Thursday, June 14, 2018

**RSGE**::: ಸುತ್ತೋಲೆ: ಸರಕು ಸಾಮಗ್ರಿ ಖರೀದಿ ಸಂಬಂಧವಾಗಿ ಸಾದಿಲ್ವಾರು ವೆಚ್ಚ ಕೈಪಿಡಿ ನಿಯಮಗಳು ನಿಯಮ -55-49(ಎ) ರಲ್ಲಿನ ಮಿತಿಯನ್ನು ಪರಿಷ್ಕರಿಸುವ ಬಗ್ಗೆ.



ಕರ್ನಾಟಕ ಸರ್ಕಾರದ ನಡವಳಿಗಳು
ವಿಷಯ: ಸರಕು ಸಾಮಗ್ರಿ ಖರೀದಿ ಸಂಬಂಧವಾಗಿ ಸಾದಿಲ್ವಾರು ವೆಚ್ಚ
ಕೈಪಿಡಿ ನಿಯಮಗಳು ನಿಯಮ -55-49(ಎ) ರಲ್ಲಿನ
ಮಿತಿಯನ್ನು ಪರಿಷ್ಕರಿಸುವ ಬಗ್ಗೆ.
ಓದಲಾಗಿದೆ: ಜಲಾನಯನ ಅಭಿವೃದ್ಧಿ ಇಲಾಖೆ ಇವರ ಪತ್ರ ಸಂಖ್ಯೆ:
ಜಅಇ/ಲೆಕ್ಕ-2/IWMP:AO.ವರದಿ/14/2011-12
ದಿನಾಂಕ:3.9.2011.

ಪ್ರಸ್ತಾವನೆ:
p-pathi
&
ಜಲಾನಯನ ಅಭಿವೃದ್ಧಿ ಇಲಾಖೆ ಆಯುಕ್ತರು ಮೇಲೆ ಓದಲಾದ ಪತ್ರದಲ್ಲಿ ಪ್ರಸ್ತುತ
ದಿನಗಳಲ್ಲಿ ಸರಕು ಸಾಮಗ್ರಿ ದರಗಳು ತುಂಬಾ ದುಬಾರಿಯಾಗಿರುವುದರಿಂದ ಹಾಲಿ ಸಾದಿಲ್ವಾರು
ವೆಚ್ಚದ ಕೈಪಿಡಿ, 1958ರ ನಿಯಮ 55ರಲ್ಲಿನ 49 (ಎ) ರಲ್ಲಿ ಪ್ರತಿ ಬಾರಿ ಸರಕು ಸಾಮಗ್ರಿಗಳನ್ನು
ಖರೀದಿಸುವಾಗ ರೂ.500/- ಗಳ ಮಿತಿಯಿರುವುದರಿಂದ ಅದಕ್ಕೂ ಹೆಚ್ಚಿನ ಸಾಮಗ್ರಿ/ಸೇವೆ
ಖರೀದಿಸಬೇಕಾದಲ್ಲಿ ವಿವಿಧ ಸಂಸ್ಥೆಗಳಿಂದ ದರಪಟ್ಟಿ ಕರೆದು ಆ ಮೂಲಕ ಕಡಿಮೆ ದರ
ನಮೂದಿಸಿದ ಸಂಸ್ಥೆಯಿಂದ ಖರೀದಿಸಬೇಕಾಗುತ್ತದೆಯೆಂದು ತಿಳಿಸುತ್ತಾ, ಸರಕು ಖರೀದಿ
ಸಾಮಗ್ರಿಗಳ ಖರೀದಿಗಾಗಿ ಸಾ.ವೆ.ಕೈ, ನಿಯಮಗಳು ನಿಯಮ 55(49)(ಎ)ರಲ್ಲಿ ನಿಗದಿಗೊಳಿಸಿರುವ
ಮಿತಿಯನ್ನು ರೂ.500/-ಗಳಿಂದ ರೂ.5000/- ಗಳಿಗೆ ಹೆಚ್ಚಿಸಬೇಕೆಂದು ಸರ್ಕಾರವನ್ನು
ಕೋರಿರುತ್ತಾರೆ.
2. ಪ್ರಸ್ತಾವನೆಯನ್ನು ಪರಿಶೀಲಿಸಿ ಕೆಳಗಿನ ಆದೇಶವನ್ನು ಹೊರಡಿಸಲಾಗಿದೆ.
ಸರ್ಕಾರದ ಆದೇಶ ಸಂಖ್ಯೆ: ಆಇ 01 ಟಿಸಿಇ 2012,
ಬೆಂಗಳೂರು, ದಿನಾಂಕ:21-06-2012.
ಸರ್ಕಾರದ ವಿವಿಧ ಇಲಾಖೆಯಲ್ಲಿನ ಕಛೇರಿಗಳಲ್ಲಿ ಅಗತ್ಯವಿರುವ ಸರಕು ಸಾಮಗ್ರಿಗಳನ್ನು
ಮುಕ್ತ ಮಾರುಕಟ್ಟೆಯಲ್ಲಿ ಖರೀದಿಸುವ ಸಲುವಾಗಿ ಸಾದಿಲ್ವಾರು ವೆಚ್ಚದ ಕೈಪಿಡಿ 1958 ನಿಯಮಗಳ
ನಿಯಮ 55 (49) (ಎ) ರಲ್ಲಿನ ರೂ.500/-ಗಳ ಮಿತಿಯನ್ನು ರೂ.5000/-ಗಳಿಗೆ ಹೆಚ್ಚಿಸಿ
ಆದೇಶಿಸಲಾಗಿದೆ. ರೂ.5000/- ಮೀರಿದ ರೂ.1.00 ಲಕ್ಷಗಳವರೆಗಿನ ಖರೀದಿಗಳನ್ನು ಸ್ಪರ್ಧಾತ್ಮಕ
ಕೋಟೇಶನ್ (ದರಪಟ್ಟಿ) ಕರೆಯುವುದರ ಮೂಲಕ ಖರೀದಿಸತಕ್ಕದ್ದು. ರೂ.1.00 ಲಕ್ಷ ಮೀರಿದ
ಖರೀದಿಗೆ ಕೆ.ಟಿ.ಪಿ.ಪಿ ನಿಯಮ ಅನ್ವಯವಾಗುವುದು. ಸದರಿ ಆದೇಶವು ಹೊರಡಿಸಿದ
ದಿನಾಂಕದಿಂದ ಜಾರಿಗೆ ಬರುತ್ತದೆ.
ಇದನ್ನು ಹೊರತುಪಡಿಸಿ ಸರಕು ಖರೀದಿಗಾಗಿ ನಿಯಮಗಳಲ್ಲಿ ಯಾವುದೇ ಬದಲಾವಣೆ
ಇರುವುದಿಲ್ಲ. ಈ ಬಗ್ಗೆ ಸಾದಿಲ್ವಾರು ವೆಚ್ಚದ ಕೈಪಿಡಿ 1958 ನಿಯಮಗಳು ನಿಯಮ 55(49) (ಎ)ಗೆ
ತಿದ್ದುಪಡಿ ತರಲು ಪ್ರತ್ಯೇಕವಾಗಿ ಕ್ರಮ ತೆಗೆದುಕೊಳ್ಳಲಾಗುವುದು.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ
ಮತ್ತು ಅವರ ಹೆಸರಿನಲ್ಲಿ
(ಸಿ.ಶಾಮರಾವ್)
ಸರ್ಕಾರದ ಉಪ ಕಾರ್ಯದರ್ಶಿ,
ಆರ್ಥಿಕ ಇಲಾಖೆ
(ಆರ್ಥಿಕ ನಿಯಮಗಳು,
ಆಯವ್ಯಯ ಸಂಕಲನ ಮತ್ತು ಸಮಿತಿ ಶಾಖೆ)
ಇವರಿಗೆ:
ನಿದೇಶಕರು, ಕರ್ನಾಟಕ ರಾಜ್ಯ ಪತ್ರ ಬೆಂಗಳೂರು ಇವರಿಗೆ ಮುಂದಿನ ಸಂಚಿಕೆಯಲ್ಲಿ ಪ್ರಕಟಿಸಲು
ಕೋರಲಾಗಿದೆ.
-
ಪ್ರತಿಗಳು:
1.       ಮಹಾಲೇಖಪಾಲರು, ಲೆಕ್ಕಪತ್ರಗಳು ಮತ್ತು ಹಕ್ಕುಗಳು, ಕರ್ನಾಟಕ, ರೆಸಿಡೆನ್ಸಿ ರಸ್ತೆ, ಅಂಚೆ ಪೆಟ್ಟಿಗೆ
2.        
5329/5369, ಬೆಂಗಳೂರು , Kiran Raghupathi Vice President KSPSTA
2. ಮಹಾಲೇಖಪಾಲರು (ಲೆಕ್ಕ ತನಿಖೆ-1), ರೆಸಿಡೆನ್ಸಿ ರಸ್ತೆ, ಅಂಚೆ ಪೆಟ್ಟಿಗೆ 5329/5369, ಕರ್ನಾಟಕ,
ಬೆಂಗಳೂರು.
3. ಮಹಾಲೇಖಪಾಲರು (ಲೆಕ್ಕ ತನಿಖೆ-2), ರೆಸಿಡೆನ್ಸಿ ರಸ್ತೆ, ಅಂಚೆ ಪೆಟ್ಟಿಗೆ 5329/5369, ಕರ್ನಾಟಕ,
ಬೆಂಗಳೂರು.
4. ಸರ್ಕಾರದ ಎಲ್ಲಾ ಪ್ರಧಾನ ಕಾರ್ಯದರ್ಶಿಗಳು/ ಕಾರ್ಯದರ್ಶಿಗಳು.
ಎಲ್ಲಾ ಇಲಾಖಾ ಮುಖ್ಯಸ್ಥರುಗಳು.
ಎಲ್ಲಾ ಜಿಲ್ಲಾಧಿಕಾರಿಗಳು.
6. ಎಲ್ಲಾ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳು/ ಮುಖ್ಯ ಲೆಕ್ಕಾಧಿಕಾರಿಗಳು, ಜಿಲ್ಲಾ ಪಂಚಾಯತ್‌ಗಳು.
7. ನಿರ್ದೆಶಕರು, ಖಜಾನೆ ಇಲಾಖೆ, ಪೋಡಿಯಂ ಬ್ಲಾಕ್, ಬೆಂಗಳೂರು.
8. ಜಂಟಿ ನಿರ್ದೆಶಕರು, ರಾಜ್ಯ ಹುಜೂರ್‌ ಖಜಾನೆ, ಬೆಂಗಳೂರು.
9, ಉಪ ನಿರ್ದೇಶಕರು, ಟಿ.ಎನ್.ಎಂ.ಸಿ, ಖನಿಜ ಭವನ, ದೇವರಾಜ್ ಅರಸ್ ರಸ್ತೆ, ಬೆಂಗಳೂರು.
10. ಎಲ್ಲಾ ಜಿಲ್ಲಾ ಖಜಾನಾಧಿಕಾರಿಗಳು.
11. ಶಾಖಾ ರಕ್ಷಾ ಕಡತ/ಹೆಚ್ಚುವರಿ ಪ್ರತಿಗಳು.

No comments:

Post a Comment

ಅನಿಸಿಕೆ ತಿಳಿಸಿ

ಹೆಚ್ಚು ಓದಿದವು