Saturday, June 30, 2018

**RSGE**::: ವಿಷಯ: ದಿನಾಂಕ: 01.4.2006ರಂದು ಮತ್ತು ನಂತರ ಸರ್ಕಾರಿ ಸೇವೆಗೆ ನೇಮಕ ಹೊಂದಿರುವ ಹೊಸ ವ್ಯಾಖ್ಯಾನಿಸಿದ ಅಂಶದಾಯಿ ಪಿಂಚಣಿ ಕೊಡುಗೆ

ಕರ್ನಾಟಕ ಸರ್ಕಾರದ ನಡವಳಿಗಳು
ವಿಷಯ: ದಿನಾಂಕ: 01.4.2006ರಂದು ಮತ್ತು ನಂತರ ಸರ್ಕಾರಿ ಸೇವೆಗೆ ನೇಮಕ
ಹೊಂದಿರುವ ಹೊಸ ವ್ಯಾಖ್ಯಾನಿಸಿದ ಅಂಶದಾಯಿ ಪಿಂಚಣಿ ಕೊಡುಗೆ
ಯೋಜನೆಗೆ ಒಳಪಡುವ ಸರ್ಕಾರಿ ನೌಕರರಿಗೆ ನಿವೃತ್ತಿ ಮತ್ತು ಮರಣ
ಉಪದಾನ ಹಾಗೂ ಕುಟುಂಬ ಪಿಂಚಣಿ ಸೌಲಭ್ಯವನ್ನು ವಿಸ್ತರಿಸುವ ಬಗ್ಗೆ.
ಓದಲಾಗಿದೆ:
1) ಸರ್ಕಾರಿ ಆದೇಶ ಸಂಖ್ಯೆ: ಆಇ(ಸ್ಪೆಷಲ್) 04 ಪಿಇಟಿ 2005, ದಿನಾಂಕ: 31.03.2006,
2) ಸರ್ಕಾರಿ ಆದೇಶ ಸಂಖ್ಯೆ: ಆಇ 03 ಸೇನಿಸೇ 2010, ದಿನಾಂಕ: 12.10.2010
ಮತ್ತು 15.04.2011.
3) ಸರ್ಕಾರಿ ಆದೇಶ ಸಂಖ್ಯೆ: ಆಇ 06 ಎಸ್ ಆರ್ ಪಿ 2018, ದಿನಾಂಕ: 01.03.2018,
ಪ್ರಸ್ತಾವನೆ:-
ಮೇಲೆ ಓದಲಾದ ಸರ್ಕಾರಿ ಆದೇಶ (1)ರಲ್ಲಿ ದಿನಾಂಕ: 01.4.2006ರಂದು ಮತ್ತು
ನಂತರ ಸರ್ಕಾರಿ ಸೇವೆಗೆ ಸೇರುವ ನೌಕರರಿಗೆ ಹೊಸ ವ್ಯಾಖ್ಯಾನಿಸಿದ ಅಂಶದಾಯಿ ಪಿಂಚಣಿ
ಕೊಡುಗೆ ಯೋಜನೆಯನ್ನು ಕಡ್ಡಾಯಗೊಳಿಸಲಾಗಿದೆ.
ಮೇಲೆ ಓದಲಾದ ಸರ್ಕಾರಿ ಆದೇಶ (2)ರಲ್ಲಿ, ದಿನಾಂಕ: 01.04.2006ರಂದು ಮತ್ತು
ನಂತರ ಸರ್ಕಾರಿ ಸೇವೆಗೆ ಸೇರಿದ ಹೊಸ ವ್ಯಾಖ್ಯಾನಿಸಿದ ಅಂಶದಾಯಿ ಪಿಂಚಣಿ ಕೊಡುಗೆ
ಯೋಜನೆಯ ವ್ಯಾಪ್ತಿಗೆ ಬರುವ ರಾಜ್ಯ ಸರ್ಕಾರಿ ನೌಕರರು ಸೇವೆಯಲ್ಲಿದ್ದಾಗಲೇ ಮೃತಪಟ್ಟಲ್ಲಿ
ಅವರ ಕುಟುಂಬಕ್ಕೆ ಇಡಿಗಂಟಿನ ಪರಿಹಾರವನ್ನು ನೀಡಲು ಮಂಜೂರಾತಿ ನೀಡಲಾಗಿದೆ.
ಮೇಲೆ ಓದಲಾದ ಉಲ್ಲೇಖ (3)ರ ಸರ್ಕಾರಿ ಆದೇಶದಲ್ಲಿ, 6ನೇ ರಾಜ್ಯ ವೇತನ
ಆಯೋಗವು ಹೊಸ ವ್ಯಾಖ್ಯಾನಿಸಿದ ಅಂಶದಾಯಿ ಪಿಂಚಣಿ ಕೊಡುಗೆ ಯೋಜನೆಗೆ ಒಳಪಡುವ
ಸರ್ಕಾರಿ ನೌಕರರಿಗೆ ನಿವೃತ್ತಿ/ಮರಣ ಉಪದಾನ ಸೌಲಭ್ಯವನ್ನು ಹಳೆಯ ಪಿಂಚಣಿ ಯೋಜನೆಯ
ವ್ಯಾಪ್ತಿಗೆ ಒಳಪಡುವ ಸರ್ಕಾರಿ ನೌಕರರಿಗೆ ವಿಸ್ತರಿಸಿರುವ ರೀತಿಯಲ್ಲಿಯೇ ವಿಸ್ತರಿಸುವಂತೆ ಮತ್ತು
ಸೇವೆಯಲ್ಲಿರುವಾಗಲೇ ನಿಧನರಾಗುವ ಅಂತಹ ನೌಕರರ ಅವಲಂಬಿತ ಕುಟುಂಬಕ್ಕೆ ಕುಟುಂಬ
ಪಿಂಚಣಿ ಸೌಲಭ್ಯವನ್ನು ಪರಿಗಣಿಸುವಲ್ಲಿ ಮಾಡಿರುವ ಶಿಫಾರಸ್ಸುಗಳನ್ನು ಸರ್ಕಾರವು
ಒಪ್ಪಿರುವುದರಿಂದ, ಈ ಕೆಳಕಂಡ ಆದೇಶವನ್ನು ಹೊರಡಿಸಿದೆ.
ಸರ್ಕಾರದ ಆದೇಶ ಸಂಖ್ಯೆ: ಆಇ 34 ಪಿಇಎನ್ 2018, ಬೆಂಗಳೂರು, ದಿನಾಂಕ: 23.06.2018,
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ದಿನಾಂಕ: 01.04.2006ರಂದು
ಮತ್ತು ನಂತರ ಸರ್ಕಾರಿ ಸೇವೆಗೆ ಸೇರಿದ ಹೊಸ ವ್ಯಾಖ್ಯಾನಿಸಿದ ಅಂಶದಾಯಿ ಪಿಂಚಣಿ

**RSGE**::: ಎನ್.ಪಿ.ಎಸ್ ನೌಕರರಿಗೆ ನಿವೃತ್ತಿ/ಮರಣ ಉಪದಾನ ಹಾಗೂ ಕುಟುಂಬ ಪಿಂಚಣಿ ಸೌಲಭ್ಯವನ್ನು ವಿಸ್ತರಿಸುವ ಬಗ್ಗೆ ಹಾಗೂ ಭಾಗಶಃ ಎನ್.ಪಿ.ಎಸ್, ಮೊತ್ತವನ್ನು ಹಿಂಪಡೆಯುವ ಬಗ್ಗೆ

8ನೇ ಮಹಡಿ, ವಿಶ್ವೇಶ್ವರಯ್ಯ ಮುಖ್ಯ ಗೋಪುರ,
ದೂರವಾಣಿ : 080-22864180
ಡಾ| ಬಿ.ಆರ್. ಅಂಬೇಡ್ಕರ್ ವೀದಿ,
080-22866405
ಬೆಂಗಳೂರು - 560 001,
ಕರ್ನಾಟಕ ಸರ್ಕಾರ ಇ-ಮೇಲ್ : nps.kar@gmail.com
ಖಜಾನ ನಿರ್ದೇಶನಾಲಯ
ನೂತನ ಪಿಂಚಣಿ ಯೋಜನೆ ಘಟಕ
ಸಂ.:ಖ,ನಿ/ಎನ್.ಪಿ.ಎಸ್ /05/2016-17
ದಿನಾಂಕ : 28.06.2018,
ರಾಜ್ಯದ ಎಲ್ಲಾ ಖಜಾನಾಧಿಕಾರಿಗಳಿಗೆ,
ಮಾನ್ಯರೆ,
ವಿಷಯ:
ಸೌಲಭ್ಯವನ್ನು ವಿಸ್ತರಿಸುವ ಬಗ್ಗೆ ಹಾಗೂ ಭಾಗಶಃ ಎನ್.ಪಿ.ಎಸ್, ಮೊತ್ತವನ್ನು
ಹಿಂಪಡೆಯುವ ಬಗ್ಗೆ
ಉಲ್ಲೇಖ : 1, ಸರ್ಕಾರದ ಆದೇಶ ಸಂ : ಆಇ 34 ಪಿಇಎನ್ 2018, ಬೆಂಗಳೂರು,
ದಿನಾಂಕ : 23.06.2018,
2. ಸರ್ಕಾರದ ಆದೇಶ ಸಂ : FD (Spl) 69 PEN 2016, ದಿನಾಂಕ : 26.06.2018,
LAL SAB DODMANI
STATE VP KSG (NPS) EA
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ದಿನಾಂಕ : 01.04.2006 ರಂದು ಮತ್ತು ತದನಂತರ
ಸರ್ಕಾರಿ ಸೇವೆಗೆ ಸೇರಿದ ನೌಕರರಿಗೆ ನಿವೃತ್ತಿ ಮತ್ತು ಮರಣ ಉಪದಾನ ಹಾಗೂ ಕುಟುಂಬ ಪಿಂಚಣಿ
ಸೌಲಭ್ಯವನ್ನು ವಿಸ್ತರಿಸುವ ಬಗ್ಗೆ ಸರ್ಕಾರದಿಂದ ಉಲ್ಲೇಖ (1) ರಲ್ಲಿ ಆದೇಶವನ್ನು ಹೊರಡಿಸಲಾಗಿದೆ ಹಾಗೂ
ಎನ್.ಪಿ.ಎಸ್. ನೌಕರರು ಭಾಗಶಃ ಎನ್.ಪಿ.ಎಸ್, ಮೊತ್ತವನ್ನು ಹಿಂಪಡೆಯುವ ಕುರಿತು ಉಲ್ಲೇಖ (2) ರಲ್ಲಿ
ಆದೇಶವನ್ನು ಹೊರಡಿಸಲಾಗಿದ್ದು, ಸದರಿ ಆದೇಶಗಳ ಪ್ರತಿಯನ್ನು ಈ ಮೂಲಕ ಮಾಹಿತಿಗಾಗಿ ಒದಗಿಸುತ್ತಾ,
ಸದರಿ ಆದೇಶದಲ್ಲಿ ತಿಳಿಸಿರುವಂತ ಖಜಾನಾಧಿಕಾರಿಗಳು ಕ್ರಮ ಕೈಗೊಳ್ಳಲು ಹಾಗೂ ಖಜಾನೆಗಳ ವ್ಯಾಪ್ತಿಯಲ್ಲಿನ
ಡಿಡಿಓ ಗಳ ಗಮನಕ್ಕೆ ತರಲು ಸೂಚನಾ ಫಲಕದಲ್ಲಿ ಪ್ರಕಟಿಸಲು ತಿಳಿಸಿದೆ.
ತಮ್ಮ ನಂಬುಗೆಯ.
News -
ಖಜಾನೆ ನಿರ್ದೇಶನಾಲಯ
ಬೆಂಗಳೂರು
ಪ್ರತಿಯನ್ನು: -
ಉಪ ನಿರ್ದೇಶಕರು, ಖಜಾನೆ ಗಣಕಜಾಲ ಕೇಂದ್ರ ಬೆಂಗಳೂರು. (ಖಜಾನ ಗಣಕಜಾಲದಲ್ಲಿ
ಪ್ರಕಟಿಸಲು).
ಎನ್.ಪಿ.ಎಸ್ ನೌಕರರಿಗೆ ನಿವೃತ್ತಿ/ಮರಣ ಉಪದಾನ ಹಾಗೂ ಕುಟುಂಬ ಪಿಂಚಣಿ

**RSGE***::: ಎನ್ ಪಿ ಎಸ್ ಮುಂಗಡ ಶೇಖಡ 25ರಶ್ಟು ಹಣ ಪಡೆವ ಬಗ್ಗೆ.



ಬೆಂಗಳೂರು : ರಾಷ್ಟ್ರೀಯ ಪಿಂಚಣಿ ಯೋಜನೆಯಡಿ





(ಎನ್‌ಪಿಎಸ್) ಬರುವ ರಾಜ್ಯ ಸರ್ಕಾರಿ ನೌಕರರು ಇನ್ನು
ಮುಂದೆ ತಮ್ಮ ಮಕ್ಕಳ ಉನ್ನತ ಶಿಕ್ಷಣ, ಮದುವೆ, ಮನೆ
ನಿರ್ಮಾಣ ಸೇರಿದಂತೆ ಗಂಭೀರ ಕಾಯಿಲೆ, ಅಪಘಾತದಂತಹ
ಸಮಸ್ಯೆಗೊಳಗಾದ ವೇಳೆ ತಾವು ಪಾವತಿಸಿದ ಪಿಂಚಣಿ
ಮೊತ್ತದ ಶೇ.25ರಷ್ಟು ಹಣವನ್ನು ಮುಂಗಡವಾಗಿ
ಪಡೆದುಕೊಳ್ಳುವ ಅವಕಾಶವನ್ನು ಕಲ್ಪಿಸಿ ರಾಜ್ಯ ಸರ್ಕಾರ
ಆದೇಶ ಹೊರಡಿಸಿದೆ.
ಎನ್‌ಪಿಎಸ್‌ನಿಂದ ಸರ್ಕಾರಿ ನೌಕರರಿಗೆ ಯಾವುದೇ
ಉಪಯೋಗ ಆಗುತ್ತಿಲ್ಲ, ಇದನ್ನು ರದ್ದುಪಡಿಸಿ ಹಳೆಯ
ಪಿಂಚಣಿ ಯೋಜನೆ ಜಾರಿಗೆ ತರಬೇಕೆಂದು ಆಗ್ರಹಿಸಿ
ಹೋರಾಟ ನಡೆಸುತ್ತಿದ್ದ ಸರ್ಕಾರಿ ನೌಕರರಿಗೆ ಕೊಂಚ ಫಲ
ಸಿಕ್ಕಂತಾಗಿದೆ.
ಪಿಂಚಣಿ ಯೋಜನೆಗೆ ಭದ್ರತೆ ಒದಗಿಸುವ ಪಿಂಚಣಿ ನಿಧಿ
ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪಿಎಫ್‌ಆರ್‌ಡಿಎ)
2015ರ ಜನವರಿಯಲ್ಲಿ ಹೊರಡಿಸಿರುವ ಅಧಿಸೂಚನೆಯಲ್ಲಿ
ಹೊಸ ಪಿಂಚಣಿ ಯೋಜನೆಯಾದ ಎನ್‌ಪಿಎಸ್‌ನಡಿ ಬರುವ
ಸರ್ಕಾರಿ ನೌಕರರಿಗೆ ಕೆಲ ವಿಶೇಷ ಸಂದರ್ಭ ಹಾಗೂ
ಸಮಸ್ಯೆಗಳು ಎದುರಾದಾಗ ತಮ್ಮ ವೇತನದಲ್ಲಿ
ಕಡಿತವಾಗಿರುವ ಪಿಂಚಣಿ ಮೊತ್ತದ ಶೇ.25ರಷ್ಟು ಹಣವನ್ನು
ಮುಂಗಡವಾಗಿ ಪಡೆದುಕೊಳ್ಳಲು ಅವಕಾಶ ನೀಡಲಾಗಿದೆ.
ಇದರ ಆಧಾರದ ಮೇಲೆ ಸರ್ಕಾರದ ಖಜಾನೆ ನಿರ್ದೇಶಕರು
ಸಲ್ಲಿಸಿರುವ ಪ್ರಸ್ತಾವನೆಯನ್ನು ಒಪ್ಪಿ ರಾಜ್ಯ ಸರ್ಕಾರ
ಮಂಗಳವಾರ ಹೊಸ ಪಿಂಚಣಿ ಯೋಜನೆಯಡಿ ಬರುವ
ಸರ್ಕಾರಿ ನೌಕರರು ತಮ್ಮ ಇಡಿಗಂಟು ಪಿಂಚಣಿಯಲ್ಲಿ
ಶೇ.25ರಷ್ಟು ಹಣವನ್ನು ಮುಂಗಡ ಪಡೆಯಲು ಅವಕಾಶ
ಕಲ್ಪಿಸಿ ಹಣಕಾಸು ಇಲಾಖೆ (ಪಿಂಚಣಿ) ಜಂಟಿ ಕಾರ್ಯದರ್ಶಿ
ವೈ.ಕೆ. ಪ್ರಕಾಶ್ ಆದೇಶ ಹೊರಡಿಸಿದ್ದಾರೆ.
ಸೌಲಭ್ಯ ಯಾವಾಗ ಸಿಗುತ್ತೆ?: ಸರ್ಕಾರಿ ನೌಕರರು ತಮ್ಮ
ಮಕ್ಕಳ ಉನ್ನತ ಶಿಕ್ಷಣ, ಮದುವೆ ಕಾರ್ಯಗಳು, ಸ್ವಂತ ಮನೆ
ಕಟ್ಟಲು, ಕೊಳ್ಳಲು ಅಥವಾ ಪ್ಲಾಟ್ (ಸೈಟ್) ಖರೀದಿಸಲು
ಶೇ.25ರಷ್ಟು ಪಿಂಚಣಿ ಹಣ ಪಡೆಯಬಹುದಾಗಿದೆ. ಒಂದು
ವೇಳೆ ಈಗಾಗಲೇ ನೌಕರನ ಹೆಸರಲ್ಲಿ ಮನೆ, ಪ್ಲಾಟ್
ಹೊಂದಿದ್ದರೆ (ಪಿತ್ರಾರ್ಜಿತವಾಗಿ ಬಂದ ನಿವಾಸ
ಹೊರತುಪಡಿಸಿ) ಈ ಸೌಲಭ್ಯ ಸಿಗುವುದಿಲ್ಲ ಎಂದು
ಆದೇಶದಲ್ಲಿ ತಿಳಿಸಲಾಗಿದೆ.
ಸರ್ಕಾರಿ ನೌಕರ ತಾನು ಅಥವಾ ತನ್ನ ಕುಟುಂಬ ಸದಸ್ಯರಲ್ಲಿ
(ಪತ್ನಿ, ಮಕ್ಕಳು, ಪೋಷಕರು) ಯಾರಾದರೂ ಕ್ಯಾನ್ಸರ್, ಕಿಡ್ನಿ
ವೈಫಲ್ಯ, ಹೃದಯ ಶಸ್ತ್ರ ಚಿಕಿತ್ಸೆ, ಪಾಶ್ರವಾಯು, ಪ್ರಜ್ಞಾಹೀನ
ಸ್ಥಿತಿ, ಅಂಗಾಗ ಕಸಿ, ಶಾಶ್ವತ ದೃಷ್ಟಿದೋಷದಂತಹ ಗಂಭೀರ
ಕಾಯಿಲೆ ಆರೋಗ್ಯ ಸಮಸ್ಯೆ ಅಪಘಾತದಲ್ಲಿ ಗಂಭೀರ
ಗಾಯಗೊಂಡ ಸಂದರ್ಭದಲ್ಲಿ ಶೇ.25ರಷ್ಟುಪಿಂಚಣಿ
ಹಣವನ್ನು ಅರ್ಜಿ ಸಲ್ಲಿಸಿ ಪಡೆದುಕೊಳ್ಳಬಹುದು.
ಅಷ್ಟೇ ಅಲ್ಲ, ನೌಕರರು ತಮ್ಮ ವೃತ್ತಿಗೆ ಸಂಬಂಧಿಸಿದ
ಕ್ಷೇತ್ರದಲ್ಲಿ ಕೌಶಲ್ಯಾಧಾರಿತ ಕೋರ್ಸು, ಪದವಿ, ಡಿಪ್ಲೊಮಾ,
ಸರ್ಟಿಫಿಕೇಟ್ ಕೋರ್ಸುಗಳಿಗೆ ಪ್ರವೇಶ ಪಡೆಯಲು ಕೂಡ
ಈ ಹಣ ಪಡೆದುಕೊಳ್ಳಬಹುದು ಎಂದು ಆದೇಶದಲ್ಲಿ
ತಿಳಿಸಲಾಗಿದೆ. ರೆಗ್ಯೂಲರ್ ಅಥವಾ ದೂರ ಶಿಕ್ಷಣ ಎರಡೂ
ರೀತಿಯಲ್ಲೂ ಅಧ್ಯಯನಕ್ಕೆ ಅವಕಾಶವಿದ್ದು, ಕೋರ್ಸುಗಳು
ಕನಿಷ್ಠ ಮೂರರಿಂದ ಅದಕ್ಕೂ ಹೆಚ್ಚು ತಿಂಗಳ
ಅಧ್ಯಯನದಿಂದ ಕೂಡಿರಬೇಕು. ಮಾನ್ಯತೆ ಪಡೆದ
ವಿಶ್ವವಿದ್ಯಾಲಯ, ಕಾಲೇಜು, ಯುಜಿಸಿಯಂತಹ ಅಧಿಕೃತ
ಸಂಸ್ಥೆಗಳಿಂದ ಅಂಗೀಕೃತವಾಗಿರಬೇಕು. ಅಧ್ಯಯನಕ್ಕೆ ತಮ್ಮ
ಇಲಾಖೆಯಿಂದ ನಿರಾಕ್ಷೇಪಣಾ ಪತ್ರ ಪಡೆಯುವುದು
ಕಡ್ಡಾಯ.
ನಿಯಮಗಳೇನು?
ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್‌) 2006
ಏಪ್ರಿಲ್ 1ರಿಂದ ಸರ್ಕಾರಿ ಹುದ್ದೆಗಳಿಗೆ ನೇಮಕವಾಗಿ ಸೇವೆ
ಸಲ್ಲಿಸುತ್ತಿರುವವರಿಗೆ ಹಾಗೂ 2004ರ ಜನವರಿ 1ರಿಂದ
ಅಖಿಲ ಭಾರತ ಸೇವಾ ಹುದ್ದೆಗಳಿಗೆ ನೇಮಕವಾಗಿ ಸೇವೆ
ಸಲ್ಲಿಸುತ್ತಿರುವ ಕರ್ನಾಟಕ ಕೇಡರ್‌ನ ಅಧಿಕಾರಿಗಳು ಈ
ಸೌಲಭ್ಯ ಪಡೆಯಬಹುದು. ಪಿಂಚಣಿ ಮುಂಗಡ ಸೌಲಭ್ಯಕ್ಕೆ
ನೌಕರರು ಕನಿಷ್ಠ ಮೂರು ವರ್ಷ ಸೇವೆ ಪೂರೈಸಿರಬೇಕು.
ನೌಕರರು ವೃತ್ತಿಗೆ ಸೇರಿದ ದಿನದಿಂದ ಮುಂಗಡ ಪಿಂಚಣಿ
ಪಡೆಯಲು ಅರ್ಜಿ ಸಲ್ಲಿಸಿದ ದಿನದವರೆಗೆ ಪಾವತಿಸಿರುವ
ಪಿಂಚಣಿ ಮೊತ್ತದಲ್ಲಿ ಶೇ.25ರಷ್ಟನ್ನು ಮಾತ್ರ
ಪಡೆಯಬಹುದಾಗಿದೆ. ನೌಕರ ತನ್ನ ವೃತ್ತಿ ಅವಧಿಯಲ್ಲಿ
ಮೂರು ಬಾರಿ ಮಾತ್ರ ಈ ರೀತಿ ಮುಂಗಡ ಪಿಂಚಣಿ
ಪಡೆಯಬಹುದು. ಒಂದು ವೇಳೆ ಸರ್ಕಾರಿ ನೌಕರ ಗಂಭೀರ
ಕಾಯಿಲೆಯಿಂದ ಆಸ್ಪತ್ರೆಯಲ್ಲಿದ್ದರೆ ಆತನ ಪತ್ನಿ ಅಥವಾ
ಕುಟುಂಬದ ಇತರೆ ಸದಸ್ಯರು ಅರ್ಜಿ ಸಲ್ಲಿಸಲು
ಅವಕಾಶವಿದೆ.
ಈವರೆಗಿನ ಪಿಂಚಣಿ ಯೋಜನೆ ಏನಿತ್ತು?
ಎನ್‌ಪಿಎಸ್ ಯೋಜನೆಯಲ್ಲಿ ಸರ್ಕಾರಿ ನೌಕರರ ವೇತನದಲ್ಲಿ
ಪ್ರತಿ ತಿಂಗಳು ನಿಗದಿತ ಮೊತ್ತದ ಹಣ ನೌಕರನ ಪಿಂಚಣಿ
ಖಾತೆಗೆ ಜಮೆಯಾಗುತ್ತಿತ್ತು. ಅಷ್ಟೇ ಮೊತ್ತದ ಹಣವನ್ನು
ಸರ್ಕಾರ ಪಾವತಿಸುತ್ತಿತ್ತು. ಈ ಹಣವನ್ನು ಸೇವಾ ಅವಧಿಯ
ಮಧ್ಯದಲ್ಲಿ ಒಂದು ರುಪಾಯಿ ಸಹ ಮುಂಗಡವಾಗಿ
ಪಡೆಯಲು ಅವಕಾಶ ಇರಲಿಲ್ಲ. ಬದಲಿಗೆ ನೌಕರ ನಿವೃತ್ತಿ
ಹೊಂದಿದಾಗ, ಸ್ವಯಂ ನಿವೃತ್ತಿ ಅಥವಾ ರಾಜೀನಾಮೆ
ನೀಡಿದಾಗ ಅಥವಾ ಸೇವಾ ಅವಧಿಯಲ್ಲೇ ಮೃತಪಟ್ಟರೆ
ಆತನ ಕುಟುಂಬದವರು ಇಡಿಗಂಟು ರೂಪದಲ್ಲಿ ಒಟ್ಟು
ಹಣವನ್ನು ಪಡೆದುಕೊಳ್ಳಬಹುದಿತ್ತು. ಈಗ ಸೇವಾ
ಅವಧಿಯಲ್ಲೇ ಶೇ.25ರಷ್ಟು ಪಿಂಚಣಿಯನ್ನು ಮುಂಗಡವಾಗಿ
ಪಡೆಯಲು ಅವಕಾಶ ದೊರೆತಿದೆ.

Friday, June 29, 2018

ಸುತ್ತೋಲೆ: ವಿಷಯ: ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮಗಳು, 1963ರಲ್ಲಿ ನಿಗದಿಪಡಿಸಿರುವ ಸರ್ಕಾರಿ ನೌಕರರ ಅವಲಂಬಿತ ತಂದೆ- ತಾಯಿಯವರ ಆದಾಯದ ಮಿತಿಯನ್ನು ಪರಿಷ್ಕರಿಸುವ ಬಗ್ಗೆ



ಕರ್ನಾಟಕ ಸರ್ಕಾರ
ಸಂಖ್ಯೆ: ಸಿಆಸುಇ 21 ಎಸ್ಎಂಆರ್ 2018
ಕರ್ನಾಟಕ ಸರ್ಕಾರದ ಸಚಿವಾಲಯ,
ವಿಧಾನಸೌಧ,
ಬೆಂಗಳೂರು, ದಿನಾಂಕ:22.06.2018
ಸುತ್ತೋಲೆ
ವಿಷಯ: ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮಗಳು, 1963ರಲ್ಲಿ
ನಿಗದಿಪಡಿಸಿರುವ ಸರ್ಕಾರಿ ನೌಕರರ ಅವಲಂಬಿತ ತಂದೆ- ತಾಯಿಯವರ
ಆದಾಯದ ಮಿತಿಯನ್ನು ಪರಿಷ್ಕರಿಸುವ ಬಗ್ಗೆ,
ಉಲ್ಲೇಖ : (1) ಅಧಿಸೂಚನೆ ಸಂಖ್ಯೆ: ಸಿಆಸುಇ 2 ಎಸ್ಎಂಆರ್ 2015, ದಿನಾಂಕ:29.08.2017,
(2) ಸರ್ಕಾರಿ ಆದೇಶ ಸಂಖ್ಯೆ: ಆಇ (ವಿಶೇಷ) 8 ಪಿಇಎನ್ 2012, ದಿನಾಂಕ: 03.05.2012,
(3) ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ 2 ಎಸ್ ಎಂಆರ್ 2015, ದಿನಾಂಕ:27.09.2017,
(4) ಸರ್ಕಾರಿ ಆದೇಶ ಸಂಖ್ಯೆ: ಆಇ 33 ಪಿಇಎನ್ 2018, ದಿನಾಂಕ: 24.04.2018,
ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮಗಳು, 1963
ನಿಯಮ 2(1) (ii) ರಲ್ಲಿ ನಿಗಧಿಪಡಿಸಿರುವ ಷರತ್ತುಗಳನ್ನು ಪೂರೈಸುವ ರಾಜ್ಯ ಸರ್ಕಾರಿ
ನೌಕರರ ಅವಲಂಬಿತ ತಂದೆ-ತಾಯಿಯವರ ವೈದ್ಯಕೀಯ ವೆಚ್ಚ ಮರುಪಾವತಿಗೆ
ಅವಕಾಶವನ್ನು ಕಲ್ಪಿಸಲಾಗಿದೆ.
ಉಲ್ಲೇಖಿತ(1) ಅಧಿಸೂಚನೆಯಲ್ಲಿ, ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ
ಹಾಜರಾತಿ) ನಿಯಮಗಳು 1963 ನಿಯಮ 2(1) (i)ರಲ್ಲಿರುವ ಆದಾಯದ ಮಿತಿ
ಆರು ಸಾವಿರ ರೂಪಾಯಿಗಳುಎಂಬ ಪದಗಳ ಬದಲಿಗೆ "ರಾಜ್ಯ ಸರ್ಕಾರವು
ನಿಗಧಿಪಡಿಸಿದ ಕನಿಷ್ಠ ಮೂಲ ಪಿಂಚಣಿ ಹಾಗೂ ವೈದ್ಯಕೀಯ ವೆಚ್ಚ ಮರುಪಾವತಿಯನ್ನು
ಪರಿಗಣಿಸುವ ದಿನಾಂಕದಂದು ಕನಿಷ್ಟ ಮೂಲ ಪಿಂಚಣಿಗೆ ಲಭ್ಯವಾಗುವ ತುಟ್ಟಿಭತ್ಯೆಯನ್ನು
ಒಳಗೊಂಡ ಮೊತ್ತಎಂಬ ಪದಗಳನ್ನು ಪ್ರತಿಷ್ಟಾಪಿಸಿ ತಿದ್ದುಪಡಿ ಮಾಡಲಾಗಿದೆ.
ಉಲ್ಲೇಖಿತ (2) ಆದೇಶದಲ್ಲಿ ಆರ್ಥಿಕ ಇಲಾಖೆಯು ನಿಗದಿಪಡಿಸಿದ ನಿವತಿ
ವೇತನ ಸೌಲಭ್ಯದ ಪರಿಮಿತಿಯನ್ನು ಆಧರಿಸಿ, ಉಲ್ಲೇಖಿತ(3) ಆದೇಶದಲ್ಲಿ, ಸರ್ಕಾರಿ
ನೌಕರರ ಅವಲಂಬಿತ ತಂದೆ-ತಾಯಿಯ ವೈದ್ಯಕೀಯ ವೆಚ್ಚ ಮರುಪಾವತಿ ಪ್ರಕರಣಗಳ
ಪರಿಶೀಲನೆಯ ಸಂದರ್ಭದಲ್ಲಿ ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ)
(ತಿದ್ದುಪಡಿ) ನಿಯಮಗಳು, 2017ರನ್ವಯ ನಿಗದಿಪಡಿಸಿದ ಆದಾಯದ ಮಿತಿಯ
ಪರಿಗಣನೆಯನ್ನು ಸ್ಪಷ್ಟಿಕರಿಸಲಾಗಿದೆ. ಸಂದರ್ಭದಲ್ಲಿ, ರಾಜ್ಯದ ನಿವೃತ್ತ ಸರ್ಕಾರಿ
ನೌಕರರುಗಳಿಗೆ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳು ಮತ್ತು ಕರ್ನಾಟಕ
ನಾಗರೀಕ ಸೇವಾ(ಅಸಾಧಾರಣ ನಿವೃತ್ತಿ ವೇತನ) ನಿಯಮಾವಳಿಗಳು 2003 ರನ್ವಯ
ಲಭ್ಯವಾಗುವ ವಿವಿಧ ಬಗೆಯ ನಿವೃತ್ತಿ ವೇತನಗಳಿಗೆ ಆರ್ಥಿಕ ಇಲಾಖೆಯು
ನಿಗಧಿಪಡಿಸಿರುವ ಮಾಹೆಯಾನ ರೂ.4800/-ಗಳ ಕನಿಷ್ಠ ಮೊತ್ತವನ್ನು 'ರಾಜ್ಯ ಸರ್ಕಾರವು
ನಿಗಧಿಪಡಿಸಿದ ಕನಿಷ್ಟ ಮೂಲ ಪಿಂಚಣಿ' ಎಂದು ಪರಿಗಣಿಸಲಾಗಿರುತ್ತದೆ.

ಹೆಚ್ಚು ಓದಿದವು