಆತನ ವಿದ್ಯಾರ್ಹತೆಗೆ ಅನುಸಾರವಾಗಿಯೇ ಗ್ರೂಪ್ ಸಿ ಅಥವಾ ಡಿ ಹುದ್ದೆಗೆ ನೇಮಕಾತಿ ಆದೇಶ ಹೊರಡಿಸಬೇಕೆಂದು ಸೂಚಿಸಲಾಗಿರುತ್ತದೆ. ಹಾಗಾಗಿ ನೀವು ಮತ್ತೆ ನೇಮಕಾತಿ ಪ್ರಾಧಿಕಾರಕ್ಕೆ ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ಮರು ನೇಮಕ ಮಾಡಿಕೊಳ್ಳುವಂತೆ ಮನವಿ ಸಲ್ಲಿಸಬಹುದು. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ‘ಕರ್ನಾಟಕ ಸರ್ಕಾರಿ ಸೇವಾ ಕಾನೂನು ಕೈಪಿಡಿ’ ಪುಸ್ತಕ ನೋಡಬಹುದು.

**RSGE**::: ಕರ್ತವ್ಯವಲ್ಲದ ಅವಧಿ ಯಾವುದು ?, | ಲ.ರಾಘವೇಂದ್ರ, ಸೇವಾ ಕಾನೂನು ತಜ್ಞರು

ಸರ್ಕಾರಿ ನೌಕರರು ಕಚೇರಿ ಕೆಲಸ ಕಾರ್ಯಗಳಿಗೆ ಹಾಜರಾಗುವ ಎಲ್ಲಾ ದಿನಗಳನ್ನು ಕರ್ತವ್ಯ ದಿನಗಳೆಂದು ಪರಿಗಣಿಸಲಾಗುತ್ತದೆ. ಅದೇ ರೀತಿಯಾಗಿ ಸರ್ಕಾರಿ ನೌಕರನು ಗಳಿಕೆ ರಜೆ, ಪರಿವರ್ತಿತ ರಜೆ, ಸಾಂರ್ದಭಿಕ ರಜೆ, ವಿಶೇಷ ಸಾಂರ್ದಭಿಕ ರಜೆ, ಅನ್ಯ ಕಾರ್ಯನಿಮಿತ್ತ (ಒಒಡಿ) ಸಾರ್ವತ್ರಿಕ ರಜೆ ದಿನಗಳಂದು ಅವನು ಕಚೇರಿಗೆ ಹಾಜರಾಗಿ ಕರ್ತವ್ಯ ನಿರ್ವಹಿಸದಿದ್ದರೂ ಅದನ್ನು ಕರ್ತವ್ಯವೆಂದೇ ಪರಿಗಣಿಸಲಾಗುತ್ತದೆ.
‘ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿ’ಯ ನಿಯಮ 8(15)ರಂತೆ ‘ಕರ್ತವ್ಯ’ ಎಂಬುದರಲ್ಲಿ ಸರ್ಕಾರಿ ನೌಕರನು ಪ್ರೊಬೇಷನರ್ ಆಗಿ 1977ರ ‘ಕರ್ನಾಟಕ ಸರ್ಕಾರಿ ಸೇವಾ (ಪ್ರೊಬೇಷನ್) ನಿಯಮ’ಗಳ ಉಪಬಂಧಕ್ಕೆ ಒಳಪಟ್ಟು ಸಲ್ಲಿಸಿದ ಸೇವೆಯನ್ನು ಕರ್ತವ್ಯವೆಂದು ಪರಿಗಣಿಸಲಾಗುತ್ತದೆ. ಅವನು ಸ್ಥಳೀಯ ಅಭ್ಯರ್ಥಿಯಾಗಿ ಸಲ್ಲಿಸಿದ ಸೇವೆಯನ್ನು ವಾರ್ಷಿಕ ವೇತನ ಬಡ್ತಿ, ರಜೆ, ನಿವೃತ್ತಿ ವೇತನ ಇತ್ಯಾದಿಗಳ ಉದ್ದೇಶಕ್ಕಾಗಿ ಸ್ಥಾನಪನ್ನ ಅಥವಾ ಹಂಗಾಮಿ ಸೇವೆಯನ್ನು ಪರಿಗಣಿಸಲಾಗುತ್ತದೆ. ಆದರೆ ಸರ್ಕಾರಿ ನೌಕರನು ಕೆಲವೊಂದು ಸಂದರ್ಭಗಳಲ್ಲಿ ಅವನ ಸೇವೆಯನ್ನು ಕರ್ತವ್ಯವಲ್ಲದ ಸೇವೆಯೆಂದು ಪರಿಗಣಿಸಲಾಗುತ್ತದೆ. ‘ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿ’ಯ ನಿಯಮ 8(14ಎ)ರೀತ್ಯ ಕರ್ತವ್ಯರಹಿತ ಅವಧಿ ಅಥವಾ ಕರ್ತವ್ಯದಲ್ಲಿ ಕಳೆಯದ ಅವಧಿಯನ್ನು ‘ಲೆಕ್ಕಕ್ಕಿಲ್ಲದ ಅವಧಿ’ಯೆಂದು ಪರಿಭಾಷಿಸಿದೆ. ಈ ‘ಲೆಕ್ಕಕ್ಕಿಲ್ಲದ ಅವಧಿ’ ಎಂದು ಪರಿಗಣಿಸಿದ ಅವಧಿಯನ್ನು ಸೇವೆಯೆಂದು ತೆಗೆದುಕೊಳ್ಳಲಾಗುವುದಿಲ್ಲ. ಆದರೆ ಈ ಅವಧಿಯನ್ನು ‘ಸೇವಾಭಂಗ’ ಎಂದು ಭಾವಿಸಲಾಗುವುದಿಲ್ಲವೆಂದು ಸ್ಪಷ್ಟಪಡಿಸಲಾಗಿದೆ. ಈ ಕರ್ತವ್ಯವಲ್ಲದ ಅವಧಿಯಲ್ಲಿ ರಜೆ, ವಾರ್ಷಿಕವೇತನ ಬಡ್ತಿ ಮತ್ತು ಪಿಂಚಣಿಗೆ ಅರ್ಹತಾದಾಯಕ ಸೇವೆಯೆಂದು ಪರಿಗಣಿಸಲಾಗುವುದಿಲ್ಲ. ‘ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ’ 220ರ ರೀತ್ಯ 18 ವರ್ಷಗಳು ಆಗುವ ಮುನ್ನ ಸರ್ಕಾರಿ ಸೇವೆಗೆ ಸೇರಿದರೆ ಅದನ್ನೂ ‘ಕರ್ತವ್ಯವಲ್ಲದ ಅವಧಿ’ಯೆಂದು (ಬಾಯ್್ಸ ಸರ್ವೀಸ್) ಎಂದು ಪರಿಗಣಿಸಲಾಗುತ್ತದೆ. ಅಲ್ಲದೆ ಸರ್ಕಾರಿ ನೌಕರನು ಮೂರು ವರ್ಷಕ್ಕಿಂತ ಹೆಚ್ಚು ಅಸಾಧಾರಣ ರಜೆ ಅಥವಾ ವೇತನರಹಿತ ರಜೆಯನ್ನು ಬಳಸಿಕೊಂಡಲ್ಲಿ ಅದನ್ನೂ ಕರ್ತವ್ಯವಲ್ಲದ ಅವಧಿಯೆಂದು ಪರಿಗಣಿಸಲಾಗುತ್ತದೆ ಹಾಗೂ ಒಟ್ಟು ಅರ್ಹತಾದಾಯಕ ಸೇವೆಯಿಂದ ಕಳೆಯಲಾಗುತ್ತದೆ.
ಛತ್ತೀಸ್​ಗಡ ಹೈಕೋರ್ಟ್​ನಲ್ಲಿ ಮಕ್ಕಳ ಕಲ್ಯಾಣ ಅಧಿಕಾರಿಯೊಬ್ಬರು 200ಕ್ಕೂ ಹೆಚ್ಚು ದಿನಗಳ ಕಾಲ ಗೈರು ಹಾಜರಾಗಿದ್ದಕ್ಕೆ ಅದನ್ನು ಅವನ ವೆುೕಲಧಿಕಾರಿಗಳು ‘ಕರ್ತವ್ಯವಲ್ಲದ ಅವಧಿ’ಯೆಂದು ಪರಿಗಣಿಸಿರುವುದನ್ನು ಎತ್ತಿ ಹಿಡಿದಿದೆ. ಈ ಪ್ರಕರಣದಲ್ಲಿ ಮೇಲಧಿಕಾರಿಯವರು ತಮ್ಮ ಅಹವಾಲನ್ನು ಪರಿಗಣಿಸದೆ ಕರ್ತವ್ಯವಲ್ಲದ ಅವಧಿಯೆಂದು (ಡೈಸ್​ನಾನ್) ಪರಿಗಣಿಸಿರುವುದು ಸ್ವಾಭಾವಿಕ ನ್ಯಾಯಕ್ಕೆ ವ್ಯತಿರಿಕ್ತವಾಗಿದೆಯೆಂದು ಕೋರಿ ಆ ಅಧಿಕಾರಿಯು ರಿಟ್ ಅರ್ಜಿಯನ್ನು ಸಲ್ಲಿಸುತ್ತಾರೆ. (ರಿಟ್ ಅರ್ಜಿ ಸಂಖ್ಯೆ 101-2006) ಆದರೆ ನ್ಯಾಯಾಲಯವು ಅವರ ಮೇಲಧಿಕಾರಿಯವರು ಕೈಗೊಂಡ ಕ್ರಮವನ್ನು ಎತ್ತಿ ಹಿಡಿದು ಅವರ ಅರ್ಜಿಯನ್ನು ಅಂತ್ಯಗೊಳಿಸಿರುತ್ತದೆ. ಈ ಪ್ರಕರಣದಲ್ಲಿ ಈ ಅವಧಿಯು ರಜೆ, ವಾರ್ಷಿಕ ವೇತನ ಬಡ್ತಿ ಅದು ನಿವೃತ್ತಿಗೆ ಪರಿಗಣಿತವಾಗುವುದಿಲ್ಲವಾದ್ದರಿಂದ ಇದೊಂದು ರೀತಿಯ ದಂಡನೆಯಾಗಿರುತ್ತದೆ. ಸಂದರ್ಭ ಹೀಗಿರುವಾಗ ಸೇವಾ ನಿಯಮಗಳಡಿಯಲ್ಲಿ ಶಿಸ್ತು ಕ್ರಮವನ್ನು ಅನುಸರಿಸಿ ತೀರ್ವನವನ್ನು ತೆಗೆದುಕ್ಳೊಲಾಗುತ್ತದೆ ಎಂದು ನ್ಯಾಯಾಲಯ ಸೂಚಿಸಿ ಪ್ರಕರಣವನ್ನು ಮುಕ್ತಾಯಗೊಳಿಸುತ್ತದೆ.
ಸರ್ಕಾರಿ ನೌಕರನು ಯಾವುದೇ ಸಂದರ್ಭದಲ್ಲಿ ಗೈರು ಹಾಜರಾದರೆ ಮೇಲಧಿಕಾರಿಗೆ ಅವನ ವಿರುದ್ಧ ಕ್ರಮ ಕೈಗೊಳ್ಳಲು ಎರಡು ಅವಕಾಶಗಳಿರುತ್ತವೆ. ಮೊದಲನೆಯದಾಗಿ ನೌಕರನ ಗೈರು ಹಾಜರಿಗೆ ಸಮಂಜಸವಾದ ಕಾರಣವಿದ್ದರೆ ಅವನ ಅನಧಿಕೃತ ಗೈರು ಹಾಜರಿಯನ್ನು ಸಕ್ರಮಗೊಳಿಸಿ ರಜೆ ಮಂಜೂರು ಮಾಡಬಹುದು. ಎರಡನೆಯದಾಗಿ ನೌಕರರ ಗೈರು ಹಾಜರಿಗೆ ಸಮಂಜಸವಾದ ಕಾರಣಗಳಿಲ್ಲದೆ ಸಿಸಿಎ ನಿಯಮಾನುಸಾರ ಕ್ರಮ ಜರುಗಿಸಿ ದಂಡನೆಯನ್ನು ವಿಧಿಸಬಹುದಾಗಿರುತ್ತದೆ. ನಿಯಮ 108ರ ಪ್ರಕಾರ ನಾಲ್ಕು ತಿಂಗಳಿಗಿಂತ ಹೆಚ್ಚಿಗೆ ಅನಧಿಕೃತವಾಗಿ ಗೈರು ಹಾಜರಾದರೆ ಸೇವೆಯಿಂದ ಶಿಸ್ತು ಕ್ರಮ ಕೈಗೊಂಡು ವಜಾಗೊಳಿಸಬಹುದು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಾಥಮಿಕ ಶಾಲಾ ಶಿಕ್ಷಕರು ಬಿ.ಎಡ್., ಪದವಿಯನ್ನು ಪಡೆಯಲು ಅವಕಾಶವನ್ನು ಕಲ್ಪಿಸಿದ್ದು ದಿನಾಂಕ 2.9.2006ರ ಸುತ್ತೋಲೆ ಸಂಖ್ಯೆ ಸಿ 3(2) ಪ್ರಾಶಿ/ಉವ್ಯಾ /ಅನು/07/2006-2007ರಂತೆ ಕನಿಷ್ಠ 5 ವರ್ಷಗಳ ಸೇವಾ ಅವಧಿ ಸಲ್ಲಿಸಿ ಕಾಯಂಪೂರ್ವ ಸೇವಾವಧಿಯನ್ನು (ಪ್ರೊಬೇಷನ್) ಘೊಷಿಸಿದ್ದರೆ ಅಂತಹ ಶಿಕ್ಷಕನು ಛಾಪಾ ಕಾಗದದ ಮೇಲೆ ಮುಚ್ಚಳಿಕೆಯನ್ನು ಬರೆದುಕೊಡಬೇಕು. ಈ ಮುಚ್ಚಳಿಕೆಯಲ್ಲಿ ‘ನಾನು ಉನ್ನತ ವ್ಯಾಸಂಗದ ಅವಧಿಯನ್ನು ಲೆಕ್ಕಕ್ಕಿಲ್ಲದ ಅವಧಿಯೆಂದು ಪರಿಗಣಿಸಲು ಸ್ವ ಇಚ್ಛೆಯಿಂದ ಒಪ್ಪಿಕೊಂಡಿರುತ್ತೇನೆ. ಈ ಉನ್ನತ ವ್ಯಾಸಂಗದ ಅವಧಿಯಲ್ಲಿ ವೇತನ ಬಡ್ತಿ, ನಿವೃತ್ತಿ ವೇತನ, ರಜೆ ಸೌಲಭ್ಯ ಮತ್ತು ಯಾವುದೇ ಆರ್ಥಿಕ ಸೌಲಭ್ಯಗಳನ್ನು ಅರ್ಹತಾದಾಯಕ ಸೇವೆಗೆ ಪರಿಗಣಿಸದಿರುವಂತೆ ಈ ಮೂಲಕ ಸ್ವ ಇಚ್ಛೆಯಿಂದ ಒಪ್ಪಿಕೊಂಡು ಬರೆದುಕೊಟ್ಟಿರುತ್ತೇನೆ ಎಂದು ಇರಬೇಕು. ಆದ್ದರಿಂದ ಈ ಅವಧಿಯು ಕರ್ತವ್ಯವಲ್ಲದ ಅವಧಿಯೆಂದು ಪರಿಗಣಿತವಾಗುತ್ತದೆ.
ಅಲ್ಲದೆ ಸರ್ಕಾರಿ ನೌಕರನು ಸ್ವ ಮನವಿಯ ಮೇರೆಗೆ ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ವರ್ಗಾವಣೆ ಮಾಡಿಸಿಕೊಂಡಾಗ ಈ ನಿಯಮದ ಪ್ರಕಾರ ಸೇರಿಕೆ ಕಾಲ ಲಭ್ಯವಾಗುವುದಿಲ್ಲ. ಅವನು ಕಾರಣಾಂತರಗಳಿಂದ ಸಕಾಲಿಕವಾಗಿ ಕರ್ತವ್ಯಕ್ಕೆ ಹಾಜರಾಗಲು ಸಾಧ್ಯವಾಗುವುದಿಲ್ಲ. ಆಗ ಅವನು ಪ್ರಯಾಣಕ್ಕಾಗಿ ತೆಗೆದುಕೊಂಡ ವಾಸ್ತವ ಅವಧಿಯನ್ನು ಕರ್ತವ್ಯವಲ್ಲದ ದಿನವೆಂದು ನಿಯಮ 76 (3)ರ ಮೇರೆಗೆ ಪರಿಗಣಿಸಬೇಕು ಮತ್ತು ಅದನ್ನು ವಾರ್ಷಿಕ ವೇತನ ಬಡ್ತಿ ಮತ್ತು ನಿವೃತ್ತಿ ವೇತನಕ್ಕೆ ಪರಿಗಣಿಸಲಾಗುವುದಿಲ್ಲ. ಆದರೆ ಇಂತಹ ಅವಧಿಗೆ ವರ್ಗಾವಣೆ ದಿನಾಂಕದಂದು ಅವನ ಲೆಕ್ಕದಲ್ಲಿರುವ ಮತ್ತು ಪಡೆಯಲು ಅರ್ಹವಾದ ರಜೆಯನ್ನು  ಸಾರ್ವಜನಿಕ ಹಿತದೃಷ್ಟಿಯಿಂದ ವರ್ಗಾವಣೆಯಾಗಿದ್ದಲ್ಲಿ ಲಭ್ಯವಿರುವ ಸೇರುವ ಕಾಲದ ಅವಧಿಗೆ ಮೀರದಂತೆ ರಜೆಯನ್ನು ಮಂಜೂರು ಮಾಡಬಹುದೆಂದು 1990ರ ಸರ್ಕಾರಿ ಜ್ಞಾಪನ (ಸಂಖ್ಯೆ ಎಫ್​ಡಿ 22, ಎಸ್​ಆರ್​ಎಸ್ 90) ತಿಳಿಸಿದೆ.

**RSGE**::: ಸರ್ಕಾರಿ ಕಾರ್ನರ್​

ನಾನು 3 ವರ್ಷದಿಂದ ಬಳ್ಳಾರಿ ನ್ಯಾಯಾಂಗ ಇಲಾಖೆಯಲ್ಲಿ ಬೆರಳಚ್ಚು ನಕಲುಗಾರನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಈಗ ಕೆಪಿಎಸ್​ಸಿ ನಡೆಸಿದ ಪರೀಕ್ಷೆಯಲ್ಲಿ ಬೆರೆಳಚ್ಚುಗಾರ ಹುದ್ದೆಗೆ ಆಯ್ಕೆ ಆಗಿದ್ದು, ಒಂದು ವೇಳೆ ಕಾರಣಾಂತರದಿಂದ ಈ ಹುದ್ದೆ ರದ್ದುಪಡಿಸಿದರೆ ನಾನು ನ್ಯಾಯಾಂಗ ಇಲಾಖೆಗೆ ಮರಳಿ ಕರ್ತವ್ಯಕ್ಕೆ ಹಾಜರಾಗಬಹುದೇ? ಎಷ್ಟು ವರ್ಷಗಳ ಒಳಗೆ ನ್ಯಾಯಾಂಗ ಇಲಾಖೆಗೆ ಮರಳಲು ಅವಕಾಶವಿರುತ್ತದೆ?
| ಎಚ್. ಆನಂದ್ ಗಂಗಾವತಿ, ಕೊಪ್ಪಳ
ಕರ್ನಾಟಕ ಸರ್ಕಾರಿ ಸೇವಾ (ನೇರ ನೇಮಕಾತಿ) ನಿಯಮಾ ವಳಿಯ 1977ರ ನಿಯಮ 11ರ ಮೇರೆಗೆ ನೀವು ಅನುಮತಿ ಪಡೆದು ಅರ್ಜಿ ಸಲ್ಲಿಸಿ ಬೆರಳಚ್ಚುಗಾರ ಹುದ್ದೆಗೆ ಆಯ್ಕೆಯಾದರೆ ಈ ಹುದ್ದೆಯ ಆದೇಶ ಪಡೆದ ಮೇಲೆ ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 252ಬಿ ರಂತೆ ಕರ್ತವ್ಯ ದಿಂದ ಬಿಡುಗಡೆ ಹೊಂದಬೇಕಾಗುತ್ತದೆ. ಹೀಗೆ ಬಿಡುಗಡೆ ಹೊಂದುವ ಮೊದಲು ನೀವು ನಿಮ್ಮನೇಮಕಾತಿ ಪ್ರಾಧಿಕಾರಕ್ಕೆ ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 2ರ ಮೇರೆಗೆ ನಿಮ್ಮ ಹುದ್ದೆಯ ಹಕ್ಕನ್ನು (ಲೀನ್) 2 ವರ್ಷದ ವರೆಗೆ ಕಾಯ್ದಿರಿಸಬೇಕೆಂದು ವಿನಂತಿಸಬೇಕು. ಆಕಸ್ಮಿಕವಾಗಿ ಕೆಪಿಎಸ್​ಸಿಯ ಬೆರಳಚ್ಚುಗಾರರ ಹುದ್ದೆ ರದ್ದಾದಲ್ಲಿ 2 ವರ್ಷದ ಒಳಗೆ ನೀವು ಪುನಃ ನ್ಯಾಯಾಂಗ ಇಲಾಖೆಗೆ ಮರಳಿ ಕರ್ತವ್ಯಕ್ಕೆ ಹಾಜರಾಗಬಹುದು. ವಿವರಗಳಿಗೆ ಇದೇ ಲೇಖಕರ ‘ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು’ ಪುಸ್ತಕ ನೋಡಬಹುದು.

ಬಡ್ತಿ ಮೀಸಲು ಕಾಯ್ದೆಗೆ ತಕರಾರು,

ಎಸ್ಸಿ-ಎಸ್ಟಿ ಸರ್ಕಾರಿ ನೌಕರರ ಹಿತರಕ್ಷಣೆ ಹೆಸರಲ್ಲಿ ಸರ್ಕಾರ ಜಾರಿಗೆ ತಂದಿದ್ದ ಕಾಯ್ದೆ ನ್ಯಾಯಾಂಗದ ಅಧಿಕಾರವನ್ನು ಕಿತ್ತುಕೊಂಡಿದೆ. ಎಂ. ನಾಗರಾಜ್ ಪ್ರಕರಣಕ್ಕೆ ಸಂಬಂದಿಸಿ ಸೆ.26ರಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಬಡ್ತಿ ಮೀಸಲಾತಿಯಲ್ಲಿ ಕೆನೆಪದರ ತತ್ವ ಅಳವಡಿಸ ಬೇಕು ಎಂದು ತೀರ್ಪು ನೀಡಿದ್ದು, ಈ ಪ್ರಕರಣ ವನ್ನು ಆ ತೀರ್ಪಿನ ವ್ಯಾಪ್ತಿಯಲ್ಲೇ ನೋಡಬೇಕು ಎಂದು ಅರ್ಜಿದಾರ ಬಿ.ಕೆ. ಪವಿತ್ರ ಪರ ವಕೀಲ ರಾಜೀವ್ ಧವನ್ ವಾದ ಮಂಡಿಸಿದ್ದಾರೆ.
ಬಡ್ತಿ ಮೀಸಲಾತಿ ಹೊಂದಿರುವ ಸರ್ಕಾರಿ ನೌಕರರಿಗೆ ಜ್ಯೇಷ್ಠತೆ ವಿಸ್ತರಿಸುವ ಕುರಿತ ಸರ್ಕಾರದ ನೂತನ ಕಾಯ್ದೆಯ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ವೇಳೆ ಕೆಲ ವಿಚಾರ ಗಳನ್ನು ಮುಂದಿಟ್ಟ ವಕೀಲ ಧವನ್, ಬಡ್ತಿ ಮೀಸಲಾತಿ ನೀಡುವಾಗ ಎಸ್ಸಿ-ಎಸ್ಟಿ ಸಮುದಾಯದ ನೌಕರನ ಆಡಳಿತ ದಕ್ಷತೆ, ಹಿಂದುಳಿದಿರುವಿಕೆ, ಸಮುದಾಯಗಳಿಗೆ ಸಿಕ್ಕಿರುವ ಪ್ರಾತಿನಿಧ್ಯಗಳಂತಹ ಮಾನದಂಡಗಳನ್ನು ಅನುಸರಿಸಬೇಕು. ಇದನ್ನು 2006ರ ಎಂ. ನಾಗರಾಜ್ ತೀರ್ಪಿನಲ್ಲೂ ಹೇಳ ಲಾಗಿತ್ತು. ಕಳೆದ ತಿಂಗಳು ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠದ ತೀರ್ಪಿನಲ್ಲೂ ಪುನರುಚ್ಚರಿಸಲಾಗಿದ್ದು, ಕೆನೆಪದರ ತತ್ವ ಅಳವಡಿಸಿಕೊಳ್ಳುವ ಬಗ್ಗೆ ಒತ್ತಿ ಹೇಳಲಾಗಿದೆ ಎಂದು ನ್ಯಾಯಮೂರ್ತಿ ಉದಯ್ ಲಲಿತ್ ಮತ್ತು ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ವಿಭಾಗೀಯ ಪೀಠದ ಗಮನಸೆಳೆದರು.
ಈ ಮೊದಲು ನೂತನ ಕಾಯ್ದೆ ಜಾರಿಗೆ ಕ್ರಮ ಕೈಗೊಳ್ಳದೆ ಯಥಾಸ್ಥಿತಿ ಕಾಯ್ದುಕೊಳ್ಳಲಾಗುವುದು ಎಂದಿದ್ದ ಸರ್ಕಾರ, ಕಳೆದ ವಿಚಾರಣೆ ವೇಳೆ ಮೌಖಿಕ ಭರವಸೆಯನ್ನು ಹಿಂತೆಗೆದುಕೊಳ್ಳಲಾಗುವುದು ಎಂಬ ಹೇಳಿಕೆ ನೀಡಿ ದ್ವಂದ್ವ ನೀತಿ ಅನುಸರಿಸಿತು ಎಂದು ಆರೋಪಿಸಿದ ಅವರು, ಸರ್ಕಾರಿ ನೇಮಕಾತಿಗಳಲ್ಲಿ ಮೀಸಲಾತಿ ನೀತಿ ಅಳವಡಿಸಿಕೊಳ್ಳುವುದು ತಪ್ಪೇನಲ್ಲ. ರೋಸ್ಟರ್, ಬ್ಯಾಕ್​ಲಾಗ್ ನಿಯಮ ಗಳನ್ನೂ ನಾವು ವಿರೋಧಿಸಿಲ್ಲ. ಕೆಳ ಹಂತದ ಹುದ್ದೆಗಳ ನೇರ ನೇಮಕಾತಿ ಹಾಗೂ ಕೆಳ ಹಂತದ ನೌಕರರ ನೇಮಕಾತಿಗೆ ಬಡ್ತಿ ಮೀಸಲಾತಿ ನೀತಿ ಅನುಸರಿಸಿ, ಕೆನೆಪದರದ ನಿಯಮ ಅಳವಡಿಸಿಕೊಳ್ಳುವುದಕ್ಕೆ ತಕರಾರಿಲ್ಲ ಎಂದು ವಿವರಿಸಿದರು. 3 ಗಂಟೆ ವಾದಿಸಿದ ಧವನ್, ಪ್ರಕರಣಕ್ಕೆ ಪೂರಕವಾಗಿರುವ ಹಿಂದಿನ ಅನೇಕ ತೀರ್ಪಗಳನ್ನು ಉಲ್ಲೇಖಿಸಿದರು. ಬುಧವಾರವೂ ವಾದ ಮುಂದುವರಿಸಲಿದ್ದಾರೆ. ನಂತರ ರಾಜ್ಯ ಸರ್ಕಾರ ಮತ್ತು ಎಸ್ಸಿ-ಎಸ್ಟಿ ನೌಕರರ ಪರ ವಕೀಲರು ಅವರ ವಿಚಾರಗಳನ್ನು ನ್ಯಾಯಪೀಠದ ಮುಂದೆ ಪ್ರಸ್ತುತಪಡಿಸಲಿದ್ದಾರೆ.

Wednesday, October 17, 2018

**RSGE**::: ನೌಕರರಿಗೆ ಮುಂಬಡ್ತಿ ಮರೀಚಿಕೆ,

5000 ಹುದ್ದೆಗಳಿಗೆ ಬಡ್ತಿ ಸ್ಥಗಿತ | ನಿವೃತ್ತಿ ಅಂಚಿನಲ್ಲಿರುವವರಿಗೆ ಸಂಕಟ >>
| ರುದ್ರಣ್ಣ ಹರ್ತಿಕೋಟೆ
ಬೆಂಗಳೂರು: ಬಡ್ತಿ ಮೀಸಲಾತಿ ವಿಷಯದಲ್ಲಿ ಸರ್ಕಾರ ಯಾವುದೇ ತೀರ್ವನಕ್ಕೆ ಬರಲು ಸಾಧ್ಯವಾಗದ್ದರಿಂದ ಸರ್ಕಾರಿ ನೌಕರರು ಮುಂಬಡ್ತಿ ಇಲ್ಲದೆ ನಿವೃತ್ತರಾಗುತ್ತಿರುವ ಪರಿಸ್ಥಿತಿ ನಿರ್ವಣವಾಗಿದೆ. ಅ. 23ರ ಸುಪ್ರೀಂಕೋರ್ಟ್ ತೀರ್ಪಿಗಾಗಿ ಎದುರು ನೋಡುತ್ತಿರುವ ನೌಕರರು ನಿಯಮ 32 ಜಾರಿಗೆ ಒತ್ತಾಯಿಸಿದ್ದಾರೆ. ರಾಜ್ಯದ ಎಲ್ಲ ಇಲಾಖೆಗಳಲ್ಲಿ ಸುಮಾರು 5 ಸಾವಿರ ಹುದ್ದೆಗಳ ಬಡ್ತಿ ಪ್ರಕ್ರಿಯೆ 19 ತಿಂಗಳಿನಿಂದ ಸ್ಥಗಿತವಾಗಿದ್ದು, ನೂರಾರು ನೌಕರರು ಕನಿಷ್ಠ ಒಂದು ಬಡ್ತಿಯೂ ಇಲ್ಲದೆ ವಂಚಿತರಾಗುತ್ತಿದ್ದಾರೆ.
ಬಡ್ತಿ ಮೀಸಲಾತಿ ವಿಚಾರದಲ್ಲಿ ಸುಪ್ರೀಂಕೋರ್ಟ್​ನಲ್ಲಿನ ಪ್ರಕರಣ ಮುಂದಕ್ಕೆ ಹೋಗುತ್ತಿರುವುದರಿಂದ ನಿವೃತ್ತಿ ಅಂಚಿನಲ್ಲಿನ ನೌಕರರಿಗೆ ಬಡ್ತಿ ಮರೀಚಿಕೆಯಾಗಿದೆ. ಸರ್ಕಾರಕ್ಕೆ ಸುಪ್ರೀಂಕೋರ್ಟ್ ತೀರ್ಪು ಹಾಗೂ ರಾಷ್ಟ್ರಪತಿ ಅಂಕಿತ ಹಾಕಿರುವ ಕಾನೂನು ಅತ್ತ ಧರಿ ಇತ್ತ ಪುಲಿ ಎಂಬ ವಾತಾವರಣ ಸೃಷ್ಟಿಸಿದ್ದರಿಂದ ಬಡ್ತಿ ಪ್ರಕ್ರಿಯೆ ತಡೆಹಿಡಿದಿದೆ.
ಬಡ್ತಿಗೆ ತಡೆ: ಕಳೆದ ವರ್ಷ ಪವಿತ್ರಾ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ತೀರ್ಪು ಹೊರಬೀಳುತ್ತಿದ್ದಂತೆ, 2017ರ ಮಾ.22ರಂದು 6 ತಿಂಗಳ ಅವಧಿಗೆ ಸರ್ಕಾರ ಬಡ್ತಿ ಸ್ಥಗಿತಗೊಳಿಸಿತ್ತು. ಬಳಿಕ ಸೆಪ್ಟೆಂಬರ್​ನಲ್ಲಿ 15 ದಿನಗಳ ಅವಧಿಗೆ ಬಡ್ತಿಗೆ ತಡೆ ಮುಂದುವರಿಸಲಾಯಿತು. 2018ರ ಜನವರಿಯಲ್ಲಿ ಮತ್ತೆ 15 ದಿನಗಳ ಕಾಲ ಬಡ್ತಿ ನೀಡುವುದಕ್ಕೆ ತಡೆ ಅವಧಿ ವಿಸ್ತರಿಸಲಾಯಿತು. ನೌಕರರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ನ್ಯಾಯಾಲಯದ ಮುಂದೆ ಸರ್ಕಾರ ಸರಿಯಾಗಿ ಮನವರಿಕೆ ಮಾಡುತ್ತಿಲ್ಲ ಎಂಬುದು ನೌಕರರ ಕೂಗು.
ನಿವೃತ್ತಿ ಅಂಚಿನವರಿಗೆ ಸಮಸ್ಯೆ: ಪ್ರತಿ ವರ್ಷ ಸುಮಾರು 15 ಸಾವಿರ ನೌಕರರು ನಿವೃತ್ತರಾಗುತ್ತಾರೆ. ಇದರಲ್ಲಿ ಬಹುತೇಕರಿಗೆ ಒಂದು ಬಡ್ತಿಯೂ ಸಿಕ್ಕಿರುವುದಿಲ್ಲ. ಒಂದಾದರೂ ಮುಂಬಡ್ತಿ ಸಿಕ್ಕರೆ ನಿವೃತ್ತಿ ವೇತನ ಹಾಗೂ ಸೌಲಭ್ಯದಲ್ಲಿ ಒಂದಷ್ಟು ಅನುಕೂಲವಾಗುತ್ತದೆ ಎಂಬುದು ನೌಕರರ ಉದ್ದೇಶ. ಕಳೆದ ವರ್ಷ ಸಚಿವಾಲಯದಲ್ಲೇ 150 ನೌಕರರು ಬಡ್ತಿ ಇಲ್ಲದೆ ನಿವೃತ್ತರಾಗಿ ದ್ದಾರೆ. ಈ ವರ್ಷ ಏಪ್ರಿಲ್​ನಿಂದ ನಿವೃತ್ತರಾದವರಲ್ಲಿ 40ಕ್ಕೂ ಹೆಚ್ಚು ಜನ ಬಡ್ತಿ ವಂಚಿತರಿದ್ದಾರೆ. ಸರ್ಕಾರದ ಮಟ್ಟದಲ್ಲಿ ಈ ಸಂಖ್ಯೆ ಇನ್ನೂ ಹೆಚ್ಚಾಗಿದೆ.
ಏಕ ಆದೇಶ?
ಬಡ್ತಿ ಪ್ರಕ್ರಿಯೆ ಸ್ಥಗಿತವಾಗಿದ್ದರೂ ಕೆಲ ಇಲಾಖೆಗಳಲ್ಲಿ ಏಕ ಆದೇಶ (ಸಿಂಗಲ್ ಆರ್ಡರ್) ಹೊರಡಿಸಿರುವ ಉದಾಹರಣೆ ಗಳಿವೆ. ಆದ್ದರಿಂದಲೇ ನೌಕರರು ನಿವೃತ್ತಿಗೆ ಮುನ್ನ ನಿಯಮ 32 ಅನ್ವಯ ಬಡ್ತಿ ನೀಡಿ ಎಂದು ಮುಖ್ಯ ಕಾರ್ಯದರ್ಶಿ ಮುಂದೆ ಬೇಡಿಕೆ ಇಟ್ಟಿದ್ದಾರೆ. ನಿವೃತ್ತಿಯ ಕೊನೇ ದಿನವೂ ಬಡ್ತಿ ಪಡೆಯಲು ಅವಕಾಶಗಳಿವೆ. ಆದ್ದರಿಂದ ನ್ಯಾಯಾಲಯದ ತೀರ್ಪು ಏನಾದರೂ ಬರಲಿ, ಮುಂಬಡ್ತಿ ಅವಕಾಶ ಒದಗಿಸಿ ಎಂದು ಕೋರಿದ್ದಾರೆ. ಆದರೆ ನ್ಯಾಯಾಲಯದ ಭಯದಲ್ಲಿರುವ ಮುಖ್ಯ ಕಾರ್ಯದರ್ಶಿ ಏನನ್ನೂ ನಿರ್ಧರಿಸುತ್ತಿಲ್ಲ. ಸುಪ್ರೀಂಕೋರ್ಟ್ ಅ.23ರಂದು ಸ್ಪಷ್ಟ ಆದೇಶ ನೀಡಬಹುದು ಎಂಬುದು ನೌಕರರ ಆಶಯ.
ಸಾಕಷ್ಟು ಬಡ್ತಿ ಹುದ್ದೆಗಳು ಖಾಲಿ ಇವೆ. ಅ.23ರಂದು ನ್ಯಾಯಾಲಯದಲ್ಲಿ ಸ್ಪಷ್ಟ ಆದೇಶ ಹೊರಬಿದ್ದರೆ ಸಮಸ್ಯೆ ಬಗೆಹರಿಯಲಿದೆ.
| ಟಿ.ಎಂ. ವಿಜಯಭಾಸ್ಕರ್, ಮುಖ್ಯ ಕಾರ್ಯದರ್ಶಿ
ಅರ್ಹರಿಗೆ ಮುಂಬಡ್ತಿಯಲ್ಲಿ ಯಾವುದೇ ಅನ್ಯಾಯ ಆಗಬಾರದು. ನಿವೃತ್ತಿ ಅಂಚಿನಲ್ಲಿರುವವರು ಬಡ್ತಿಯಿಂದ ವಂಚಿತರಾಗದಂತೆ ಸರ್ಕಾರ ಕ್ರಮ ಕೈಗೊಳ್ಳಲಿ.
| ಪಿ. ಗುರುಸ್ವಾಮಿ, ಅಧ್ಯಕ್ಷ, ಸಚಿವಾಲಯ ನೌಕರರ ಸಂಘ
ಮುಂಬಡ್ತಿಗೆ ಅರ್ಹರಾಗಿರುವ ನೌಕರರಿಗೆ ಅನ್ಯಾಯವಾಗುತ್ತಿದೆ. ಆದಷ್ಟು ಬೇಗ ನೌಕರರಿಗೆ ನ್ಯಾಯ ದೊರಕಬೇಕು.
| ಮಹದೇವಯ್ಯ ಮಠಪತಿ, ಅಧ್ಯಕ್ಷ, ಸರ್ಕಾರಿ ನೌಕರರ ಒಕ್ಕೂಟ
ರಕ್ಷಣೆ ಕಾಯ್ದೆ ಅನುಷ್ಠಾನಕ್ಕೆ ಮುಂದಾದ ರಾಜ್ಯ ಸರ್ಕಾರ
ಬೆಂಗಳೂರು: ಬಡ್ತಿ ಕಾನೂನನ್ನು ತಕ್ಷಣದಿಂದಲೇ ಅನುಷ್ಠಾನಗೊಳಿಸುವಂತೆ ಸರ್ಕಾರದ ಕಾಂಗ್ರೆಸ್ ಕಡೆಯಿಂದ ಒತ್ತಡ ಹೆಚ್ಚಾಗಿದೆ. ಸರ್ಕಾರವೂ ವಕೀಲರ ಅಭಿಪ್ರಾಯ ಪಡೆದು ಕಾನೂನು ಜಾರಿಗೆ ಮುಂದಾಗಿದೆ. ಶೇ.18:82ರ ಸೂತ್ರದಂತೆ ಬಡ್ತಿ ಹಂಚಿಕೆಗೆ ಎಸ್ಸಿ- ಎಸ್ಟಿ ಹಾಗೂ ಸಾಮಾನ್ಯ ವರ್ಗದ ಸಂಘಟನೆಗಳ ನಡುವೆ ಒಮ್ಮತ ಮೂಡುತ್ತಿರುವಾಗಲೇ, ಅ.23ರೊಳಗೆ ಕಾನೂನು ಜಾರಿಗೆ ಎಸ್ಸಿ-ಎಸ್ಟಿ ನೌಕರರ ಒಂದು ತಂಡ ಒತ್ತಡ ತರುತ್ತಿದೆ. ಹೀಗಾಗಿ ಸುಪ್ರೀಂಕೋರ್ಟ್​ನಲ್ಲಿ ರಾಜ್ಯ ಸರ್ಕಾರವನ್ನು ಪ್ರತಿನಿಧಿಸುತ್ತಿರುವ ಹಿರಿಯ ವಕೀಲ ಮುಕುಲ್ ರೋಹ್ಟಗಿ ಜತೆ ಅಧಿಕಾರಿಗಳು ರ್ಚಚಿಸಿದ್ದು, ಬಡ್ತಿ ರಕ್ಷಿಸುವ ಕಾನೂನನ್ನು ಸುಪ್ರೀಂಕೋರ್ಟ್ ಸೂಚನೆ ಪಕ್ಕಕ್ಕಿಟ್ಟು ಜಾರಿ ಮಾಡುವ ಬಗ್ಗೆ ಚಿಂತಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಸಿಎಂ ಸೂಚನೆ ಮೇರೆಗೆ ಸಿಎಸ್ ಮತ್ತು ಇತರ ಉನ್ನತ ಅಧಿಕಾರಿಗಳು ಸಭೆ ನಡೆಸಿದ್ದು, ಮುಂದಾಗುವ ಸವಾಲಿನ ಬಗ್ಗೆ ರ್ಚಚಿಸಿದ್ದಾರೆಂದು ತಿಳಿದುಬಂದಿದೆ. ಹೊಸ ಕಾನೂನು ಜಾರಿಮಾಡಿ, ಮುಂದಿನದನ್ನು ನಾವು ನೊಡಿಕೊಳ್ಳುತ್ತೇವೆ ಎಂದು ಸರ್ಕಾರವನ್ನು ಪ್ರತಿನಿಧಿಸುವ ದೆಹಲಿಯ ಹಿರಿಯ ವಕೀಲರು ಅಭಿಪ್ರಾಯ ನೀಡಿದ್ದು, ಲಿಖಿತ ಅಭಿಪ್ರಾಯ ಕೊಡುವುದಕ್ಕೂ ಮುಂದಾಗಿದ್ದಾರೆನ್ನಲಾಗಿದೆ. ಕಾಯ್ದೆ ಅನುಷ್ಠಾನಕ್ಕೆ ಅಭಿಪ್ರಾಯಪಡೆದುಕೊಳ್ಳಲು ರಾಜ್ಯ ಸರ್ಕಾರದ ಕಾನೂನು ಪ್ರತಿನಿಧಿಗಳು ದೆಹಲಿ ವಕೀಲರಿಗೆ ಪತ್ರ ಬರೆದಿದ್ದು, ಅಲ್ಲಿಂದ ಪತ್ರ ಬರುತ್ತಿದ್ದಂತೆ ಕಾನೂನು ಜಾರಿ ಮಾಡಲು ನಿರ್ಧರಿಸಲಾಗಿದೆ.
ಆಯೋಗಕ್ಕೂ ದೂರು
ಉಪ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರು ವುದರಿಂದ ಈ ಕಾನೂನು ಜಾರಿಗೆ ಅವಕಾಶ ಮಾಡಿಕೊಡದಂತೆ ಚುನಾವಣೆ ಆಯೋಗ, ಸಿಎಂ ಮತ್ತು ಸರ್ಕಾರದ ಮುಖ್ಯಕಾರ್ಯದರ್ಶಿ ಅವರಿಗೆ ಅಹಿಂಸಾ ಸಂಘಟನೆ ಮನವಿ ಸಲ್ಲಿಸಿದೆ. ಕಾನೂನು ಜಾರಿ ಮಾಡಿದರೆ ತಕ್ಷಣ ಹೋರಾಟಕ್ಕಿಳಿಯುವ ಎಚ್ಚರಿಕೆಯನ್ನೂ ನೀಡಿದೆ.
ಅನುಷ್ಠಾನವೂ ಸುಲಭವಲ್ಲ
ಒಂದು ವೇಳೆ ಸರ್ಕಾರ ಹೊಸ ಕಾನೂನು ಜಾರಿ ಮಾಡಿದರೆ 2017ರ ಫೆ.9ರ ನಂತರ ಹೊರಡಿಸಿದ ಹಿಂಬಡ್ತಿ- ಮುಂಬಡ್ತಿ ಆದೇಶವೆಲ್ಲ,  ರದ್ದಾಗುತ್ತದೆ. ಅಲ್ಲದೆ ಹೊಸದಾಗಿ ಎಲ್ಲ ಇಲಾಖೆಯ ಜ್ಯೇಷ್ಠತಾ ಪಟ್ಟಿ ಮಾಡಿ, ಆಕ್ಷೇಪಣೆ ಕರೆದು ಮುಂಬಡ್ತಿ ನೀಡಬೇಕಾಗುತ್ತದೆ. ಈ ಪ್ರಕ್ರಿಯೆ ತಕ್ಷಣಕ್ಕೆ ಮುಗಿಯುವ ಕೆಲಸವೂ ಅಲ್ಲ.

Friday, October 12, 2018

**RSGE**::: ಪ್ರಾಂಶುಪಾಲರ ವಿರುದ್ಧ ಕ್ರಮಕ್ಕೆ ಸರ್ಕಾರ ಆದೇಶ

ಹುಬ್ಬಳ್ಳಿ ಆರ್ಯುವೇದ ಮಹಾವಿದ್ಯಾಲಯದಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗದವರಿಗೆ ಬೋಧಕ, ಬೋಧಕೇತರ ಹುದ್ದೆಗಳ ಭರ್ತಿ ಸಂದರ್ಭ ಮೀಸಲಾತಿ ನಿಯಮಗಳನ್ನು ಗಾಳಿಗೆ ತೂರಿರುವವರ ವಿರುದ್ಧ ಕೂಡಲೇ ಕ್ರಿಮಿನಲ್ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಸರ್ಕಾರ ಆದೇಶಿಸಿದೆ.
ನೇರ ನೇಮಕಾತಿ ಮತ್ತು ಮುಂಬಡ್ತಿ ಮೂಲಕ ಖಾಲಿ ಹುದ್ದೆ ಭರ್ತಿ ಮಾಡುವಾಗ ಮೀಸಲಾತಿ ನಿಯಮ ಉಲ್ಲಂಘಿಸಿರುವ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಆಯುಕ್ತರು ತನಿಖೆ ನಡೆಸಿ ನೀಡಿರುವ ವರದಿ ಹಿನ್ನೆಲೆಯಲ್ಲಿ ಸಂಸ್ಥೆಯ ಪ್ರಾಂಶುಪಾಲ ಮತ್ತು ಕಾರ್ಯದರ್ಶಿ ವಿರುದ್ದ ಎಸ್ಸಿ-ಎಸ್ಟಿ, ಹಿಂದುಳಿದ ವರ್ಗಗಳ ನಿಯಮ 2000ರ ನಿಯಮಗಳ ಕಲಂ 5ರ ಪ್ರಕಾರ ಕ್ರಮ ಜರುಗಿಸುವಂತೆ ಆದೇಶದಲ್ಲಿ (ಸಂಖ್ಯೆ: ಸಕಿ 37 ಎಸ್ಟಿಸಿ 2018) ತಿಳಿಸಲಾಗಿದೆ. ಅಲ್ಲದೆ, ಸದರಿ ಸಂಸ್ಥೆಗೆ ನೀಡಲಾಗುತ್ತಿರುವ ಅನುದಾನ ತಡೆ ಹಿಡಿಯಬೇಕು ಎಂದು ಆದೇಶಿಸಲಾಗಿದೆ.
1986ನೇ ಸಾಲಿನಿಂದ ಈ ತನಕವೂ ಬೋಧಕ ಮತ್ತು ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡುವಾಗ ಮೀಸಲಾತಿ ನಿಯಮ ಉಲ್ಲಂಘನೆಯಾಗಿರುವ ಬಗ್ಗೆ ಹಿರಿಯ ಪತ್ರಕರ್ತ ಭೋಜಶೆಟ್ಟರ ಸರ್ಕಾರಕ್ಕೆ ದೂರು ಸಲ್ಲಿಸಿ ಗಮನ ಸೆಳೆದಿದ್ದರು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿ, ಕ್ರಿಮಿನಲ್ ಪ್ರಕರಣ ದಾಖಲು ಮಾಡಲು ಆದೇಶಿಸಲಾಗಿತ್ತು.
ಪ್ರಕರಣ ಮುಚ್ಚಿಹಾಕಲು ಪ್ರಯತ್ನ
ಮೀಸಲು ನಿಯಮ ಉಲ್ಲಂಘನೆ ಗಂಭೀರ ಪ್ರಕರಣ ವಾಗಿದ್ದರೂ ರಾಜಕೀಯ ಪ್ರಭಾವ ಬಳಸಿ ಪ್ರಕರಣ ಮುಚ್ಚಿ ಹಾಕುವ ಮೂಲಕ ಸಂಸ್ಥೆ ಪ್ರಾಂಶುಪಾಲ, ಕಾರ್ಯದರ್ಶಿ ರಕ್ಷಣೆಗೆ ತೆರೆಮರೆ ಪ್ರಯತ್ನ ನಡೆಯುತ್ತಿದೆ ಎಂದು ಭೋಜಶೆಟ್ಟರ ದೂರಿದ್ದಾರೆ. ಕೆಲ ಪಟ್ಟಭದ್ರರ ಹಿತಾಸಕ್ತಿಗೆ ಮಣಿದು ಕ್ರಿಮಿನಲ್ ಪ್ರಕರಣ ದಾಖಲು ಮಾಡದೆ ಮೀನಮೇಷ ಎಣಿಸುತ್ತಿರುವ ಸರ್ಕಾರ, ಈಗಲಾದರೂ ಕ್ರಮ ಕೈಗೊಳ್ಳಬೇಕು.  ಇಲ್ಲದಿದ್ದರೆ ಹೋರಾಟ ಅನಿವಾರ್ಯ ಎಂದು ಎಚ್ಚರಿಕೆ ನೀಡಿದ್ದಾರೆ.
ಮುಂಬಡ್ತಿ ರಕ್ಷಿಸುವ ಕಾಯ್ದೆ ಜಾರಿ ಮಾಡುವುದಾಗಿ ಸರ್ಕಾರದ ವತಿಯಿಂದ ಸಲ್ಲಿಸುವ ಅಫಿಡವಿಟ್​ಗೆ ಸಿಎಂ ಗುರುವಾರ ಸಹಿ ಮಾಡಿ ಕಳಿಸಿಕೊಟ್ಟಿದ್ದರು. ನ್ಯಾಯಾಲಯದಲ್ಲಿ ಯಾವ ತೀರ್ಮಾನ ಆಗುತ್ತದೆ ಎಂದು ನೋಡಿ ಮುಂದಿನ ಚರ್ಚೆ ಮಾಡಲಾಗುತ್ತದೆ.
| ಪ್ರಿಯಾಂಕ್ ಖರ್ಗೆ ಸಮಾಜ ಕಲ್ಯಾಣ ಸಚಿವ
ಮುಂಬಡ್ತಿ ಕುರಿತು ನ್ಯಾಯಾಲಯ ವಿಚಾರಣೆ ಮುಂದೂಡಿದೆ. ಈ ಬಗ್ಗೆ ನಮ್ಮ ಕಾನೂನು ಇಲಾಖೆ ಪರಾಮರ್ಶೆ ನಡೆಸಿ ನಿರ್ಧಾರ ಕೈಗೊಳ್ಳಲಿದೆ.
| ಎಚ್.ಡಿ. ಕುಮಾರಸ್ವಾಮಿ ಸಿಎಂ

**RSGE**::: ಬಡ್ತಿ ಮೀಸಲು ಮತ್ತೆ ಯಥಾಸ್ಥಿತಿ,

ಬಡ್ತಿ ಮೀಸಲಿಗೆ ಸಂಬಂಧಿಸಿ ಯಥಾಸ್ಥಿತಿ ಕಾಯ್ದು ಕೊಳ್ಳುವುದು ರಾಜ್ಯ ಸರ್ಕಾರಕ್ಕೆ ಅನಿವಾರ್ಯವಾಗಿದೆ. ಎಸ್ಸಿ, ಎಸ್ಟಿ ನೌಕರರ ಹಿತ ಕಾಯುವ ಹಾಗೂ ಬಡ್ತಿ ಮೀಸಲಾತಿ ಮುಂದುವರಿಕೆಗೆ ಅವಕಾಶ ನೀಡುವ ತಿದ್ದುಪಡಿ ಕಾಯ್ದೆ ಜಾರಿ ಅನಿವಾರ್ಯವೆಂಬ ರಾಜ್ಯದ ವಾದಕ್ಕೆ ಸುಪ್ರೀಂ ಕೋರ್ಟ್ ಸೊಪು್ಪಹಾಕಿಲ್ಲ.
‘ಪ್ರಕರಣದ ಸೂಕ್ಷ್ಮತೆ ಹಾಗೂ ಜರೂರತ್ತನ್ನು ಪರಿಗಣಿಸಿ ಆದ್ಯತೆ ಮೇರೆಗೆ ಅಕ್ಟೋಬರ್ 23ರಿಂದ ಸಮಗ್ರ ವಿಚಾರಣೆ ನಡೆಸಲಿದ್ದೇವೆ’ ಎಂದು ನ್ಯಾಯಮೂರ್ತಿ ಉದಯ್ ಲಲಿತ್ ನೇತೃತ್ವದ ದ್ವಿಸದಸ್ಯ ನ್ಯಾಯಪೀಠ ತಿಳಿಸಿದೆ.
ಸದ್ಯಕ್ಕೇನೂ ಹೇಳಲ್ಲ: ಕಾಯ್ದೆ ಮುಂದುವರಿಕೆಗೆ ಅವಕಾಶ ನೀಡದಿದ್ದರೆ ಸಾವಿರಾರು ಎಸ್ಸಿ, ಎಸ್ಟಿ ನೌಕರರ ಸ್ಥಿತಿ ಡೋಲಾಯಮಾನವಾಗಲಿದೆ. ಅಂತಿಮ ತೀರ್ಪು ಬರುವ ತನಕ ಅವಕಾಶ ಕೊಡಿ ಎಂದು ಎಸ್ಸಿ, ಎಸ್ಟಿ ನೌಕರರ ಪರ ವಕೀಲೆ ಇಂದಿರಾ ಜೈಸಿಂಗ್ ವಾದಕ್ಕೆ ಪ್ರತಿಕ್ರಿಯಿಸಿದ ನ್ಯಾ. ಲಲಿತ್, ಸದ್ಯಕ್ಕೆ ನಾವು ಏನೂ ಹೇಳುವುದಿಲ್ಲ. ವಿಚಾರಣೆ ಹಂತದಲ್ಲಿ ಎಲ್ಲರ ವಾದಗಳನ್ನೂ ಆಲಿಸಲಿದ್ದೇವೆ ಎಂದು ತಿಳಿಸಿದರು.
ರಾಜ್ಯದ ಪರ ವಾದಿಸಿದ ಮುಕುಲ್ ರೋಹಟ್ಗಿ, ಕೋರ್ಟ್ ತೀರ್ಪಿನ ತನಕ ಯಥಾಸ್ಥಿತಿ ಕಾಯ್ದುಕೊಳ್ಳುವುದಾಗಿ ಅಡ್ವೊಕೇಟ್ ಜನರಲ್ ತಿಳಿಸಿದ್ದರು. ಆದರೆ, ರಾಜ್ಯದಲ್ಲಿ ಕಾಯ್ದೆಯ ಅನುಷ್ಠಾನ ಆಗದಿರುವುದರಿಂದ ಸಮಸ್ಯೆಯಾಗಿದೆ. ಇದನ್ನು ಜಾರಿ ಮಾಡಲೇ ಬೇಕಾದ ಪರಿಸ್ಥಿತಿ ಇದೆ ಎಂದರು. ಇದಕ್ಕೆ ದನಿಗೂಡಿಸಿದ ಇಂದಿರಾ ಜೈಸಿಂಗ್, ಕಾಯ್ದೆಯನ್ನು ಜಾರಿಗೊಳಿಸಿ ಸೂಪರ್ ನ್ಯೂಮರಿ ಹುದ್ದೆಗಳನ್ನು ಸೃಷ್ಟಿಸುವಂತಹ ಅವಕಾಶ ಕಾನೂನಿನಲ್ಲಿದೆ ಎಂದರು.
ಅರ್ತಾಕ ವಾದ: ಎರಡೂ ವಾದಗಳಿಗೆ ಆಕ್ಷೇಪ ತೆಗೆದ ಬಿ.ಕೆ. ಪವಿತ್ರಾ ಪರ ವಕೀಲ ರಾಜೀವ್ ಧವನ್, ಸುಪ್ರೀಂಕೋರ್ಟ್ ತೀರ್ಪಗಳನ್ನು ಬದಿಗೊತ್ತಲೆಂದೇ ಸರ್ಕಾರಗಳು ಕಾಯ್ದೆಗಳನ್ನು ಜಾರಿಗೆ ತರುತ್ತಿರುವುದೇ ತಪ್ಪು. ಅದಲ್ಲದೆ, ಅಂತಿಮ ತೀರ್ಪು ಬರುವ ತನಕ ಮುಂಬಡ್ತಿಗೆ ಅವಕಾಶ ನೀಡಬೇಕು ಎಂದು ವಾದಿಸುವುದೇ ಅರ್ತಾಕ. ಕೆಲ ದಿನಗಳ ಹಿಂದೆ ಸುಪ್ರೀಂಕೋರ್ಟ್​ನ ಸಾಂವಿಧಾನಿಕ ಪೀಠ ಮುಂಬಡ್ತಿ ವೇಳೆ ಕೆನೆ ಪದರ ತತ್ವ ಅಳವಡಿಸಬೇಕು ಎಂದೂ ತೀರ್ಪು ನೀಡಿರುವುದರಿಂದ ಆ ಹಿನ್ನೆಲೆಯಲ್ಲಿಯೂ ನಾವು ಸದರಿ ಪ್ರಕರಣವನ್ನು ನೋಡಬೇಕಾಗುತ್ತದೆ ಎಂದು ವಿವರಿಸಿದರು. ಇದೇ ವೇಳೆ, ಸುಪ್ರೀಂಕೋರ್ಟ್ ತೀರ್ಪಿನ ಉಲ್ಲಂಘನೆ ಮಾಡಿದೆ ಎಂದು ಸರ್ಕಾರದ ವಿರುದ್ಧ ಸಲ್ಲಿಸಲಾಗಿದ್ದ ನ್ಯಾಯಾಂಗ ನಿಂದನೆ ಅರ್ಜಿ ಇತ್ಯರ್ಥಗೊಂಡಿರುವ ಬಗ್ಗೆ ಸರ್ಕಾರದ ವಕೀಲ ಬಸವ ಪ್ರಭು ಪಾಟೀಲ್ ಸ್ಪಷ್ಟಪಡಿಸಿದರು.
ಬಾತ್​ರೂಂ ಹಾಡಿನ ವೃತ್ತಾಂತ
ಬಡ್ತಿ ಮೀಸಲಾತಿ ವಿರೋಧಿಸಿ ವಕೀಲ ರಾಜೀವ್ ಧವನ್ ವಾದಿಸುತ್ತಿದ್ದಾಗ ಪ್ರತಿವಾದಿ ಪರ ವಕೀಲೆ ಇಂದಿರಾ ಜೈಸಿಂಗ್ ಪದೇಪದೆ ಹಸ್ತಕ್ಷೇಪ ಮಾಡುತ್ತಿದ್ದುದು ಭಾರಿ ವಾಗ್ವಾದಕ್ಕೆ ಕಾರಣವಾಯಿತು. ‘ದಯವಿಟ್ಟು ನನಗೆ ಮಾತನಾಡಲು ಬಿಡುತ್ತೀರಾ? ಮಧ್ಯದಲ್ಲಿ ಬಾಯಿ ಹಾಕಿ ಏಕೆ ಹೀಗೆ ತೊಂದರೆ ಕೊಡುತ್ತೀರಿ? ಎಂದು ಧವನ್ ಸಿಡಿಮಿಡಿಗೊಂಡದ್ದಕ್ಕೆ ಪ್ರತಿಕ್ರಿಯಿಸಿದ ಜೈಸಿಂಗ್, ‘ಈ ರೀತಿ ವಾದ ಮಾಡುವುದನ್ನು ಹಿರಿಯರಾದ ನಿಮ್ಮಿಂದಲೇ ನಾನು ಕಲಿತೆ, ನೀವೇ ನನ್ನ ಗುರು’ ಎಂದು ಕಾಲೆಳೆದರು. ‘ನಾನು ನಿಮ್ಮ ಗುರುವಾಗಲು ಸಾಧ್ಯವೇ ಇಲ್ಲ. ನೀವು ಬಂದಾಗ ನಾನು ಈ ಕೋರ್ಟ್​ನಲ್ಲೇ ಇರಲಿಲ್ಲ’ ಎಂದು ವಾದ ಮುಂದುವರಿಸಿದರು. ಸುಪ್ರೀಂ ಕೋರ್ಟ್ ತೀರ್ಪಿಗೆ ಮಾನ್ಯತೆ ನೀಡದ ಸರ್ಕಾರದ ನಡೆ ಖಂಡನೀಯ. ನಾನಿದನ್ನು ಹಾಡಿನ ಮೂಲಕ ವಿವರಿಸಬಲ್ಲೆ. ಆದರೆ,
ಕೋರ್ಟ್​ನಲ್ಲಿ ಹಾಡುವುದು ಸರಿಯಲ್ಲ ಎಂದು ಧವನ್ ಹಾಸ್ಯಚಟಾಕಿ ಹಾರಿಸಿದರು. ಆಗ ಮತ್ತೋರ್ವ ವಕೀಲ ದಿನೇಶ್ ದ್ವಿವೇದಿ, ‘ನಿಮ್ಮ ಹಾಡನ್ನು ಕೇಳಬೇಕಿದೆ, ದಯವಿಟ್ಟು ಹಾಡಿ’ ಎಂದಿದ್ದಕ್ಕೆ, ‘ನಾನು ಹಾಡುವುದನ್ನು ಕೇಳಬೇಕೆಂದರೆ ನನ್ನ ಬಾತ್​ರೂಂ ಹೊರಗಡೆ ಬಂದು ನಿಲ್ಲಿ’ ಎಂದು ಧವನ್ ಹೇಳಿಬಿಟ್ಟರು. ಸಿಡಿಮಿಡಿಗೊಂಡ ಜೈಸಿಂಗ್, ‘ಅಲ್ಲಿಗೆ ಬಂದು ಹಾಡು ಕೇಳುವ ಅಗತ್ಯ ನನಗಂತೂ ಇಲ್ಲ’ ಎಂದರು. ಇದಕ್ಕೆ ಪ್ರತಿಕ್ರಿಯಿಸದ ನ್ಯಾಯಮೂರ್ತಿಗಳು, ಅ.23ಕ್ಕೆ ಸಿಗೋಣ ಎಂದು ಭೋಜನಕ್ಕೆ ತೆರಳಿದರು.

Sunday, September 30, 2018

**RSGE**::: ಹುದ್ದೆ ಕಡಿತ, ನೇಮಕಾತಿ ಸ್ಥಗಿತ?,

ಸರ್ಕಾರದಲ್ಲಿನ ಖಾಲಿ ಹುದ್ದೆಗಳ ಭರ್ತಿಗೆ ಮುಖ್ಯ ಕಾರ್ಯದರ್ಶಿ ಇಲಾಖಾವಾರು ಮಾಹಿತಿ ಕೇಳಿದ ಬೆನ್ನ ಹಿಂದೆಯೇ, ಹುದ್ದೆಗಳ ಕಡಿತ ಮಾಡಬೇಕು, ಹೊಸ ನೇಮಕಾತಿ ಮಾಡಬಾರದೆಂಬ ಶಿಫಾರಸು ಮಾಡಲು ಹಣಕಾಸು ಇಲಾಖೆ ಸಜ್ಜಾಗಿದೆ.
ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಆಯೋಗ ಆಡಳಿತ ಸುಧಾರಣೆಗೆ ಸಂಬಂಧಿಸಿ ತನ್ನ ಎರಡನೇ ವರದಿಯಲ್ಲಿರುವ ಅಂಶಗಳನ್ನು ಆಧರಿಸಿ ಸಚಿವ ಸಂಪುಟಕ್ಕೆ ಕಡತ ಮಂಡಿಸಲು ಸಿದ್ಧತೆ ನಡೆಸಿದೆ ಎಂದು ಸರ್ಕಾರದ ಉನ್ನತ ಮೂಲಗಳು ಖಚಿತಪಡಿಸಿವೆ. ಸರ್ಕಾರದಲ್ಲಿ ಸಾಕಷ್ಟು ಸಿಬ್ಬಂದಿ ಇಲ್ಲದೆ ಆಡಳಿತದ ಗುಣಮಟ್ಟ ದಿನೇದಿನೆ ಕುಸಿಯುತ್ತಿದೆ. ವೇತನ ಪರಿಷ್ಕರಣೆ ಆಯೋಗ ಸಾಧ್ಯವಾದಷ್ಟು ಹುದ್ದೆಗಳನ್ನು ನೇಮಕಾತಿ ಮಾಡುವ ಅಗತ್ಯವನ್ನು ಪ್ರತಿಪಾದಿಸಿತ್ತು. ಅದರ ಆಧಾರದಲ್ಲೇ ಮುಖ್ಯ ಕಾರ್ಯದರ್ಶಿ ಅವರು ಇಲಾಖಾವಾರು ಮಾಹಿತಿ ಕೋರಿದ್ದರು.
2ನೇ ವರದಿ ಶಿಫಾರಸು
ಸರ್ಕಾರಿ ನೌಕರರ ಸಿಎಲ್ 12 ರಿಂದ 8ಕ್ಕೆ ಇಳಿಸಬೇಕು. ನಾಲ್ಕನೇ ಶನಿವಾರ ರಜೆ ನೀಡಬೇಕು.
ವಿವಿಧ ಜಯಂತಿಗಳಿಗೆ ನೀಡುವ ರಜೆ ರದ್ದು ಮಾಡಬೇಕು.
ಕ್ಷೇತ್ರ ಇಲಾಖೆಗಳ ಸಿಬ್ಬಂದಿ ಸಚಿವಾಲಯಕ್ಕೆ ನಿಯೋಜನೆ ಮೇಲೆ ಬರಲು ಅವಕಾಶ.
ಎಸ್​ಒಗಳಿಗೆ ಬಡ್ತಿ ನೀಡಲು ಪದವಿ ಕಡ್ಡಾಯ ಮಾಡಬೇಕು.
ಸಚಿವಾಲಯದಲ್ಲಿ ಕಿರಿಯ ಸಹಾಯಕರು ಹಾಗೂ ಟೈಪಿಸ್ಟ್ ಹುದ್ದೆಯನ್ನು ಸಂಪೂರ್ಣ ರದ್ದು ಮಾಡಬೇಕು.
ನೌಕರರ ವಿರೋಧ
ಸಚಿವಾಲಯ ನೌಕರರ ಸಂಘ ಸೇರಿ ವಿವಿಧ ನೌಕರರ ಸಂಘಟನೆಗಳು ಈ ವರದಿ ಜಾರಿಗೆ ವಿರೋಧ ವ್ಯಕ್ತಪಡಿಸಿವೆ. ಈಗಾಗಲೇ ಸಿಬ್ಬಂದಿ ಸಂಖ್ಯೆ ಕಡಿಮೆ ಇರುವುದರಿಂದ ನೇಮಕಾತಿ ಮಾಡಬೇಕು. ಯಾವುದೇ ಹುದ್ದೆ ರದ್ದು ಮಾಡಬಾರದು, ರಜೆಗಳ ಸಂಖ್ಯೆ ಕಡಿತ ಬೇಡ. ಉಪ ಕಾರ್ಯದರ್ಶಿಗಳಿಗೆ ಕೆಎಎಸ್ ಅಧಿಕಾರಿಗಳಿಗೆ ಸರಿಸಮಾನ ವೇತನ ನೀಡಬೇಕು. ವೇತನ ಪರಿಷ್ಕರಣೆ ಸಂದರ್ಭದಲ್ಲಿ ಆಗಿರುವ ಅನ್ಯಾಯ ಸರಿಪಡಿಸಬೇಕು. ಎನ್​ಪಿಎಸ್ ಸಂಪೂರ್ಣ ರದ್ದು ಮಾಡಿ, ಹಳೆಯ ಪಿಂಚಣಿ ಯೋಜನೆ ಜಾರಿಗೆ ತರಬೇಕು ಎಂಬುದು ನೌಕರರ ಬೇಡಿಕೆಗಳಾಗಿವೆ.
ವೇತನ ಪರಿಷ್ಕರಣೆ ಆಯೋಗದ ಎರಡನೇ ವರದಿ ನೌಕರರ ವಿರೋಧಿಯಾಗಿದೆ. ಸರ್ಕಾರ ಏನಾದರೂ ಈ ವರದಿ ಜಾರಿಗೆ ಮುಂದಾದರೆ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ. ಯಾವುದೇ ಕಾರಣಕ್ಕೂ ಜಾರಿಗೆ ತರಲು ಬಿಡುವುದಿಲ್ಲ.
| ಸಿ. ಗುರುಸ್ವಾಮಿ, ಅಧ್ಯಕ್ಷ ಸಚಿವಾಲಯ ನೌಕರರ ಸಂಘ

Monday, September 24, 2018

**RSGE::: ಇನ್ಶೂರೆನ್ಸ್ ಪ್ರೀಮಿಯಂ ಯಾವಾಗ ದುಬಾರಿಯಾಗುತ್ತೆ ಗೊತ್ತಾ?,

ಸಿ.ಎಸ್. ಸುಧೀರ್
# ನನಗೆ 37 ವರ್ಷ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಸದ್ಯದಲ್ಲೇ ಒಂದು ಲೈಫ್ ಇನ್ಶೂರೆನ್ಸ್ ಪಾಲಿಸಿ ಖರೀದಿಸಲು ನಿರ್ಧರಿಸಿದ್ದೇನೆ. ಪಾಲಿಸಿಗಳ ಬಗ್ಗೆ ವಿಚಾರಿಸಿದಾಗ ಪ್ರೀಮಿಯಂ ಸ್ವಲ್ಪ ಹೆಚ್ಚಿಗೆ ಇದೆ ಅನಿಸಿತು. ನನ್ನ ವಯಸ್ಸಿನ ವ್ಯಕ್ತಿಗೆ ಸಾಮಾನ್ಯವಾಗಿ ಪ್ರೀಮಿಯಂ ಎಷ್ಟಿರಬಹುದು? ನಾನು ವಾರ್ಷಿಕವಾಗಿ 18 ಲಕ್ಷ ರೂ. ಸಂಬಳ ಪಡೆಯುತ್ತಿದ್ದು, ಇಬ್ಬರು ಅವಲಂಬಿತರಿದ್ದಾರೆ. ದಯವಿಟ್ಟು ಸೂಕ್ತ ಮಾಹಿತಿ ನೀಡಿ.
– ಪ್ರಶಾಂತ್, ಬೆಂಗಳೂರು
ಇನ್ಶೂರೆನ್ಸ್ ಪಡೆದುಕೊಳ್ಳುವ ವ್ಯಕ್ತಿಯ ವಯಸ್ಸು ಮತ್ತು ಎಷ್ಟು ಅವಧಿಗೆ ಇನ್ಶೂರೆನ್ಸ್ ಪಡೆಯಲಾಗುತ್ತಿದೆ ಎನ್ನುವುದರ ಮೇಲೆ ಪ್ರೀಮಿಯಂ ನಿಗದಿಯಾಗುತ್ತದೆ. ಸಾಮಾನ್ಯವಾಗಿ ಇನ್ಶೂರೆನ್ಸ್ ಪಡೆದುಕೊಳ್ಳುವ ವ್ಯಕ್ತಿಗೆ ವಯಸ್ಸಾಗಿದ್ದು, ಹೆಚ್ಚು ಅವಧಿಗೆ ಇನ್ಶೂರೆನ್ಸ್ ಪಡೆಯುತ್ತಿದ್ದರೆ ಪ್ರೀಮಿಯಂ ದುಬಾರಿಯಾಗುತ್ತದೆ. ಇದರ ಜತೆಗೆ, ಇನ್ಶೂರೆನ್ಸ್ ಪಡೆದುಕೊಳ್ಳುವ ವ್ಯಕ್ತಿ ಧೂಮಪಾನ ಮಾಡುತ್ತಿದ್ದರೂ ಪ್ರೀಮಿಯಂ ಜಾಸ್ತಿಯಾಗುತ್ತದೆ.
ಇನ್ಶೂರೆನ್ಸ್ ಪ್ರೀಮಿಯಂ ದುಬಾರಿ ಅನಿಸುತ್ತಿದೆ ಎಂದು ಹೇಳುವುದನ್ನು ನೋಡಿದಾಗ ಹೂಡಿಕೆ ಆಧಾರಿತ ಲೈಫ್ ಇನ್ಶೂರೆನ್ಸ್ ಖರೀದಿಗೆ ನೀವು ಚಿಂತನೆ ಮಾಡುತ್ತಿದ್ದೀರಿ ಎನಿಸುತ್ತದೆ. ಸಾಮಾನ್ಯವಾಗಿ ಹೂಡಿಕೆ ಆಧಾರಿತ ಮನಿ ಬ್ಯಾಕ್ ಪಾಲಿಸಿಗಳಲ್ಲಿ ಇನ್ಶೂರೆನ್ಸ್ ಮೊತ್ತದ ಜತೆಗೆ ಹೂಡಿಕೆಯ ಮೊತ್ತವೂ ಸೇರಿರುವುದರಿಂದ ಪ್ರೀಮಿಯಂ ಹೆಚ್ಚಿಗೆ ಇದ್ದೇ ಇರುತ್ತದೆ. ಆದರೆ ಟಮ್ರ್ ಲೈಫ್ ಇನ್ಶೂರೆನ್ಸ್​ನಲ್ಲಿ ಹಾಗಾಗುವುದಿಲ್ಲ. ಇಲ್ಲಿ ಇನ್ಶೂರೆನ್ಸ್ ಕಂಪನಿಗಳು ಇನ್ಶೂರೆನ್ಸ್ ಮೊತ್ತಕ್ಕೆ ತಕ್ಕಂತೆ ಪ್ರೀಮಿಯಂ ಅನ್ನು ಮಾತ್ರ ಪಡೆದುಕೊಳ್ಳುತ್ತವೆ. ಉದಾಹರಣೆಗೆ ಹೇಳುವುದಾದರೆ, ನಿಮ್ಮ ವಯಸ್ಸಿಗೆ ಅನುಗುಣವಾಗಿ ಲೆಕ್ಕ ಹಾಕಿ ನೋಡಿದಾಗ, ನಿಮಗೆ 1 ಕೋಟಿ ಮೊತ್ತದ ಟಮ್ರ್ ಲೈಫ್ ಇನ್ಶೂರೆನ್ಸ್​ಗೆ
11 ರಿಂದ 12 ಸಾವಿರ ರೂ. ವಾರ್ಷಿಕ ಪ್ರೀಮಿಯಂ ಬರುತ್ತದೆ. ಟಮ್ರ್ ಲೈಫ್ ಇನ್ಶೂರೆನ್ಸ್​ನಲ್ಲಿ ಮೆಚ್ಯೂರಿಟಿ ಅನ್ನೋ ಅಂಶ ಇಲ್ಲ. ವ್ಯಕ್ತಿಯ ಮರಣದ ನಂತರದಲ್ಲೂ ಕುಟುಂಬಕ್ಕೆ ಆರ್ಥಿಕ ಭದ್ರತೆ ನೀಡುವ ವಿಮೆಯೇ ಟಮ್ರ್ ಲೈಫ್ ಇನ್ಶೂರೆನ್ಸ್ ಪಾಲಿಸಿ. ಇದು ಪ್ರತಿ ಕುಟುಂಬದ ಪಾಲಿನ ಆಪತ್ಬಾಂಧವ. ಪಾಲಿಸಿದಾರರು ಆಕಸ್ಮಿಕ ಸಾವಿನ ವಿರುದ್ಧ ಪಡೆಯುವ ವಿಮೆ ರಕ್ಷಣೆ ಸೌಲಭ್ಯವನ್ನು ಟಮ್ರ್ ಇನ್ಶೂರೆನ್ಸ್ ಯೋಜನೆಯು ಒಳಗೊಂಡಿರುತ್ತದೆ. ಒಂದು ವೇಳೆ, ಪಾಲಿಸಿ ಅವಧಿಯಲ್ಲಿ ಪಾಲಿಸಿದಾರನು ಮೃತಪಟ್ಟರೆ, ಗರಿಷ್ಠ ಮೊತ್ತದ ವಿಮಾ ಸುರಕ್ಷತೆಯನ್ನು ಇದು ಖಾತರಿಪಡಿಸುತ್ತದೆ. ಟಮ್ರ್ ಇನ್ಶೂರೆನ್ಸ್ ಅತ್ಯಂತ ಅಗ್ಗ ಮತ್ತು ಉತ್ತಮ ಜೀವ ವಿಮೆ. ನಿಮ್ಮ ವಾರ್ಷಿಕ ಆದಾಯವನ್ನು ಪರಿಗಣಿಸಿ ನೋಡಿದಾಗ ನೀವು ಕನಿಷ್ಠ 2 ಕೋಟಿ ರೂ. ಮೊತ್ತದ ಟಮ್ರ್ ಲೈಫ್ ಪಾಲಿಸಿ ಪಡೆದುಕೊಂಡು ಉಳಿದ ಹಣವನ್ನು ಹೆಚ್ಚು ಲಾಭ ತಂದುಕೊಡುವ ಕಡೆ ಹೂಡಿಕೆ ಮಾಡುವುದು ಉತ್ತಮವೆನಿಸುತ್ತದೆ.
# ಮಂಗಳೂರಿನಲ್ಲಿ 57 ಲಕ್ಷ ರೂ. ನೀಡಿ ಒಂದು ಫ್ಲ್ಯಾಟ್ ಖರೀದಿಸಲು ಮುಂದಾಗಿದ್ದೇನೆ. ಫ್ಲ್ಯಾಟ್ ಮೌಲ್ಯ 50 ಲಕ್ಷ ರೂ.ಗಿಂತ ಜಾಸ್ತಿ ಇದ್ದರೆ ಶೇ. 1ರಷ್ಟು ಟಿಡಿಎಸ್ (ಮೂಲದಲ್ಲೇ ತೆರಿಗೆ ಕಡಿತ) ಪಾವತಿಸಬೇಕು ಎಂಬ ನಿಯಮವಿದೆಯೇ? ಟಿಡಿಎಸ್ ಒಟ್ಟು ಖರೀದಿ ಮೌಲ್ಯದ (57 ಲಕ್ಷ ರೂ.) ಭಾಗವೇ ಆಗಿರುವುದೇ ಅಥವಾ ಪ್ರತ್ಯೇಕವೇ? ಸೂಕ್ತ ಮಾಹಿತಿ ನೀಡಿ.
–  ರವಿರಾಜ್ ಶೆಟ್ಟಿ, ಮಂಗಳೂರು
ಯಾವುದೇ ಫ್ಲ್ಯಾಟ್ ಖರೀದಿಸುವಾಗ ಅದರ ಮೌಲ್ಯ 50 ಲಕ್ಷ ರೂ.ಗಿಂತ ಹೆಚ್ಚಿದ್ದರೆ ಶೇ. 1ರಷ್ಟು ಟಿಡಿಎಸ್ ಪಾವತಿಸಬೇಕಾಗುತ್ತದೆ. ಟಿಡಿಎಸ್ ಅಂದ್ರೆ ಮೂಲದಲ್ಲೇ ತೆರಿಗೆ ಕಡಿತ ಮಾಡುವುದು ಎಂದರ್ಥ. ನೀವು ತಿಳಿಸಿರುವಂತೆ 57 ಲಕ್ಷ ರೂ. ಮೌಲ್ಯದ ಫ್ಲ್ಯಾಟ್ ಖರೀದಿಸಲು ಮುಂದಾದರೆ 57 ಸಾವಿರ ರೂ.ಗಳನ್ನು ಟಿಡಿಎಸ್ ಆಗಿ ಪಾವತಿಸಬೇಕಾಗುತ್ತದೆ. ನೀವು ಫ್ಲ್ಯಾಟ್ ಮಾಲೀಕರಿಗೆ ನೀಡುವ 57 ಲಕ್ಷ ರೂ.ನಲ್ಲೇ ಟಿಡಿಎಸ್ ನ ಭಾಗವೂ ಒಳಗೊಂಡಿರುತ್ತದೆ. 57 ಲಕ್ಷದಲ್ಲಿ ಟಿಡಿಎಸ್ ಮೊತ್ತವಾದ 57 ಸಾವಿರವನ್ನು ಆದಾಯ ತೆರಿಗೆ ಇಲಾಖೆಗೆ ಪಾವತಿಸಿ ಅದರ ಚಲನ್ ಅನ್ನು ಫ್ಲ್ಯಾಟ್ ಮಾಲೀಕರಿಗೆ ನೀಡಬೇಕಾಗುತ್ತದೆ. ನೀವು ಟಿಡಿಎಸ್ ಪಾವತಿಸಿದ್ದರೆ ಮಾತ್ರ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಆಸ್ತಿ ರಿಜಿಸ್ಟ್ರೇಷನ್ ಮಾಡಲು ಅವಕಾಶ ನೀಡಲಾಗುತ್ತದೆ. ಫ್ಲ್ಯಾಟ್​ನ ಖರೀದಿದಾರ, ಮಾರಾಟಗಾರ ವಿಳಾಸ ಹಾಗೂ ಫ್ಲ್ಯಾಟ್​ನ ಮೌಲ್ಯವನ್ನು ಫಾರಂ 26ಕ್ಯೂಬಿಯಲ್ಲಿ ನಮೂದಿಸಿ ಟಿಡಿಎಸ್ ಪಾವತಿ ಮಾಡಬಹುದು. ಡಿಡಿಡಿ.ಠಿಜ್ಞಿಠಛ್ಝ.ಟಞ
# ಮನೆ ನವೀಕರಣ (ರೆನೋವೇಷನ್) ಮಾಡಲು ಹಣವಿಲ್ಲ. ಪರ್ಸನಲ್ ಲೋನ್ ಪಡೆದು ಮನೆ ಕಟ್ಟುವ ಆಲೋಚನೆ ಮಾಡಿದ್ದೇನೆ. ಇದು ಸರಿಯಾದ ನಿರ್ಧಾರವೇ?
– ರವಿಕುಮಾರ್, ಕೋಲಾರ
ಮನೆ ನವೀಕರಣಕ್ಕೆ ಅಂತಲೇ ಹೋಮ್ ರೆನೋವೇಷನ್ ಲೋನ್ ಅಂತ ಕೊಡ್ತಾರೆ. ಇದು ಪರ್ಸನಲ್ ಲೋನ್​ನ ಒಂದು ಭಾಗವೇ ಆಗಿದೆ. ಈ ಹೊಮ್ ರೆನೋವೇಷನ್ ಅಡಿಯಲ್ಲಿ ಅರ್ಜಿ ಸಲ್ಲಿಸಿ ಸಾಲ ಪಡೆದರೆ ಬಡ್ಡಿದರ ಕಡಿಮೆ ಇರುತ್ತದೆ. ಆದರೆ, ಬರೀ ಪರ್ಸನಲ್ ಲೋನ್ ಅಂತ ಅರ್ಜಿ ಸಲ್ಲಿಸಿ ಸಾಲ ಪಡೆದರೆ ಬಡ್ಡಿದರ ಹೆಚ್ಚಿರುತ್ತದೆ. ಮನೆಯ ಪೇಂಟಿಂಗ್​ನಿಂದ ಹಿಡಿದು ಕಟ್ಟಡ ವಿಸ್ತರಣೆ ಮಾಡುವುದಕ್ಕೂ ಈ ಲೋನ್ ಅವಕಾಶ ಕಲ್ಪಿಸುತ್ತದೆ. ಕೆಲ ಬ್ಯಾಂಕ್​ಗಳು 20 ಲಕ್ಷದಿಂದ 30 ಲಕ್ಷದವರೆಗೂ ರೆನೋವೇಷನ್ ಲೋನ್ ನೀಡುತ್ತವೆ. ಬಡ್ಡಿದರ ಒಂದೊಂದು ಬ್ಯಾಂಕ್​ನಲ್ಲಿ ಒಂದೊಂದು ರೀತಿ ಇದ್ದು, ಶೇ.8.5ರಿಂದ ಶೇ.14ವರೆಗೂ ಇದೆ. ನಿಮ್ಮ ಅಗತ್ಯಗಳು ಮತ್ತು ಬಡ್ಡಿದರವನ್ನು ಆಧರಿಸಿ ಸೂಕ್ತ ಬ್ಯಾಂಕ್ ಆಯ್ಕೆ ಮಾಡಿ ಹೋಮ್ ರೆನೋವೇಷನ್ ಲೋನ್ ಪಡೆಯುವುದು ಉತ್ತಮ ನಿರ್ಧಾರ.
# ಎರಡು ವರ್ಷಗಳ ಹಿಂದೆ ಕಾರ್ ಲೋನ್ ತೆಗೆದುಕೊಂಡಿದ್ದೆ. ಮೂರು ತಿಂಗಳ ಹಿಂದಷ್ಟೇ ಆ ಲೋನ್ ಕ್ಲೋಸ್ ಮಾಡಿದೆ. ನನ್ನ ಕಾರಿಗೆ ಕಾಂಪ್ರಹೆನ್ಸಿವ್ (ಕಂಪ್ಲೀಟ್ ಕವರೇಜ್) ಇನ್ಶೂರೆನ್ಸ್ ಮಾಡಿಸಿದ್ದೆ. ಇತ್ತೀಚೆಗಷ್ಟೇ ಅಗ್ನಿ ಅವಘಡ ದಲ್ಲಿ ನನ್ನ ಕಾರು ಸಂಪೂರ್ಣವಾಗಿ ಸುಟ್ಟು  ಭಸ್ಮವಾಯಿತು. ನನಗೆ ಈಗ ವಿಮೆ ಪರಿಹಾರ ಸಿಗುತ್ತದೋ ಇಲ್ಲವೋ ಎಂಬ ಚಿಂತೆಯಾಗಿದೆ. ಸೂಕ್ತ ಸಲಹೆ ನೀಡಿ.
– ಹರೀಶ್, ಕನಕಪುರ
ನೀವು ಕಾಂಪ್ರಹೆನ್ಸಿವ್ ಇನ್ಶೂರೆನ್ಸ್ ಮಾಡಿಸಿದ್ದು, ನಿಮ್ಮ ಕಾರು ನಿಜವಾಗಿಯೂ ಅಗ್ನಿ ಅವಘಡದಲ್ಲಿ ಸುಟ್ಟು ಭಸ್ಮವಾಗಿದ್ದ ಪಕ್ಷದಲ್ಲಿ ಖಂಡಿತವಾಗಿಯೂ ನಿಮಗೆ ಇನ್ಶೂರೆನ್ಸ್ ಕವರೇಜ್ ಸಿಗುತ್ತದೆ. ಕಾರ್ ಇನ್ಶೂರೆನ್ಸ್​ನಲ್ಲಿ ಥರ್ಢ್ ಪಾರ್ಟಿ ಇನ್ಶೂರೆನ್ಸ್ ಮತ್ತು ಕಾಂಪ್ರಹೆನ್ಸಿವ್ ಇನ್ಶೂರೆನ್ಸ್ ಎಂಬ ಎರಡು ಮಾದರಿಗಳಿವೆ. ಥರ್ಡ್ ಪಾರ್ಟಿ ಇನ್ಶೂರೆನ್ಸ್​ನಲ್ಲಿ ನೀವು ಅಪಘಾತ ಮಾಡಿದ ವಾಹನಕ್ಕಷ್ಟೇ ಇನ್ಶೂರೆನ್ಸ್ ಕವರೇಜ್ ಸಿಗುತ್ತದೆ. ಆದರೆ ಕಾಂಪ್ರಹೆನ್ಸಿವ್ ಇನ್ಶೂರೆನ್ಸ್​ನಲ್ಲಿ ನಿಮ್ಮ ವಾಹನಕ್ಕೆ ಮತ್ತು ನೀವು ಅಪಘಾತ ಮಾಡಿದ ವಾಹನಕ್ಕೆ ಇನ್ಶೂರೆನ್ಸ್ ಕವರೇಜ್ ಇರುತ್ತದೆ. ಈ ಕೆಳಗಿನ ಸಂದರ್ಭಗಳಲ್ಲಿ ನಿಮಗೆ ಕಾಂಪ್ರಹೆನ್ಸಿವ್ ಇನ್ಶೂರೆನ್ಸ್ ಕವರೇಜ್ ಸಿಗುತ್ತದೆ.
ಪ್ರಕೃತಿ ವಿಕೋಪಗಳಿಂದ ವಾಹನಕ್ಕೆ ಹಾನಿ
ಕಳ್ಳತನ
ಅಗ್ನಿ ಅವಘಡ
ದಾಂಧಲೆಯಾದಾಗ
ಪ್ರಾಣಿಗಳಿಂದಾದ ಹಾನಿ
ಮರಗಳು ಬಿದ್ದು ಹಾನಿಯಾದಾಗ
ಕಾನೂನು ಸುವ್ಯವಸ್ಥೆ ಸರಿಯಿರದೆ ವಾಹನಕ್ಕೆ ಹಾನಿಯಾದಾಗ
ನೀವೂ ಪ್ರಶ್ನೆ ಕೇಳಬಹುದು
ಮನಿ ಮಾತು ಅಂಕಣದಲ್ಲಿ ಆರ್ಥಿಕ ವಿಚಾರಗಳ ಬಗ್ಗೆ ಮಾಹಿತಿ ವಿಶ್ಲೇಷಣೆಗಳನ್ನು ನೀಡುವುದು ಮಾತ್ರವಲ್ಲ, ಓದುಗರ ಪ್ರಶ್ನೆಗಳಿಗೆ ಉತ್ತರವನ್ನೂ ನೀಡಲಾಗುತ್ತದೆ. ಹೂಡಿಕೆ, ಉಳಿತಾಯ, ತೆರಿಗೆ, ವಿಮೆ, ಷೇರು ಮಾರುಕಟ್ಟೆ – ಹೀಗೆ ವಿತ್ತರಂಗಕ್ಕೆ ಸಂಬಂಧಪಟ್ಟ ಪ್ರಶ್ನೆಗಳನ್ನು ಕಳುಹಿಸಬಹುದು. ನಮ್ಮ ತಜ್ಞರ ತಂಡದವರು ಉತ್ತರ ನೀಡುತ್ತಾರೆ. ಪ್ರಶ್ನೆ ಕಳಿಸುವವರು ಕಡ್ಡಾಯವಾಗಿ ಮೊಬೈಲ್ ಸಂಖ್ಯೆ ನಮೂದಿಸಿ.
ಪ್ರಶ್ನೆ ಕಳಿಸಬೇಕಾದ ಇಮೇಲ್: vittasuggi@gmail.com

**RSGE**::: ಚೆಸ್ ಒಲಿಂಪಿಯಾಡ್​ಗೆ ಭಾರತದ ಅಂಧ ಸ್ಪರ್ಧಿ!,

ಭಾರತದ ಅಂಧ ಚೆಸ್ ಆಟಗಾರ್ತಿ ವೈಶಾಲಿ ನರೇಂದ್ರ ಸಲಾವ್​ಕರ್, ವಿಶ್ವ ಚೆಸ್ ಒಲಿಂಪಿಯಾಡ್​ನಲ್ಲಿ ಸ್ಪರ್ಧಿಸಲಿರುವ ಭಾರತದ ಮೊದಲ ದೃಷ್ಟಿಹೀನ ಸ್ಪರ್ಧಿ ಎನಿಸಲಿದ್ದಾರೆ. ಜಾರ್ಜಿಯಾದ ಬಟುಮಿಯಲ್ಲಿ ಭಾನುವಾರ ಆರಂಭವಾಗಲಿರುವ 43ನೇ ಆವೃತ್ತಿಯ ಒಲಿಂಪಿಯಾಡ್​ನಲ್ಲಿ, ಇಂಟರ್​ನ್ಯಾಷನಲ್ ಬ್ರೖೆಲಿ ಚೆಸ್ ಸಂಸ್ಥೆ (ಐಬಿಸಿಎ) ತಂಡದ ಭಾಗವಾಗಿ ವೈಶಾಲಿ ಸ್ಪರ್ಧೆ ಮಾಡಲಿದ್ದಾರೆ. ಫಿಡೆ ಮಾನ್ಯತೆ ಹೊಂದಿರುವ ಐಬಿಸಿಎ, ಒಲಿಂಪಿಯಾಡ್​ನ ಮುಕ್ತ ಹಾಗೂ ಮಹಿಳಾ ವಿಭಾಗಕ್ಕೆ ತಂಡವನ್ನು ಕಳುಹಿಸಿಕೊಟ್ಟಿದೆ. ‘ಮಹಾರಾಷ್ಟ್ರದ 45 ವರ್ಷದ ವೈಶಾಲಿ, ಕಳೆದ 20-25 ವರ್ಷಗಳಿಂದ ಚೆಸ್ ಆಡುತ್ತಿದ್ದು, ಎಂಟು ಬಾರಿ ರಾಷ್ಟ್ರೀಯ ಚಾಂಪಿಯನ್ ಕೂಡ ಆಗಿದ್ದಾರೆ. ಈ ಸಾಧನೆಗೆ ಅವರು ಅರ್ಹರಾಗಿದ್ದಾರೆ’ ಎಂದು ಐಬಿಸಿಎ ಜತೆ, ಅಖಿಲ ಭಾರತ ಅಂಧರ ಚೆಸ್ ಸಂಸ್ಥೆ (ಎಐಸಿಎಫ್​ಬಿ) ಅಧ್ಯಕ್ಷರೂ ಆಗಿರುವ ಜಾಧವ್ ಚಾರುದತ್ತ ಸಂಭ್ರಮ ವ್ಯಕ್ತಪಡಿಸಿದ್ದಾರೆ. ಸ್ಪೇನ್​ನ ಇಬ್ಬರು ಚೆಸ್ ಆಟಗಾರ್ತಿಯರಿಗೆ ಟೂರ್ನಿಯಲ್ಲಿ ಭಾಗವಹಿಸಲು ಸಾಧ್ಯವಾಗದ ಕಾರಣ ವೈಶಾಲಿಗೆ ಈ ಅದೃಷ್ಟ ಒಲಿದಿದೆ. ಒಲಿಂಪಿಯಾಡ್ ಅಧಿಕೃತ ವೆಬ್​ಸೈಟ್ ಪ್ರಕಾರ, ಅಂತಾರಾಷ್ಟ್ರೀಯ ಕಿವುಡರ ಚೆಸ್ ಸಮಿತಿ ತಂಡದ ಭಾಗವಾಹಿ ಭಾರತದ ಮಲಿಕಾ ಹಂಡಾ ಸ್ಪರ್ಧೆ ಮಾಡಲಿದ್ದಾರೆ.

**RSGE**:::

ಸರ್ಕಾರಿ ಶಾಲೆಗಳ ಶಿಕ್ಷಕರು ವಾರ್ಷಿಕ ಶೈಕ್ಷಣಿಕ ಅವಧಿಯಲ್ಲಿ ಕೇವಲ ಶೇ.19.1 ಸಮಯವನ್ನು ವಿದ್ಯಾರ್ಥಿಗಳ ಕಲಿಕೆಗೆ ಮೀಸಲಿಡುತ್ತಿದ್ದಾರೆ. ಉಳಿದ ಶೇ.81 ಅವಧಿ ಸರ್ಕಾರದ ವಿವಿಧ ಕೆಲಸದಲ್ಲೇ ಕಳೆದುಹೋಗುತ್ತಿದೆ ಎಂಬ ಆತಂಕಕಾರಿ ವಿಷಯವನ್ನು ಶೈಕ್ಷಣಿಕ ಯೋಜನೆ ಹಾಗೂ ಆಡಳಿತದ ರಾಷ್ಟ್ರೀಯ ಸಂಸ್ಥೆ(ಎನ್​ಐಇಪಿಎ)ಸಮೀಕ್ಷಾ ವರದಿ ಹೊರಗೆಡವಿದೆ.
ಪಾಠ ಮಾಡಲೇ ಬಿಡುವುದಿಲ್ಲ!
ಶೈಕ್ಷಣಿಕ ವರ್ಷ ಆರಂಭದಿಂದ ಸೆಪ್ಟೆಂಬರ್​ವರೆಗೆ ಪಠ್ಯಪುಸ್ತಕ, ಸಮವಸ್ತ್ರ, ಸೈಕಲ್ ವಿತರಣೆ ಹಾಗೂ ಇತರ ಸರ್ಕಾರಿ ಕೆಲಸಗಳಲ್ಲಿಯೇ ಶಿಕ್ಷಕರು ಹೈರಾಣಾಗಿ ಹೋಗುತ್ತಾರೆ. ಉಳಿದ ದಿನಗಳಲ್ಲಿಯೂ ಸರ್ಕಾರ ಹೇಳಿದ ಇತರ ಕೆಲಸಗಳನ್ನು ಮಾಡಬೇಕಾಗುತ್ತದೆ. ಸರ್ಕಾರದ ವಿವಿಧ ಕೆಲಸಗಳನ್ನು ಮಾಡುವುದು ಹೇಗೆಂದು ಹೇಳಿಕೊಡುತ್ತಾರೆ. ಆದರೆ ಪಠ್ಯದ ಗುಣಮಟ್ಟ ಏರಿಕೆಗೆ ಯಾವುದೇ ಮಾರ್ಗಸೂಚಿಗಳು ಬರುವುದಿಲ್ಲ. ಇದರಿಂದ ಸರ್ಕಾರಿ ಶಾಲೆಗಳ ಗುಣಮಟ್ಟ ಕುಸಿಯುತ್ತಿದೆ ಎಂಬ ಶಿಕ್ಷಕರ ಅಭಿಪ್ರಾಯವೂ ವರದಿಯಲ್ಲಿ ಉಲ್ಲೇಖವಾಗಿದೆ.
ಏನೇನು ಶಿಕ್ಷಣೇತರ ಕೆಲಸ?
# ಚುನಾವಣೆ ಅಧಿಕಾರಿ, ಮತಚೀಟಿ ನೋಂದಣಿಗೆ ಸಹಕಾರ
# ಬಿಸಿಯೂಟ ಹಾಗೂ ಕ್ಷೀರಭಾಗ್ಯ ಉಸ್ತುವಾರಿ
# ಆದಾಯ ಹಾಗೂ ಜಾತಿ ಪತ್ರದ ನೋಂದಣಿ
# ಶಿಕ್ಷಣ ಇಲಾಖೆಯ ಇತರ ಕೆಲಸಗಳು
# ಜನಗಣತಿ
# ಶಾಲೆಯಲ್ಲಿ ಗುಮಾಸ್ತ ಹಾಗೂ ಪರಿಚಾರಕರು ಮಾಡುವ ಎಲ್ಲ ಕೆಲಸ
# ಬಯಲು ಬಹಿರ್ದೆಸೆ ಮುಕ್ತ ಸಮಾಜ ಸೇರಿ ಇತರ ಸರ್ಕಾರಿ ಯೋಜನೆಗಳ ಕುರಿತು ಸಮೀಕ್ಷೆ
# ಪಲ್ಸ್ ಪೋಲಿಯೊ ಲಸಿಕೆ ಕಾರ್ಯಕ್ರಮ
ನೆಪಮಾತ್ರದ ಅನುಪಾತ
ಶಿಕ್ಷಣ ಹಕ್ಕು ಕಾಯ್ದೆ ಪ್ರಕಾರ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಅನುಪಾತ 30:1 ಇರಬೇಕು. ಆದರೆ ಕರ್ನಾಟಕ ಸೇರಿ ಯಾವುದೇ ರಾಜ್ಯಗಳಲ್ಲಿ ಈ ಅನುಪಾತ ಅನುಷ್ಠಾನಕ್ಕೆ ಬಂದಿಲ್ಲ. ವರದಿಯಲ್ಲಿ ಮಹಾರಾಷ್ಟ್ರದ ಒಂದು ಶಾಲೆಯ ಉದಾಹರಣೆ ನೀಡಲಾಗಿದ್ದು, ಆ ಶಾಲೆಯಲ್ಲಿ 8 ಶಿಕ್ಷಕರಿದ್ದರೆ, ಐವರು ಶಿಕ್ಷಣೇತರ ಚಟುವಟಿಕೆಯಲ್ಲಿ ನಿರತರಾಗಿರುತ್ತಾರೆ. ಉಳಿದ ಮೂವರು ಶಿಕ್ಷಕರು 555 ವಿದ್ಯಾರ್ಥಿಗಳನ್ನು ನಿಭಾಯಿಸಬೇಕಿದೆ. ಶೇ.15 ಶಿಕ್ಷಕರು ಪಾಠ ಮಾಡುವುದು ಬಿಟ್ಟು ಕಾಯಂ ಆಗಿ ಸರ್ಕಾರಿ ಚಾಕರಿಯಲ್ಲಿ ನಿರತರಾಗಿದ್ದಾರೆ.
> ದೇಶದಲ್ಲಿರುವ ಶಾಲೆಗಳು: 14.67 ಲಕ್ಷ
> ಸರ್ಕಾರಿ ಶಾಲೆಗಳು: 10.7 ಲಕ್ಷ
> ಸರ್ಕಾರಿ ಶಾಲೆ ವಿದ್ಯಾರ್ಥಿಗಳು: 11 ಕೋಟಿ
> ಒಟ್ಟು ಶಿಕ್ಷಕರು: 80.7 ಲಕ್ಷ
> ಸರ್ಕಾರಿ ಶಾಲೆ ಶಿಕ್ಷಕರು: 47.3 ಲಕ್ಷ
ಶಿಫಾರಸುಗಳೇನು?
# ಶಿಕ್ಷಣ ಹಕ್ಕು ಕಾಯ್ದೆಯಲ್ಲಿ ಉಲ್ಲೇಖವಾಗಿರುವಂತೆ ಶಿಕ್ಷಣೇತರ ಚಟುವಟಿಕೆಗಳಿಗೆ ಶಿಕ್ಷಕರನ್ನು ಬಳಸಿಕೊಳ್ಳಬಾರದು.
# ಶಿಕ್ಷಣ ಹಾಗೂ ಶಿಕ್ಷಣೇತರ ಚಟುವಟಿಕೆಗಳ ವ್ಯಾಖ್ಯಾನವನ್ನು ಶಿಕ್ಷಣ ಇಲಾಖೆ ಮಾಡಬೇಕು.
# ಶಿಕ್ಷಕರನ್ನು ಆಡಳಿತದ ಕೆಲಸಕ್ಕೆ ಬಳಸಿಕೊಳ್ಳುವುದನ್ನು ನಿರ್ಬಂಧಿಸಬೇಕು.
# ಒಂದು ದೇಶ, ಒಂದು ಚುನಾವಣೆ ವ್ಯವಸ್ಥೆಯಿಂದ ಪದೇಪದೆ ಶಿಕ್ಷಕರ ಮೇಲಿನ ಚುನಾವಣೆ ಕೆಲಸದ ಒತ್ತಡ ತಪ್ಪಲಿದೆ.
ನಿಯಮ ಹೇಳುವುದೇನು?
# ಕಾಯ್ದೆ ಪ್ರಕಾರ ಕಿರಿಯ ಪ್ರಾಥಮಿಕ ಶಾಲೆಗೆ ವಾರ್ಷಿಕ 200 ಕೆಲಸದ ದಿನ
# ಹಿರಿಯ ಪ್ರಾಥಮಿಕ ಶಾಲೆಗೆ 220 ಕೆಲಸದ ದಿನ
# ಆದರೆ ಕೇವಲ 42 ದಿನಗಳು ಕಲಿಕೆಗೆ ಮೀಸಲು

**RSGE**::: ಪಿಡಿಒಗಳಿಗೆ ಮುಂಬಡ್ತಿ,

ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ(ಪಿಡಿಒ) ಗ್ರಾಮೀಣಾಭಿವೃದ್ಧಿ ಮತ್ತು ಪಂಚಾ ಯತ್​ರಾಜ್ ಇಲಾಖೆ ಸಹಾಯಕ ನಿರ್ದೇಶಕರ ಹುದ್ದೆಗೆ ಬಡ್ತಿ ನೀಡಲು ಸರ್ಕಾರ ಮುಂದಾಗಿದೆ. ಈ ಸಂಬಂಧ ಎಲ್ಲ ಜಿಲ್ಲ್ಲಾ ಪಂಚಾಯಿತಿ ಸಿಇಒಗಳಿಗೆ ಗ್ರಾಮೀಣಾಭಿವೃದ್ಧಿ ಇಲಾಖೆ ಪತ್ರ ಬರೆದಿದೆ. ಪಿಡಿಒ ವೃಂದದ ಹಳೆಯ ಮತ್ತು ಹೊಸ ಜ್ಯೇಷ್ಠತಾ ಕ್ರ.ಸಂ. 420/1223 ರಿಂದ 500/1329ರವರೆಗಿನ ಅಧಿಕಾರಿಗಳಿಗೆ ಮುಂಬಡ್ತಿ ಅವಕಾಶವಿದೆ. ಈ ಕ್ರಮ ಸಂಖ್ಯೆಯಲ್ಲಿ ತಮ್ಮ ಕಚೇರಿ ವ್ಯಾಪ್ತಿಯಲ್ಲಿ ಕಾರ್ಯ ನಿರ್ವ ಹಿಸುತ್ತಿರುವ ಅಧಿಕಾರಿಗಳ ವಿವರ ಸಹಿತ ಪ್ರಸ್ತಾವನೆ ಸಲ್ಲಿಸಬೇಕು. ಪ್ರತಿ ಅಧಿ ಕಾರಿಯ 2017-18ನೇ ಸಾಲಿನ ಮೂಲ ಕಾರ್ಯನಿರ್ವಹಣಾ ವರದಿ ಜತೆ ಸದರಿ ನೌಕರರ ವಿರುದ್ಧ ನಡೆಯುತ್ತಿರುವ, ನಡೆಸಲು ಉದ್ದೇಶಿಸಲಾಗಿರುವ ಅಥವಾ ಮುಕ್ತಾಯ ಗೊಂಡಿರುವ ಇಲಾಖಾ ವಿಚಾರಣೆ ಮಾಹಿತಿ ಹಾಗೂ ಆದೇಶದ ಪ್ರತಿ ನೀಡಬೇಕು. ಈ ನೌಕರರ ವಿರುದ್ಧ ಲೋಕಾಯುಕ್ತ ಪ್ರಕರಣ ಬಾಕಿಯಿದ್ದರೆ ವಿವರ ನೀಡಬೇಕೆಂದು ಸಿಇಒಗಳಿಗೆ ತಿಳಿಸಲಾಗಿದೆ.

Monday, August 27, 2018

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಕುಂದು ಕೊರತೆ ನಿವಾರಣಾ ಪ್ರಾಧಿಕಾರಗಳ ನೇಮಕಾತಿ ವಿಧಾನ) ನಿಯಮಗಳು, 2018:

 ಸದರಿ ನಿಯಮದ ಮೂಲ ಕಡತಕ್ಕಾಗಿ ಈ ಕೆಳಗಿನ ಕೊಂಡಿಯನ್ನು ಕ್ಲಿಕ್‌ಇಸಿ:

http://rdpr.kar.nic.in/document/not_753_07_08_18.PDF

ಯೂನಿಕೋಡ್ ಅಥವ ಅಕ್ಸೆಸಿಬಲ್ ಆವೃತ್ತಿಗಾಗಿ ಈ ಕೆಳಗಿನ ಕೊಂಡಿಗೆ ಭೇಟಿ ನೀಡಿ:

https://drive.google.com/open?id=1keSzZDrQ1I9X6Q2QJKiv2tJfbB-jD7r_
ಆರ್. ಎಸ್. ಜಿ. ಇ. ತಂಡ.

Thursday, August 23, 2018

ಅಧಿಕೃತ ಸಭೆಗಳಲ್ಲಿ ನೀಡುವ ಟೀ/ಕಾಫೀ/ಅಲ್ಪೋಪಹಾರದ ಸಲುವಾಗಿ ಮಾಡುವ ವೆಚ್ಚವನ್ನು ಸೆಳೆಯುವ ಕುರಿತು.

ಓದುಗರ ಗಮನಕ್ಕೆ:
ಸದರಿ ಮಾಹಿತಿಯನ್ನು ರಾಜ್ಯ ಸರಕಾರಿ ಅಂಧ ನೌಕರರು  ಸ್ಕ್ರೀನ್ ರೀಡರ್ಗಳೊಂದಿಗೆ ಓದಲು ಅನುವಾಗುವಂತೆ ಯೂನಿಕೋಡ್ಗೆ ಪರಿವರ್ತಿಸಿ ಒದಗಿಸಲಾಗಿದ್ದು, ಅಧೀಕೃತ ವ್ಯವಹಾರಗಳಿಗೆ ಮೂಲ ಕಡತವನ್ನು ಪರಿಗಣಿಸತಕ್ಕದ್ದು.

ಕರ್ನಾಟಕ ಸರ್ಕಾರ
ಸಂಖ್ಯೆ: ಆಇ ೦೧ ಟಿಸಿಇ ೨೦೧೮ ಕರ್ನಾಟಕ ಸರ್ಕಾರದ ಸಚಿವಾಲಯ
ವಿಧಾನ ಸೌಧ
ಬೆಂಗಳೂರು, ದಿನಾಂಕ:೨೮.೦೭.೨೦೧೮
ಸುತ್ತೋಲೆ
ವಿಷಯ:
ಅಧಿಕೃತ ಸಭೆಗಳಲ್ಲಿ ನೀಡುವ ಟೀ/ಕಾಫೀ/ಅಲ್ಪೋಪಹಾರದ ಸಲುವಾಗಿ ಮಾಡುವ ವೆಚ್ಚವನ್ನು ಸೆಳೆಯುವ ಕುರಿತು.
********

ಸಾಧಿಲ್ವಾರು ವೆಚ್ಚ ಕೈಪಿಡಿ ೧೯೫೮ರ ನಿಯಮ ೫೫ (೫೧)ರಲ್ಲಿ ಅಧಿಕೃತ ಸಭೆಗಳಲ್ಲಿ ನೀಡುವ ಟೀ/ಕಾಫೀ/ಅಲ್ಪೋಪಹಾರದ ಸಲುವಾಗಿ ವೆಚ್ಚವನ್ನು ಭರಿಸಲು ಅವಕಾಶ ಕಲ್ಪಿಸಲಾಗಿದೆ. ಈ ವೆಚ್ಚಗಳನ್ನು ಸಚಿವಾಲಯದ ಅಧಿಕಾರಿಗಳು ಲೆಕ್ಕಪತ್ರ ಶಾಖೆಯಲ್ಲಿನ ಇಂಪ್ರೆಸ್ಟ್/ಸಬ್‌ಇಂಪ್ರೆಸ್ಟ್ ಮೊತ್ತಗಳಲ್ಲಿ ಭರಿಸಬೇಕಾಗುತ್ತದೆ. ಇಲಾಖಾ ಮುಖ್ಯಸ್ಥರು ಹಾಗೂ ಇತರೆ ಅಧಿಕಾರಿಗಳು ತಮಗೆ ಈಗಾಗಲೇ ಮಂಜೂರಾಗಿರುವ ಖಾಯಂ ಮುಂಗಡದಿಂದ ಭರಿಸಬೇಕಾಗುತ್ತದೆ.

೨. ಖಾಯಂ ಮುಂಗಡದಿಂದ ಭರಿಸಿರುವ ವೆಚ್ಚಗಳನ್ನು ಮರುತುಂಬಿಸಿಕೊಳ್ಳುವ ವಿಧಾನವನ್ನು ಸಾ.ವೆ.ಕೈ. ನಿಯಮ ೨೩, ೨೪ ರಲ್ಲಿ ವಿವರಿಸಲಾಗಿದೆ. ಅದರಂತೆ, ಖಾಯಂ ಮುಂಗಡದಿಂದ ಭರಿಸಿರುವ ವೆಚ್ಚಗಳನ್ನು, ಸಾದಿಲ್ವಾರು ಬಿಲ್ಲುಗಳನ್ನು ಹಾಜರು ಪಡಿಸುವ ಮೂಲಕ ಮರು ತುಂಬಿಸಿ ಕೊಳ್ಳಬೇಕಾಗಿರುತ್ತದೆ. ರೂ.೧೦೦೦/-ಕ್ಕೆ ಒಳಪಟ್ಟ ಉಪ ವೋಚರ್‌ಗಳನ್ನು ಡಿಡಿಓ ರವರ ಕಚೇರಿಯಲ್ಲಿ ನಿರ್ವಹಿಸಬೇಕಾಗಿರುತ್ತದೆ. ಕರ್ನಾಟಕ ಆರ್ಥಿಕ ಸಂಹಿತೆ ಅನುಚ್ಛೇದ ೫೮(ಎ)(ಬಿ) ಮತ್ತು ಸಾದಿಲ್ವಾರು ವೆಚ್ಚ ಕೈಪಿಡಿ ನಿಯಮ ೪೧ರ ಪ್ರಕಾರ ರೂ.೧೦೦೦/-ಕ್ಕೆ ಮೀರಿದ ಉಪ ವೋಚರ್ ಗಳನ್ನು ಸೂಕ್ತವಾಗಿ ರದ್ದುಪಡಿಸಿ ಸಾದಿಲ್ವಾರು ಬಿಲ್ಲಿನೊಂದಿಗೆ ಲಗತ್ತಿಸಿ ಖಜಾನೆಗೆ ಸಲ್ಲಿಸಬೇಕಾಗಿರುತ್ತದೆ.

೩. ಸರ್ಕಾರದ ಆದೇಶ ಸಂಖ್ಯೆ ಆಇ ೨ ಟಿಸಿಇ ೨೦೧೨, ಬೆಂಗಳೂರು ದಿನಾಂಕ: ೧೫.೧೨.೨೦೧೨ ರಲ್ಲಿ ಸಾದಿಲ್ವಾರು ವೆಚ್ಚ ಕೈಪಿಡಿ ೧೯೫೮ರ ನಿಯಮ ೫೫(೫೧)ರ ಪ್ರಕಾರ ವಿವಿಧ ಅಧಿಕಾರಿಗಳಿಗೆ ಹಾಗೂ ರಾಜ್ಯ ಮಟ್ಟದ ಮತ್ತು ಜಿಲ್ಲಾ ಮಟ್ಟದ ಸಮಿತಿಗಳು ಅಧಿಕೃತ ಸಭೆಗಳಲ್ಲಿ ನೀಡುವ ಟೀ/ಕಾಫೀ/ಅಲ್ಪೋಪಹಾರದ ಸಲುವಾಗಿ ಮಾಡುವ ವೆಚ್ಚದ ಆರ್ಥಿಕ ಮಿತಿಯನ್ನು ಪರಿಷ್ಕರಿಸಿ ಆದೇಶಿಸಿದೆ. ಈ ಆರ್ಥಿಕ ಮಿತಿಯನ್ನು ಒಂದು ವμದ ಅವಧಿಗೆ ಮಾತ್ರ ನಿಗದಿಗೊಳಿಸಲಾಗಿದೆ.
 ೪. ಆದರೆ, ಕೆಲವೊಂದು ಅಧಿಕಾರಿಗಳು ಮೇಲ್ಕಂಡ ಆದೇಶದಲ್ಲಿ ನಿಗದಿ ಪಡಿಸಿರುವ ವಾರ್ಷಿಕ ವೆಚ್ಚದ ಮೊತ್ತವನ್ನು ಒಮ್ಮೆಗೆ ಒಟ್ಟಿಗೆ (ಟumಠಿsum) ಸ್ವೀಕರ್ತನ ರಸೀದಿ ಅಥವಾ ಸಾದಿಲ್ವಾರು ಬಿಲ್ಲಿನ ಮೂಲಕ ಸೆಳೆಯುವಾಗ ವೆಚ್ಚದ ಉಪ ವೋಚರ್‌ಗಳನ್ನು ಲಗತ್ತಿಸದೆ ಮುಂಗಡ ರಸೀದಿ (Pಡಿe-ಖeಛಿeiಠಿಣ) ಲಗತ್ತಿಸಿ ಸೆಳೆಯಲಾಗುತ್ತಿರುವುದನ್ನು ಖಜಾನೆ ಅಧಿಕಾರಿಗಳು ಸರ್ಕಾರದ ಗಮನಕ್ಕೆ ತಂದಿರುತ್ತಾರೆ. ಇದು ತಪ್ಪು ಪ್ರಕ್ರಿಯೆಯಾಗಿದ್ದು, ಕರ್ನಾಟಕ ಆರ್ಥಿಕ ಸಂಹಿತೆ ಮತ್ತು ಸಾದಿಲ್ವಾರು ವೆಚ್ಚ ಕೈಪಿಡಿ ನಿಯಮಗಳಿಗೆ ವಿರುದ್ಧವಾಗಿರುತ್ತದೆ. ಆದ್ದರಿಂದ ಪ್ರತಿ ಬಾರಿ ವೆಚ್ಚವನ್ನು ಭರಿಸಿದ ನಂತರ ಭರಿಸಿದ ವೆಚ್ಚವನ್ನು ಮಾತ್ರ ಉಪ ವೋಚರ್‌ಗಳೊಂದಿಗೆ ಸಾದಿಲ್ವಾರು ಬಿಲ್ಲಿನ (ಆ.ಅ) ಮೂಲಕ ಸೆಳೆಯಬೇಕಾಗಿರುತ್ತದೆ.
 ೫. ಒಂದು ವೇಳೆ ಅಧಿಕಾರಿಗಳು ವರ್ಗಾವಣೆ ನಿವೃತ್ತಿ ಮುಂತಾದ ಕಾರಣಗಳಿಂದ ಹುದ್ದೆಯನ್ನು ತೆರವುಗೊಳಿಸಿದ್ದಲ್ಲಿ ಹೊಸದಾಗಿ ಸದರಿ ಹುದ್ದೆಗೆ ನಿಯೋಜನೆಗೊಂಡ ಅಧಿಕಾರಿಗಳು ಪುನಃ ಸದರಿ ಮೊತ್ತವನ್ನು ಸೆಳೆಯುತ್ತಿರುವುದು ಸಹ ಗಮನಕ್ಕೆ ಬಂದಿರುತ್ತದೆ. ಇದು ಸಹ ನಿಯಮಗಳಿಗೆ ವಿರುದ್ಧವಾಗಿದ್ದು ನಿಗದಿಪಡಿಸಿರುವ ವಾರ್ಷಿಕ ಮಿತಿಯು ವೈಯಕ್ತಿಕವಾಗಿ ಪ್ರತಿಯೊಬ್ಬ ಅಧಿಕಾರಿಗಳ ಬದಲಿಗೆ ಆ ಹುದ್ದೆಯ ಕಚೇರಿಗೆ ಅನ್ವಯವಾಗುತ್ತದೆ. ಸದರಿ ಕಚೇರಿಯಲ್ಲಿ ಯಾವುದೇ ಕಾರಣಕ್ಕೂ ವಾರ್ಷಿಕ ಮಿತಿಯನ್ನು ಮೀರುವಂತಿಲ್ಲ.
೬. ಆದುದರಿಂದ ಅಧಿಕೃತ ಸಭೆಗಳಲ್ಲಿ ನೀಡುವ ಟೀ/ಕಾಫೀ/ಅಲ್ಪೋಪಹಾರಗಳ ವೆಚ್ಚಗಳನ್ನು ಒಮ್ಮೆಗೆ ಸೆಳೆಯದೆ ವೆಚ್ಚ ಭರಿಸಿದ ನಂತರ ಭರಿಸಿದ ವೆಚ್ಚವನ್ನು ಸಾದಿಲ್ವಾರು ಬಿಲ್ಲುಗಳ ಮೂಲಕ ಮಾತ್ರ ಸೆಳೆಯಲು ಸೂಚಿಸಲಾಗಿದೆ.
೭. ಈ ಕುರಿತು ಖಜಾನೆಗಳಲ್ಲಿ ಪರಿಶೀಲಿಸಲು ಅನುಕೂಲವಾಗುವಂತೆ ಸಂಬಂಧಿಸಿದ ಹಣ ಸೆಳೆಯುವ ಮತ್ತು ಬಟವಾಡೆ ಮಾಡುವ ಅಧಿಕಾರಿಯು ಈ ಸಂಬಂಧದ ಸಾದಿಲ್ವಾರು ಬಿಲ್ಲುಗಳಲ್ಲಿ ಈ ಕೆಳಕಂಡಂತೆ ಪ್ರಮಾಣ ಪತ್ರವನ್ನು ದಾಖಲಿಸಿ ದೃಢೀಕರಿಸಲು ಸಹ ಸೂಚಿಸಿದೆ.

ಅಧಿಕೃತ ಸಭೆಗಳಲ್ಲಿ ನೀಡುವ ಟೀ/ಕಾಫೀ/ಅಲ್ಪೋಪಹಾರಗಳ ಸಲುವಾಗಿ ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಮಾಡಿರುವ ಒಟ್ಟು ವೆಚ್ಚವು ಈ ಬಿಲ್ಲಿನಲ್ಲಿ ಸೆಳೆದಿರುವ ಮೊತ್ತವು ಸೇರಿದಂತೆ ___________ ರೂ. ಆಗಿದ್ದು, ಮಂಜೂರು ಮಾಡಿರುವ ವಾರ್ಷಿಕ ಆರ್ಥಿಕ ಮಿತಿಯೊಳಗೆ ಇರುತ್ತದೆ ಎಂದು ಪ್ರಮಾಣೀಕರಿಸಿದೆ.

(ಪವನ್‌ಕುಮಾರ್ ಮಾಲಪಾಟಿ)
ಸರ್ಕಾರದ ಉಪ ಕಾರ್ಯದರ್ಶಿ (ಆ ಮತ್ತು ಸಂ)
ಆರ್ಥಿಕ ಇಲಾಖೆ.
ಇವರಿಗೆ:-
೧. ನಿರ್ದೇಶಕರು, ಕರ್ನಾಟಕ ರಾಜ್ಯ ಪತ್ರ ಬೆಂಗಳೂರು ಇವರಿಗೆ ಮುಂದಿನ ಸಂಚಿಕೆಯಲ್ಲಿ ಪ್ರಕಟಿಸಲು ಕೋರಲಾಗಿದೆ.
೨. ಪ್ರಧಾನ ಮಹಾಲೇಖಪಾಲರು, ಲೆಕ್ಕಪತ್ರಗಳು ಮತ್ತು ಹಕ್ಕುಗಳು, ಕರ್ನಾಟಕ, ರೆಸಿಡೆನ್ಸಿ ರಸ್ತೆ, ಅಂಚೆ ಪೆಟ್ಟಿಗೆ ೫೩೨೬/೫೩೬೯. ಬೆಂಗಳೂರು.
೩. ಪ್ರಧಾನ ಮಹಾಲೇಖಪಾಲರು, (ಲೆಕ್ಕ ತನಿಖೆ-೧), ರೆಸಿಡೆನ್ಸಿ ರಸ್ತೆ, ಅಂಚೆ ಪೆಟ್ಟಿಗೆ ೫೩೨೯/೫೩೬೯, ಕರ್ನಾಟಕ ಬೆಂಗಳೂರು.
೪. ಪ್ರಧಾನ ಮಹಾಲೇಖಪಾಲರು, (ಲೆಕ್ಕ ತನಿಖೆ-೨), ರೆಸಿಡೆನ್ಸಿ ರಸ್ತೆ, ಅಂಚೆ ಪೆಟ್ಟಿಗೆ ೫೩೨೯/೫೩೬೯, ಕರ್ನಾಟಕ ಬೆಂಗಳೂರು.
೫. ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು /ಪ್ರಧಾನ ಕಾರ್ಯದರ್ಶಿಗಳು/ಕಾರ್ಯದರ್ಶಿಗಳು.
೬. ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, (ಖಜಾನೆ-೨) ಮತ್ತು ಪದನಿಮಿತ್ತ ಖಜಾನೆ ಆಯುಕ್ತರು, ಆರ್ಥಿಕ ಇಲಾಖೆ ವಾಣಿಜ್ಯ ತೆರಿಗೆ ಕಟ್ಟಡ, ಗಾಂಧಿ ನಗರ ಬೆಂಗಳೂರು-೯.
೭. ಎಲ್ಲಾ ಇಲಾಖಾ ಮುಖ್ಯಸ್ಥರುಗಳು.
೮. ನಿರ್ದೇಶಕರು, ಖಜಾನೆ ಇಲಾಖೆ, ಬೆಂಗಳೂರು.
೯. ಎಲ್ಲಾ ಜಿಲ್ಲಾಧಿಕಾರಿಗಳು.
೧೦. ಎಲ್ಲಾ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ.
೧೧. ಆರ್ಥಿಕ ಇಲಾಖೆಯ ಸರ್ಕಾರದ ಜಂಟಿ ಕಾರ್ಯದರ್ಶಿಗಳು/ಉಪ ಕಾರ್ಯದರ್ಶಿಗಳು/ಅಧೀನ ಕಾರ್ಯದರ್ಶಿಗಳು/ ಶಾಖಾಧಿಕಾರಿಗಳು.
೧೨. ಎಲ್ಲಾ ಜಿಲ್ಲಾ ಖಜಾನೆಗಳಾಧಿಕಾರಿಗಳು.
೧೩. ಶಾಖಾ ರಕ್ಷಾ ಕಡತ/ಹೆಚ್ಚುವರಿ ಪತ್ರಿಗಳು.
























ಹೆಚ್ಚು ಓದಿದವು