Thursday, June 14, 2018

**RSGE**::: ಸುತ್ತೋಲೆ: ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ನಿಯಮ:118(ಎ) ರಿತಿಯ ನಿವೃತ್ತಿ ಸಮಯದಲ್ಲಿ ಗಳಿಕೆ ರಜೆ ನಗದೀಕರಣದ ಬಗ್ಗೆ.



ಕರ್ನಾಟಕ ಸರ್ಕಾರ
ಸಂಖ್ಯೆ: ಎಫ್‌ಡಿ 2 ಸೇನಿಸೇ 2015
ಕರ್ನಾಟಕ ಸರ್ಕಾರದ ಸಚಿವಾಲಯ,
ವಿಧಾನಸೌಧ,
ಬೆಂಗಳೂರು, ದಿನಾಂಕ:04-12-2015
ಸುತ್ತೋಲೆ
ವಿಷಯ: ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ನಿಯಮ:118(ಎ) ರಿತಿಯ ನಿವೃತ್ತಿ
ಸಮಯದಲ್ಲಿ ಗಳಿಕೆ ರಜೆ ನಗದೀಕರಣದ ಬಗ್ಗೆ.
ಉಲ್ಲೇಖ: (1) ಸುತ್ತೋಲೆ ಸಂಖ್ಯೆ: ಎಫ್ಡಿ 1 ಎಸ್ ಆರ್ ಎಸ್ 2001, ದಿನಾಂಕ:08.08.2001,
(2) ಸರ್ಕಾರಿ ಆದೇಶ ಸಂಖ್ಯೆ: ಆಇ 8 ಎಸ್‌ಆರ್‌ಎ 2ರಿಂದಿ,ಬೆಂಗಳೂರು,
ದಿನಾಂಕ: 12.08.2003,
(3) ಮಹಾಲೇಖಪಾಲರ ಪತ್ರ ಸಂ.: GM/Genl/C-37/2014-15/277,
ದಿವಾಲಿಕ:27.03.2015,
*****
ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ನಿಯಮ;11(ಎಪ್ರಕಾರ ಒಬ್ಬ ಸರ್ಕಾರಿ
ನೌಕರನು ನಿವೃತ್ತನಾಗುವ ಸಮಯದಲ್ಲಿ ಗರಿಷ್ಟ 300 ದಿನಗಳ ಮಿತಿಗೊಳಪಟ್ಟು ಅವರ
ಖಾತೆಯಲ್ಲಿರುವ ಗಳಿಕೆ ರಜೆಗೆ ಸಮನಾದ ರಜಾ ಸಂಬಳದ ನಗದೀಕರಣ ಸೌಲಭ್ಯವನ್ನು ರಜೆ
ಮಂಜೂರು ಮಾಡುವ ಪ್ರಾಧಿಕಾರಿ ಮಂಜೂರು ಮಾಡುವ ಅವಕಾಶವಿದ್ದು, ಸರ್ಕಾರಿ
ನೌಕರನು ನಿವೃತ್ತಿಯಾಗುವ ದಿನಾಂಕದಂದು ಅವನ ಖಾತೆಯಲ್ಲಿನ ಗಳಿಕೆ ರಜೆಗೆ ಸಮನಾದ
ರಜಾ ಸಂಬಳದ ನಗದೀಕರಣ ಸೌಲಭ್ಯವನ್ನು 300 ದಿನಗಳ ಗರಿಷ್ಠ ಮಿತಿ ಮತ್ತು ಕರ್ನಾಟಕ
ನಾಗರಿಕ ಸೇವಾ ನಿಯಮಾವಳಿಗಳ ನಿಯಮ:18(ಎ) ರಲ್ಲಿನ ಇತರೆ ಷರತ್ತುಗಳಿಗೊಳಪಟ್ಟು
ಮಂಜೂರು ಮಾಡಿ ಸೂಕ್ತ ಆದೇಶವನ್ನು ಸಕ್ಷಮ ಪ್ರಾಧಿಕಾರಿಗಳು ಹೊರಡಿಸಬೇಕಾಗಿದೆ.
ಕ.ನಾ.ಸೇ.ನಿಯಮಾವಳಿಗಳ ನಿಯಮ 118-ಎ(2) ರ ವ್ಯಾಪ್ತಿಗೆ ಒಳಪಡಬಹುದಾದ
ಪ್ರಕರಣಗಳಲ್ಲಿ ಈ ಸೌಲಭ್ಯವನ್ನು ಸಕಾಲದಲ್ಲಿ ತಡೆಹಿಡಿಯಬೇಕಾಗುತ್ತದೆ. ಈ ಅಂಶಗಳನ್ನು
ಗಮನದಲ್ಲಿರಿಸಿ, ಸಕ್ಷಮ ರಜೆ ಮಂಜೂರಾತಿ - ಪ್ರಾಧಿಕಾರವು ಕ.ನಾ.ಸೇ.ನಿಯಮಾವಳಿ,
ನಿಯಮ 118ಎ(1)ರ ರೀತ್ಯ ಹೊರಡಿಸುವ ನಗದೀಕರಣ ಸೌಲಭ್ಯ ಮಂಜೂರಾತಿ ಆದೇಶದಲ್ಲಿ
ಸದರಿ ಸೌಲಭ್ಯವನ್ನು ಉಪನಿಯಮ(2) ರ ಅವಕಾಶವನ್ನು ಗಮನದಲ್ಲಿರಿಸಿ ಮಂಜೂರಾತಿ
ನೀಡಿರುವ ಕುರಿತು ಸ್ಪಷ್ಟವಾಗಿ ಉಲ್ಲೇಖಿಸಿ, ಸಂಬಂಧಿಸಿದ ಆದೇಶವನ್ನು ಹೊರಡಿಸತಕ್ಕದೆಂದು
ಉಲ್ಲೇಖ(1) ರಲ್ಲಿನ ಸುತ್ತೋಲೆಯಲ್ಲಿ ಸೂಚಿಸಲಾಗಿತ್ತು..
... 2)
ತದನಂತರದಲ್ಲಿ, ಕ.ನಾ.ಸೇ.ನಿಯಮಾವಳಿಗಳ ನಿಯಮ 119-ಎ ಅನ್ನು ಉಲ್ಲೇಖ(2)
ಆದೇಶದ ಮೇರೆಗೆ ಪರಿಷ್ಕರಿಸಿದ್ದು, ಈ ಮುಂಚಿನ ಉಪನಿಯಮ(2) ದಲ್ಲಿ ಅಡಕವಾಗಿದ್ದ
ಅವಕಾಶಗಳನ್ನು ಉಪನಿಯಮ(4) ರಡಿಯಲ್ಲಿ ಅಳವಡಿಸಲಾಗಿದೆ. ಮಹಾಲೇಖಪಾಲರು
ಉಲ್ಲೇಖ(3)ರಲ್ಲಿನ ಪತ್ರ ದಿನಾಂಕ:27.03.2015 ರಲ್ಲಿ ಸಕ್ಷಮ ಪ್ರಾಧಿಕಾರಿಗಳು ಹೊರಡಿಸುವ
ಸುತ್ತೋಲೆ/ಅಧಿಸೂಚನೆಗಳನ್ನು ಉಪನಿಯಮ(4) ರಲ್ಲಿನ ಅವಕಾಶಗಳನ್ನು ಉಲ್ಲೇಖಿಸಿ
ಹೊರಡಿಸುತ್ತಿಲ್ಲವೆಂದೂ, ಈ ಕಾರಣದಿಂದಾಗಿನ ವ್ಯವಹರಣೆಗಳಿಂದಾಗಿ, ಹೆಚ್ಚಿನ ಪ್ರಕರಣಗಳಲ್ಲಿ
ಸಂಬಂಧಿತ ಅಧಿಕಾರಿಗಳಿಗೆ ನಗದೀಕರಣ ಪ್ರಾಧೀಕರಿಸುವಲ್ಲಿ ವಿಳಂಬವಾಗುತ್ತಿದೆ ಎಂದು
ತಿಳಿಸುತ್ತಾ, ಪರಿಷ್ಕೃತ ಸೂಚನೆಗಳನ್ನು ನೀಡಬೇಕಾಗಿ ಕೋರಿದ್ದಾರೆ...
ಮೇಲೆ ವಿವರಿಸಿರುವ ಸಂದರ್ಭ ಮತ್ತು ಸನ್ನಿವೇಶದ ಹಿನ್ನೆಲೆಯಲ್ಲಿ, ಸಕ್ಷಮ ರಜೆ
ಮಂಜೂರಾತಿ ಪ್ರಾಧಿಕಾರವು ಕ.ನಾ.ಸೇ.ನಿಯಮಾವಳಿ, ನಿಯಮ 1181)ರ ರೀತ್ಯ ಅರ್ಹ
ನೌಕರರ ಪ್ರಕರಣಗಳಲ್ಲಿ ನಗದೀಕರಣ ಸೌಲಭ್ಯ ಮಂಜೂರಾತಿ ಆದೇಶವನ್ನು
ಹೊರಡಿಸುವಾಗ, ಸಂಬಂಧಿತ ಆದೇಶಗಳನ್ನು ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ
ನಿಯಮ 118-ಎ(4)ರ ಅವಕಾಶಗಳನ್ನು ಗಮನದಲ್ಲಿರಿಸಿ ಮಂಜೂರಾತಿ ನೀಡಲಾಗಿದೆ
ಎಂದು ಸ್ಪಷ್ಟವಾಗಿ ನಮೂದಿಸಿ ಹೊರಡಿಸತಕ್ಕದೆಂದು ತಿಳಿಸಲಾಗಿದೆ.
>> 
(ಜಿ.ಚ, ಹೇಮಣ್ಣ)
ಸರ್ಕಾರದ ಅಧೀನ ಕಾರ್ಯದರ್ಶಿ
ಆರ್ಥಿಕ ಇಲಾಖೆ(ಸೇವೆಗಳು-1)
ಸಂಕಲನಕಾರರು, ಕರ್ನಾಟಕ ರಾಜ್ಯಪತ್ರ, ಬೆಂಗಳೂರು ಮುಂದಿನ ಪ್ರಕಟನೆಯಲ್ಲಿ ಪ್ರರ್ಕವಿಸುವುದಕ್ಕಾಗಿ ಹಾಗೂ 50
ಪ್ರತಿಗಳನ್ನು ಆರ್ಥಿಕ ಇಲಾಖೆಗೆ ಸರಬರಾಜು ಮಾಡಲು,
ಇವರಿಗೆ
1, ಸರ್ಕಾರದ ಮುಖ್ಯ ಕಾರ್ಯದರ್ಶಿ | ಅಪರ ಮುಖ್ಯ ಕಾರ್ಯದರ್ಶಿಗಳು.
2, ಪ್ರಧಾನ ಮಹಾಲೇಖಪಾಲರು(A & E), ಪಿ.ಬಿ, ನಂ.6329/5369, ಪಾರ್ಕ್ ಹೌಸ್ ಕೋಡ್
ಬೆಂಗಳೂರು.
3. ಸರ್ಕಾರದ ಎಲ್ಲಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು/ ಕಾರ್ಯದರ್ಶಿಗಳು,
4 ರಿಜಿಸ್ಟ್ರಾರ್ ಜನರಲ್, ಕರ್ನಾಟಕ ಉಚ್ಚ ನ್ಯಾಯಾಲಯ, ಬೆಂಗಳೂರು,
5. ರಿಜಿಸ್ಟ್ರಾರ್, ಕರ್ನಾಟಕ ಆಡಳಿತ ನ್ಯಾಯಮಂಡಳಿ, ಬೆಂಗಳೂರು.
6, ರಿಜಶ್ಟ್ರಾರ್ , ಕರ್ನಾಟಕ ಲೋಕಾಯುಕ್ತ, ಬೆಂಗಳೂರು.
ಪತ್ರದ ಮೂಲಕ
7, ಪ್ರಾದೇಶಿಕ ಆಯುಕ್ತರುಗಳು.
8. ಕಾರ್ಯದರ್ಶಿ, ಕರ್ನಾಟಕ ಲೋಕಸೇವಾ ಆಯೋಗ, ಬೆಂಗಳೂರು,
9, ಕಾರ್ಯದರ್ಶಿ, ಕರ್ನಾಟಕ ವಿಧನ ಪರಿಷತ್ತು, ವಿಧಾನಸೌಧ, ಬೆಂಗಳೂರು.��

No comments:

Post a Comment

ಅನಿಸಿಕೆ ತಿಳಿಸಿ

ಹೆಚ್ಚು ಓದಿದವು